ಬ್ಯೂಟಿ ಟಿಪ್ಸ್: ಅಂದದ ಕೂದಲಿಗಾಗಿ ಮೊಟ್ಟೆಯ ಹೇರ್ ಮಾಸ್ಕ್

By: Jaya subramanya
Subscribe to Boldsky

ಇಂದಿನ ಕಾಲದಲ್ಲಿ ತ್ವಚೆ ಮತ್ತು ಕೂದಲು ಹೆಚ್ಚು ರಾಸಾಯನಿಕಗಳು ಮತ್ತು ಕಲುಷಿತ ವಾತಾವರಣಕ್ಕೆ ಸಿಲುಕಿ ತಮ್ಮ ಅಂದವನ್ನು ಕಳೆದುಕೊಳ್ಳುತ್ತಿವೆ. ಕಚೇರಿಯ ಕೆಲಸ, ಒತ್ತಡದ ಜೀವನ ಶೈಲಿ, ಸೌಂದರ್ಯ ಕಡೆಗಿನ ನಿರಾಸಕ್ತಿ, ರಾಸಾಯನಿಕಗಳ ಬಳಕೆಯಿಂದಾಗಿಯೇ ಇಂದು ನಮ್ಮ ಕೂದಲು ಹೆಚ್ಚು ಉದುರುತ್ತಿದೆ ಮತ್ತು ತ್ವಚೆಯು ಹಿಂದೆಂದೂ ಕಾಣದೇ ಇರುವ ರೋಗಗಳನ್ನು ತನ್ನಲ್ಲಿ ಸೇರ್ಪಡೆಮಾಡಿಕೊಳ್ಳುತ್ತಿದೆ.

ಅದಾಗ್ಯೂ ಇನ್ನೂ ಕಾಲ ಮಿಂಚಿಲ್ಲ ನಿಮ್ಮದೇ ಜೀವನ ಶೈಲಿಯನ್ನು ರೂಢಿಸಿಕೊಂಡು ನಿಮ್ಮ ಕೂದಲು ಮತ್ತು ತ್ವಚೆಗೆ ನೈಸರ್ಗಿಕ ಪದ್ಧತಿಯ ಮೂಲಕ ಹೊಸ ಜೀವವನ್ನು ಕಳೆಯನ್ನು ನೀಡಬಹುದಾಗಿದೆ. ನಮ್ಮ ಇಂದಿನ ಲೇಖನದಲ್ಲಿ ಕೂದಲಿನ ಸಮಸ್ಯೆಯನ್ನು ಹೋಗಲಾಡಿಸುವ ಮತ್ತು ಕೂದಲಿನ ಅಂದವನ್ನು ಆರೋಗ್ಯವನ್ನು ವೃದ್ಧಿಸುವ ಮೊಟ್ಟೆಯ ಹೇರ್ ಮಾಸ್ಕ್ ವಿಧಾನಗಳನ್ನು ನೀಡುತ್ತಿದ್ದೇವೆ. ವಾರಾಂತ್ಯದಲ್ಲಿ ನೀವು ಅನುಸರಿಸುವ ಈ ಮಾಸ್ಕ್‌ನಿಂದ ನಿಮ್ಮ ಕೂದಲು ಸೊಂಪಾಗಿ ನಳನಳಿಸುವುದು ಖಂಡಿತ.

ಮೊಟ್ಟೆಯು ನೈಸರ್ಗಿಕ ಹೇರ್ ಕಂಡೀಷನರ್ ಆಗಿದ್ದು ಹೆಚ್ಚಿನ ಪ್ರೊಟೀನ್ ಅನ್ನು ಒಳಗೊಂಡಿದೆ. ಕೂದಲಿನ ಹಾನಿಯನ್ನು ಸರಿಪಡಿಸುತ್ತದೆ ಇದರಲ್ಲಿರುವ ವಿಟಮಿನ್ ಬಿ12 ಅಂಶವು ಹೊಸ ಕೂದಲು ಬರುವಂತೆ ಮಾಡುತ್ತದೆ ಫ್ಯಾಟಿ ಆಸಿಡ್‌ಗಳು ಕೂದಲಿಗೆ ನೈಸರ್ಗಿಕ ಹೊಳಪನ್ನು ನೀಡುತ್ತವೆ. ಕೂದಲು ತುಂಡಾಗುವಿಕೆಗಾಗಿ ವಿಟಮಿನ್ ಎ ಕಾರ್ಯನಿರ್ವಹಿಸುತ್ತದೆ. ಕೂದಲುದುರುವುದನ್ನು ತಡೆಗಟ್ಟಲು ವಿಟಮಿನ್ ಡಿ ಸಹಕಾರಿಯಾಗಿದೆ. ಹಾಗಿದ್ದರೆ ಮೊಟ್ಟೆಯ ಮಾಸ್ಕ್ ರೆಸಿಪಿಗಳನ್ನು ಇಂದಿಲ್ಲಿ ತಿಳಿದುಕೊಳ್ಳೋಣ... 

 ಮೊಟ್ಟೆಯ ಹಳದಿ ಭಾಗ, ಜೇನು ಮತ್ತು ತೆಂಗಿನೆಣ್ಣೆ

ಮೊಟ್ಟೆಯ ಹಳದಿ ಭಾಗ, ಜೇನು ಮತ್ತು ತೆಂಗಿನೆಣ್ಣೆ

ಮೊಟ್ಟೆಯು ಪ್ರೋಟೀನ್ ಅಂಶದಿಂ ಕೂಡಿದ್ದು ಜೇನು ಮಾಯಿಶ್ಚರೈಸರ್ ಆಗಿದೆ ಮತ್ತು ತೆಂಗಿನೆಣ್ಣೆ ಕೂದಲಿಗೆ ಹೊಳಪನ್ನು ನೀಡುತ್ತದೆ.

ವಿಧಾನ

1 ಮೊಟ್ಟೆಯ ಹಳದಿ ಭಾಗ (ಇದನ್ನು ಬಿಳಿ ಭಾಗದಿಂದ ಬೇರ್ಪಡಿಸಿ)

1 ಚಮಚ ಜೇನು ತುಪ್ಪ

1 ಚಮಚ ತೆಂಗಿನೆಣ್ಣೆ

ಒಂದು ಬೌಲ್‌ನಲ್ಲಿ ಮೊಟ್ಟೆಯ ಹಳದಿ ಭಾಗ, ತೆಂಗಿನೆಣ್ಣೆ ಮತ್ತು ಜೇನು ಸೇರಿಸಿ ಮಿಶ್ರ ಮಾಡಿ

ನಿಮ್ಮ ಕೂದಲಿನ ಬುಡದಿಂದ ತುದಿಯವರೆಗೆ ಇದನ್ನು ಹಚ್ಚಿಕೊಳ್ಳಿ

ಮೊಟ್ಟೆ, ಮಯೊನೈಸ್, ಆಲೀವ್ ಆಯಿಲ್ ಮತ್ತು ಜೇನು

ಮೊಟ್ಟೆ, ಮಯೊನೈಸ್, ಆಲೀವ್ ಆಯಿಲ್ ಮತ್ತು ಜೇನು

ಮೊಟ್ಟೆಯ ಪ್ರೋಟೀನ್ ಅಂಶ, ಮಯೊನೈಸ್‌ನ ಕೂದಲಿನ ಅಂದವನ್ನು ಹೆಚ್ಚಿಸುವ ಗುಣ, ಆಲೀವ್ ಆಯಿಲ್‌ನಲ್ಲಿರುವ ಕೂದಲಿನ ಆರೋಗ್ಯದ ಗುಟ್ಟು ಮತ್ತು ಜೇನಿನ ಹೊಳಪಿನ ಅಂಶದಿಂದ ನಿಮ್ಮ ಕೂದಲು ಅದ್ಭುತವಾಗಿ ಕಾಣುವುದು ಖಂಡಿತ

1 ಮೊಟ್ಟೆ

2 ಚಮಚಗಳಷ್ಟು ಮಯೊನೈಸ್

1 ಚಮಚ ಜೇನು

1 ಚಮಚ ಆಲೀವ್ ಆಯಿಲ್

ಬೌಲ್‌ನಲ್ಲಿ ಜೇನು, ಮಯೊನೈಸ್, ಮೊಟ್ಟೆ, ಆಲೀವ್ ಆಯಿಲ್ ಅನ್ನು ಹಾಕಿಕೊಳ್ಳಿ

ಈ ಮಿಶ್ರಣ ದಪ್ಪನೆಯ ರೂಪವನ್ನು ಪಡೆದಾಗ ನಿಮ್ಮ ಕೈಗಳಿಂದ ಇದನ್ನು ಕೂದಲಿಗೆ ಹಚ್ಚಿಕೊಳ್ಳಿ

30 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ಕೂದಲು ತೊಳೆದುಕೊಳ್ಳಿ

ಮೊಟ್ಟೆ, ತೆಂಗಿನ ಹಾಲು, ಆಲೀವ್ ಆಯಿಲ್ ಮತ್ತು ಲಿಂಬೆ

ಮೊಟ್ಟೆ, ತೆಂಗಿನ ಹಾಲು, ಆಲೀವ್ ಆಯಿಲ್ ಮತ್ತು ಲಿಂಬೆ

ನಿಮ್ಮ ಕೂದಲು ಉದುರುತ್ತಿದ್ದು ಕೂದಲಿಗೆ ಹಾನಿಯುಂಟಾಗುತ್ತಿದೆ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದ್ದಲ್ಲಿ ಇಲ್ಲಿದೆ ಅತ್ಯದ್ಭುತ ಹೇರ್ ಪ್ಯಾಕ್. ಮೊಟ್ಟೆಯು ಕಂಡೀಷನರ್ ಮತ್ತು ಶ್ಯಾಂಪೂವಿನಂತೆ ಕಾರ್ಯನಿರ್ವಹಿಸುತ್ತದೆ ಅಂತೆಯೇ ತೆಂಗಿನ ಹಾಲು ಕೂದಲಿನ ರಂಧ್ರಗಳನ್ನು ಉಪಚರಿಸುತ್ತದೆ.

ಲಿಂಬೆ ಹೊಟ್ಟನ್ನು ದೂರಮಾಡುತ್ತದೆ ಮತ್ತು ಆಲೀವ್ ಆಯಿಲ್ ಅನ್ನು ಸಂಪೂರ್ಣವಾಗಿ ಕೂದಲಿನ ಆರೈಕೆಗಾಗಿ ಬಳಸಬಹುದಾಗಿದೆ.

ವಿಧಾನ

1 ಮೊಟ್ಟೆ

1 ಕಪ್ ತೆಂಗಿನೆಣ್ಣೆ

1 ಚಮಚ ಲಿಂಬೆ ರಸ

2 ಚಮಚ ಆಲೀವ್ ಆಯಿಲ್

ಬೌಲ್‌ನಲ್ಲಿ ಮೊಟ್ಟೆ, ತೆಂಗಿನ ಹಾಲು, ಲಿಂಬೆ ಮತ್ತು ಆಲೀವ್ ಆಯಿಲ್ ಅನ್ನು ಸಮಪ್ರಮಾಣದಲ್ಲಿ ಬೆರೆಸಿಕೊಳ್ಳಿ

ಈ ಪ್ಯಾಕ್ ಸಿದ್ಧಗೊಂಡಂತೆ ಇದನ್ನು ನಿಮ್ಮ ಕೂದಲಿಗೆ ಹಚ್ಚಿಕೊಳ್ಳಿ

ನಿಮ್ಮ ತಲೆಯ ಬುರುಡೆಗೆ ಮಸಾಜ್ ಮಾಡಿ

ಕೂದಲನ್ನು ಕವರ್ ಮಾಡಿ ಮತ್ತು ಕೂದಲನ್ನು ತೊಳೆದುಕೊಳ್ಳಿ

ಮೊಟ್ಟೆ, ಹಾಲು ಮತ್ತು ಲಿಂಬೆ, ಆಲೀವ್ ಆಯಿಲ್

ಮೊಟ್ಟೆ, ಹಾಲು ಮತ್ತು ಲಿಂಬೆ, ಆಲೀವ್ ಆಯಿಲ್

ನಿಮ್ಮ ಕೂದಲಿಗೆ ನೈಸರ್ಗಿಕ ಕಳೆಯನ್ನು ಉಂಟುಮಾಡಲು ಈ ಹೇರ್ ಪ್ಯಾಕ್ ಸಹಕಾರಿಯಾಗಿದೆ. ನಿಮ್ಮ ಕೂದಲಿನ ಅಳತೆಗೆ ತಕ್ಕಂತೆ ಪ್ಯಾಕ್‌ಗೆ ಬೇಕಾಗುವ ಸಾಮಾಗ್ರಿಗಳನ್ನು ಹೆಚ್ಚಿಸಿಕೊಳ್ಳಿ

1 ಮೊಟ್ಟೆ

1 ಕಪ್ ಹಾಲು

1 ಚಮಚ ಲಿಂಬೆ ರಸ

2 ಚಮಚ ಆಲೀವ್ ಆಯಿಲ್

ಮೊದಲಿಗೆ ಮೊಟ್ಟೆಯನ್ನು ಒಡೆದು ದ್ರಾವಣವನ್ನು ಒಂದು ಬೌಲ್‌ಗೆ ಹಾಕಿ

ಇದಕ್ಕೆ ಹಾಲು, ಲಿಂಬೆ ರಸ ಮತ್ತು ಆಲೀವ್ ಆಯಿಲ್ ಅನ್ನು ಬೆರೆಸಿಕೊಳ್ಳಿ ಮಿಶ್ರಣ ಸಿದ್ಧಮಾಡಿ

ಕೂದಲಿಗೆ ಇದನ್ನು ಹಚ್ಚಿಕೊಂಡು ಮಸಾಜ್ ಮಾಡಿ ತದನಂತರ ಕೂದಲನ್ನು ತೊಳೆದುಕೊಳ್ಳಿ.

ಮೊಟ್ಟೆ, ಬಾಳೆಹಣ್ಣು, ಜೇನು, ಮಜ್ಜಿಗೆ ಮತ್ತು ಆಲೀವ್ ಆಯಿಲ್

ಮೊಟ್ಟೆ, ಬಾಳೆಹಣ್ಣು, ಜೇನು, ಮಜ್ಜಿಗೆ ಮತ್ತು ಆಲೀವ್ ಆಯಿಲ್

ವಿಧಾನ

1 ಮೊಟ್ಟೆ

1 ಬಾಳೆಹಣ್ಣು

2 ಚಮಚ ಜೇನು

1/2 ಅವೊಕಾಡೊ

3 ಚಮಚಗಳಷ್ಟು ಆಲೀವ್ ಆಯಿಲ್

3 ಚಮಚ ಮಜ್ಜಿಗೆ

ಮಿಕ್ಸಿಯಲ್ಲಿ ಮೊಟ್ಟೆ, ಅವೊಕಾಡೊ, ಬಾಳೆಹಣ್ಣನ್ನು ರುಬ್ಬಿಕೊಳ್ಳಿ

ಇದನ್ನು ಒಂದು ಬೌಲ್‌ಗೆ ಹಾಕಿಕೊಂಡು ಇದಕ್ಕೆ ಮಜ್ಜಿಗೆ, ಜೇನು ಮತ್ತು ಆಲೀವ್ ಆಯಿಲ್ ಸೇರಿಸಿ

ನಿಮ್ಮ ಸಂಪೂರ್ಣ ಕೂದಲಿಗೆ ಹಚ್ಚಿಕೊಳ್ಳಿ 30 ನಿಮಿಷಗಳ ಕಾಲ ಹಾಗೆಯೇ ಬಿಡಿ

ತೊಳೆದುಕೊಳ್ಳಿ

ಮೊಟ್ಟೆ, ಸ್ಟ್ರಾಬೆರಿ ಮತ್ತು ಮೊಸರು

ಮೊಟ್ಟೆ, ಸ್ಟ್ರಾಬೆರಿ ಮತ್ತು ಮೊಸರು

ಮೊಟ್ಟೆಯು ಪ್ರೋಟೀನ್ ಅಂಶಗಳನ್ನು ಒಳಗೊಂಡಿದ್ದು, ಸ್ಟ್ರಾಬೆರಿಯಲ್ಲಿ ವಿಟಮಿನ್ ಸಿ ಇದೆ. ಮೊಸರು ನೈಸರ್ಗಿಕ ಕ್ಲೆನ್ಸರ್ ಆಗಿದೆ. ಕೂದಲಿಗೆ ಕಂಡೀಷನಿಂಗ್ ಮತ್ತು ಸ್ವಚ್ಛತೆ ದೊರೆಯುತ್ತದೆ.

5 ಸ್ಟ್ರಾಬೆರಿ

1 ಸಣ್ಣ ಕಪ್ ಮೊಸರು

1 ಮೊಟ್ಟೆ

ಮಿಕ್ಸಿಯಲ್ಲಿ ಇದೆಲ್ಲಾವನ್ನು ಹಾಕಿ ರುಬ್ಬಿಕೊಳ್ಳಿ

ನಿಮ್ಮ ಕೂದಲಿಗೆ ಈ ಮಿಶ್ರಣವನ್ನು ಹಚ್ಚಿ

30 ನಿಮಿಷಗಳ ಕಾಲ ಹಾಗೆಯೇ ಬಿಡಿ ನಂತರ ಕೂದಲನ್ನು ತೊಳೆದುಕೊಳ್ಳಿ

ಮೊಟ್ಟೆ, ಲಿಂಬೆ, ಮದರಂಗಿ ಮತ್ತು ನೀರು

ಮೊಟ್ಟೆ, ಲಿಂಬೆ, ಮದರಂಗಿ ಮತ್ತು ನೀರು

ಈ ಸರಳ ಹೇರ್ ಮಾಸ್ಕ್ ನಿಮಗೆ ಉತ್ತಮ ಫಲಿತಾಂಶವನ್ನು ನೀಡುತ್ತದೆ ಎಂಬುದರಲ್ಲಿ ಸಂದೇಹವೇ ಇಲ್ಲ.

1 ಮೊಟ್ಟೆ

1 ಸಣ್ಣ ಬೌಲ್ ಮದರಂಗಿ

1 ಸಣ್ಣ ಕಪ್ ನೀರು

1 ಚಮಚ ಲಿಂಬೆ ರಸ

ಮದರಂಗಿ, ಮೊಟ್ಟೆ, ಲಿಂಬೆ ರಸ ಮತ್ತು ನೀರು ಬೆರೆಸಿಕೊಂಡು ಪೇಸ್ಟ್ ತಯಾರಿಸಿಕೊಳ್ಳಿ

ಈ ಮಾಸ್ಕ್ ಹಚ್ಚಿ 2 ಗಂಟೆಗಳ ಕಾಲ ಬಿಡಿ

ನಿಮ್ಮ ಕೂದಲನ್ನು ಶ್ಯಾಂಪೂ ಬಳಸಿ ತೊಳೆದುಕೊಳ್ಳಿ

ಮೊಟ್ಟೆಯ ಹಳದಿ ಭಾಗ, ಅಲೊವೇರಾ ಜೆಲ್ ಮತ್ತು ನೀರು

ಮೊಟ್ಟೆಯ ಹಳದಿ ಭಾಗ, ಅಲೊವೇರಾ ಜೆಲ್ ಮತ್ತು ನೀರು

ಅಲೊವೇರಾ ಜೆಲ್ ಪ್ರೊಟಿಯೊಲೆಕ್ಟಿಕ್ ಎಂಜೀಮ್‌ಗಳನ್ನು ಪಡೆದುಕೊಂಡಿದ್ದು ಇದು ಮೃತಕೋಶಗಳು ಮತ್ತು ತಲೆಬುಡಕ್ಕೆ ಉತ್ತಮ ಆರೈಕೆಯನ್ನು ಮಾಡುತ್ತದೆ

ವಿಧಾನ

1 ಮೊಟ್ಟೆಯ ಹಳದಿ ಭಾಗ

1 ಚಮಚ ತಾಜಾ ಅಲೊವೇರಾ ಜೆಲ್

1 ಕಪ್ ನೀರು

ಮೊದಲಿಗೆ ಮೊಟ್ಟೆಯ ಹಳದಿ ಭಾಗವನ್ನು ಬೀಟ್ ಮಾಡಿ

ಅಲೊವೇರಾ ಜೆಲ್ ಮತ್ತು ನೀರನ್ನು ಸೇರಿಸಿ

ಹೇರ್ ಮಾಸ್ಕ್ ಮೃದುವಾಗುವವರೆಗೆ ಇದನ್ನು ಮಿಶ್ರ ಮಾಡಿ

ನಿಮ್ಮ ಸಂಪೂರ್ಣ ಕೂದಲಿಗೆ ಇದನ್ನು ಹಚ್ಚಿಕೊಳ್ಳಿ

ಕೂದಲನ್ನು ತೊಳೆದುಕೊಂಡು ಶ್ಯಾಂಪೂ ಮಾಡಿಕೊಳ್ಳಿ

ಮೊಟ್ಟೆಯ ಹಳದಿ ಭಾಗ, ಬೆಳ್ಳುಳ್ಳಿ ರಸ, ಜೇನು ಮತ್ತು ಚಾಮೋಲಿ ಟೀ

ಮೊಟ್ಟೆಯ ಹಳದಿ ಭಾಗ, ಬೆಳ್ಳುಳ್ಳಿ ರಸ, ಜೇನು ಮತ್ತು ಚಾಮೋಲಿ ಟೀ

ನಿಮ್ಮ ಹೇರ್ ಮಾಸ್ಕ್‌ನಲ್ಲಿ ಸಾಮಾಗ್ರಿಗಳು ಹೆಚ್ಚಿದ್ದಷ್ಟು ನಿಮ್ಮ ಕೂದಲಿಗೆ ಉತ್ತಮ ಆರೋಗ್ಯ ಮತ್ತು ಸೌಂದರ್ಯ ದೊರೆಯುತ್ತದೆ. ಬೆಳ್ಳುಳ್ಳಿ ಕೂಡ ಬ್ಯಾಕ್ಟೀರಿಯಾಗಳಿಂದ ತಲೆಬುಡಕ್ಕೆ ರಕ್ಷಣೆಯನ್ನು ನೀಡುತ್ತದೆ.

ವಿಧಾನ:

1 ಚಮಚ ಬೆಳ್ಳುಳ್ಳಿ ರಸ

3 ಚಮಚಗಳಷ್ಟು ಚಾಮೋಲಿ ಟಿ

1 ಚಮಚ ಜೇನು

1 ಚಮಚ ಅಲೊವೇರಾ ಜೆಲ್

1 ಮೊಟ್ಟೆಯ ಹಳದಿ ಭಾಗ

3 ಕಪ್ ನೀರು

ಬೌಲ್‌ನಲ್ಲಿ ಮೊಟ್ಟೆಯ ಹಳದಿ ಭಾಗವನ್ನು ತೆಗೆದುಕೊಳ್ಳಿ

ಇದಕ್ಕೆ ಬೆಳ್ಳುಳ್ಳಿ ರಸ, ಚಾಮೋಲಿ ಚಹಾ, ಜೇನು, ನೀರು ಮತ್ತು ಅಲೊವೇರಾ ಜೆಲ್ ಸೇರಿಸಿಕೊಳ್ಳಿ. ಚಮಚದ ಸಹಾಯದಿಂದ ಮೃದುವಾದ ಪೇಸ್ಟ್

ತಯಾರಿಸಿಬೇಕಿದ್ದರೆ ಎಲ್ಲಾ ಸಾಮಾಗ್ರಿಗಳನ್ನು ಸಮಪ್ರಮಾಣದಲ್ಲಿ ಬೆರೆಸಿಕೊಳ್ಳಿ

ನಿಮ್ಮ ಕೂದಲಿಗೆ ಇದನ್ನು ಹಚ್ಚಿಕೊಳ್ಳಿ ಮತ್ತು ಕೂದಲನ್ನು ಶ್ಯಾಂಪೂ ಬಳಸಿ ತೊಳೆದುಕೊಳ್ಳಿ.

ಮೊಟ್ಟೆ ಮಯೊನೈಸ್, ತೆಂಗಿನೆಣ್ಣೆ ಮತ್ತು ಹರಳೆಣ್ಣೆ

ಮೊಟ್ಟೆ ಮಯೊನೈಸ್, ತೆಂಗಿನೆಣ್ಣೆ ಮತ್ತು ಹರಳೆಣ್ಣೆ

ಹರಳೆಣ್ಣೆಯಲ್ಲಿ ರಿಕಿನಾಲಿಕ್ ಆಸಿಡ್ ಇದ್ದು ಒಮೆಗಾ - 6 ಫ್ಯಾಟಿ ಆಸಿಡ್ ಅನ್ನು ಇದು ಒಳಗೊಂಡಿದೆ. ಇದು ತಲೆಯ ತ್ವಚೆಗೆ ರಕ್ತಸಂಚಾರವನ್ನುಂಟು ಮಾಡಿ ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ. ತೆಂಗಿನೆಣ್ಣೆಯು ಕೂದಲಿನ ಆರೋಗ್ಯವನ್ನು ವೃದ್ಧಿಸಲಿದ್ದು ಮಯೊನೈಸ್ ನೈಸರ್ಗಿಕ ಕ್ಲೆನ್ಸರ್ ಆಗಿದೆ.

ವಿಧಾನ:

1 ಮೊಟ್ಟೆ

1 ಚಮಚ ಮಯೊನೈಸ್

1 ಚಮಚ ತೆಂಗಿನೆಣ್ಣೆ

1 ಚಮಚ ಹರಳೆಣ್ಣೆ

ಬೌಲ್‌ನಲ್ಲಿ ಎಲ್ಲಾ ಎಣ್ಣೆಗಳನ್ನು ಮಿಶ್ರ ಮಾಡಿಕೊಳ್ಳಿ

ನಿಮ್ಮದು ಜಿಡ್ಡಿನ ಕೂದಲಾಗಿದ್ದರೆ ಮೊಟ್ಟೆಯ ಹಳದಿ ಮಾತ್ರ ಬಳಸಿ

ಇದು ಮೃದುವಾದ ಪೇಸ್ಟ್ ಆಗುತ್ತಿದ್ದಂತೆ ನಿಮ್ಮ ಕೂದಲಿನ ಬುಡ ಮತ್ತು ತುದಿಗೆ ಹಚ್ಚಿಕೊಳ್ಳಿ

30 ನಿಮಿಷಗಳ ಕಾಲ ಹಾಗೆಯೇ ಬಿಟ್ಟು, ತಣ್ಣೀರಿನಿಂದ ಕೂದಲನ್ನು ತೊಳೆದುಕೊಳ್ಳಿ.

English summary

Egg Hair Masks To Boost Your Hair Quality And Health

There are natural recipes with eggs for hair that you can prepare and apply on the hair. The outcome will be, the smell of the egg will vanish and also, your hair will show unbelievable changes really soon. So, how exactly does an egg extra benefit your hair? Well, eggs are natural hair conditioners and hair cleansers that are high in protein and can be applied from the scalp to tip of the hair.
Story first published: Wednesday, September 6, 2017, 23:46 [IST]
Subscribe Newsletter