ಮಿರಮಿರನೆ ಮಿಂಚುವ ಸೊಂಪಾದ ಕೂದಲಿಗಾಗಿ ಸರಳ ಹೇರ್ ಪ್ಯಾಕ್‌ಗಳು

Posted By: Jaya subramanya
Subscribe to Boldsky

ನಿಮ್ಮ ಕೂದಲಿನ ಕಾಳಜಿಯ ಕಡೆ ನೀವು ಹೆಚ್ಚು ಮುತುವರ್ಜಿ ವಹಿಸುತ್ತಿದ್ದೀರಿ ಎಂದಾದಲ್ಲಿ ಕೂದಲಿಗೆ ಡೀಪ್ ಕಂಡೀಷನಿಂಗ್ ಅನ್ನು ಮಾಡಿ. ಇದರಿಂದ ನಿಮ್ಮ ಕೂದಲಿಗೆ ನೈಸರ್ಗಿಕ ಹೊಳಪು ದೊರಕಿ ಅದು ಮಿರಮಿರನೆ ಮಿಂಚುವುದು ಖಚಿತ. ಹಾಗಿದ್ದರೆ ಈ ಡೀಪ್ ಕಂಡೀಷನಿಂಗ್ ಅನ್ನು ನೀವು ಕಂಡೀಷನರ್ ಬಳಸುವ ಮೂಲಕ ಮಾಡುವುದಲ್ಲದೆ ಕೆಲವೊಂದು ನೈಸರ್ಗಿಕ ಅಂಶಗಳನ್ನು ಬಳಸಿ ಕೂಡ ಮಾಡಬಹುದಾಗಿದೆ.

ಹೌದು ಹಿಂದಿನ ಕಾಲದಿಂದಲೂ ಕೂದಲಿನ ಆರೈಕೆಗೆ ಪ್ರತಿಯೊಬ್ಬರೂ ಸಲಹೆ ನೀಡುವುದು ಮತ್ತು ಪಾಲಿಸಿಕೊಂಡು ಬಂದಿರುವಂತಹ ಕ್ರಮವಾಗಿದೆ ನೈಸರ್ಗಿಕ ಸಂರಕ್ಷಣಾ ವಿಧಾನ. ಇದು ಕೂದಲಿನ ಕೋಶಗಳಿಗೆ ಬೇಕಾದ ಪೋಷಣೆಗಳನ್ನು ಒದಗಿಸಿ ಕೂದಲು ಸದೃಢಗೊಳ್ಳಲು ನೆರವಾಗುತ್ತದೆ. ಸುಂದರವಾದ ಕೇಶರಾಶಿಯನ್ನು ಪಡೆಯುವುದು ಎಲ್ಲಾ ಹೆಣ್ಣಿನ ಕನಸೂ ಕೂಡ ಆಗಿರುತ್ತದೆ ಆದ್ದರಿಂದ ನೈಸರ್ಗಿಕ ವಿಧಾನಗಳ ಮೂಲಕ ಕೂದಲಿಗೆ ಬೇಕಾದ ಪೋಷಣೆಗಳನ್ನು ನೀವು ಮಾಡಬೇಕಾಗುತ್ತದೆ.

ನಿಮ್ಮ ಕೂದಲಿಗೆ ಬೇಕಾದ ಕಂಡೀಷನಿಂಗ್ ಅಂಶಗಳನ್ನು ಒದಗಿಸುವಲ್ಲಿ ಕೆಲವೊಂದು ಸಾಮಾಗ್ರಿಗಳು ಅತ್ಯದ್ಭುತಾಗಿ ಕಾರ್ಯ ನಿರ್ವಹಿಸುತ್ತವೆ. ಅದರಲ್ಲಿ ಯೋಗರ್ಟ್‌ಗಿರುವ ಶಕ್ತಿ ಅತ್ಯದ್ಭುತ. ಇದು ಪ್ರೊಟೀನ್‌ಗಳನ್ನು ಒಳಗೊಂಡಿದ್ದು, ಲ್ಯಾಕ್ಟಿಕ್ ಆಸಿಡ್ ಅನ್ನು ಹೊಂದಿದೆ. ನಿಮ್ಮ ಕೂದಲಿಗೆ ಬೇಕಾದ ಅತ್ಯಮೂಲ್ಯ ಅಂಶಗಳನ್ನು ಒದಗಿಸುವಲ್ಲಿ ಮೊಸರು ಇಲ್ಲವೇ ಯೋಗರ್ಟ್ ಎತ್ತಿದ ಕೈಯಾಗಿದೆ. ಹಾಗಿದ್ದರೆ ಮೊಸರು ಅನ್ನು ಬಳಸಿಕೊಂಡು ಇತರ ಸಾಮಾಗ್ರಿಗಳೊಂದಿಗೆ ಹೇರ್ ಪ್ಯಾಕ್ ಅನ್ನು ಸಿದ್ಧಪಡಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳಿ... 

ಮೊಸರು ಮತ್ತು ಬಾದಾಮಿ ಎಣ್ಣೆ

ಮೊಸರು ಮತ್ತು ಬಾದಾಮಿ ಎಣ್ಣೆ

4 ಚಮಚಗಳಷ್ಟು ಬಾದಾಮಿ ಎಣ್ಣೆಯನ್ನು 2 ಚಮಚ ಬಾದಾಮಿ ಎಣ್ಣೆಯೊಂದಿಗೆ ಮಿಶ್ರ ಮಾಡಿ

ನಿಮ್ಮ ತಲೆಬುಡಕ್ಕೆ ಇದನ್ನು ಮಸಾಜ್ ಮಾಡಿ ಹಾಗೂ ಕೂದಲಿನ ತುದಿಗೆ ಕೂಡ ಮಸಾಜ್ ಮಾಡಿ

ಅರ್ಧ ಗಂಟೆ ಇದನ್ನು ಒಣಗಲು ಬಿಡಿ ನಂತರ ತಣ್ಣೀರಿನಿಂದ ಕೂದಲನ್ನು ತೊಳೆದುಕೊಳ್ಳಿ

ನಿಮ್ಮ ಕೂದಲಿಗೆ ಈ ಆಳವಾದ ಕಂಡೀಷನಿಂಗ್ ಅತ್ಯದ್ಭುತವನ್ನೇ ಉಂಟುಮಾಡುತ್ತದೆ.

ಮೊಸರು ಮತ್ತು ಜೇನು

ಮೊಸರು ಮತ್ತು ಜೇನು

2 ಚಮಚ ಮೊಸರಿಗೆ 1 ಚಮಚ ಜೇನು ಸೇರಿಸಿ

ನಿಮ್ಮ ತಲೆಬುಡಕ್ಕೆ ಇದನ್ನು ಹಚ್ಚಿ

30 ನಿಮಿಷ ಹಾಗೆಯೇ ಬಿಟ್ಟು ನಂತರ ಅದನ್ನು ತಣ್ಣೀರಿನಿಂದ ತೊಳೆದುಕೊಳ್ಳಿ. ಮೃದುವಾದ ಶಾಂಪೂ ಬಳಸಿಕೊಂಡು ಕೂದಲು ತೊಳೆದುಕೊಳ್ಳಿ

ವಾರಕ್ಕೊಮ್ಮೆ ಈ ಕಂಡೀಷನಿಂಗ್ ಬಳಸಿ ಅತ್ಯದ್ಭುತ ಫಲಿತಾಂಶ ಪಡೆದುಕೊಳ್ಳಿ

ಮೊಸರು ಮತ್ತು ತೆಂಗಿನೆಣ್ಣೆ

ಮೊಸರು ಮತ್ತು ತೆಂಗಿನೆಣ್ಣೆ

1 ಚಮಚ ಮೊಸರಿಗೆ 1 ಮೊಟ್ಟೆ ಮತ್ತು 2 ಚಮಚ ತೆಂಗಿನೆಣ್ಣೆಯನ್ನು ಮಿಶ್ರ ಮಾಡಿ

ನಿಮ್ಮ ಸಂಪೂರ್ಣ ಕೂದಲಿಗೆ ಈ ಮಾಸ್ಕ್ ಅನ್ನು ಹಚ್ಚಿಕೊಳ್ಳಿ

ಒಂದು ಗಂಟೆ ಕಾಲ ಹಾಗೆಯೇ ಬಿಟ್ಟು ನಂತರ ಕೂದಲನ್ನು ತೊಳೆದುಕೊಳ್ಳಿ

ಈ ಕಂಡೀಷನಿಂಗ್ ನಿಮ್ಮ ಕೂದಲನ್ನು ಮೃದುಗೊಳಿಸಿ ಕೂದಲಿನ ರೇಷ್ಮೆಗೆ ಹೊಳಪನ್ನು ನೀಡುತ್ತದೆ

ಮೊಸರು, ಬಾಳೆಹಣ್ಣು ಮತ್ತು ರೋಸ್ ವಾಟರ್

ಮೊಸರು, ಬಾಳೆಹಣ್ಣು ಮತ್ತು ರೋಸ್ ವಾಟರ್

ಬಾಳೆಹಣ್ಣನ್ನು ಹಿಸುಕಿಕೊಂಡು ಅದಕ್ಕೆ ಒಂದು ಚಮಚ ಮೊಸರು, ಮತ್ತು ಒಂದು ಚಮಚ ರೋಸ್ ವಾಟರ್ ಅನ್ನು ಮಿಶ್ರ ಮಾಡಿ

ನಿಮ್ಮ ಕೂದಲಿನ ಬುಡಕ್ಕೆ ಮತ್ತು ತುದಿಗೆ ಇದನ್ನು ಹಚ್ಚಿ

ಗಂಟೆಯ ಬಳಿಕ ಕೂದಲನ್ನು ತೊಳೆದುಕೊಳ್ಳಿ

ವಾರಕ್ಕೊಮ್ಮೆ ಎರಡು ಬಾರಿಯಾದರೂ ಈ ಕಂಡೀಷನಿಂಗ್ ಅನ್ನು ಕೂದಲಿಗೆ ಮಾಡಿ

ಮೊಸರು ಮತ್ತು ಅವೊಕಾಡೊ

ಮೊಸರು ಮತ್ತು ಅವೊಕಾಡೊ

ಅವೊಕಾಡೊವನ್ನು ಮ್ಯಾಶ್ ಮಾಡಿಕೊಂಡು ಅದಕ್ಕೆ 3 ಚಮಚ ಮೊಸರು ಸೇರಿಸಿ

ನಿಮ್ಮ ಕೂದಲಿನ ಬುಡಕ್ಕೆ ಇದನ್ನು ಹಚ್ಚಿ ಮಸಾಜ್ ಮಾಡಿಕೊಂಡು ಕೂದಲಿನ ತುದಿಯವರೆಗೆ ತೆಗೆದುಕೊಂಡು ಬನ್ನಿ

40 ನಿಮಿಷಗಳ ಕಾಲ ಈ ಪ್ಯಾಕ್ ಅನ್ನು ಹಾಗೆಯೇ ಬಿಡಿ ನಂತರ ಹರ್ಬಲ್ ಶಾಂಪೂವಿನಿಂದ ಕೂದಲನ್ನು ತೊಳೆದುಕೊಳ್ಳಿ

ನಿಮ್ಮ ಕೂದಲಿನ ಸಮೃದ್ಧತೆಗಾಗಿ ಈ ಕಂಡೀಷನರ್ ಅನ್ನು ವಾರಕ್ಕೊಮ್ಮೆ ಬಳಸಿ

ಮೊಸರು, ಅಲೊವೇರಾ ಜೆಲ್ ಮತ್ತು ಲಿಂಬೆ ರಸ

ಮೊಸರು, ಅಲೊವೇರಾ ಜೆಲ್ ಮತ್ತು ಲಿಂಬೆ ರಸ

2 ಚಮಚಗಳಷ್ಟು ಮೊಸರಿಗೆ 1 ಚಮಚ ಅಲೊವೇರಾ ಜೆಲ್ ಮತ್ತು 2 ಚಮಚ ಲಿಂಬೆ ರಸವನ್ನು ಸೇರಿಸಿ

ನಿಮ್ಮ ಸಂಪೂರ್ಣ ಕೂದಲಿಗೆ ಈ ಕಂಡೀಷನರ್ ಅನ್ನು ಹಚ್ಚಿಕೊಳ್ಳಿ

30-35 ನಿಮಿಷ ಹಾಗೆಯೇ ಬಿಟ್ಟು ನಂತರ ಕೂದಲನ್ನು ತೊಳೆದುಕೊಳ್ಳಿ

ನಿಮ್ಮ ಕೂದಲಿನ ತುದಿಗೆ ಪೋಷಣೆಯನ್ನು ಒದಗಿಸಲು ಈ ಕಂಡೀಷನರ್ ಸಹಕಾರಿಯಾಗಿದೆ.

ಮೊಸರು, ಆಲೀವ್ ಆಯಿಲ್ ಮತ್ತು ಆಪಲ್ ಸೀಡರ್ ವಿನೇಗರ್

ಮೊಸರು, ಆಲೀವ್ ಆಯಿಲ್ ಮತ್ತು ಆಪಲ್ ಸೀಡರ್ ವಿನೇಗರ್

2 ಚಮಚ ಮೊಸರಿಗೆ 1 ಚಮಚ ಆಲೀವ್ ಆಯಿಲ್ ಮತ್ತು 1/2 ಚಮಚ ವಿನೇಗರ್ ಅನ್ನು ಮಿಶ್ರ ಮಾಡಿಕೊಳ್ಳಿ

ನಿಮ್ಮ ಕೂದಲಿನ ಬುಡಕ್ಕೆ ಈ ಹೇರ್ ಪ್ಯಾಕ್ ಮಸಾಜ್ ಮಾಡಿಕೊಳ್ಳಿ

30 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ತಣ್ಣೀರಿನಿಂದ ಕೂದಲನ್ನು ತೊಳೆದುಕೊಳ್ಳಿ

ತಿಂಗಳಿಗೊಮ್ಮೆಯಾದರೂ ಈ ಕಂಡೀಷನರ್ ಅನ್ನು ಕೂದಲಿಗೆ ಮಾಡಿಕೊಳ್ಳಿ

ಮೊಸರು ಮತ್ತು ತೆಂಗಿನ ಹಾಲು

ಮೊಸರು ಮತ್ತು ತೆಂಗಿನ ಹಾಲು

3 ಚಮಚಗಳಷ್ಟು ಮೊಸರಿಗೆ 1 ಚಮಚ ತೆಂಗಿನ ಹಾಲನ್ನು ಮಿಶ್ರ ಮಾಡಿಕೊಳ್ಳಿ

ನಿಮ್ಮ ಬೆರಳುಗಳ ಸಹಾಯದಿಂದ ಈ ಹೇರ್ ಪ್ಯಾಕ್ ಅನ್ನು ಹಚ್ಚಿ ಕೂದಲಿಗೆ ಮಸಾಜ್ ಮಾಡಿಕೊಳ್ಳಿ

40 ನಿಮಿಷ ಹಾಗೆಯೇ ಬಿಟ್ಟು ನಂತರ ಶ್ಯಾಂಪೂ ಬಳಸಿ ಕೂದಲನ್ನು ತೊಳೆದುಕೊಳ್ಳಿ

ವಾರಕ್ಕೊಮ್ಮೆ ಈ ಹೇರ್ ಪ್ಯಾಕ್ ಬಳಸಿಕೊಂಡು ಕೂದಲಿಗೆ ಸೂಕ್ತ ಪೋಷಣೆಯನ್ನು ಒದಗಿಸಿ.

English summary

Deep Conditioning Yogurt Hair Masks You Should Try

Deep conditioning is an effective way of treating damaged and dull-looking hair. This treatment can restore moisture to your hair follicles and provide them with much-needed nourishment thereby improving their texture and appearance. Here we've listed some of the best yogurt deep conditioning hair masks you can prepare within a jiffy for getting healthy and luscious locks.