ಕೂದಲಿನ ಸಮಸ್ಯೆ ಕಾಡುತ್ತಿದ್ದರೆ ಈ ಸರಳ ಉಪಾಯಗಳನ್ನು ಪ್ರಯೋಗ ಮಾಡಿ...

Posted By: Divya Pandith
Subscribe to Boldsky

ಪೌಷ್ಟಿಕಾಂಶದ ಕೊರತೆ, ಧೂಳು, ಮಾಲಿನ್ಯ, ಅನಾರೋಗ್ಯ, ಹಾರ್ಮೋನ್ ಬದಲಾವಣೆ ಹಾಗೂ ಸೂಕ್ತ ಕಾಳಜಿ ಇಲ್ಲದಿರುವುದರಿಂದ ಕೇಶ ರಾಶಿಯು ತಮ್ಮ ಆರೋಗ್ಯವನ್ನು ಕಳೆದುಕೊಳ್ಳುತ್ತವೆ. ಅತಿಯಾಗಿ ಉದುರುವುದು, ಒರಟಾಗುವುದು, ಕೂದಲು ಒಡೆಯುವುದು ಹಾಗೂ ಬಹು ಬೇಗ ತನ್ನ ಬಣ್ಣವನ್ನು ಕಳೆದುಕೊಳ್ಳುವುದು ಅನೇಕರಲ್ಲಿ ಸಾಮಾನ್ಯವಾದ ತೊಂದರೆಯಾಗಿದೆ.

ವಿವಿಧ ಬಗೆಯ ರಾಸಾಯನಿಕ ಉತ್ಪನ್ನಗಳನ್ನು ಕೂದಲ ಸಂರಕ್ಷಣೆಗಾಗಿ ಬಳಸಲಾಗುತ್ತದೆ. ಇದರ ಅಡ್ಡ ಪರಿಣಾಮದಿಂದಲೂ ಕೇಶರಾಶಿಯು ಬಹು ಬೇಗ ತನ್ನ ಆರೋಗ್ಯವನ್ನು ಕಳೆದುಕೊಳ್ಳುವುದು. ಅದನ್ನು ಹೆಚ್ಚಿನವರು ಗಮನಿಸುವುದಿಲ್ಲ. ಕೇಶ ಸಂರಕ್ಷಣೆಗೆ ಆದಷ್ಟು ಮನೆ ಔಷಧಿ ಹಾಗೂ ನೈಸರ್ಗಿಕ ಉತ್ಪನ್ನಗಳ ಬಳಕೆ ಮಾಡಬೇಕು. ಆಗ ಕೂದಲು ಆರೋಗ್ಯಯುತವಾಗಿ ದಪ್ಪ ಮತ್ತು ದೃಢವಾಗಿ ಬೆಳೆಯುತ್ತದೆ. 

ಕೂದಲುದುರುವುದು ತಡೆಯಬೇಕಾ? ಹಾಗಿದ್ದರೆ ಸೀಬೆ ಎಲೆಯನ್ನು ಬಳಸಿ

ನಿತ್ಯ ಅಥವಾ ವಾರದಲ್ಲಿ ಕೆಲವು ಬಾರಿ ನೈಸರ್ಗಿಕ ಉತ್ಪನ್ನಗಳಿಂದ ಆರೈಕೆಗೆ ಒಳಪಡಿಸುವುದರಿಂದ ಕೇಶರಾಶಿಯ ಬಣ್ಣ ಮಾಸದಂತೆ ಕಾಯಬಹುದು. ಅದರ ಬಗ್ಗೆ ಸೂಕ್ತ ಅರಿವು ನಮಗೆ ಇರಬೇಕಾಗುವುದಷ್ಟೆ. ನಿಮಗೂ ನಿಮ್ಮ ಕೇಶರಾಶಿಯನ್ನು ರಕ್ಷಿಸಬೇಕು ಬಣ್ಣ ಮಾಸದಂತೆ ನೋಡಿಕೊಳ್ಳಬೇಕು ಎಂದಾದರೆ ಬೋಲ್ಡ್ ಸ್ಕೈ ನೀಡಿರುವ ಸೂಕ್ತ ವಿವರಣೆಯನ್ನು ಪರಿಶೀಲಿಸಿ....

ತೆಂಗಿನೆಣ್ಣೆಯ ಮಸಾಜ್

ತೆಂಗಿನೆಣ್ಣೆಯ ಮಸಾಜ್

ಕೂದಲ ಬಣ್ಣವನ್ನು ಹಾಗೂ ಆರೋಗ್ಯವನ್ನು ಕಾಪಾಡುವ ಸಾಂಪ್ರದಾಯಿಕ ಚಿಕಿತ್ಸಾ ವಿಧಾನ ತೆಂಗಿನೆಣ್ಣೆ ಮಸಾಜ್ ಎನ್ನಲಾಗುವುದು. ತೆಂಗಿನೆಣ್ಣೆಯಿಂದ ನಿಯಮಿತವಾಗಿ ಮಸಾಜ್ ಮಾಡಿದರೆ ಕೂದಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ತಡೆಯಬಹುದು. ಎರಡು ಟೇಬಲ್ ಚಮಚ ತೆಂಗಿನೆಣ್ಣೆಯನ್ನು ಬಿಸಿ ಮಾಡಿ ನೆತ್ತಿ ಭಾಗದಲ್ಲಿ ಹಾಗೂ ಕೂದಲಿನ ಬುಡಕ್ಕೆ ಅನ್ವಯಿಸಿ, ಮಸಾಜ್ ಮಾಡಿ. ನಂತರ ಒಂದು ಗಂಟೆ ಹೀರಿಕೊಳ್ಳಲು ಬಿಡಿ. ಬಳಿಕ ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಮೆಯೊನೈಸ್ ಬಳಕೆ

ಮೆಯೊನೈಸ್ ಬಳಕೆ

ಮೆಯೊನೈಸ್ ನಲ್ಲಿ ಕೂದಲನ್ನು ರಕ್ಷಿಸುವ ಪ್ರೋಟಿನ್‍ಅನ್ನು ಒಳಗೊಂಡಿರುತ್ತದೆ. ಇದರ ಅನ್ವಯಸಿಂದ ಕೂದಲಿಗೆ ಆಳವಾದ ಪೋಷಣೆ ದೊರೆಯುತ್ತದೆ ಮತ್ತು ಕೇಶವನ್ನು ಮೃದು ಗೊಳಿಸುತ್ತದೆ.ಮೆಯೊನೈಸ್ ಅನ್ನು ಕೂದಲಿಗೆ ಅನ್ವಯಸಿ ಮೃದುವಾದ ಮಸಾಜ್ ಮಾಡಿ. 30 ನಿಮಿಷಗಳಕಾಲ ಹೀರಿಕೊಳ್ಳಲು ಬಿಡಿ. ನಂತರ ಶೇಷವನ್ನು ತೆಗೆಯಲು ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ.

ಸಲ್ಫೇಟ್ ಮುಕ್ತ ಶಾಂಪೂ ಬಳಕೆ

ಸಲ್ಫೇಟ್ ಮುಕ್ತ ಶಾಂಪೂ ಬಳಕೆ

ಸಲ್ಫೇಟ್ ಹೊಂದಿರುವ ಶಾಂಪುಗಳು ಕೂದಲ ಮೇಲೆ ಅಧಿಕ ಪ್ರಮಾಣದ ಹಾನಿಯುಂಟುಮಾಡುತ್ತವೆ. ಇದು ಕೂದಲ ಬಣ್ಣವನ್ನು ತೆಗೆದು, ಒರಟಾಗುವುದು ಹಾಗೂ ಉದುರುವಿಕೆಗೆ ಕಾರಣವಾಗುತ್ತದೆ. ಕೇಶರಾಶಿಯ ಸಮಸ್ಯೆಯನ್ನು ತಡೆಗಟ್ಟಲು ಸಲ್ಫೇಟ್ ಮುಕ್ತ ಶಾಂಪುವನ್ನು ಆಯ್ಕೆ ಮಾಡಿ. ನಂತರ ನಿಮ್ಮ ಕೇಶರಾಶಿಯನ್ನು ಸಂರಕ್ಷಿಸಬಹುದು.

ಬಿಳಿ ವಿನೆಗರ್ ಬಳಕೆ

ಬಿಳಿ ವಿನೆಗರ್ ಬಳಕೆ

ನೆತ್ತಿಯ ಮೇಲಿರುವ ಕೊಳೆ, ಹೊಟ್ಟು, ಉರಿಯೂತ ಹಾಗೂ ಕೂದಲ ಸಂರಕ್ಷಣೆಯ ದೃಷ್ಟಿಯಿಂದ ಬಿಳಿ ವಿನೆಗರ್ ಅತ್ಯುತ್ತಮ ಆಯ್ಕೆ. ಒಂದು ಮಗ್ ಬೆಚ್ಚಗಿನ ನೀರಿಗೆ 2 ಟೇಬಲ್ ಚಮಚ ವಿನೆಗರ್ ಸೇರಿಸಿ. ನಂತರ ಕೂದಲಿಗೆ ಆ ನೀರನ್ನು ಅನ್ವಯಿಸಿ ತೊಳೆಯಿರಿ. ವಾರದಲ್ಲಿ ಎರಡು ಬಾರಿ ಬಿಳಿ ವಿನೆಗರ್ ದ್ರಾವಣದಲ್ಲಿ ಕೇಶವನ್ನು ತೊಳೆದರೆ ಆರೋಗ್ಯ ಪೂರ್ಣ ಕೇಶರಾಶಿಯನ್ನು ಪಡೆಯಬಹುದು.

ತೇವಾಂಶ ಭರಿತ ಕಂಡೀಷನರ್ ಬಳಸಿ

ತೇವಾಂಶ ಭರಿತ ಕಂಡೀಷನರ್ ಬಳಸಿ

ಕೂದಲ ಸಂರಕ್ಷಣೆ, ಬಣ್ಣದ ರಕ್ಷಣೆಗಾಗಿ ತೇವಾಂಶ ಭರಿತ ಕಂಡೀಷನರ್ ಬಳಸಿ. ತೇವಾಂಶ ಭರಿತ ಕಂಡೀಷನರ್ ಬಳಸುವುದರಿಂದ ಕೂದಲು ಮೃದು ಹಾಗೂ ಆರೋಗ್ಯಪೂರ್ಣವಾಗಿ ಕಂಗೊಳಿಸುವುದು. ವಿವಿಧ ಬಗೆಯ ಕಂಡೀಷನರ್ ಇಂದು ಲಭ್ಯವಿದೆ. ಕೂದಲ ಬಣ್ಣ ಹಾಗೂ ಆರೋಗ್ಯದ ರಕ್ಷಣೆಗಾಗಿ ನಿಮ್ಮ ಆಯ್ಕೆ ತೇವಾಂಶ ಭರಿತ ಕಂಡೀಷನರ್ ಆಗಿದ್ದರೆ ಒಳ್ಳೆಯದು.

ಬಿಯರ್ ಬಳಕೆ

ಬಿಯರ್ ಬಳಕೆ

ಕೂದಲ ಬಣ್ಣ ಹಾಗೂ ಹೊಳಪನ್ನು ಹೆಚ್ಚಿಸುವಲ್ಲಿ ಬಿಯರ್ ತ್ಯುತ್ತಮ ರೀತಿಯ ಕಾರ್ಯ ನಿರ್ವಹಿಸುತ್ತದೆ. ಮಂಕಾದ ಕೂದಲು ನಮ್ಮ ಸೌಂದರ್ಯವನ್ನು ಹಾಳು ಮಾಡುತ್ತದೆ. ಅದಕ್ಕಾಗಿ ಕೆಲವು ಕೂದಲು ಸಂರಕ್ಷಣೆಯ ಪದಾರ್ಥವನ್ನು ಬಳಸುವುದು ಅನಿವಾರ್ಯ. ವಾರಕ್ಕೊಮ್ಮೆ ಬಿಯರ್‍ನಿಂದ ಕೂದಲನ್ನು ನೆನೆಸಿ ತೊಳೆಯುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಬಹುದು.

ಬೆಣ್ಣೆ ಹಣ್ಣು/ಆವಕೊಡ

ಬೆಣ್ಣೆ ಹಣ್ಣು/ಆವಕೊಡ

ರಾಸಾಯನಿಕ ಉತ್ಪನ್ನಗಳಿಂದ ತಯಾರಿಸುವ ಹೇರ್ ಮಾಸ್ಕ್ ಕೂದಲನ್ನು ಹಾಳುಮಾಡುತ್ತವೆ. ಅದರ ಬದಲು ಪ್ರೋಟೀನ್ ಭರಿತ ಬೆಣ್ಣೆ ಹಣ್ಣು ಅಥವಾ ಆವಕೊಡದಿಂದ ಲೇಪನ ಹೊಂದಬಹುದು. ವಾರಕ್ಕೊಮ್ಮೆ ಆವಕೊಡ ಹಣ್ಣಿನ ತಿರುಳನ್ನು ಕೇಶರಾಶಿಗೆ ಅನ್ವಯಿಸಿ, ಒಂದು ಗಂಟೆಗಳ ಕಾಲ ಬಿಡಿ. ನಂತರ ಉತ್ಸಾಹವಿಲ್ಲದ ನೀರಿನಿಂದ ಶುದ್ಧಗೊಳಿಸಿ.

ಸೂರ್ಯನ ಕಿರಣದಿಂದ ಸಂರಕ್ಷಿಸಿ

ಸೂರ್ಯನ ಕಿರಣದಿಂದ ಸಂರಕ್ಷಿಸಿ

ಅಧಿಕ ಸಮಯ ಸೂರ್ಯನ ಕಿರಣಗಳಿಗೆ ಕೇಶರಾಶಿಯನ್ನು ಒಡ್ಡಿದರೆ ಬಹುಬೇಗ ತನ್ನ ಆರೋಗ್ಯವನ್ನು ಕಳೆದುಕೊಳ್ಳುತ್ತದೆ. ಜೊತೆಗೆ ಶುಷ್ಕತೆಗೆ ಒಳಗಾಗುವುದು. ಹಾಗಾಗಿ ಆದಷ್ಟು ಸೂರ್ಯನ ಕಿರಣಕ್ಕೆ ಹೋಗುವಾಗ ಕೂದಲನ್ನು ಟೊಪ್ಪಿಗಳಿಂದ ಅಥವಾ ಬಟ್ಟೆಯಿಂದ ಮರೆಮಾಚಿ. ಆಗ ಕೂದಲು ಆರೋಗ್ಯ ಭರಿತವಾಗಿ ಇರುತ್ತದೆ.

English summary

Easy At-home Tips To Take Care Of Coloured Hair

However, it is possible to prevent that from happening. All you need to do is follow certain hair care tips to maintain your hair's overall health and also ensure that your hair colour lasts for a long period of time. To simplify things for you, today at Boldsky we've rounded up some great tips that can help you maintain a healthy look and shine in your colour-treated hair. These tried-and-tested tips are super easy to follow and are cost effective. Read on to know more about these at-home hair care tips, here: