ಕಡು ಕಪ್ಪು ಕೂದಲಿಗೆ ಬಹು ಉಪಯುಕ್ತ 'ಹೇರ್ ಮಾಸ್ಕ್'

By: Hemanth
Subscribe to Boldsky

ಸೌಂದರ್ಯದ ಪ್ರಮುಖ ಅಂಗಗಳಲ್ಲಿ ಒಂದಾಗಿರುವಂತ ಕೂದಲು ಆರೋಗ್ಯ ಹಾಗೂ ಹೊಳೆಯುವಂತಿರಬೇಕು. ಪ್ರತಿಯೊಬ್ಬರೂ ಕಪ್ಪಗಿನ ಉದ್ದ ಕೂದಲು ಬಯಸುತ್ತಾರೆ. ಇಂತಹ ಕೂದಲು ಪಡೆಯುವುದು ಅಷ್ಟು ಸುಲಭದ ಮಾತಲ್ಲ. ಯಾಕೆಂದರೆ ಇದಕ್ಕೆ ಕಠಿಣ ಪರಿಶ್ರಮ ಬೇಕೇಬೇಕು. ಕೂದಲಿನ ಆರೈಕೆಗಾಗಿ ಹಲವಾರು ರೀತಿಯ ಶಾಂಪೂ ಹಾಗೂ ಕಂಡೀಷನರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಇದನ್ನು ಕೆಲವು ದಿನಗಳ ಕಾಲ ಕೂದಲಿಗೆ ಕಾಂತಿಯನ್ನು ನೀಡಬಹುದು. ಆದರೆ ಕೆಲವು ಮನೆಮದ್ದನ್ನು ಬಳಸಿಕೊಂಡು ಮಾಡಬಹುದಾದ ಕೂದಲಿನ ಆರೈಕೆ ಶಾಶ್ವತವಾಗಿ ಕೂದಲನ್ನು ಆರೋಗ್ಯ ಹಾಗೂ ರೇಷ್ಮೆಯಂತೆ ಮಾಡುವುದು. ಕೂದಲಿನ ಬೆಳವಣಿಗೆ ಮತ್ತು ಕೂದಲು ಕಾಂತಿಯನ್ನು ಕಾಪಾಡಲು ಆರೋಗ್ಯಕರ ಆಹಾರ ಪಥ್ಯ ಮತ್ತು ಕೂದಲಿನ ಆರೈಕೆ ಸರಿಯಾಗಿ ಮಾಡಬೇಕಾಗಿದೆ. 

Curry leaves

ಕರಿಬೇವಿನ ಎಲೆಗಳು ಮತ್ತು ತೆಂಗಿನ ಎಣ್ಣೆ

ಕರಿಬೇವಿನ ಎಲೆಗಳು ಮತ್ತು ತೆಂಗಿನ ಎಣ್ಣೆಯು ಕೂದಲಿನ ಬೆಳವಣಿಗೆಗೆ ನೆರವಾಗುವುದು ಮತ್ತು ಕೂದಲನ್ನು ಮಾಯಿಶ್ಚರೈಸ್ ಹಾಗೂ ತೇವಾಂಶದಿಂದ ಇಡುವುದು. ತಾಜಾವಿರುವ ಕರಿಬೇವಿನ ಎಲೆಗಳನ್ನು ತೆಗೆದುಕೊಳ್ಳಿ ಮತ್ತು ಅದಕ್ಕೆ ಸ್ವಲ್ಪ ತೆಂಗಿನ ಎಣ್ಣೆ ಹಾಕಿ. ಈಗ ಎರಡನ್ನು ಸರಿಯಾಗಿ ಕುದಿಸಿ ಮತ್ತು ಕರಿಬೇವಿನ ಎಲೆಗಳು ಸಂಪೂರ್ಣ ಕಪ್ಪು ಆಗುವ ತನಕ ಕುದಿಸಿ. ಈ ಮಿಶ್ರಣವನ್ನು ತೆಗೆದುಕೊಂಡು ತಣ್ಣಗಾಗಲು ಬಿಡಿ. ಇದಕ್ಕೆ 1-2 ಚಮಚ ನಿಂಬೆರಸವನ್ನು ಹಾಕಿ ಮತ್ತು ಇದನ್ನು ತಲೆಬುರುಡೆಗೆ ಹಾಕಿಕೊಳ್ಳಿ. ರಾತ್ರಿಯಿಡಿ ಹಾಗೆ ಬಿಟ್ಟು ಬೆಳಿಗ್ಗೆ ಕೂದಲು ತೊಳೆಯಿರಿ.

ಮೊಟ್ಟೆಯ ಲೋಳೆ ಮತ್ತು ಆಲಿವ್ ಎಣ್ಣೆ

ಕೂದಲಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವಂತಹ ಕೂದಲಿನ ಮಾಸ್ಕ್ ಎಂದರೆ ಮೊಟ್ಟೆಯ ಲೋಳೆ ಮತ್ತು ಆಲಿವ್ ತೈಲ. ಮೊಟ್ಟೆಯ ಲೋಳೆ ಮತ್ತು ಆಲಿವ್ ಎಣ್ಣೆಯ ಕೂದಲಿನ ಮಾಸ್ಕ್ ಕೂದಲನ್ನು ಆರೋಗ್ಯಕರವಾಗಿ ಬೆಳೆಯುವಂತೆ ಮಾಡುವುದು. ದಪ್ಪ, ತೆಳು ಹಾಗೂ ಗುಂಗುರು ಕೂದಲಿಗೆ ಇದು ತುಂಬಾ ಪರಿಣಾಮಕಾರಿಯಾದ ಮಾಸ್ಕ್ ಆಗಿದೆ. ಆಲಿವ್ ಎಣ್ಣೆ ಮತ್ತು ಮೊಟ್ಟೆಯ ಲೋಳೆಯಲ್ಲಿ ವಿಟಮಿನ್ ಎ, ಡಿ, ಇ ಮತ್ತು ಪ್ರೋಟೀನ್ ಹೆಚ್ಚಿನ ಮಟ್ಟದಲ್ಲಿದೆ. ಇದು ಕೂದಲಿನ ಬೆಳಣಿಗೆಗೆ ನೆರವಾಗುವುದು. ಅರ್ಧ ಕಪ್ ಆಲಿವ್ ತೈಲ ಮತ್ತು ಒಂದು ಮೊಟ್ಟೆಯ ಲೋಳೆಯನ್ನು ಮಿಶ್ರಣ ಮಾಡಿಕೊಳ್ಳಿ. ಇದನ್ನು ಸರಿಯಾಗಿ ತಲೆಬುರುಡೆಗೆ ಹಚ್ಚಿಕೊಂಡು 20 ನಿಮಿಷ ಬಿಟ್ಟು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. 

egg

ಮೆಹಂದಿ ಮತ್ತು ಮೊಟ್ಟೆಯ ಹೇರ್ ಮಾಸ್ಕ್

ಕೂದಲಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವಂತಹ ಹೇರ್ ಮಾಸ್ಕ್ ಎಂದರೆ ಮೊಟ್ಟೆಯ ಲೋಳೆ ಮತ್ತು ಮೆಹಂದಿ. ಮೊಟ್ಟೆಯಲ್ಲಿ ಹೆಚ್ಚಿನ ಪೋಷಕಾಂಶವಿದೆ. ಇದು ತಲೆಬುರುಡೆಗೆ ಪೋಷಣೆಯನ್ನು ನೀಡಿ ಕೂದಲು ಉದ್ದಗೆ ಬೆಳೆಯಲು ನೆರವಾಗುವುದು. ಒಂದು ಕಪ್ ಹೆನ್ನಾ ಹುಡಿ ಮತ್ತು ಒಂದು ಮೊಟ್ಟೆಯ ಲೋಳೆ ತೆಗೆದುಕೊಳ್ಳಿ. ಇದಕ್ಕೆ ಎರಡು ಚಮಚ ಲಿಂಬೆಯ ಸಾರಭೂತ ತೈಲ, ಒಂದು ಚಮಚ ಜೇನುತುಪ್ಪ ಹಾಕಿಕೊಂಡು ಸರಿಯಾಗಿ ಕಲಸಿಕೊಳ್ಳಿ. ಈ ಮಾಸ್ಕ್ ಅನ್ನು ಕೂದಲಿಗೆ ಹಾಕಿಕೊಳ್ಳಿ ಮತ್ತು ಉಗುರುಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆಯಿರಿ. 

mehandi

ಬಿಯರ್ ಮಾಸ್ಕ್!

ಕೂದಲಿಗೆ ಬಿಯರ್ ಮಾಸ್ಕ್ ನ್ನು ಬಳಸಿಕೊಂಡರೆ ಇದು ಕೂದಲಿನ ಬೆಳವಣಿಗೆಗೆ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಬಿಯರ್ ನಿಂದ ಕೂದಲು ತೊಳೆಯುವುದರಿಂದ ಕೂದಲಿನ ಬೆಳವಣಿಗೆ ಮಾತ್ರವಲ್ಲದೆ ನಯವಾದ ಕೂದಲು ನಿಮ್ಮದಾಗುತ್ತದೆ. ಒಂದು ಕಪ್ ಬಿಯರ್ ಮತ್ತು ಅದಕ್ಕೆ ½ ಕಪ್ ನಷ್ಟು ಆ್ಯಪಲ್ ಸೀಡರ್ ವಿನೇಗರ್, ಒಂದು ಚಮಚ ಲಿಂಬೆರಸ, ಒಂದು ಚಮಚ ರೋಸ್ ವಾಟರ್ ಮತ್ತು ಒಂದು ಚಮಚ ಗ್ಲಿಸರಿನ್ ಹಾಕಿಕೊಳ್ಳಿ. ಎಲ್ಲವನ್ನೂ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ ಮತ್ತು ಕೂದಲಿಗೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಕೂದಲಿನಲ್ಲಿ ಇದನ್ನು ಹಾಗೆ ಬಿಟ್ಟ ಬಳಿಕ ನೀರಿನಿಂದ ತೊಳೆಯಿರಿ. ಆರೋಗ್ಯಕರ ಹಾಗೂ ನಯವಾದ ಕೂದಲನ್ನು ಪಡೆಯಲು ವಾರದಲ್ಲಿ ಎರಡು ಸಲ ಬಿಯರ್ ನಿಂದ ಕೂದಲನ್ನು ತೊಳೆಯಿರಿ..

banana

ಬಾಳೆಹಣ್ಣಿನ ಹೇರ್ ಮಾಸ್ಕ್

ಬಾಳೆಹಣ್ಣಿನಲ್ಲಿ ಪ್ರೋಟೀನ್, ವಿಟಮಿನ್, ನಾರಿನಾಂಶ ಮತ್ತು ಪೊಟಾಶಿಯಂ ಲಭ್ಯವಿದೆ. ಇದು ಕೂದಲನ್ನು ನಯ ಹಾಗೂ ರೇಷ್ಮೆಯಂತಾಗಿಸುತ್ತದೆ. ಇದು ದಪ್ಪ ಹಾಗೂ ನಯವಾದ ಕೂದಲು ನಿಮ್ಮದಾಗುವುದು. ಒಂದು ಬಾಳೆಹಣ್ಣು ತೆಗೆದುಕೊಂಡು ಅದನ್ನು ಹಿಚುಕಿಕೊಳ್ಳಿ. ಇದಕ್ಕೆ ಒಂದು ಚಮಚ ಜೇನುತುಪ್ಪ, ಐದು ಚಮಚ ಮೊಸರು, ಒಂದು ಚಮಚ ಓಟ್ಸ್ ಮತ್ತು ಒಂದು ಚಮಚ ದಾಲ್ಚಿನಿ ಹುಡಿಯನ್ನು ಹಾಕಿಕೊಳ್ಳಿ. ಎಲ್ಲವನ್ನೂ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ ಮತ್ತು ಸಂಪೂರ್ಣ ತಲೆಬುರುಡೆಗೆ ಆಗುವಷ್ಟು ಮಾಸ್ಕ್ ಬಳಸಿಕೊಳ್ಳಿ. ಸ್ವಲ್ಪ ಸಮಯ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.

English summary

Easy Home Remedies To Boost Hair Growth

There is no doubt that each one of us loves long, lustrous, shiny and black hair, isn't it? However, there is no shortcut to achieve this, but all it requires is the right kind of pampering with the help of home remedies that can help boost hair growth in a healthy way.
Subscribe Newsletter