Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ಈರುಳ್ಳಿ ಜ್ಯೂಸ್' ಬಳಸಿ-ಕೂದಲು ಸೊಂಪಾಗಿ ಬೆಳೆಯುತ್ತೆ!
ಸೌಂದರ್ಯದಲ್ಲಿ ಪ್ರಮುಖವಾಗಿ ಪರಿಗಣಿಸಬಹುದಾದ ಕೂದಲು ತುಂಬಾ ಪ್ರಾಮುಖ್ಯತೆ ಪಡೆಯುತ್ತದೆ. ಮಾನವ ದೇಹದ ಹೆಚ್ಚಿನ ಭಾಗದಲ್ಲಿ ಕೂದಲು ಇರುವುದು. ಆದರೆ ಇದರ ಉಪಯೋಗ ನಮಗೆ ತಿಳಿದಿಲ್ಲದೆ ಇರುವ ಕಾರಣದಿಂದ ಹೆಚ್ಚಿನವರು ಇಂದಿನ ದಿನಗಳಲ್ಲಿ ಇದನ್ನು ಕೀಳಿಸುತ್ತಾರೆ. ಆದರೆ ಕೂದಲು ದೇಹದ ಉಷ್ಣತೆಯನ್ನು ಕಾಪಾಡುತ್ತದೆ. ಅದರಲ್ಲೂ ಪ್ರಮುಖವಾಗಿ ತಲೆಯ ಕೂದಲನ್ನು ನಾವು ತುಂಬಾ ಗಂಭೀರವಾಗಿ ಪರಿಗಣಿಸುತ್ತೇವೆ. ಯಾಕೆಂದರೆ ಇದು ದೇಹದ ಬೇರೆ ಭಾಗದ ಕೂದಲಿಗಿಂತ ತುಂಬಾ ಭಿನ್ನವಾಗಿರುವುದು. ಇದರ ಆರೈಕೆಯನ್ನು ಮಾಡುತ್ತೇವೆ.

ಆದರೆ ಇಂದಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಪ್ರತಿಯೊಬ್ಬರನ್ನು ಕಾಡುವುದು. ಕೂದಲು ತೆಳುವಾಗಿ ಉದುರುವುದು. ಅಕಾಲಿಕ ಕೂದಲು ಉದುರುವಿಕೆ ಚಿಂತೆಯುಂಟು ಮಾಡುವ ವಿಚಾರವಾಗಿದೆ. ಆಧುನಿಕ ಜೀವನ ಶೈಲಿ ಅಳವಡಿಸಿಕೊಂಡಿರುವ ಹೆಚ್ಚಿನ ಜನರು ಇಂದಿನ ದಿನಗಳಲ್ಲಿ 20 ಮತ್ತು 30ರ ಹರೆಯದಲ್ಲೇ ಬೋಳು ತಲೆ ಸಮಸ್ಯೆಗೆ ಗುರಿಯಾಗುತ್ತಾರೆ. ಒತ್ತಡದ ಜೀವನಶೈಲಿ, ಅನುವಂಶೀಯತೆ ಅಥವಾ ಅನಾರೋಗ್ಯಕರ ಆಹಾರ ಶೈಲಿ ಇದಕ್ಕೆ ಪ್ರಮುಖ ಕಾರಣವಾಗಿದೆ. ಕಾರಣ ಏನೇ ಆಗಿದ್ದರೂ ಈ ಸಮಸ್ಯೆ ನಿವಾರಣೆ ಮಾಡುವುದು ಅತೀ ಅಗತ್ಯ. ಬೋಳು ತಲೆಯವರು ಮತ್ತೆ ಕೂದಲು ಬರಲು ಹಲವಾರು ರೀತಿಯ ಪ್ರಯತ್ನ ಮಾಡುವರು.
ಇದೆಲ್ಲಕ್ಕಿಂತಲೂ ತುಂಬಾ ಪರಿಣಾಮಕಾರಿ ವಿಧಾನವೆಂದರೆ ಆಯುರ್ವೇದ. ಆಯುರ್ವೇದದ ಪ್ರಕಾರ ಕೂದಲು ಮರಳಿ ಪಡೆಯಲು ಇರುವ ಉಪಾಯವೆಂದರೆ ಅದು ಈರುಳ್ಳಿ. ಇದರಲ್ಲಿರುವ ಸಲ್ಪರ್ ಅಂಶವು ಕೂದಲಿನ ಇತರ ಕೆಲವು ಸಮಸ್ಯೆಗಳನ್ನು ಕೂಡ ನಿವಾರಣೆ ಮಾಡುವುದು. ಇದರಿಂದ ಈರುಳ್ಳಿಯನ್ನು ಕೂದಲಿಗೆ ಒಳ್ಳೆಯ ಮನೆಮದ್ದು ಎಂದು ಪರಿಗಣಿಸಲಾಗಿದೆ.
ಕೂದಲಿನ ಹೊಸ ಕೋಶಗಳ ಬೆಳವಣಿಗೆ ಕಾರಣವಾಗಿರುವ ಕಾಲಜನ್ ಬಿಡುಗಡೆಯನ್ನು ಇದು ಉತ್ತೇಜಿಸುವುದು. ಕೂದಲಿನ ಚೀಲಗಳಿಗೆ ರಕ್ತ ಸಂಚಾರ ವೃದ್ಧಿಸುವುದು. ಇದರಿಂದ ಕೂದಲು ಪೋಷಕಾಂಶ ಪಡೆದುಕೊಂಡು ಬೆಳೆಯುವುದು. ಹೊಸ ಕೂದಲಿನ ಬೆಳವಣಿಗೆ ಅಡ್ಡಿಯಾಗುವಂತಹ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಿಯಗಳನ್ನು ಈರುಳ್ಳಿಯಲ್ಲಿರುವ ಪ್ರತಿಜೀವಕವು ನಾಶ ಮಾಡುವುದು. ಈರುಳ್ಳಿಯು ಕೂದಲನ್ನು ಬಲಿಷ್ಠವಾಗಿಸಿ ಹಾನಿಯಾಗದಂತೆ ಮತ್ತು ಉದುರುದಂತೆ ತಡೆಯುವುದು.
ಈರುಳ್ಳಿಯಿಂದ ಕೂದಲಿಗೆ ಸಿಗುವಂತಹ ಲಾಭಗಳು
1.ಈರುಳ್ಳಿಯಲ್ಲಿರುವಂತಹ ಪ್ರಬಲ ಕಿಣ್ವಗಳು ಅಕಾಲಿಕವಾಗಿ ಕೂದಲು ಬಿಳಿಯಾಗುವುದನ್ನು ತಡೆಯುವುದು.
2.ತಲೆಹೊಟ್ಟು ಮತ್ತು ತಲೆಬುರುಡೆಯ ಸೋಂಕಿಗೆ ಕಾರಣವಾಗುವಂತಹ ಬ್ಯಾಕ್ಟೀರಿಯಾಗಳನ್ನು ಈರುಳ್ಳಿಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಅಂಶಗಳು ಕೊಲ್ಲುವುದು.
3.ಕೂದಲು ದಪ್ಪವಾಗಲು ಇದು ಒಳ್ಳೆಯ ಮದ್ದು. ಇದು ಕಾಲಜನ್ ಬಿಡುಗಡೆ ಹೆಚ್ಚಿಸಿ ಕೂದಲಿನ ಕೋಶಗಳು ಮತ್ತೆ ಬೆಳೆಯಲು ಇದು ನೆರವಾಗುವುದು.
4.ಇದರಲ್ಲಿರುವ ಸಲ್ಫರ್ ಅಂಶವು ಹೇನುಗಳನ್ನು ತೆಗೆದುಹಾಕುವುದು. ಹೇನು ನಿವಾರಣೆ ಮಾಡುವಂತಹ ಮದ್ದುಗಳಿಂದ ಕೂದಲು ಉದುರುವಿಕೆ ಸಮಸ್ಯೆ ಉಂಟಾಗುವುದು. ಆದರೆ ಈರುಳ್ಳಿಯಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ.
5.ಅನುವಂಶೀಯವಾಗಿ ಕೂದಲು ಉದುರುವಿಕೆ ಸಮಸ್ಯೆಗೆ ಈರುಳ್ಳಿ ತುಂಬಾ ಪರಿಣಾಮಕಾರಿ. ಹೆಚ್ಚಿನ ಭಾರತೀಯ ಮನೆಗಳಲ್ಲಿ ಈರುಳ್ಳಿಯನ್ನು ಆಹಾರ ಕ್ರಮದಲ್ಲಿ ಬಳಸಿಕೊಳ್ಳುವರು.
ಕೂದಲಿನ ಸಮಸ್ಯೆಗಳಿಗೆ ಇದರ ರಸ ತೆಗೆದು ಅದನ್ನು ಕೂದಲಿಗೆ ಹಚ್ಚಿಕೊಳ್ಳಬೇಕು. ಈರುಳ್ಳಿ ತುಂಡರಿಸಿಕೊಂಡು ಅದನ್ನು ರುಬ್ಬಿ ರಸ ತೆಗೆಯಬೇಕು. ಇದರ ಘಾಟು ಸ್ವಲ್ಪ ಮಟ್ಟಿಗೆ ಆಗಿಬರದು. ಆದರೆ ಈ ಮದ್ದು ಮಾತ್ರ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ.



Click it and Unblock the Notifications















