ಬಾದಾಮಿ ಎಣ್ಣೆ: ಸ್ವಲ್ಪ ದುಬಾರಿ, ಆದರೆ ಕೂದಲಿಗೆ ಒಳ್ಳೆಯದು...

By: Arshad
Subscribe to Boldsky

ತಲೆಗೂದಲು ಸೊಂಪಾಗಿಯೂ, ಉದ್ದವಾಗಿಯೂ ಇರಬೇಕೆಂದು ಪ್ರತಿ ಮಹಿಳೆಯೂ ಬಯಸುತ್ತಾಳೆ. ಕೂದಲು ಉದ್ದವಿದ್ದರೆ ಇಂದು ಅಂತರ್ಜಾಲದ ಮೂಲಕ ವಿಶ್ವದ ವಿವಿಧೆಡೆ ಜನರು ಅನುಸರಿಸುವ ನೂತನ ವಿನ್ಯಾಸಗಳನ್ನು ಅನುಸರಿಸಲು ಸಾಧ್ಯವಾಗುತ್ತದೆ. ಕೆಲವರಿಗೆ ಕೂದಲಿಗೆ ವಿಭಿನ್ನ ಬಣ್ಣಗಳನ್ನು ಹಾಕುವುದು ಅಥವಾ ವಿಶಿಷ್ಟ ವಿನ್ಯಾಸದಲ್ಲಿ ಕತ್ತರಿಸಿಕೊಂಡು ವಿಜೃಂಭಿಸಲೂ ಸಾಧ್ಯ.

ಕೂದಲು ತುಂಬಾ ಸೂಕ್ಷ್ಮವಾದ ಅಂಗವಾಗಿದ್ದು ಇದಕ್ಕೆ ಮಾಡುವ ಕೆಲವು ಬದಲಾವಣೆಗಳು ಶಾಶ್ವತ ಪರಿಣಾಮವನ್ನು ಉಂಟುಮಾಡಬಹುದು. ವಿಶೇಷವಾಗಿ ಕೆಲವು ಕೂದಲ ಬಣ್ಣಗಳು. ಒಂದು ವೇಳೆ ಇದು ಅಲರ್ಜಿಕಾರಕವಾಗಿದ್ದರೆ ಇದು ಮತ್ತೆ ಸರಿಪಡಿಸಲಾಗದಂತೆ ಬದಲಾಗಬಹುದು. ಕೆಲವೊಮ್ಮೆ, ಯಾವುದೋ ಸೆಳೆತಕ್ಕೆ ಸಿಲುಕಿ ಗಿಡ್ಡ ಕೂದಲಿನ ಆಕರ್ಷಣೆ ಪಡೆದು ಕತ್ತರಿಸಿಕೊಂಡ ಕೂದಲು ಮತ್ತೆ ಬೆಳೆಯದೇ ಬಳಿಕ ಹಪಪಹಿಸುವಂತಾಗುತ್ತದೆ. 

ಬಾದಾಮಿ ಎಣ್ಣೆಯಲ್ಲಿ ಅಡಗಿದೆ ಸರ್ವರೋಗ ನಿವಾರಕ ಶಕ್ತಿ!

ಒಂದು ವೇಳೆ ನಿಮ್ಮ ಸ್ಥಿತಿಯೂ ಇದೇ ರೀತಿ ಆಗಿದ್ದು ಹಿಂದಿನ ತಪ್ಪಿಗೆ ಮರುಗುತ್ತಿದ್ದರೆ ಈಗ ನಿಮ್ಮ ಹಿಂದಿನ ಕೂದಲನ್ನು ಪಡೆಯಲು ಸಾಧ್ಯವಿದೆ. ಇಂದಿನ ಲೇಖನದಲ್ಲಿ ನಿಮ್ಮ ಹಿಂದಿನ ನೀಳವಾದ ಕೂದಲನ್ನು ಮತ್ತೆ ಪಡೆಯುವಂತೆ ಮಾಡಲು ಒಂದು ಅದ್ಭುತವಾದ ನಿಸರ್ಗದ ಕೊಡುಗೆಯಾದ ಬಾದಾಮಿ ಎಣ್ಣೆಯನ್ನು ಹೇಗೆ ಬಳಸುವುದು ಎಂಬುದನ್ನು ವಿವರಿಸಲಾಗಿದೆ. ಬನ್ನಿ, ತಡಮಾಡದೇ ಈ ವಿಧಾನವನ್ನು ನೀವೇ ಮನೆಯಲ್ಲಿಯೇ ಸುಲಭವಾಗಿ ತಯಾರಿಸಿಕೊಂಡು ಬಳಸಲು ಪ್ರಾರಂಭಿಸಿ..... 

ನೀಳಕೂದಲಿಗೆ ಸರಳವಾದ ಬಾದಾಮಿ ಎಣ್ಣೆಯ ಆರೈಕೆ

ನೀಳಕೂದಲಿಗೆ ಸರಳವಾದ ಬಾದಾಮಿ ಎಣ್ಣೆಯ ಆರೈಕೆ

ಈ ಕ್ರಿಯೆಗೆ ಉತ್ತಮ ಗುಣಮಟ್ಟದ ಬಾದಾಮಿ ಎಣ್ಣೆಯ ಅಗತ್ಯವಿದೆ. ಈ ವಿಧಾನವನ್ನು ಅನುಸರಿಸಲು ಕೆಳಗಿನ ಹಂತಗಳನ್ನು ಸರಿಯಾದ ಕ್ರಮದಲ್ಲಿ ಅನುಸರಿಸುವುದು ಅಗತ್ಯ.

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

*ಅಪ್ಪಟ ಬಾದಾಮಿ ಎಣ್ಣೆ

*ಶವರ್ ಕ್ಯಾಪ್

*ಅಗಲ ಹಲ್ಲುಗಳ ಬಾಚಣಿಗೆ

ವಿಧಾನ

ವಿಧಾನ

*ಮೊದಲು ನಿಮ್ಮ ಕೂದಲನ್ನು ನೀರಿನಲ್ಲಿ ತೋಯಿಸಿಕೊಂಡು ಸಿಕ್ಕುಗಳನ್ನೆಲ್ಲಾ ಬಿಡಿಸಿ ಬಿಡಿಬಿಡಿಯಾಗಿಸಿ. ಕೂದಲು ನೆನೆದಿದ್ದರೆ ಮಾತ್ರ ಬಾದಾಮಿ ಎಣ್ಣೆಯನ್ನು ಹೀರಿಕೊಳ್ಳಲು ಸಾಧ್ಯ.

* ಈಗ ನಿಮ್ಮ ತಲೆಗೂದಲ ಬುಡವನ್ನು ಬಾದಾಮಿ ಎಣ್ಣೆಯನ್ನು ಹಚ್ಚಿದ ಬೆರಳುಗಳಿಂದ ನಯವಾಗಿ ಮಸಾಜ್ ಮಾಡಿಕೊಳ್ಳಿ. ಇದರಿಂದ ಕೂದಲ ಬುಡಕ್ಕೆ ಪ್ರಚೋದನೆ ದೊರೆತು ರಕ್ತಸಂಚಾರ ಹೆಚ್ಚಲು ಸಾಧ್ಯವಾಗುತ್ತದೆ. ಕೂದಲ ಬೆಳವಣಿಗೆಗೆ ಈ ರಕ್ತಸಂಚಾರ ಅವಶ್ಯ.

*ಈಗ ಬಾಚಣಿಗೆಯನ್ನು ಬಳಸಿ ತಲೆಗೂದಲ ಬುಡದಲ್ಲಿದ್ದ ಎಣ್ಣೆಯ ಅಂಶ ಎಲ್ಲಾ ಕಡೆಗಳಲ್ಲಿ ಹರಡುವಂತೆ ಕೊಂಚಹೊತ್ತು ಬಾಚಿಕೊಳ್ಳಿ.

ವಿಧಾನ

ವಿಧಾನ

*ಬಳಿಕ ಶವರ್ ಕ್ಯಾಪ್ ಧರಿಸಿ ಸುಮಾರು ಒಂದು ಗಂಟೆ ಕಾಲವಾದರೂ ಬಿಡಿ. ಇದರಿಂದ ಕೂದಲು ಬಾದಾಮಿ ಎಣ್ಣೆಯನ್ನು ಹೀರಿಕೊಳ್ಳಲು ಸಾಧ್ಯವಾಗುತ್ತದೆ.

* ಒಂದು ಗಂಟೆಯ ಬಳಿಕ ನಿಮ್ಮ ನಿತ್ಯದ ಸೌಮ್ಯ ಶಾಂಪೂ ಬಳಸಿ ತಲೆಗೂದಲನ್ನು ತೊಳೆದುಕೊಳ್ಳಿ. ಪ್ರಥಮ ಪ್ರಯತ್ನದಲ್ಲಿಯೇ ಕೂದಲು ಸಾಕಷ್ಟು ಮೃದುವಾಗಿರುವುದನ್ನು ಹಾಗೂ ರೇಶ್ಮೆಯ ನುಣುಪನ್ನು ಪಡೆದಿರುವುದನ್ನು ಗಮನಿಸಬಹುದು.

* ಈ ವಿಧಾನವನ್ನು ಕನಿಷ್ಠ ವಾರಕ್ಕೊಮ್ಮೆ ಅನುಸರಿಸುವ ಮೂಲಕ ಹೊಸ ಕೂದಲು ಶೀಘ್ರವೇ ಬೆಳೆದು ಹಿಂದಿನ ಬೆಳವಣಿಗೆಯನ್ನು ಪಡೆಯಬಹುದು.

ಟೀ ಟ್ರೀ ಎಣ್ಣೆ ಮತ್ತು ಬಾದಾಮಿ ಎಣ್ಣೆಯ ಆರೈಕೆ

ಟೀ ಟ್ರೀ ಎಣ್ಣೆ ಮತ್ತು ಬಾದಾಮಿ ಎಣ್ಣೆಯ ಆರೈಕೆ

ಅಗತ್ಯವಿರುವ ಸಾಮಾಗ್ರಿಗಳು..

*ಎರಡು ದೊಡ್ಡಚಮಚ ಅಪ್ಪಟ ಬಾದಾಮಿ ಎಣ್ಣೆ

*ಹತ್ತು ಹನಿ ಟೀ ಟ್ರೀ ಎಣ್ಣೆ (tea tree oil)

*ಹಬೆಯಲ್ಲಿ ಬಿಸಿಯಾಗಿಸಿದ ದಪ್ಪನೆಯ ಟವೆಲ್

ವಿಧಾನ

ವಿಧಾನ

* ಒಂದು ಬೋಗುಣಿಯಲ್ಲಿ ಎರಡೂ ಎಣ್ಣೆಗಳನ್ನು ಬೆರೆಸಿ ಮಿಶ್ರಣ ಮಾಡಿ.

* ಈ ಮಿಶ್ರಣವನ್ನು ತಲೆಗೂದಲ ಬುಡದಿಂದ ತುದಿಯವರೆಗೆ ಹಾಗೂ ತಲೆಗೂದಲ ಬುಡಕ್ಕೆ ತಗಲುವಂತೆ ಹಚ್ಚಿಕೊಳ್ಳಿ.

* ಬಳಿಕ ಹಬೆಯಲ್ಲಿ ಬಿಸಿಯಾಗಿಸಿದ ದಪ್ಪನೆಯ ಟವೆಲ್ ಒಂದನ್ನು ತಲೆಗೂದಲು ಪೂರ್ಣವಾಗಿ ಆವರಿಸಿಕೊಳ್ಳುವಂತೆ ಸುತ್ತಿಕೊಳ್ಳಿ.

* ಸುಮಾರು ಒಂದು ಘಂಟೆಯ ಬಳಿಕ ನಿಮ್ಮ ನಿತ್ಯದ ಶಾಂಪೂ ಬಳಸಿ ಕೂದಲನ್ನು ತೊಳೆದುಕೊಳ್ಳಿ.

* ಉತ್ತಮ ಪರಿಣಾಮಕ್ಕಾಗಿ ಈ ವಿಧಾನವನ್ನು ವಾರಕ್ಕೊಮ್ಮೆ ನಿಯಮಿತವಾಗಿ ಅನುಸರಿಸುತ್ತಾ ಬನ್ನಿ.

ಬಾದಾಮಿ ಎಣ್ಣೆ ಮತ್ತು ಮೊಟ್ಟೆಯ ಬಿಳಿಭಾಗದ ಲೇಪ

ಬಾದಾಮಿ ಎಣ್ಣೆ ಮತ್ತು ಮೊಟ್ಟೆಯ ಬಿಳಿಭಾಗದ ಲೇಪ

ಅಗತ್ಯವಿರುವ ಸಾಮಾಗ್ರಿಗಳು...

*ಒಂದು ಮೊಟ್ಟೆಯ ಬಿಳಿಭಾಗ

*ಒಂದು ದೊಡ್ಡ ಚಮಚ ಬಾದಾಮಿ ಎಣ್ಣೆ

ಕೂದಲಿನ ಸರ್ವ ಸಮಸ್ಯೆಗೂ-ಮೊಟ್ಟೆಯ ಹೇರ್ ಮಾಸ್ಕ್

ವಿಧಾನ...

ವಿಧಾನ...

* ಒಂದು ಬೋಗುಣಿಯಲ್ಲಿ ಮೊಟ್ಟೆಯ ಬಿಳಿಭಾಗ ಮತ್ತು ಬಾದಾಮಿ ಎಣ್ಣೆಯನ್ನು ಬೆರೆಸಿ ಮಿಶ್ರಣ ಮಾಡಿ.

* ಒಂದು ಚಮಚದಿಂದ ಚೆನ್ನಾಗಿ ಗೊಟಾಯಿಸಿ ನಯವಾದ ಕ್ರೀಮ್ ನಷ್ಟು ನುಣುಪಾಗಿಸಿ.

* ಈ ಲೇಪವನ್ನು ತಲೆಗೂದಲ ಬುಡ ಹಾಗೂ ಕೂದಲಿನ ತುದಿಯವರೆಗೆ ಹಚ್ಚಿಕೊಳ್ಳಿ.

* ಬಳಿಕ ಸುಮಾರು 15-20 ನಿಮಿಷಗಳವರೆಗೆ ಹಾಗೇ ಬಿಡಿ

* ನಂತರ ತಣ್ಣೀರು ಬಳಸಿ ಸೌಮ್ಯ ಶಾಂಪೂವಿನಿಂದ ತಲೆ ತೊಳೆದುಕೊಳ್ಳಿ.

English summary

Hacks To Grow Super Long Hair Using Almond Oil

This article will tell you how to get back your long tresses in no time using a wonder ingredient - Almond oil. So, here are a few DIY recipes using almond oil to grow super long hair, and that to quickly! Take a look.
Subscribe Newsletter