ಕೇಳಿ ಇಲ್ಲಿ! ನಿಮಗೆ ಈ ಅಭ್ಯಾಸಗಳಿದ್ದರೆ ಮೊದಲು ಬಿಟ್ಟು ಬಿಡಿ...!!

By: Divya
Subscribe to Boldsky

ಸೊಂಪಾದ ನಿದ್ರೆಯಲ್ಲಿರುವಾಗ ನಮಗೆ ಬಾಹ್ಯ ಜಗತ್ತಿನ ಅರಿವಿರುವುದಿಲ್ಲ. ಹೀಗಿರುವಾಗ ನಮ್ಮ ಕೇಶರಾಶಿಗೆ ಏನಾಗುತ್ತದೆ ಎನ್ನುವುದರ ಬಗ್ಗೆ ಅರಿಯಲು ಸಾಧ್ಯವಿಲ್ಲ. ಆದರೆ ಬೆಳಗ್ಗೆ ನಿದ್ರೆಯನ್ನು ಮುಗಿಸಿ ಎದ್ದಾಗ ಮಾತ್ರ ಕೇಶರಾಶಿಯು ಆರೋಗ್ಯವಾಗಿ ಕಂಗೊಳಿಸಬೇಕೆಂದು ಬಯಸುತ್ತೇವೆ. ಈ ಬಯಕೆ ಈಡೇರಬೇಕೆಂದರೆ ಮಲಗುವ ಮುನ್ನವೇ ಕೇಶರಾಶಿಯ ಬಗ್ಗೆ ಕೆಲವು ಆರೈಕೆ ಕೈಗೊಳ್ಳಬೇಕು. ಮುಂಜಾನೆಯ ಹರಿಬರಿಯಲ್ಲಿ ಕೇಶರಾಶಿಗಾಗಿ ಸಮಯ ವ್ಯಯಿಸುವುದನ್ನು ತಡೆಯಬಹುದು.

ಕೆಲವರು ಉದ್ದನೆಯ ಕೇಶರಾಶಿಯಿದ್ದರಷ್ಟೇ ಹೆಚ್ಚು ಗಮನ ಕೊಡಬೇಕಾಗುವುದು ಎಂದು ಆದಷ್ಟು ಚಿಕ್ಕ ಕೇಶರಾಶಿಯನ್ನು ಹೊಂದಲು ಇಷ್ಟಪಡುತ್ತಾರೆ. ಸತ್ಯವೇನೆಂದರೆ ಕೇಶರಾಶಿ ಉದ್ದವಾಗಿರಲಿ ಅಥವಾ ಚಿಕ್ಕದಾಗಿರಲಿ ಅದರ ಆರೈಕೆ ಮಾಡಿದಾಗ ಮಾತ್ರ ಆರೋಗ್ಯಕರವಾಗಿರುತ್ತದೆ. ಇಲ್ಲವಾದರೆ ಒರಟಾಗುವುದು, ಟಿಸಿಲೊಡೆಯುವುದು, ಬಹುಬೇಗ ಕಾಂತಿಯನ್ನು ಕಳೆದುಕೊಳ್ಳುವ ಸಮಸ್ಯೆಯನ್ನು ಎದುರಿಸಬೇಕಾಗುವುದು. ಒತ್ತಡದ ಜೀವನದಲ್ಲೂ ಕೇಶರಾಶಿಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸಬೇಕೆಂದರೆ ಈ ಕೆಳಗಿನ ಕ್ರಮ ಕೈಗೊಳ್ಳಬೇಕು.....

ಎಣ್ಣೆಯ ಮಸಾಜ್ ಮಾಡಿ

ಎಣ್ಣೆಯ ಮಸಾಜ್ ಮಾಡಿ

ಮಲಗುವ ಮುನ್ನ ಕೇಶರಾಶಿಯನ್ನು ಸ್ವಲ್ಪ ತೆಂಗಿನೆಣ್ಣೆ ಅಥವಾ ನಿಮ್ಮ ಬಳಕೆಯಲ್ಲಿರುವ ಹೇರ್ ಆಯಿಲ್ ಬಳಸಿ ಮಸಾಜ್ ಮಾಡಿ. ನಂತರ ನೀಟಾಗಿ ಕೂದಲನ್ನು ಮೃದುವಾದ ರಬ್ಬರ್ ಬ್ಯಾಂಡ್‍ನಿಂದ ಕಟ್ಟಿ ಮಲಗಿ. ಬೆಳಗ್ಗೆಯ ತನಕ ಕೂದಲಿಗೆ ಸಂಪೂರ್ಣ ಪೋಷಣೆ ಸಿಗುತ್ತದೆ. ಬೆಳಗ್ಗೆ ತಲೆ ಸ್ನಾನ ಮಾಡಿದರೆ ಆರಾಮದಾಯಕ ಅನುಭವ ನಿಮ್ಮದಾಗುವುದು.

ಒಣಗಿದೆಯೇ ಎಂದು ಪರೀಕ್ಷಿಸಿ

ಒಣಗಿದೆಯೇ ಎಂದು ಪರೀಕ್ಷಿಸಿ

ಕೆಲವರಿಗೆ ಬೆವರಿನಿಂದ ಕೂದಲು ಒದ್ದೆಯಾಗಿರುತ್ತದೆ. ಇನ್ನುಕೆಲವರು ತಲೆ ಸ್ನಾನಮಾಡಿರುವುದರಿಂದ ಹಸಿಯಾಗಿಯೇ ಇರುತ್ತದೆ. ಇಂತಹವರು ರಾತ್ರಿ ನಿದ್ರೆ ಮಾಡುವ ಮೊದಲು ಕೇಶರಾಶಿಯನ್ನು ಸಂಪೂರ್ಣವಾಗಿ ಒಣಗಿಸಿಕೊಂಡೇ ಮಲಗಬೇಕು. ಇಲ್ಲವಾದರೆ ಕೂದಲಿನ ಮೃದುತ್ವ ಹೆಚ್ಚಾಗಿ ಕೂದಲು ಒಡೆಯುವುದು, ವಾಸನೆ, ಉದುರುವಿಕೆ ಹೆಚ್ಚಾಗುವುದು.

ಬಿಗಿಯಾಗಿ ಕಟ್ಟಬಾರದು

ಬಿಗಿಯಾಗಿ ಕಟ್ಟಬಾರದು

ಮಲಗುವಾಗ ಕೆಲವರು ಕೇಶರಾಶಿಯನ್ನು ನೆತ್ತಿಯಮೇಲೆ ಕಟ್ಟುವುದು, ಇಲ್ಲವಾದರೆ ಬಿಗಿಯಾಗಿ ಕಟ್ಟಿಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ಕೇಶರಾಶಿಯು ಬಹುಬೇಗ ಉದುರುವುದು. ಜೊತೆಗೆ ತಲೆ ನೋವು ಬರುವ ಸಾಧ್ಯತೆ ಇರುತ್ತದೆ. ಆದಷ್ಟು ಸಡಿಲವಾಗಿ ಕೇಶರಾಶಿಯನ್ನು ಟೈ ಮಾಡಿಕೊಂಡು ಮಲಗಿ.

ಸಿಲ್ಕ್ ಬಟ್ಟೆಯ ತಲೆದಿಂಬನ್ನು ಬಳಸಿ

ಸಿಲ್ಕ್ ಬಟ್ಟೆಯ ತಲೆದಿಂಬನ್ನು ಬಳಸಿ

ನಾವು ಬಹಳ ದಪ್ಪ ಬಟ್ಟೆಯ ಅಥವಾ ಹತ್ತಿ ಬಟ್ಟೆಯ ತಲೆದಿಂಬನ್ನು ಬಳಸುವುದರಿಂದ ಅದರಲ್ಲಿ ಧೂಳು ಕುಳಿತಿರುತ್ತವೆ. ಜೊತೆಗೆ ಕೇಶರಾಶಿಯೂ ಆ ಬಟ್ಟೆಯ ಮೇಲೆ ಹೆಚ್ಚು ತಿಕ್ಕುವುದರಿಂದ ಒರಟಾಗುವ ಸಾಧ್ಯತೆ ಹೆಚ್ಚು. ನಯವಾದ ಬಟ್ಟೆಯ ದಿಂಬಾದರೆ ಧೂಳು ಕುಳಿತಿರುವುದಿಲ್ಲ. ಕೇಶರಾಶಿಯೂ ಹಾಳಾಗದು.

ಮಲಗುವ ಮುನ್ನ ಬಾಚಿಕೊಳ್ಳಬೇಕು

ಮಲಗುವ ಮುನ್ನ ಬಾಚಿಕೊಳ್ಳಬೇಕು

ಆಯಾಸಗೊಂಡ ಗುಂಗಿನಲ್ಲಿ ಹಾಗೇಯೇ ಮಲಗಿ ಬಿಡುತ್ತೇವೆ. ಮಲಗುವ ಮುನ್ನ ಒಮ್ಮೆ ಕೇಶರಾಶಿಯನ್ನು ಬಾಚಿಕೊಂಡು ಮಲಗಿದರೆ ತಲೆಯಲ್ಲಿ ರಕ್ತ ಸಂಚಾರ ಸುಗಮವಾಗುವುದು. ಕೂದಲಿನ ಆರೋಗ್ಯವೂ ಸುಧಾರಣೆಯಾಗುವುದು. ಇಲ್ಲವಾದರೆ ಬೆಳಗಾಗುವಷ್ಟರಲ್ಲಿ ಕೂದಲು ಸಿಕ್ಕಾಗಿ ಒಂದುಷ್ಟು ಕೂದಲು ಉದುರುತ್ತವೆ.

ಶವರ್ ಕ್ಯಾಪ್ ಧರಿಸಿ

ಶವರ್ ಕ್ಯಾಪ್ ಧರಿಸಿ

ಮಲಗುವ ಮುನ್ನ ಕೇಶರಾಶಿಯನ್ನು ಬಾಚುವುದು ಅಥವಾ ಎಣ್ಣೆ ಮಸಾಜ್ ಮಾಡಿದಾಗ, ಇಲ್ಲವೇ ಹಾಗೇ ಸುಮ್ಮನೆ ಕೂದಲನ್ನು ಒಣಗಿಸಿಕೊಂಡಮೇಲೆ ಶವರ್ ಕ್ಯಾಪ್ ಧರಿಸಿ ಮಲಗಿ. ಕೂದಲ ಆರೋಗ್ಯ ಕಾಪಾಡಲು ಸಹಾಯ ಮಾಡುವುದು. ಈ ಕ್ಯಾಪ್ ಅನ್ನು 2-3 ದಿನಕ್ಕೊಮ್ಮೆ ಬದಲಾಯಿಸಬೇಕು.

ಕ್ಲಿಪ್‍ಗಳನ್ನು ಧರಿಸದಿರಿ

ಕ್ಲಿಪ್‍ಗಳನ್ನು ಧರಿಸದಿರಿ

ಮಲಗುವಾಗ ಕೇಶರಾಶಿಗೆ ಹೇರ್ ಪಿನ್, ಇಲೇಸ್ಟಿಕ್ ರಬ್ಬರ್ ಬ್ಯಾಂಡ್ ಅಥವಾ ಕ್ಲಿಪ್‍ಗಳನ್ನು ಧರಿಸಿಕೊಂಡು ಮಲಗಬೇಡಿ. ಹೀಗೆ ಮಾಡುವುದರಿಂದ ಕೂದಲ ಆರೋಗ್ಯ ಹಾಳಾಗುವುದು ಮಲಗುವಾಗ ಆದಷ್ಟು ಹತ್ತಿ ಬಟ್ಟೆಯ ರಬ್ಬರ್‍ಬ್ಯಾಂಡ್ ಬಳಸಿ. ಇದು ಕೂದಲಿಗೆ ಮೃದುತ್ವವನ್ನು ನೀಡುತ್ತದೆ.

ಬೇಬಿ ಪೌಡರ್ ಬಳಸಿ

ಬೇಬಿ ಪೌಡರ್ ಬಳಸಿ

ನಿದ್ರೆಗೆ ಹೋಗುವ ಮುನ್ನ ಎಣ್ಣೆಯ ಮಸಾಜ್ ಮಾಡಿಕೊಂಡಿದ್ದರೆ ಅಥವಾ ಮೊದಲೇ ಎಣ್ಣೆಯಂಶ ಇದ್ದರೆ, ಮಲಗುವ ಮುನ್ನ ಬೇಬಿ ಪೌಡರ್‍ಅನ್ನು ಕೇಶರಾಶಿಗೆ ಹಾಕಿಕೊಂಡು ಮಲಗಿ. ಬೆಳಗ್ಗೆ ನಿಮ್ಮ ಕೇಶರಾಶಿಯ ಗಮನಾರ್ಹ ಬದಲಾವಣೆಯನ್ನು ನೀವು ನೋಡಬಹುದು.

English summary

eight-haircare-steps-to-follow-during-sleep

During sleep, exactly how we remain unaware of what happens around, we don't know what happens to our hair. So, the right hair care regimen right before going off to sleep is very important if you want to wake up with good hair. Early in the morning, having a good hair can make you feel good and also save time from your hair-do sessions.
Subscribe Newsletter