ತೆಂಗಿನ ಎಣ್ಣೆಯ 'ಹೇರ್ ಮಾಸ್ಕ್'- ಖರ್ಚು ಕಡಿಮೆ-ಅಧಿಕ ಲಾಭ!

By: Hemanth
Subscribe to Boldsky

ದಕ್ಷಿಣ ಭಾರತದ ಕರಾವಳಿ ತೀರದ ರಾಜ್ಯಗಳಾದ ಕೇರಳ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ತೆಂಗನ್ನು ಹೆಚ್ಚಿನ ಅಡುಗೆಗಳಿಗೆ ಬಳಸುತ್ತಾರೆ. ತೆಂಗು ಇಲ್ಲದೆ ಅಡುಗೆ ಮಾಡಲು ದಕ್ಷಿಣ ಭಾರತೀಯರಿಗೆ ಬರುವುದೇ ಇಲ್ಲ. ಪ್ರತಿಯೊಂದಕ್ಕೂ ತೆಂಗನ್ನು ಯಾವುದಾದರೂ ಒಂದು ರೂಪದಲ್ಲಿ ಬಳಸಿಯೇ ಬಳಸುತ್ತಾರೆ.

ತೆಂಗಿನಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇವೆ ಎಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ತೆಂಗಿನಲ್ಲಿರುವ ವೈರಲ್ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣಗಳು ಕೂದಲು ಹಾಗೂ ತಲೆಬುರುಡೆಗೆ ಹೆಚ್ಚಿನ ಪ್ರಯೋಜನವನ್ನು ಉಂಟು ಮಾಡುತ್ತದೆ.  

ಕೊಬ್ಬರಿ ಎಣ್ಣೆ: ಸೌಂದರ್ಯದ ವಿಷಯದಲ್ಲಿ ಎತ್ತಿದ ಕೈ

ತೆಂಗಿನ ಎಣ್ಣೆಯನ್ನು ತಲೆಬುರುಡೆಗೆ ಬಳಸಿಕೊಳ್ಳುವುದು ಕಡಿಮೆ ಖರ್ಚಿನ ಮತ್ತು ಹೆಚ್ಚು ಪರಿಣಾಮಕಾರಿಯಾದ ವಿಧಾನವಾಗಿದೆ. ತೆಂಗಿನ ಎಣ್ಣೆಯಿಂದ ಕೂದಲಿನ ಆರೈಕೆ ಮಾಡಲು ಬಳಸಬಹುದಾದ ತೆಂಗಿನ ಎಣ್ಣೆಯ ಮಾಸ್ಕ್‌ನ ಬಗ್ಗೆ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ....  

ತೆಂಗಿನ ಎಣ್ಣೆ ಮತ್ತು ಲಿಂಬೆಯ ಹೇರ್ ಮಾಸ್ಕ್

ತೆಂಗಿನ ಎಣ್ಣೆ ಮತ್ತು ಲಿಂಬೆಯ ಹೇರ್ ಮಾಸ್ಕ್

ಅರ್ಧ ಕಪ್ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಅದನ್ನು ಸ್ವಲ್ಪ ಹೊತ್ತು ಬಿಸಿ ಮಾಡಿ. ಇದಕ್ಕೆ 2-3 ಚಮಚ ಲಿಂಬೆ ರಸವನ್ನು ಹಾಕಿ. ಸರಿಯಾಗಿ ಮಿಶ್ರಣ ಮಾಡಿಕೊಂಡು ಅದನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ. ಬಿಸಿಯಾದ ಟವೆಲ್ ಅನ್ನು ತಲೆಗೆ ಕಟ್ಟಿಕೊಳ್ಳಿ. ಸ್ವಲ್ಪ ಸಮಯ ಬಿಟ್ಟು ಉಗುರುಬೆಚ್ಚಗಿನ ನೀರಿನಿಂದ ತಲೆಯನ್ನು ತೊಳೆಯಿರಿ.

ತೆಂಗಿನ ಎಣ್ಣೆ ಮತ್ತು ಅವಕಾಡೋ ಹೇರ್ ಮಾಸ್ಕ್

ತೆಂಗಿನ ಎಣ್ಣೆ ಮತ್ತು ಅವಕಾಡೋ ಹೇರ್ ಮಾಸ್ಕ್

ನಿಸ್ತೇಜ ಹಾಗೂ ಹಾನಿಗೊಳಗಾಗಿರುವ ಕೂದಲನ್ನು ಹೊಂದಿರುವವರಿಗೆ ತೆಂಗಿನ ಎಣ್ಣೆ ಮತ್ತು ಅವಕಾಡೋ ಮಾಸ್ಕ್ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ.

ತಯಾರಿಸುವ ವಿಧಾನ

ತಯಾರಿಸುವ ವಿಧಾನ

ಅರ್ಧ ಕಪ್ ತೆಂಗಿನ ಎಣ್ಣೆ ತೆಗೆದುಕೊಳ್ಳಿ. ಇದಕ್ಕೆ 5-7 ಚಮಚ ಅವಕಾಡೋ ತೈಲವನ್ನು ಮಿಶ್ರಣ ಮಾಡಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ತಲೆಬುರುಡೆಗೆ ಹಚ್ಚಿಕೊಳ್ಳಿ. ಅವಕಾಡೋ ಎಣ್ಣೆ ಲಭ್ಯವಾಗದೆ ಇದ್ದರೆ ಅವಕಾಡೋ ವನ್ನು ಇದಕ್ಕೆ ಹಾಕಿಕೊಂಡು ಮಸಾಜ್ ಮಾಡಬಹುದು.

ತೆಂಗಿನ ಎಣ್ಣೆ ಮತ್ತು ಶಿಯಾ ಬೆಣ್ಣೆ ಮಾಸ್ಕ್

ತೆಂಗಿನ ಎಣ್ಣೆ ಮತ್ತು ಶಿಯಾ ಬೆಣ್ಣೆ ಮಾಸ್ಕ್

ಕೂದಲಿಗೆ ತುಂಬಾ ಆಳವಾಗಿ ತೇವಾಂಶವನ್ನು ನೀಡಲು ತೆಂಗಿನ ಎಣ್ಣೆ ಮತ್ತು ಶಿಯಾ ಬೆಣ್ಣೆ ತುಂಬಾ ಪರಿಣಾಮಕಾರಿಯಾಗಿರುವಂತಹ ಮದ್ದಾಗಿದೆ. ಅರ್ಧ ಕಪ್ ತೆಂಗಿನೆಣ್ಣೆಗೆ ಸ್ವಲ್ಪ ಶಿಯಾ ಬೆಣ್ಣೆ, ಎರಡು ಚಮಚ ಅರ್ಗನ್ ತೈಲವನ್ನು ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ತಲೆಬುರುಡೆಗೆ ಹಚ್ಚಿಕೊಂಡು ಮಸಾಜ್ ಮಾಡಿ. ಈ ಮಾಸ್ಕ್ ಅನ್ನು ಕೂದಲು ಸರಿಯಾಗಿ ಹೀರಿಕೊಳ್ಳಲು ಬಿಡಿ ಮತ್ತು ತಣ್ಣಗಿನ ನೀರಿನಿಂದ ಇದನ್ನು ತೊಳೆಯಿರಿ. ತೆಂಗಿನ ಎಣ್ಣೆ ಮತ್ತು ಶಿಯಾ ಬೆಣ್ಣೆ ಮಾಸ್ಕ್ ಒಳ್ಳೆಯ ಹೇರ್ ಕಂಡೀಷನರ್.

ತೆಂಗಿನ ಎಣ್ಣೆ ಮತ್ತು ಜೇನುತುಪ್ಪದ ಮಾಸ್ಕ್

ತೆಂಗಿನ ಎಣ್ಣೆ ಮತ್ತು ಜೇನುತುಪ್ಪದ ಮಾಸ್ಕ್

ಎರಡು ಚಮಚ ತೆಂಗಿನ ಎಣ್ಣೆಗೆ ಎರಡು ಚಮಚ ಜೇನುತುಪ್ಪ ಸೇರಿಸಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಕೂದಲಿನ ಬುಡಕ್ಕೆ ಹಚ್ಚಿಕೊಳ್ಳಿ. ಈ ಮಿಶ್ರಣವನ್ನು ಸುಮಾರು 20 ನಿಮಿಷ ಕಾಲ ಹಾಗೆ ಬಿಡಿ. ತಣ್ಣೀರಿನಿಂದ ಇದನ್ನು ತೊಳೆಯಿರಿ. ನಿಸ್ತೇಜ, ಒಣ ಮತ್ತು ಹಾನಿಗೊಳಗಾದ ಕೂದಲಿಗೆ ಇದು ಪರಿಣಾಮಕಾರಿಯಾಗಲಿದೆ.

ತೆಂಗಿನ ಎಣ್ಣೆಯಿಂದ ಹಲ್ಲು ಉಜ್ಜಿದರೆ- ಹಲ್ಲುಗಳು ಇನ್ನಷ್ಟು ಬೆಳ್ಳಗೆ ಆಗುತ್ತೆ!

English summary

Coconut Oil Masks To Fix Your Hair Problems

Coconut oil contains antiseptic, antiviral, antibacterial and anti-inflammatory properties that can play a major role in treating hair-related woes. Using coconut oil on the scalp is an inexpensive yet effective way to treat all the hair problems. In order to pamper your hair, check out some of the best coconut oil hair masks here.
Subscribe Newsletter