ಒಣ ಕೂದಲಿನ ಸಮಸ್ಯೆಯೇ? ಈ 'ಹೇರ್ ಪ್ಯಾಕ್' ಪ್ರಯತ್ನಿಸಿ...

By: Arshad
Subscribe to Boldsky

ಕೂದಲು ಉದ್ದವೇ ಇರಲಿ, ಗಿಡ್ಡವೇ ಇರಲಿ, ಆದರೆ ಮೃದುವಾಗಿ ಸೊಂಪಾಗಿ ಇರಲಿ ಎಂದೇ ಪ್ರತಿ ಮಹಿಳೆಯೂ ಬಯಸುತ್ತಾಳೆ. ಕೂದಲು ಗಾಢವಾಗಿದ್ದು, ಸಿಕ್ಕುಗಳಿಲ್ಲದೇ ಕಾಂತಿಯುಕ್ತವಾಗಿ ಆರೋಗ್ಯಕರವಾಗಿದ್ದರೆ ನೈಸರ್ಗಿಕ ಸೌಂದರ್ಯಕ್ಕೆ ಹೆಚ್ಚಿನ ಕಳೆ ಬರುತ್ತದೆ. ಆದರೆ ನಮ್ಮಲ್ಲಿ ಹೆಚ್ಚಿನವರ ಕೂದಲು ಒಣಗಿದ್ದು ಸಿಕ್ಕುಗಳನ್ನು ಬಿಡಿಸುವುದೇ ನಿತ್ಯದ ಕೆಲಸವಾಗುತ್ತದೆ. ಅದರಲ್ಲೂ ಬೇಸಿಗೆ ಬಂತೆಂದರೆ ಕೂದಲು ಸಿಕ್ಕು ಸಿಕ್ಕಾಗುವುದು ಇನ್ನಷ್ಟು ಹೆಚ್ಚುತ್ತದೆ. ಒಣ ಕೂದಲಿನ ಕಿರಿಕಿರಿಗೆ ನೈಸರ್ಗಿಕ ಹೇರ್ ಮಾಸ್ಕ್

ಅಲ್ಲದೇ ಸೂರ್ಯನ ಅತಿನೇರಳೆ ಕಿರಣಗಳ ಪ್ರಭಾವದಿಂದ ಇನ್ನಷ್ಟು ಒಣಗುತ್ತದೆ ಹಾಗೂ ಇನ್ನಷ್ಟು ಘಾಸಿಗೊಳ್ಳುತ್ತದೆ. ಒಣಗಿದ ಮತ್ತು ಘಾಸಿಗೊಂಡಿರುವ ಕೂದಲನ್ನು ಬಾಚುವುದು ಅಷ್ಟು ಸುಲಭವಲ್ಲ. ಏಕೆಂದರೆ ಕೊಂಚ ಒತ್ತಡ ಹೇರಿದರೂ ಈ ಕೂದಲು ನಡುವಿನಲ್ಲಿ ಸುಲಭವಾಗಿ ತುಂಡಾಗಿಬಿಡುತ್ತದೆ.  ನೋಡಿ ಇದೇ ಕಾರಣಕ್ಕೆ ಒಣ ಕೂದಲಿನ ಸಮಸ್ಯೆ ಕಂಡುಬರುವುದು!

ಈ ಕೂದಲಿಗೆ ರಾಸಾಯನಿಕಗಳ ಆರೈಕೆ ನೀಡುವುದರಿಂದ ತಾತ್ಕಾಲಿಕ ಉಪಶಮನ ದೊರಕಬಹುದೇ ಹೊರತು ದೀರ್ಘಾವಧಿಯಲ್ಲಿ ಹಾನಿಯೇ ಹೆಚ್ಚು. ಆದ್ದರಿಂದ ಇದಕ್ಕೆ ಸುರಕ್ಷಿತವಾದ ಮನೆಮದ್ದುಗಳೇ ಉತ್ತಮ. ಇಂದು ಒಣ ಕೂದಲಿಗೆ ಉತ್ತಮ ಆರೈಕೆ ನೀಡುವ ಕೆಲವು ಮನೆಮದ್ದುಗಳ ಬಗ್ಗೆ ತಿಳಿದುಕೊಳ್ಳೋಣ...  

ಬಾಳೆಹಣ್ಣಿನ ಲೇಪನ

ಬಾಳೆಹಣ್ಣಿನ ಲೇಪನ

ಎರಡು ಚೆನ್ನಾಗಿ ಕಳಿತ (ಸಿಪ್ಪೆಯಲ್ಲಿ ಚುಕ್ಕೆ ಬಂದಿರುವ) ಬಾಳೆಹಣ್ಣುಗಳ ಸಿಪ್ಪೆ ಸುಲಿದು ತಿರುಳನ್ನು ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ಹಾಕಿ ನುಣ್ಣಗೆ ಕಡೆಯಿರಿ. ಇದಕ್ಕೆ ಅರ್ಧ ಚಿಕ್ಕಚಮಚ ಜೇನು, ಅರ್ಧ ಚಿಕ್ಕಚಮಚ ಅರಿಶಿನ ಪುಡಿ ಮತ್ತು ಮೂರು ಚಿಕ್ಕ ಚಮಚ ಮಾಯೋನ್ನೈಸ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ರೇಷ್ಮೆಯಂತಹ ಕೂದಲಿಗೆ ಬಾಳೆಹಣ್ಣಿನ ಕಂಡೀಷನರ್

ಬಾಳೆಹಣ್ಣಿನ ಲೇಪನ

ಬಾಳೆಹಣ್ಣಿನ ಲೇಪನ

ಇನ್ನು ಈ ಮಿಶ್ರಣವನ್ನು ಕೂದಲ ಬುಡದಿಂದ ತುದಿಯವರೆಗೆ ಆವರಿಸುವಂತೆ ಹಚ್ಚಿಕೊಳ್ಳಿ. ತದನಂತರ ಒಂದು ಗಂಟೆ ಕಾಲ ಈ ಲೇಪವನ್ನು ಹಾಗೇ ಒಣಗಲು ಬಿಟ್ಟು ತಣ್ಣೀರಿನಿಂದ ಅಥವಾ ಕೊಂಚವೇ ಉಗುರುಬೆಚ್ಚನೆ ಇರುವ ನೀರಿನಿಂದ ತೊಳೆದುಕೊಳ್ಳಿ. ಬಳಿಕ ಸೌಮ್ಯ ಶಾಂಪೂ ಹಾಗೂ ಕಂಡೀಶನರ್ ಬಳಸಿ ತೊಳೆದುಕೊಳ್ಳಿ.

ಮೊಟ್ಟೆ, ಜೇನು ಮತ್ತು ಮೊಸರಿನ ಲೇಪನ

ಮೊಟ್ಟೆ, ಜೇನು ಮತ್ತು ಮೊಸರಿನ ಲೇಪನ

ಎರಡು ಮೊಟ್ಟೆಗಳನ್ನು ಒಡೆದು ಚೆನ್ನಾಗಿ ಗೊಟಾಯಿಸಿ. ಇದಕ್ಕೆ 4-5 ಚಿಕ್ಕಚಮಚ ಮೊಸರು ಮತ್ತು ಎರಡು ಚಿಕ್ಕಚಮಚ ಜೇನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮೊಸರು ಮತ್ತು ಮೊಟ್ಟೆಯ ಲೋಳೆ ಸುಲಭವಾಗಿ ಮಿಶ್ರಣಗೊಳ್ಳದ ಕಾರಣ ಕೊಂಚ ಹೆಚ್ಚು ಕಾಲ ಗೊಟಾಯಿಸಬೇಕು. ಬಳಿಕ ಈ ಲೇಪವನ್ನು ತಲೆಗೂದಲ ಬುಡದಿಂದ ತುದಿಯವರೆಗೆ ಆವರಿಸುವಂತೆ ತೆಳುವಾಗಿ ಹಚ್ಚಿಕೊಳ್ಳಿ.

ಮೊಟ್ಟೆ, ಜೇನು ಮತ್ತು ಮೊಸರಿನ ಲೇಪನ

ಮೊಟ್ಟೆ, ಜೇನು ಮತ್ತು ಮೊಸರಿನ ಲೇಪನ

ಸುಮಾರು ಹದಿನೈದು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ಲೇಪವೇ ಕಂಡೀಶನರ್ ನಂತೆ ಕಾರ್ಯ ನಿರ್ವಹಿಸುವ ಕಾರಣ ಪ್ರತ್ಯೇಕವಾದ ಕಂಡೀಶನರ್ ಅಗತ್ಯವಿಲ್ಲ. ಈ ವಿಧಾನದಿಂದ ಕೂದಲು ಸೌಮ್ಯ ಮತ್ತು ರೇಷ್ಮೆಯಂತೆ ಹೊಳೆಯುತ್ತದೆ.

ಜೇನು ಮತ್ತು ಆಲಿವ್ ಎಣ್ಣೆಯ ಲೇಪನ

ಜೇನು ಮತ್ತು ಆಲಿವ್ ಎಣ್ಣೆಯ ಲೇಪನ

ಜೇನು ಮತ್ತು ಆಲಿವ್ ಎಣ್ಣೆಗಳಲ್ಲಿ ಉತ್ತಮ ಪ್ರಮಾಣದ ಪ್ರೋಟೀನು ಮತ್ತು ಆಂಟಿ ಆಕ್ಸಿಡೆಂಟುಗಳಿವೆ. ಈ ಜೋಡಿ ಕೂದಲು ಒಣಗುವುದನ್ನು ತಡೆದು ಕೂದಲು ಶಿಥಿಲವಾಗುವುದರಿಂದ ರಕ್ಷಿಸುತ್ತದೆ.ಒಂದೆರಡು ಚಮಚ ಆಲಿವ್ ಎಣ್ಣೆ-ಇದುವೇ 'ಸೌಂದರ್ಯದ ಗಣಿ'!

ಜೇನು ಮತ್ತು ಆಲಿವ್ ಎಣ್ಣೆಯ ಲೇಪನ

ಜೇನು ಮತ್ತು ಆಲಿವ್ ಎಣ್ಣೆಯ ಲೇಪನ

ಇದಕ್ಕಾಗಿ ಎರಡು ಚಿಕ್ಕಚಮಚ ಜೇನು ಮತ್ತು ಎರಡು ಚಿಕ್ಕಚಮಚ ಆಲಿವ್ ಎಣ್ಣೆಯನ್ನು ಚೆನ್ನಾಗಿ ಬೆರೆಸಿ ಕೂದಲ ಬುಡದಿಂದ ತುದಿಯವರೆಗೆ ಬರುವಂತೆ ಹಚ್ಚಿ ಸುಮಾರು ಇಪ್ಪತ್ತು ನಿಮಿಷ ಹಾಗೇ ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಜೇನು ಮತ್ತು ಆಲಿವ್ ಎಣ್ಣೆಗಳಲ್ಲಿರುವ ತೇವಕಾರಕ ಗುಣ ಕೂದಲನ್ನು ಮೃದುವಾಗಿರಿಸಲು ನೆರವಾಗುತ್ತದೆ.

ಲೋಳೆಸರ ಮತ್ತು ಮೊಸರಿನ ಲೇಪ

ಲೋಳೆಸರ ಮತ್ತು ಮೊಸರಿನ ಲೇಪ

ಕಳೆಗುಂದಿದ ಮತ್ತು ಘಾಸಿಗೊಂಡಿದ್ದ ಕೂದಲು ಆಗದಂತೆ ತಡೆಗಟ್ಟಲು ಲೋಳೆಸರ ಹಾಗೂ ಮೊಸರು ಉತ್ತಮವಾಗಿವೆ. ಇವು ವಿಶೇಷವಾಗಿ ಕೂದಲ ಬುಡದ ಚರ್ಮಕ್ಕೆ ಹೆಚ್ಚಿನ ಪೋಷಣೆ ನೀಡಿ ಕೂದಲು ಸೊಂಪಾಗಿ ಬೆಳೆಯುವಂತೆ ಮಾಡುತ್ತದೆ.ರೇಷ್ಮೆಯಂತಹ ಕೂದಲಿಗೆ ಮೆಂತೆ- ಮೊಸರಿನ ಹೇರ್ ಪ್ಯಾಕ್

ಲೋಳೆಸರ ಮತ್ತು ಮೊಸರಿನ ಲೇಪ

ಲೋಳೆಸರ ಮತ್ತು ಮೊಸರಿನ ಲೇಪ

ನಾಲ್ಕು ಚಿಕ್ಕಚಮಚ ಲೋಳೆಸರದ ರಸವನ್ನು ಕೆಲವು ಹನಿ ಅವಶ್ಯಕ ತೈಲದೊಂದಿಗೆ ಮಿಶ್ರಣ ಮಾಡಿ. ಬಳಿಕ ಕೆಲವು ಚಿಕ್ಕಚಮಚಗಳಷ್ಟು ಮೊಸರನ್ನು ಹಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ತಲೆಗೆ, ವಿಶೇಷವಾಗಿ ತಲೆಗೂದಲ ಬುಡಕ್ಕೆ ನಯವಾದ ಮಸಾಜ್ ಮೂಲಕ ಹಚ್ಚಿ ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

 
English summary

Best Homemade Packs For Dry Hair

When dealing with dry and damaged hair, it is always good to start home remedies that are really worth giving a shot. So, here we mention to you some of the effective homemade packs for dry hair.
Subscribe Newsletter