For Quick Alerts
ALLOW NOTIFICATIONS  
For Daily Alerts

ಎಣ್ಣೆಯುಕ್ತ ಕೂದಲಿಗೆ ಮನೆಯಲ್ಲೇ ಶಾಂಪೂ ತಯಾರಿಸಿ

By Divya Pandith
|

ದೇಹದ ಸೌಂದರ್ಯದಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ಕೂದಲಿನ ಆರೈಕೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಕೂದಲನ್ನು ಸುಂದರವಾಗಿ ಮತ್ತು ರೇಷ್ಮೆಯಂತೆ ಹೊಳೆಯುಂವತೆ ಮಾಡಲು ತುಂಬಾ ಕಠಿಣ ಪರಿಶ್ರಮ ಮತ್ತು ಶ್ರದ್ಧೆ ಬೇಕು. ಇಂದಿನ ವ್ಯಸ್ತ ಜೀವನದಲ್ಲಿ ಕೂದಲಿನ ಆರೈಕೆಗೆ ಸಮಯ ಕೂಡ ಸಿಗದು. ಇಷ್ಟು ಮಾತ್ರವಲ್ಲದೆ ವಾತಾವರಣ, ಮಾಲಿನ್ಯ ಇತ್ಯಾದಿ ಕೂದಲಿನ ಮೇಲೆ ಪ್ರತಿನಿತ್ಯ ದಾಳಿ ಮಾಡುವುದು. ಸೂರ್ಯನ ಕಿರಣಗಳು ಕೂಡ ಕೂದಲಿನ ಕಾಂತಿ ಕಡಿಮೆಗೊಳಿಸುವುದು. ಆದರೆ ಕೂದಲಿಗೆ ಆಗುವ ಹಾನಿ ತಡೆಯಲು ಏನು ಮಾಡಬೇಕು ಎನ್ನುವುದೇ ದೊಡ್ಡ ಪ್ರಶ್ನೆಯಾಗಿ ಉಳಿದುಬಿಡುವುದು.

ಕೂದಲಿಗೆ ಪೋಷಣೆ ನೀಡುವುದು ಹೇಗೆ? ರಾಸಾಯನಿಕಯುಕ್ತ ಉತ್ಪನ್ನಗಳಿಂದ ಕೂದಲು ಮತ್ತಷ್ಟು ಹಾನಿಗೊಳಗಾಗುವುದು. ಕೂದಲಿನ ಉತ್ಪನ್ನಗಳು ಎಷ್ಟು ಒಳ್ಳೆಯದಾಗಿದ್ದರೂ ಅದು ಕೂದಲಿಗೆ ಹಾನಿ ಮಾಡುವುದು ಖಚಿತ. ಅದರಲ್ಲೂ ಎಣ್ಣೆಯುಕ್ತ ಕೂದಲಿನ ಆರೈಕೆ ಮತ್ತಷ್ಟು ಕ್ಲಿಷ್ಟ. ಕೂದಲಿನಲ್ಲಿ ಜಿಡ್ಡನ್ನು ಉಂಟು ಮಾಡುವುದರಿಂದ ಪ್ರತಿನಿತ್ಯ ಕೂದಲನ್ನು ತೊಳೆಯುವುದು ಅತೀ ಅಗತ್ಯ. ಇದು ಅಸಾಮಾನ್ಯವೇನಲ್ಲ. ಅದರೆ ಇದಕ್ಕೆ ಸರಿಯಾದ ರೀತಿಯಲ್ಲಿ ಆರೈಕೆ ಮಾಡಿಕೊಳ್ಳಬೇಕು ಅಷ್ಟೇ.

Hair care

ಮೇಧೋಗ್ರಂಥಿ ಅವಶ್ಯಕತೆಗಿಂತ ಹೆಚ್ಚು ಸ್ರವಿಸುವ ಕಾರಣದಿಂದ ತಲೆಬುರುಡೆಯಲ್ಲಿ ಅತಿಯಾಗಿ ಎಣ್ಣೆ ಕಾಣಿಸಿಕೊಳ್ಳುವುದು. ಕೂದಲಿನ ಕೋಶಗಳು ಕೂದಲು ಮತ್ತು ತಲೆಬುರುಡೆ ಪೋಷಣೆಗೆ ನೈಸರ್ಗಿಕ ಎಣ್ಣೆಯನ್ನು ಬಿಡುಗಡೆ ಮಾಡುವುದು. ಈ ಎಣ್ಣೆಯು ನಮ್ಮ ಕೂದಲಿನ ಕೋಶಗಳನ್ನು ರಕ್ಷಿಸುವುದು. ಇದರಿಂದ ಕೂದಲು ಬೆಳೆಯುವುದು. ತಲೆಬುರುಡೆ ಮತ್ತು ಕೂದಲಿಗೆ ಸೂರ್ಯನ ಬಿಸಿಲು ಮತ್ತು ಮಾಲಿನ್ಯದಿಂದ ಹಾನಿಯಾಗದಂತೆ ಇದು ಪದರ ನಿರ್ಮಾಣ ಮಾಡುವುದು.

ಆದರೆ ಕೆಲವೊಂದು ಸಲ ಕೂದಲಿನ ಕೋಶಗಳು ಅತಿಯಾಗಿ ಎಣ್ಣೆ ಸ್ರವಿಸಿದಾಗ ಸಮಸ್ಯೆ ಆರಂಭವಾಗುವುದು. ಇದರ ಬಗ್ಗೆ ಚಿಂತೆ ಮಾಡಬೇಕಿಲ್ಲವಾದರೂ ಜಿಡ್ಡಿನಿಂದ ಕೂಡಿರುವ ಕೂದಲು ನೋಡಲು ತುಂಬಾ ಕೆಟ್ಟದಾಗಿ ಕಾಣಿಸುವುದು. ಕೂದಲಿನಲ್ಲಿ ಅತಿಯಾಗಿ ಎಣ್ಣೆಯಂಶವಿದ್ದರೆ ಇದು ಸಹಜವಾಗಿಯೇ ಧೂಳನ್ನು ಆಕರ್ಷಿಸುವುದು. ತಲೆಬುರುಡೆಯು ಅತಿಯಾಗಿ ಎಣ್ಣೆ ಬಿಡುಗಡೆ ಮಾಡಲು ಹಲವಾರು ಕಾರಣಗಳು ಇವೆ. ಜೀವನಶೈಲಿ, ಅನವಂಶೀಯತೆ, ಆಹಾರಕ್ರಮ ಇದು ಪ್ರಮುಖ ಕಾರಣವಾಗಿದೆ. ಕೂದಲಿನಲ್ಲಿ ಅತಿಯಾದ ಎಣ್ಣೆಯಂಶವಿದ್ದರೆ ಪ್ರತಿನಿತ್ಯ ಕೂದಲು ತೊಳೆಯುವಾಗ ಒಂದೇ ರೀತಿಯ ಶಾಂಪೂ ಬಳಸಿಕೊಳ್ಳಬೇಕು ಎನ್ನುವುದು ತಪ್ಪು ಸಲಹೆಯಾಗಿದೆ.

ಪ್ರತಿನಿತ್ಯ ಕೂದಲು ತೊಳೆದರೆ ತಲೆಬುರುಡೆಯಲ್ಲಿರುವ ಎಣ್ಣೆಯು ಸಂಪೂರ್ಣವಾಗಿ ತೊಳೆದುಹೋಗುವುದು. ಇದರಿಂದ ಕೂದಲಿನ ಕೋಶಗಳು ಮತ್ತಷ್ಟು ಎಣ್ಣೆ ಉತ್ಪತ್ತಿ ಮಾಡುವುದು. ಶಾಂಪೂ ಬಳಸಿಕೊಂಡು ಪ್ರತಿನಿತ್ಯ ಕೂದಲು ತೊಳೆಯಬಾರದು. ಹಾಗಾದರೆ ಏನು ಮಾಡಬೇಕೆಂದು ನಿಮ್ಮ ಪ್ರಶ್ನೆಯಾಗಿರಬಹುದು.

ಇಂತಹ ಸಮಯದಲ್ಲಿ ಮನೆಯಲ್ಲಿ ತಯಾರಿಸಿದ ಹೇರ್ ಮಾಸ್ಕ ಬಳಸಿದರೆ ತುಂಬಾ ಒಳ್ಳೆಯದು. ಮನೆಯಲ್ಲೇ ಕೂದಲಿಗೆ ಬೇಕಾಗುವ ಶಾಂಪೂ ತಯಾರಿಸಿಕೊಳ್ಳಬಹುದು. ಇದು ಹಾನಿಗೊಳಗಾಗಿರುವ ಕೂದಲನ್ನು ಸರಿಪಡಿಸಲು ತುಂಬಾ ಪರಿಣಾಮಕಾರಿಯಾಗಲಿದೆ. ಇದನ್ನು ನೀವು ತುಂಬಾ ಸುಲಭವಾಗಿ ತಯಾರಿಸಿಕೊಳ್ಳಬಹುದು. ಎಣ್ಣೆಯುಕ್ತ ಕೂದಲಿಗೆ ಕೆಲವು ಪರಿಣಾಮಕಾರಿ ಔಷಧಿ ಸೂಚಿಸಲಾಗಿದೆ. ಇದನ್ನು ಬಳಸಿದರೆ ಯಾವುದೇ ಶಾಂಪೂ ಬೇಕೆಂದಿಲ್ಲ. ಅಡುಗೆ ಮನೆಯಲ್ಲೇ ಸಿಗುವಂತಹ ಸಾಮಗ್ರಿ ಬಳಸಿಕೊಂಡು ಇದನ್ನು ತಯಾರಿಸಬಹುದು.

ಅಡುಗೆ ಸೋಡಾ ಮತ್ತು ಆ್ಯಪಲ್ ಸೀಡರ್ ವಿನೇಗರ್ ಶಾಂಪೂ
ಎಣ್ಣೆಯುಕ್ತ ಕೂದಲು ಮತ್ತು ತಲೆಬುರುಡೆಯ ನಿವಾರಣೆ ಮಾಡಲು ಇದು ತುಂಬಾ ಪರಿಣಾಮಕಾರಿಯಾದ ಶಾಂಪೂ. ಇವೆರಡರ ಮಿಶ್ರಣವು ಒಳ್ಳೆಯ ಶುದ್ಧೀಕರಣ ಮಾಡುವುದು. ಇದು ಕೂದಲಿನಲ್ಲಿರುವ ಧೂಳಿನ ಕಣಗಳನ್ನು ತೆಗೆಯುವುದು ಮಾತ್ರವಲ್ಲದೆ ಹೆಚ್ಚುವರಿ ಎಣ್ಣೆಯಂಶವನ್ನು ನಿವಾರಣೆ ಮಾಡುವುದು. ಇದರಿಂದ ಕೂದಲು ಜಿಡ್ಡಿನಂತಿರುವುದಿಲ್ಲ. ಇದನ್ನು ಬಳಸುವುದು ತುಂಬಾ ಸುರಕ್ಷಿತ.

ಬೇಕಾಗುವ ಸಾಮಗ್ರಿಗಳು
1 ಚಮಚ ಅಡುಗೆ ಸೋಡಾ
1 ಚಮಚ ಆ್ಯಪಲ್ ಸೀಡರ್ ವಿನೇಗರ್

ವಿಧಾನ
1)ಕೂದಲನ್ನು ಒದ್ದೆ ಮಾಡಿಕೊಳ್ಳಿ.
2) ಅಡುಗೆ ಸೋಡಾವನ್ನು ಅಂಗೈಗೆ ಹಾಕಿಕೊಂಡು ಅದನ್ನು ಕೂದಲು ಮತ್ತು ತಲೆಬುರುಡೆಗೆ ಉಜ್ಜಿಕೊಳ್ಳಿ.
3) ಕೂದಲು ತೊಳೆಯಿರಿ.
4)ವಿನೇಗರ್ ಅನ್ನು ಅರ್ಧ ಜಗ್ ನೀರಿಗೆ ಹಾಕಿಕೊಂಡು ಅಂತಿಮ ಸಲ ಇದರಿಂದ ಕೂದಲು ತೊಳೆಯಿರಿ. ಇದರ ಲಾಭ ಪಡೆಯಲು ಇದನ್ನು ಸರದಿಯಂತೆ ಬಳಸಿಕೊಳ್ಳಬೇಕು. ಇದು ಕೂದಲಿಗೆ ಕಾಂತಿ ನೀಡುವುದು ಮತ್ತು ನಯವಾಗಿಸುವುದು. ಇದು ತಲೆಬುರುಡೆಯಲ್ಲಿ ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕುವುದು.

English summary

effective Homemade Shampoo For Oily And Greasy Hair

Our hair is the most important feature of our body. We spend so much time and money to take care of it. We would always want to look our very best all the time. But is it possible? The weather, humidity and pollution cause an irreversible damage to our hair every day. The harsh rays of the sun also damage it beyond repair. But the important thing to ask is what do we do in order to combat the damage? How do we nourish our hair? With chemical-laden products, which do nothing but damage it further! No matter how expensive your hair products are, they damage more than do good to your hair.
X
Desktop Bottom Promotion