ಕೂದಲಿನ ಸಹಜಕಾಂತಿಗೆ-ಮೊಸರಿನ ಹೇರ್ ಪ್ಯಾಕ್

By: Jaya subramanya
Subscribe to Boldsky

ಹೆಂಗಳೆಯರ ಸೌಂದರ್ಯ ಕೀಲಿಕೈಯಲ್ಲಿ ಕೂದಲು ಕೂಡ ಹೆಚ್ಚು ಮಹತ್ವದ್ದಾಗಿದೆ. ಮುಖದ ಸೌಂದರ್ಯದ ಜೊತೆಗೆ ಕೇಶ ಸೌಂದರ್ಯಕ್ಕೂ ಹೆಚ್ಚಿನ ಗಮನವನ್ನು ನೀಡಬೇಕು. ಕೂದಲು ಜಡವಾಗಿದ್ದು ಹೊಳಪನ್ನು ಕಳೆದುಕೊಂಡಲ್ಲಿ ಅದು ನೋಡುಗರಲ್ಲೂ ನೀರಸ ಭಾವವನ್ನು ಉಂಟುಮಾಡಬಹುದು.

ಅಂತೆಯೇ ನಿಮ್ಮ ಕೂದಲನ್ನು ನೀವು ಸರಿಯಾಗಿ ಉಪಚರಿಸಿಲ್ಲ ಎಂದಾದಲ್ಲಿ ಕೂದಲುದುರುವಿಕೆ, ಕೂದಲು ದುರ್ಬಲಗೊಳ್ಳುವುದು ಮೊದಲಾದ ಸಮಸ್ಯೆಗಳು ಉಂಟಾಗುತ್ತದೆ. ಹಾಗಿದ್ದರೆ ಇದಕ್ಕಿರುವ ಪರಿಹಾರವೆಂದರೆ ವಾರದಲ್ಲಿ ಒಂದು ಬಾರಿಯಾದರೂ ಕೂದಲಿಗೆ ಕಾಳಜಿಯನ್ನು ತೋರುವುದಾಗಿದೆ. ಮಿರಮಿರನೆ ಮಿನುಗುವ ಕೂದಲಿಗೆ ಮೊಟ್ಟೆ -ಮೊಸರಿನ ಮಾಸ್ಕ್

ಮನೆಯಲ್ಲೇ ದೊರೆಯುವ ವಸ್ತುಗಳಿಂದಲೇ ಪ್ಯಾಕ್ ತಯಾರಿಸಿಕೊಂಡು ಕೂದಲಿಗೆ ಹಚ್ಚಿ ಕೂದಲಿನ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಇಂತಹ ಮನೆಮದ್ದುಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ನಿಮ್ಮ ಕೂದಲಿಗೆ ಪ್ರಭಾವವನ್ನುಂಟು ಮಾಡುವುದು ಕೈಗೆಟಕುವ ಬೆಲೆಯಲ್ಲಿ ಸಿಗುವ ಮೊಸರು.... ಯೋಗರ್ಟ್ ಅಥವಾ ಮೊಸರನ್ನು ಕೂದಲಿಗೆ ಹಚ್ಚಿಕೊಳ್ಳುವುದರಿಂದ ಉಂಟಾಗುವ ಪ್ರಯೋಜನಗಳೇನು ಎಂಬುದನ್ನು ಕಂಡುಕೊಳ್ಳೋಣ....

ಇದು ಕಂಡೀಷನ್ ಮಾಡುತ್ತದೆ

ಇದು ಕಂಡೀಷನ್ ಮಾಡುತ್ತದೆ

ಕೂದಲಿಗೆ ಇದೊಂದು ಉತ್ತಮ ನೈಸರ್ಗಿಕ ಕಂಡೀಷನರ್ ಆಗಿದೆ. ನಿಮ್ಮ ಕೂದಲಿಗೆ ಸಂಪೂರ್ಣವಾಗಿ ಹಚ್ಚಿಕೊಂಡು ಶವರ್ ಕ್ಯಾಪ್‌ನಿಂದ ಕವರ್ ಮಾಡಿ. 30 ನಿಮಿಷಗಳ ಕಾಲ ಹಾಗೆಯೇ ಬಿಡಿ ನಂತರ ಕೂದಲನ್ನು ತೊಳೆದುಕೊಳ್ಳಿ. ಮಾಯಿಶ್ಚರೈಸ್ ಮಾಡಿದ ಕೂದಲು ನಿಮ್ಮದಾಗಿರುತ್ತದೆ.

ಕೂದಲನ್ನು ರೇಷಿಮೆಯಂತೆ ನಯಗೊಳಿಸಲು....

ಕೂದಲನ್ನು ರೇಷಿಮೆಯಂತೆ ನಯಗೊಳಿಸಲು....

ಸ್ವಲ್ಪ ಜೇನಿನೊಂದಿಗೆ ಮೊಸರನ್ನು ಕಲಸಿಕೊಳ್ಳಿ ಮತ್ತು ಇದನ್ನು ಕೂದಲಿಗೆ ಹಚ್ಚಿ. 15-20 ನಿಮಿಷಗಳ ತರುವಾಯ ಕೂದಲನ್ನು ತೊಳೆದುಕೊಳ್ಳಿ. ಈ ಮಾಸ್ಕ್ ನಿಮ್ಮ ಕೂದಲನ್ನು ರೇಷಿಮೆಯಂತೆ ನಯಗೊಳಿಸುತ್ತದೆ.

ಹೊಳಪನ್ನು ನೀಡುತ್ತದೆ

ಹೊಳಪನ್ನು ನೀಡುತ್ತದೆ

ನಿಮ್ಮ ಕೂದಲಿಗೆ ಇನ್ನಷ್ಟು ಹೊಳಪು ಮತ್ತು ಮಾಯಿಶ್ಚರೈಸ್ ಅನ್ನು ನೀಡಲು, ಮೊಸರನ್ನು ಮಯೊನೈಸ್‌ನೊಂದಿಗೆ ಮಿಶ್ರ ಮಾಡಿಕೊಂಡು ಕೂದಲಿಗೆ ಹಚ್ಚಿ. ಕೂದಲಿನ ಬುಡದಿಂದ ತುದಿಯವರೆಗೆ ಇದನ್ನು ಹಚ್ಚಬೇಕು. ಅರ್ಧ ಗಂಟೆಯ ತರುವಾಯ ಕೂದಲನ್ನು ತೊಳೆದುಕೊಳ್ಳಿ.

ಸೀಳು ಕೂದಲಿಗೆ ಮುಕ್ತಿ

ಸೀಳು ಕೂದಲಿಗೆ ಮುಕ್ತಿ

ವಾರದಲ್ಲಿ ಎರಡು ಬಾರಿ ಮೊಸರನ್ನು ತಲೆಗೆ ಹಚ್ಚಿಕೊಳ್ಳಿ. ಇದರಿಂದ ಸೀಳು ಕೂದಲಿನ ನಿವಾರಣೆಯನ್ನು ಮಾಡಿಕೊಳ್ಳಬಹುದಾಗಿದೆ. ಸೀಳು ಕೂದಲಿಗೆ ಮೊಸರು ಪರಿಣಾಮಕಾರಿ ಚಿಕಿತ್ಸೆಯಾಗಿದೆ.

ತಲೆಹೊಟ್ಟಿಗೆ ಔಷಧಿ

ತಲೆಹೊಟ್ಟಿಗೆ ಔಷಧಿ

ತಲೆಹೊಟ್ಟಿದೆ ಎಂದಾದಲ್ಲಿ ಮೊಸರು ಮತ್ತು ಲಿಂಬೆಯನ್ನು ಬೆರೆಸಿಕೊಂಡು ನಿಮ್ಮ ತಲೆಬುರುಡೆಗೆ ಹಚ್ಚಿಕೊಳ್ಳಿ. ವಾರದಲ್ಲಿ ಎರಡು ಬಾರಿ ಈ ಮನೆಮದ್ದನ್ನು ಹಚ್ಚಿಕೊಂಡು ತಲೆಹೊಟ್ಟಿನಿಂದ ಮುಕ್ತಿ ಪಡೆದುಕೊಳ್ಳಿ.

ತಲೆಗೂದಲು ಉದುರುವುದನ್ನು ತಡೆಯುತ್ತದೆ

ತಲೆಗೂದಲು ಉದುರುವುದನ್ನು ತಡೆಯುತ್ತದೆ

ಕರಿಬೇವಿನೆಸಳನ್ನು ಜಜ್ಜಿಕೊಳ್ಳಿ ಮತ್ತು ಮೊಸರಿನೊಂದಿಗೆ ಬೆರೆಸಿ. ನಿಮ್ಮ ಕೂದಲಿನ ಉದ್ದಕ್ಕೆ ತಕ್ಕಂತೆ ಈ ಮಾಸ್ಕ್ ಅನ್ನು ಹಚ್ಚಿಕೊಳ್ಳಿ. ಕೂದಲುದುರುವುದನ್ನು ತಡೆಗಟ್ಟುವುದರ ಜೊತೆಗೆ, ಸಿಕ್ಕನ್ನು ಇದು ನಿವಾರಿಸುತ್ತದೆ.

ಕೂದಲಿನ ಬೆಳವಣಿಗೆ

ಕೂದಲಿನ ಬೆಳವಣಿಗೆ

ಸ್ವಲ್ಪ ಮೊಸರು, ತೆಂಗಿನೆಣ್ಣೆ ಮತ್ತು ದಾಸವಾಳದ ಎಸಳುಗಳನ್ನು ತೆಗೆದುಕೊಳ್ಳಿ. ಇದರಿಂದ ಪೇಸ್ಟ್ ತಯಾರಿಸಿಕೊಂಡು ನಿಮ್ಮ ಕೂದಲಿಗೆ ಸಂಪೂರ್ಣವಾಗಿ ಹಚ್ಚಿಕೊಳ್ಳಿ, ನಿಮ್ಮ ತಲೆಬುರುಡೆಗೆ ಹಚ್ಚಿ. ಒಂದು ಗಂಟೆಯಷ್ಟು ಕಾಲ ಇದನ್ನು ಬಿಟ್ಟು ನಂತರ ಕೂದಲನ್ನು ತೊಳೆದುಕೊಳ್ಳಿ ತದನಂತರ ಕಂಡೀಷನಿಂಗ್ ಬಳಸಿ.

 
English summary

Things You Need To Know Before Using Yogurt On Your Hair

Yogurt is supposed to be great for all sorts of stomach problems. It is also used in different cuisines all over the world. But, it has a lot of hair and skin benefits as well. A lot of people use yogurt on their hair. It is said that eating dahi can help aid your digestion to a great extent. Yogurt has a lot of good bacteria that are necessary for your overall well-being. Apart from this, it moisturises the skin, gives it a nice glow and that too naturally.
Story first published: Tuesday, December 13, 2016, 23:01 [IST]
Please Wait while comments are loading...
Subscribe Newsletter