For Quick Alerts
ALLOW NOTIFICATIONS  
For Daily Alerts

ಕೂದಲು ಸೊಂಪಾಗಿ ಬೆಳೆಯಬೇಕೇ? ಹೀಗೆ ಆರೈಕೆ ಮಾಡಿ...

By Divya Pandith
|

ದಪ್ಪವಾದ ನೀಳ ಕೇಶರಾಶಿ ಹಾಗೂ ಹೊಳಪಿನಿಂದ ಕೂಡಿರುವ ಸದೃಢ ಕೇಶರಾಶಿಯನ್ನು ಹೊಂದಿರಬೇಕು ಎನ್ನುವ ಕನಸನ್ನು ಅನೇಕರು ಹೊಂದಿರುತ್ತಾರೆ. ಆದರೆ ನಿಜ ಜೀವನದಲ್ಲಿ ಬಹುಪಾಲು ಮಹಿಳೆಯರಿಗೆ ತೆಳುವಾದ ಕೇಶರಾಶಿ, ಮಂದವಾದ ಹಾಗೂ ದುರ್ಬಲವಾದ ಕೇಶರಾಶಿಯನ್ನು ಹೊಂದಿರುತ್ತಾರೆ. ಅಕಾಲಿಕವಾಗಿ ಉದುರುವುದು ಹಾಗೂ ಕೇಶರಾಶಿಯು ತುಂಟಾಗಿ ಬೀಳುವುದು ಸೇರಿದಂತೆ ಅನೇಕ ಬಗೆಯ ಸಮಸ್ಯೆಗಳನ್ನು ಹೊಂದಿರುತ್ತಾರೆ.

ಆನುವಂಶಿಕ ಅಸ್ವಸ್ಥತೆ, ಆರೋಗ್ಯ ಸಂಬಂಧಿ ಸಮಸ್ಯೆಗಳು, ಒತ್ತಡ, ಮಾಲಿನ್ಯ, ಅಸಮತೋಲಿತ ಆಹಾರ, ಅಸಮರ್ಪಕವಾದ ಕೇಶರಾಶಿಯ ಆರೈಕೆ, ಕೂದಲು ಒಡೆಯುವ ಸಮಸ್ಯೆ ಸೇರಿದಂತೆ ಅನೇಕ ತೊಂದರೆಗಳು ಸೌಂದರ್ಯವನ್ನು ಹಾಳುಮಾಡುತ್ತವೆ. ಇವುಗಳ ಆರೈಕೆಗೆ ಅನೇಕರು ದುಬಾರಿ ಬೆಲೆಯನ್ನು ತೆತ್ತುತ್ತಾರೆ. ಕೆಲವು ಬಾರಿ ಆರೈಕೆ ಮಾಡುವುದರ ಅಡ್ಡ ಪರಿಣಾಮದಿಂದ ಇನ್ನಷ್ಟು ಕೇಶದ ಆರೋಗ್ಯವು ಹದಗೆಡುವುದು. ತೆಳುವಾದ ಮತ್ತು ಕೂದಲು ಒಡೆಯುವ ಸಮಸ್ಯೆಯು ಲಕ್ಷಾಂತರ ಜನರಿಗೆ ಇರುತ್ತದೆ.

ಕೂದಲು ಬಾಚುವಾಗ ಅಳವಡಿಸಬೇಕಾದ ನಿಯಮಗಳಿವು!

ಈ ಸಮಸ್ಯೆಗೆ ಮನೆಯಲ್ಲಿಯೇ ಉತ್ತಮ ಉತ್ಪನ್ನಗಳ ಬಳಕೆಯಿಂದ ಆರೈಕೆ ಮಾಡಬಹುದು. ಆ ರೈಕೆಗೆ ಬೇಕಾಗುವ ವಸ್ತುಗಳು ಹಾಗೂ ತಯಾರಿಸುವ ವಿಧಾನವನ್ನು ಬೋಲ್ಡ್ ಸ್ಕೈ ಸರಳ ಹಾಗೂ ಸುಲಭ ವಿಧಾನದಲ್ಲಿ ನಿಮಗೆ ತಿಳಿಸಿಕೊಡುತ್ತಿದೆ. ನೀವು ದಪ್ಪವಾದ ಕೇಶರಾಶಿಯನ್ನು ಹೊಂದುವ ಕನಸ್ಸು ಕಾಣುತ್ತಿರುವವರಲ್ಲಿ ಒಬ್ಬರಾಗಿದ್ದರೆ ಈ ವಿಧಾನವನ್ನು ಅನುಸರಿಸಿ...

ಹರ್ಬಲ್ ಪುಡಿಗಳ ಪ್ರಯೋಜನಗಳು

ಹರ್ಬಲ್ ಪುಡಿಗಳ ಪ್ರಯೋಜನಗಳು

ನೆಲ್ಲಿಕಾಯಿ ಪುಡಿ ಕೂದಲು-ಬಲಪಡಿಸುವ ಪೌಷ್ಟಿಕಾಂಶಗಳು ಮತ್ತು ವಿಟಮಿನ್ C ಯ ಶಕ್ತಿಶಾಲಿಯಾಗಿದ್ದು , ಅದು ಒಡೆಯುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟುತ್ತದೆ. ನಿಮ್ಮ ಕೂದಲು ದಪ್ಪ ಮತ್ತು ದಟ್ಟವಾಗಿರಲು ಸಹಾಯ ಮಾಡುತ್ತದೆ. ಸೀಗೇಕಾಯಿ ಪುಡಿ ಕೂದಲುಗಳ ಕಂಡೀಷನರ್ ರೀತಿಯಲ್ಲಿ ಸಹಾಯ ಮಾಡುವ ವಿಟಮಿನ್ ಗಳೊಂದಿಗೆ ಪುಷ್ಟೀಕರಿಸಲ್ಪಟ್ಟಿದೆ. ಇದರಿಂದಾಗಿ ಹೊಸ ಕೂದಲು ಕಿರುಚೀಲಗಳ ರಚನೆಯನ್ನು ಉತ್ತೇಜಿಸುತ್ತದೆ. ರೀಟಾ ಪುಡಿ ಒಂದು ಪ್ರಬಲವಾದ ಮತ್ತು ಪೋಷಣೆಯ ಗಿಡಮೂಲಿಕೆ ಪುಡಿಯಾಗಿದ್ದು, ಇದು ಕೂದಲನ್ನು ವಿರೋಧಿ ಶಿಲೀಂಧ್ರಗಳ ಗುಣದಿಂದ ತುಂಬಿರುತ್ತದೆ.

ಅಲೋವೆರಾ ಜೆಲ್‌ನ ಪ್ರಯೋಜನಗಳು

ಅಲೋವೆರಾ ಜೆಲ್‌ನ ಪ್ರಯೋಜನಗಳು

ಅಲೋವೆರಾ ಜನಪ್ರಿಯ ಕೂದಲ ರಕ್ಷಣೆಯ ಘಟಕಾಂಶವಾಗಿದೆ. ಅಲೋವೆರಾಜೆಲ್ ಎಂಬುದು ಎಲ್ಲಾ-ಉದ್ದೇಶದ ಜೆಲ್ ಆಗಿದೆ. ಅದು ನಿಮ್ಮ ನೆತ್ತಿಯ ಮೇಲಿರುವ ಸತ್ತ ಜೀವಕೋಶಗಳನ್ನು ತೆಗೆದುಹಾಕುವ ಸಾಮರ್ಥ್ಯವನ್ನು ಹೊಂದಿರುವ ಕಿಣ್ವಗಳೊಂದಿಗೆ ತುಂಬಿರುತ್ತದೆ. ಬೇರುಗಳಿಂದ ನಿಮ್ಮ ಕೂದಲನ್ನು ಪೋಷಿಸುತ್ತದೆ. ಈ ಉತ್ತಮ ನೈಸರ್ಗಿಕ ಘಟಕಾಂಶದ ಬಳಕೆ ನಿಮ್ಮ ಕೂದಲನ್ನು ದೀರ್ಘ ಮತ್ತು ಹೊಳಪಿನಿಂದ ನೋಡುತ್ತದೆ.

ಎಳ್ಳೆಣ್ಣೆಯ ಪ್ರಯೋಜನಗಳು

ಎಳ್ಳೆಣ್ಣೆಯ ಪ್ರಯೋಜನಗಳು

ಕೂದಲಿನ ಆಳವಾದ ಕಂಡೀಷನಿಂಗ್ ಮತ್ತು ಬೆಳವಣಿಗೆಯನ್ನು ಉತ್ತೇಜಿಸಲು ಸಾಮಾನ್ಯವಾಗಿ ಬಳಸಲಾಗುತ್ತದೆ. ಎಳ್ಳೆಣ್ಣೆಯು ಅತ್ಯುತ್ತಮವಾದ ನೈಸರ್ಗಿಕ ಘಟಕಾಂಶವಾಗಿದೆ. ಅದು ಈ ಮನೆಯಲ್ಲಿ ಕೂದಲು-ದಪ್ಪವಾಗಿಸುವ ಮುಖವಾಡದ ಒಟ್ಟಾರೆ ಪ್ರಭಾವವನ್ನು ಹೆಚ್ಚಿಸುತ್ತದೆ. ಈ ಪ್ರಬಲ ಎಣ್ಣೆ ಚಿಕಿತ್ಸೆ ಕೂದಲು ಕುಸಿತಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಮಾತ್ರವಲ್ಲದೆ, ದಪ್ಪ ಮತ್ತು ಬಲವಾದ ಕೂದಲನ್ನು ನೀವು ಪಡೆಯಲು ಸಹಾಯ ಮಾಡುತ್ತದೆ.

ಬೇಕಾಗುವ ಸಾಮಾಗ್ರಿಗಳು

ಬೇಕಾಗುವ ಸಾಮಾಗ್ರಿಗಳು

-1 ಟೀ ಚಮಚ ನೆಲ್ಲಿಕಾಯಿ ಪುಡಿ

-1 ಟೀ ಚಮಚ ಸೀಗೇಕಾಯಿ ಪುಡಿ

-1 ಟೀ ಚಮಚ ರೀಠಾ ಪುಡಿ

-2 ಟೀ ಚಮಚ ಎಳ್ಳೆಣ್ಣೆ

_ 1 ಟೀ ಚಮಚ ಅಲೋವೆರಾ ಜೆಲ್

 ತಯಾರಿಸುವ ವಿಧಾನ

ತಯಾರಿಸುವ ವಿಧಾನ

ಒಂದು ಬೌಲ್‍ನಲ್ಲಿ ಮೇಲೆ ಹೇಳಿರುವ ಎಲ್ಲಾ ಪುಡಿಗಳನ್ನು ಸೇರಿಸಿ, ಮಿಶ್ರ ಗೊಳಿಸಿ.ನಂತರ ಅಲೋವೆರಾ ಜೆಲ್ ಮತ್ತು ಎಳ್ಳೆಣ್ಣೆಯನ್ನು ಸೇರಿಸಿ, ಮಿಶ್ರಗೊಳಿಸಿ. ಅದು ಒಂದು ದಪ್ಪವಾದ ಪೇಸ್ಟ್ ನಂತೆ ಆಗುವುದು.

ಬಳಸುವ ವಿಧಾನ

ಬಳಸುವ ವಿಧಾನ

ಮಿಶ್ರಣವನ್ನು ಕೈ ಬೆರಳಿನಿಂದ ತೆಗೆದುಕೊಂಡು ಕೇಶರಾಶಿಗೆ ಅನ್ವಯಿಸಿ, ಮೃದುವಾಗಿ ಮಸಾಜ್ ಮಾಡಿ.

ನಂತರ ಒಂದು ಸ್ವಚ್ಛವಾದ ಶವರ್ ಕ್ಯಾಪ್ ಅಫವಾ ಪ್ಲ್ಯಾಸ್ಟಿಕ್ ಕವರ್‍ನಿಂದ ಮುಚ್ಚಿ.

ತಲೆಗೆ ಅನ್ವಯಿಸಿದ ಮಿಶ್ರಣವನ್ನು 30-10 ನಿಮಿಷಗಳಕಾಲ ಹೀರಿಕೊಳ್ಳಲು ಬಿಡಿ.

ನಂತರ ಮೃದುವಾದ ಶ್ಯಾಂಪುವಿನ ಬಳಕೆಯಿಂದ ಕೂದಲನ್ನು ತೊಳೆಯಿರಿ.

ನೆನಪಿಟ್ಟುಕೊಳ್ಳಬೇಕಾದ ಸಂಗತಿಗಳು...

ನೆನಪಿಟ್ಟುಕೊಳ್ಳಬೇಕಾದ ಸಂಗತಿಗಳು...

- ದಪ್ಪ ಮತ್ತು ಹೊಳಪಿನ ಕೇಶರಾಶಿಗಾಗಿ ವಾರದಲ್ಲಿ 2 ಬಾರಿ ಇದನ್ನು ಅನ್ವಯಿಸಬೇಕು.

- ನೀರಿನಲ್ಲಿ ಸ್ವಚ್ಛಗೊಳಿಸಿದ ನಂತರ ಹೇರ್ ಡ್ರೈಯರ್ ನಿಂದ ಒಣಗಿಸದಿರಿ.

- ಈ ಮಿಶ್ರಣವನ್ನು ಅನ್ವಯಿಸಿ, ಸ್ವಚ್ಛಗೊಳಿಸಿದ ನಂತರ ಸುಮಾರು 6 ಗಂಟೆಗಳ ಕಾಲ ಸೂರ್ಯನ ಕಿರಣಕ್ಕೆ ಹೋಗದಿರಿ.

ಎಕ್ಲಿಪ್ಟಾ ಆಲ್ಬಾ ಆಯಿಲ್(ಕರಿಸಲಾಂಕನ್ನಿ)

ಎಕ್ಲಿಪ್ಟಾ ಆಲ್ಬಾ ಆಯಿಲ್(ಕರಿಸಲಾಂಕನ್ನಿ)

ಇದನ್ನು ಸಾಮಾನ್ಯವಾಗಿ ಫಾಲ್ಸಿ ಡೈಸಿ ಎಂದು ಕರೆಯುತ್ತಾರೆ. ತಮಿಳಿನಲ್ಲಿ ಇದನ್ನು ಕಿರಸಲಾಂಕನ್ನಿ ಎನ್ನಲಾಗುತ್ತದೆ. ಸಸ್ಯವಿಜ್ಞಾನದ ಪ್ರಕಾರ ಇದರ ಹೆಸರು ಎಕ್ಲಿಪ್ಟಾ ಆಲ್ಬಾ.

1. ತೆಂಗಿನೆಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಬಾಣಲೆಗೆ ಹಾಕಿ. ಅದಕ್ಕೆ ಎಕ್ಲಿಪ್ಟಾ ಆಲ್ಬಾ ಎಲೆಗಳನ್ನು ಸೇರಿಸಿ. ಇದನ್ನು ಗ್ಯಾಸ್ ಮೇಲಿಟ್ಟು ಕಡಿಮೆ ಉರಿಯಲ್ಲಿ ಬಿಸಿ ಮಾಡಿ.

2. ಎಲೆಗಳು ಕಪ್ಪು ಆದಾಗ ಅದನ್ನು ಎಣ್ಣೆಯನ್ನು ಗ್ಯಾಸ್ ನಿಂದ ತೆಗೆಯಿರಿ.

3. ಇದು ತಣ್ಣಗಾಗಲು ಬಿಡಿ.

4. ಸೋಸಿಕೊಂಡು ಬಾಟಲಿಗೆ ಹಾಕಿಡಿ.

5. ನಿಯಮಿತವಾಗಿ ಇದನ್ನು ಬಳಸಿಕೊಳ್ಳುವವರು ತೆಂಗಿನೆಣ್ಣೆ ಬಳಸಿ. ಕೂದಲು ತೊಳೆಯುವ ಮೊದಲು ಬಳಸುವವರು ಸಾಸಿವೆ ಎಣ್ಣೆ ಬಳಸಿ.

6. ಇದನ್ನು ಕೂದಲು ಮತ್ತು ತಲೆಬುರುಡೆಗೆ ಸರಿಯಾಗಿ ಹಚ್ಚಿಕೊಂಡು ಅರ್ಧದಿಂದ ಒಂದು ಗಂಟೆ ಕಾಲ ಹೀರಿಕೊಳ್ಳಲು ಬಿಡಿ. ಇದು ಕೂದಲಿಗೆ ಕಡು ಕಪ್ಪು ಬಣ್ಣವನ್ನು ನೀಡುವುದು. ನಿಯಮಿತವಾಗಿ ಬಳಸುವುದರಿಂದ ಕೂದಲು ಬಿಳಿಯಾಗುವುದನ್ನು ತಡೆಯಬಹುದು. ಕೂದಲಿಗೆ ಈ ನೈಸರ್ಗಿಕ ಆರೈಕೆಯನ್ನು ಬಳಸುವುದರಿಂದ ಒಳ್ಳೆಯ ಫಲಿತಾಂಶ ಪಡೆಯಬಹುದು ಎಂದು ಇದಾಗಲೇ ಸಾಬೀತಾಗಿದೆ.

ಈರುಳ್ಳಿ ರಸ ಮತ್ತು ತೆಂಗಿನ ಎಣ್ಣೆ

ಈರುಳ್ಳಿ ರಸ ಮತ್ತು ತೆಂಗಿನ ಎಣ್ಣೆ

ನಿಮಗೆ ತಿಳಿದಿರುವ ಹಾಗೆ ತೆಂಗಿನ ಎಣ್ಣೆಯು ಸಾಮಾನ್ಯವಾಗಿ ಕೇಶಕ್ಕೆ ಹಚ್ಚುವ ಎಣ್ಣೆಯಾಗಿದ್ದು, ಕೂದಲುದುರುವ ಸಮಸ್ಯೆಗೆ ನೆರವಾಗುತ್ತದೆ. ಈ ಎಣ್ಣೆಯನ್ನು ಈರುಳ್ಳಿ ರಸದ ಜೊತೆಗೆ ಬಳಸಿದರೆ ಈ ಸಮಸ್ಯೆಯನ್ನು ಇನ್ನೂ ಪರಿಣಾಮಕಾರಿಯಾಗಿ ನಿವಾರಣೆ ಮಾಡಬಹುದಾಗಿದ್ದು, ಕೂದಲ ಬೆಳವಣಿಗೆಯನ್ನು ಉತ್ತೇಜಿಸಲಿದೆ. 2 ಚಮಚ ತೆಂಗಿನ ಎಣ್ಣೆಯನ್ನು 1 ಚಮಚ ಈರುಳ್ಳಿಯ ರಸದೊಂದಿಗೆ ಬೆರೆಸಿ ಕೇಶಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ನಂತರ ಸ್ವಚ್ಛಗೊಳಿಸಿ. ವ್ಯತ್ಯಾಸ ನಿಮಗೇ ತಿಳಿಯುತ್ತದೆ.

English summary

DIY: Homemade Mask For Thick Hair

Here, we've listed all the details you need to know about this homemade hair mask. Read on to know more about the benefits of each of the ingredients used as well as the method of preparing this mask:
X
Desktop Bottom Promotion