Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೂದಲುದುರುವ ಚಿಂತೆಯೇ? ಹಾಕಿರಿ ಮೊಸರಿನ ಲೇಪನ...
ಮನೆಯಲ್ಲಿಯೇ ಸಿಗುವ ಉತ್ತಮ ಗುಣಮಟ್ಟದ ಮೊಸರನ್ನು ಕೂದಲ ರಕ್ಷಣೆಗೆ ಔಷಧ ರೂಪದಲ್ಲಿ ಬಳಸಿ, ಅನೇಕ ಕೂದಲು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
ಮೊಸರು ಎನ್ನುವ ಆಯುರ್ವೇದದ ಉತ್ಪನ್ನ ಅನೇಕ ಆರೋಗ್ಯಕಾರಿ ಗುಣವನ್ನು ಪಡೆದುಕೊಂಡಿದೆ. 500 ವರ್ಷಗಳಿಂದಲೂ ಏಷ್ಯಾದಲ್ಲಿ ಬಳಕೆಯಲ್ಲಿರುವ ಉತ್ಪನ್ನ ಇದು. ಇದರ ತಯಾರಿಕೆಯೇ ಅನೇಕರ ಉದ್ಯೋಗ ಇಂದು. ಪ್ರಪಂಚದೆಲ್ಲೆಡೆ ಇದನ್ನು ನಿತ್ಯದ ಆಹಾರ ಉತ್ಪನ್ನ ಮತ್ತು ಔಷಧೋಪಚಾರಕ್ಕಾಗಿ ಬಳಕೆ ಮಾಡುತ್ತಿದ್ದಾರೆ. ಮೊದ ಮೊದಲು ಹೊಟ್ಟೆ, ಕರುಳು, ರಕ್ತ ಸಂಬಂಧಿ ಸಮಸ್ಯೆಗಳಿಗೆ ಔಷಧಿಯನ್ನಾಗಿ ಉಪಯೋಗಿಸಲಾಗುತ್ತಿತ್ತು. ಇದೀಗ ಕೂದಲು ಹಾಗೂ ಸೌಂದರ್ಯ ವರ್ಧಕ ಉತ್ಪನ್ನವಾಗಿಯೂ ಬಳಸಲಾಗುತ್ತಿದೆ. ಮುಖದ ಅಂದ-ಚೆಂದ ಹೆಚ್ಚಿಸುವ ಮೊಸರಿನ ಫೇಸ್ ಪ್ಯಾಕ್!
ಗಡುಸಾದ ನೀರು, ಅನುಚಿತ ಆಹಾರ ಪದ್ಧತಿ, ಹಾನಿಕಾರಕ ಶಾಂಪುಗಳ ಬಳಕೆಯಿಂದಾಗಿ ಅನೇಕರಲ್ಲಿ ಕೂದಲ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೆಚ್ಚು ಆರೋಗ್ಯಕಾರಕ ಅಂಶಗಳನ್ನು ಒಳಗೊಂಡಿರುವ ಮೊಸರನ್ನು ಕೇಶರಾಶಿಗೆ ಹಚ್ಚಿಕೊಳ್ಳುವುದರಿಂದ ಶುಷ್ಕ ಕೂದಲು, ಹೊಟ್ಟು, ಉದುರುವಿಕೆ, ಬಣ್ಣದ ಬದಲಾವಣೆ ತಡೆಯಲು ಸಹಾಯಮಾಡುತ್ತದೆ. ಕೂದಲಿನ ಸಹಜಕಾಂತಿಗೆ-ಮೊಸರಿನ ಹೇರ್ ಪ್ಯಾಕ್
ತ್ವಚೆಯ ಆರೋಗ್ಯ ಕಾಪಾಡಲು ಸಹಕಾರಿಯಾದ ಈ ಉತ್ಪನ್ನ ಕೂದಲು ಮೃದು ಹಾಗೂ ಕಾಂತಿಯುತವಾಗಿರುವಂತೆ ಮಾಡುವುದರಲ್ಲೂ ಸಹಕಾರಿ. ಮನೆಯಲ್ಲಿಯೇ ಸಿಗುವ ಉತ್ತಮ ಗುಣಮಟ್ಟದ ಮೊಸರನ್ನು ಕೂದಲ ರಕ್ಷಣೆಗೆ ಔಷಧ ರೂಪದಲ್ಲಿ ಬಳಸಿ, ಅನೇಕ ಕೂದಲು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ನಿಜ, ಮೊಸರಿನೊಂದಿಗೆ ಯಾವೆಲ್ಲಾ ಉತ್ಪನ್ನಗಳನ್ನು ಬೆರೆಸಿ ಕೇಶರಾಶಿಯ ಸೌಂದರ್ಯ ಕಾಪಾಡಬಹದು ಎಂಬುದನ್ನು ತಿಳಿಯೋಣ ಬನ್ನಿ...

ಮೊಸರು ಮತ್ತು ಅರಿಶಿನ
ನೆತ್ತಿಯ ಸೋಂಕು ಹಾಗೂ ಕೆರೆತವಿದ್ದವರು ಮೊಸರು ಮತ್ತು ಅರಿಶಿನದ ಮೊರೆ ಹೋಗುವುದು ಸೂಕ್ತ. ಒಂದು ಕಪ್ ಮೊಸರು, ಒಂದು ಚಮಚ ಅರಿಶಿನ ಪುಡಿ, ಒಂದು ಚಮಚ ನಿಂಬೆ ರಸವನ್ನು ಸೇರಿಸಿ ಒಂದು ಮಿಶ್ರಣವನ್ನು ತಯಾರಿಸಿಕೊಳ್ಳಬೇಕು. ನಂತರ ಮಿಶ್ರಣವನ್ನು ನೆತ್ತಿ ಮತ್ತು ತಲೆಯ ತುಂಬಾ ಮೆತ್ತಿಕೊಳ್ಳಬೇಕು(ಹಚ್ಚಿಕೊಳ್ಳಬೇಕು). 30 ನಿಮಿಷದ ನಂತರ ತಣ್ಣನೆಯ ನೀರಿನಲ್ಲಿ ತೊಳೆಯಬೇಕು. ಗಣನೀಯವಾಗಿ ಹೀಗೆ ಮಾಡುತ್ತಾ ಬಂದರೆ ಸಮಸ್ಯೆ ದೂರವಾಗುವುದು.

ಮೊಸರು ಮತ್ತು ಮೆಂತೆ
ಸ್ವಲ್ಪ ಮೆಂತೆಯನ್ನು ಒಂದು ರಾತ್ರಿ ನೆನೆಯಿಟ್ಟು, ಬೆಳಗ್ಗೆ ರುಬ್ಬಬೇಕು. ನಂತರ ಒಂದು ಕಪ್ ಮೊಸರಿಗೆ ಮೆಂತೆ ಪೇಸ್ಟ್ ಅನ್ನು ಸೇರಿಸಿ ಒಂದು ಮಿಶ್ರಣವನ್ನು ತಯಾರಿಸಿಕೊಳ್ಳಬೇಕು. ಅದಾದ ನಂತರ ನೆತ್ತಿಗೆ ಹಾಗೂ ತಲೆಯ ಉಳಿದ ಭಾಗಕ್ಕೆ ಹಚ್ಚಿಕೊಳ್ಳಬೇಕು. ಹೀಗೆ ಹಚ್ಚಿದ ನಂತರ 30-40 ನಿಮಿಷ ಬಿಟ್ಟು ಸ್ನಾನ ಮಾಡಬೇಕು. ಪ್ರತಿನಿತ್ಯ ಹೀಗೆ ಮಾಡಿದರೆ ಕೆಲವೇ ದಿನದಲ್ಲಿ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುವುದು.

ಮೊಸರು ಮತ್ತು ಗುಲಾಬಿ ಹೂವು
ಒಂದಷ್ಟು ಗುಲಾಬಿ ಹೂವಿನ ದಳವನ್ನು ಬಿಸಿಲಲ್ಲಿ ಒಣಗಿಸಿ ಪುಡಿಮಾಡಿ ಇಟ್ಟುಕೊಂಡಿರಬೇಕು. ಎರಡು ಚಮಚ ಮೊಸರಿಗೆ ನಾಲ್ಕು ಚಮಚ ಗುಲಾಬಿ ಹೂವಿನ ಪುಡಿಯನ್ನು ಬೆರೆಸಿ ಮಿಶ್ರಗೊಳಿಸಬೇಕು. ಈ ಮಿಶ್ರಣವನ್ನು ಪ್ರತಿದಿನ ತಲೆಗೆ ಹಚ್ಚಿಕೊಂಡು ತಣ್ಣೀರಿನಲ್ಲಿ ತೊಳೆಯಬೇಕು. ಈ ರೀತಿಯ ಆರೈಕೆಯಿಂದ ತಲೆಯಿಂದ ಬರುವ ವಾಸನೆ ನಿವಾರಣೆಯಾಗಿ ಕೂದಲು ಕಾಂತಿಯುತವಾಗಿ ಇರುತ್ತದೆ.

ಮೊಸರು ಮತ್ತು ಅಲೋವೆರಾ
ಒಂದು ಕಪ್ ಮೊಸರು ಮತ್ತು 10-12 ಚಮಚ ಅಲೋವೆರಾ ತಿರುಳು, ಒಂದು ಚಮಚ ಲ್ಯಾವೆಂಡರ್ ಎಣ್ಣೆಯನ್ನು ಬೆರೆಸಿ ಒಂದು ಮಿಶ್ರಣವನ್ನು ತಯಾರಿಸಿಕೊಳ್ಳಬೇಕು. ಈ ಮಿಶ್ರಣವನ್ನು ನಿಯಮಿತವಾಗಿ ತಲೆಗೆ ಹಚ್ಚಿಕೊಂಡು 15 ನಿಮಿಷ ಬಿಟ್ಟು ಸ್ನಾನಮಾಡಿ. ಕೂದಲು ದಟ್ಟವಾಗಿ ಬೆಳೆದು ನಯವಾಗಿ ಕಂಗೊಳಿಸುತ್ತದೆ.

ಮೊಸರು ಮತ್ತು ಕಿತ್ತಳೆ ಹಣ್ಣು
ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಬಿಸಿಲಿಗೆ ಒಣಗಿಸಿ ಪುಡಿಮಾಡಿಕೊಂಡಿರಬೇಕು. ಅರ್ಧ ಕಪ್ ಮೊಸರಿಗೆ ಸ್ವಲ್ಪ ಕಿತ್ತಳೆ ಪುಡಿಯನ್ನು ಸೇರಿಸಿ ಮಿಶ್ರಣ ತಯಾರಿಸಿಕೊಳ್ಳಿ. ಈ ಮಿಶ್ರಣವನ್ನು ನೆತ್ತಿಯ ಮೇಲೆ ಹಾಗೂ ಕೂದಲುಗಳ ಬುಡದಲ್ಲಿ ಹಚ್ಚಿ, ಒಂದು ಗಂಟೆ ಬಿಡಬೇಕು. ನಂತರ ಸ್ನಾನ ಮಾಡಿದರೆ ಕೂದಲು ಉದುರುವಿಕೆಯನ್ನು ತಡೆದು ದಟ್ಟ ಕೂದಲನ್ನು ಪಡೆಯಬಹುದು.

ಮೊಸರು ಮತ್ತು ಕರಿಬೇವು (ಒಗ್ಗರಣೆ ಸೊಪ್ಪು)
ಕರಿಬೇವಿನ ಸೊಪ್ಪನ್ನು ಬಿಸಿಲಿಗೆ ಒಣಗಿಸಿ ಪುಡಿಮಾಡಿಕೊಂಡಿರಬೇಕು. ಒಂದು ಕಪ್ ಮೊಸರಿಗೆ ಕರಿಬೇವಿನ ಪುಡಿಯನ್ನು ಸೇರಿಸಿ ಮಿಶ್ರ ತಯಾರಿಸಿಕೊಳ್ಳಿ. ಪ್ರತಿದಿನ ಈ ಮಿಶ್ರಣವನ್ನು 20-30 ನಿಮಿಷಗಳ ಕಾಲ ಹಚ್ಚಿಕೊಂಡು ಒಣಗಲು ಬಿಡಿ. ನಂತರ ಬೆಚ್ಚಗಿನ ನೀರಲ್ಲಿ ತೊಳೆಯಿರಿ. ಹೀಗೆ ಮಾಡುವುದರಿಂದ ಅತಿಯಾದ ಕೂದಲುದುರುವಿಕೆಯನ್ನು ತಡೆಯಬಹುದು.

ಮೊಸರು ಮತ್ತು ಎಣ್ಣೆಗಳ ಮಿಶ್ರಣ
ಒಂದು ಕಪ್ ಮೊಸರಿಗೆ ಒಂದು ಚಮಚ ಆಲಿವ್ ಎಣ್ಣೆ, 2 ಚಮಚ ತೆಂಗಿನ ಎಣ್ಣೆ, ಕಿತ್ತಳೆ ಎಸೆನ್ಸಿಯಲ್ ಎಣ್ಣೆ ಒಂದು ಚಮಚ, ಕ್ಯಾನೋಲ್ ಎಣ್ಣೆ 3 ಚಮಚ. ಇವೆಲ್ಲವನ್ನೂ ಒಟ್ಟಿಗೆ ಸೇರಿಸಿ ಒಂದು ಮಿಶ್ರಣ ಮಾಡಬೇಕು. ಈ ಮಿಶ್ರಣವನ್ನು ತಲೆಗೆ ಹಚ್ಚಿಕೊಂಡು ಸ್ವಲ್ಪ ಸಮಯ ಬಿಡಬೇಕು. ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. ಹೀಗೆ ಮಾಡುವುದರಿಂದ ಕೂದಲ ಅನೇಕ ಸಮಸ್ಯೆಗಳು ಪರಿಹಾರವಾಗುವುದು.



Click it and Unblock the Notifications
