ಕೂದಲು ಉದುರುವ ಸಮಸ್ಯೆಗೆ 'ಮೆಂತೆ ಹೇರ್ ಪ್ಯಾಕ್'

By: Hemanth
Subscribe to Boldsky

ಪ್ರತಿಯೊಂದು ಸಾಂಬಾರ ಪದಾರ್ಥಗಳಲ್ಲಿ ಔಷಧೀಯ ಗುಣಗಳು ಇದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಇದನ್ನು ಯಾವ ರೀತಿ ಬಳಸಿಕೊಳ್ಳಬೇಕು ಎನ್ನುವುದು ಮಾತ್ರ ನಮಗೆ ತಿಳಿದಿಲ್ಲ. ಕೆಲವನ್ನು ನಾವು ಪದಾರ್ಥಗಳಲ್ಲಿ ಬಳಸಿಕೊಳ್ಳುತ್ತೇವೆ. ಇದರಿಂದ ನಮ್ಮ ದೇಹಕ್ಕೆ ಲಾಭವಾಗುತ್ತದೆ. ಆದರೆ ಸೌಂದರ್ಯವರ್ಧಕವಾಗಿಯೂ ಈ ಸಾಂಬಾರ ಪದಾರ್ಥಗಳು ತುಂಬಾ ಪರಿಣಾಮಕಾರಿ ಎಂದು ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ. ಅಡುಗೆಮನೆಯ ಮೆಂತೆ- ಕೂದಲಿನ ಸರ್ವ ರೋಗಕ್ಕೂ ರಾಮಬಾಣ

ಅದರಲ್ಲೂ ಮೆಂತೆ ಕಾಳಿನಿಂದ ಕೂದಲಿನ ಆರೈಕೆಯನ್ನು ಮಾಡಿಕೊಳ್ಳಬಹುದು. ಮೆಂತ್ಯೆಯಲ್ಲಿರುವ ಹೆಚ್ಚಿನ ಪ್ರಮಾಣದ ಆ್ಯಂಟಿ ಆಕ್ಸಿಡೆಂಟ್ ಮತ್ತು ಪೋಷಕಾಂಶಗಳು ಕೂದಲಿನ ಆರೈಕೆಗೆ ತುಂಬಾ ಪರಿಣಾಮಕಾರಿ. ಕೂದಲು ಉದುರುವಿಕೆ ತಡೆಯುತ್ತೆ ಮೆಂತೆ ಹೇರ್ ಮಾಸ್ಕ್  

ನಿಮಗೂ ಕೂದಲು ಉದುರುವ ಸಮಸ್ಯೆಯಿದ್ದರೆ ಮೆಂತೆಯಿಂದ ಅದನ್ನು ಯಾವ ರೀತಿ ನಿವಾರಿಸಬಹುದು ಎಂದು ತಿಳಿಯಲು ಓದುತ್ತಾ ಸಾಗಿ... 

ಬೇಕಾಗುವ ಸಾಮಗ್ರಿಗಳು

ಬೇಕಾಗುವ ಸಾಮಗ್ರಿಗಳು

*ಒಂದು ಹಿಡಿ ಮೆಂತೆ ಕಾಳುಗಳು

*3 ಚಮಚ ಕಡಲೆಹಿಟ್ಟು

*ಒಂದು ಚಮಚ ಮೊಸರು

ತಯಾರಿಸುವ ವಿಧಾನ

ತಯಾರಿಸುವ ವಿಧಾನ

*ಒಂದು ಹಿಡಿ ಮೆಂತೆ ಕಾಳುಗಳನ್ನು ನೀರಿನಲ್ಲಿ ನೆನೆಯಲು ಹಾಕಿ.

*ಆರು ಗಂಟೆಗಳ ಕಾಲ ನೆನೆಸಿದ ಬಳಿಕ ಒಂದು ಒಂದು ಪಾತ್ರೆಗೆ ಹಾಕಿ.

*ಒಂದು ಮಿಕ್ಸಿಗೆ ಮೆಂತೆ ಕಾಳುಗಳನ್ನು ಹಾಕಿ.

*ಮೂರು ಚಮಚ ಕಡಲೆಹಿಟ್ಟನ್ನು ಇದಕ್ಕೆ ಸೇರಿಸಿ.

ತಯಾರಿಸುವ ವಿಧಾನ

ತಯಾರಿಸುವ ವಿಧಾನ

*ಒಂದು ಚಮಚ ಮೊಸರನ್ನು ಇದಕ್ಕೆ ಹಾಕಿ.

*ಎಲ್ಲವನ್ನು ಜತೆಯಾಗಿ ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ.

*ತಲೆ ಕೂದಲು ಉದುರುವುದನ್ನು ನಿಲ್ಲಿಸಲು ಈ ಪೇಸ್ಟ್ ನ್ನು ಬಳಸಿ.

ಬಳಸುವುದು ಹೇಗೆ?

ಬಳಸುವುದು ಹೇಗೆ?

ಮೆಂತೆ ಕಾಳಿನಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ನಿಂದಾಗಿ ತಲೆ ಕೂದಲು ಉದುರುವ ಸಮಸ್ಯೆಗೆ ಇದು ತುಂಬಾ ಪರಿಣಾಮಕಾರಿ. ಇದು ಕೂದಲು ಉದುರುವುದನ್ನು ತಡೆಯುವುದು ಮಾತ್ರವಲ್ಲದೆ ಕೂದಲಿನ ಕೋಶಗಳನ್ನು ಬಲಗೊಳಿಸುವುದು.

ಬಳಸುವುದು ಹೇಗೆ?

ಬಳಸುವುದು ಹೇಗೆ?

ವಾರದಲ್ಲಿ ಮೂರು ಸಲ ಈ ಪೇಸ್ಟ್ ಅನ್ನು ಬಳಸಿಕೊಂಡು ಕೂದಲು ಉದುರುವ ಸಮಸ್ಯೆಯನ್ನು ನಿಭಾಯಿಸಿ. ಕೂದಲಿನ ಬುಡಕ್ಕೆ ಇದನ್ನು ಹಚ್ಚಿಕೊಂಡು ಸುಮಾರು ಹತ್ತು ನಿಮಿಷ ಕಾಲ ಹಾಗೆ ಬಿಡಿ. ಬಳಿಕ ಉಗುರುಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆಯಿರಿ.

ಮೆಂತೆಯ ಲಾಭಗಳು

ಮೆಂತೆಯ ಲಾಭಗಳು

*ಮೆಂತೆಯಲ್ಲಿ ಉನ್ನತ ಮಟ್ಟದ ಪ್ರೋಟೀನ್‌ನಿಂದಾಗಿ ಇದು ಕೂದಲು ಉದುರುವ ಸಮಸ್ಯೆಯನ್ನು ತಡೆದು ತಲೆಬೋಳಾಗುವುದನ್ನು ನಿಲ್ಲಿಸುವುದು.

*ಮೆಂತೆಯಲ್ಲಿರುವಂತಹ ವಿಟಮಿನ್ ಸಿ ತಲೆಬುರುಡೆಯಲ್ಲಿ ರಕ್ತ ಸಂಚಾರವನ್ನು ಸುಗಮಗೊಳಿಸುವುದು. ಇದರಿಂದ ಕೂದಲಿನ ಕೋಶಗಳೂ ಬಲಗೊಳ್ಳುವುದು.

ಕಡಲೆಹಿಟ್ಟಿನ ಲಾಭಗಳು

ಕಡಲೆಹಿಟ್ಟಿನ ಲಾಭಗಳು

*ಕೂದಲಿಗೆ ಕಡಲೆಹಿಟ್ಟನ್ನು ಬಳಸುವುದು ತುಂಬಾ ಪರಿಣಾಮಕಾರಿ. ಯಾಕೆಂದರೆ ತಲೆಬುರುಡೆಯಲ್ಲಿರುವ ರಾಸಾಯನಿಕವನ್ನು ಇದು ತೆಗೆದುಹಾಕುವುದು.

*ಇದು ನಿರ್ವಿಷಕಾರಿಯಾಗಿ ಕೆಲಸ ಮಾಡುವುದು. ಇದರಿಂದ ತಲೆಬುರುಡೆಯಲ್ಲಿ ವಿಷಕಾರಿ ಅಂಶ ಹಾಗೂ ಧೂಳು ಸ್ವಚ್ಛವಾಗುವುದು. ಕಡಲೆ ಹಿಟ್ಟಿನ ಫೇಸ್‌ಪ್ಯಾಕ್‌ -ತ್ವಚೆಯ ಎಲ್ಲಾ ಸಮಸ್ಯೆಗೂ ಪರಿಹಾರ

ಮೊಸರಿನ ಲಾಭಗಳು

ಮೊಸರಿನ ಲಾಭಗಳು

*ಮೊಸರು ತಲೆಬುರುಡೆಯಲ್ಲಿ ತಲೆಹೊಟ್ಟು ನಿರ್ಮಾಣವಾಗದಂತೆ ಮಾಡುವುದು.

*ಇದು ತಲೆಬುರುಡೆಯನ್ನು ಆರೋಗ್ಯಕಾರಿ ಹಾಗೂ ತೇವಾಂಶದಿಂದ ಇಡುವುದು. ನಿಮ್ಮ ತಲೆಬುರುಡೆಯಲ್ಲಿ

*ತುರಿಕೆಯಿದ್ದರೆ ಮೊಸರು ತಲೆಬುರುಡೆಯನ್ನು ತಂಪಾಗಿಸಿ ಸಮಸ್ಯೆಯನ್ನು ನಿವಾರಿಸುವುದು.

*ಮೊಸರನ್ನು ಬಳಸುವುದರಿಂದ ಕೂದಲಿನ ಬುಡ ಬಿರುಕು ಬಿಡುವುದನ್ನು ತಡೆಯಬಹುದು. ರೇಷ್ಮೆಯಂತಹ ಕೂದಲಿಗೆ ಮೆಂತೆ- ಮೊಸರಿನ ಹೇರ್ ಪ್ಯಾಕ್

 
English summary

Fenugreek Seed Hair Mask For Hair Loss

From treating baldness and hair loss problems, fenugreek seeds are one among the common ingredients found in any Indian Kitchen. If you are suffering from hair loss, here we mention to you a small recipe on how to make a fenugreek seed hair mask at home.
Please Wait while comments are loading...
Subscribe Newsletter