For Quick Alerts
ALLOW NOTIFICATIONS  
For Daily Alerts

ಕಣ್ಣಲ್ಲಿ ನೀರು ಬರಿಸುವ 'ಈರುಳ್ಳಿಯ' ಪ್ರಯೋಜನಗಳನ್ನು ಕೇಳಿದರೆ ಅಚ್ಚರಿ ಪಡುವಿರಿ!

By Jaya Subramanya
|

ಪ್ರತಿಯೊಬ್ಬ ಸ್ತ್ರೀ ಕೂಡ ತನ್ನ ಕೂದಲಿನ ಆರೈಕೆಯತ್ತ ಹೆಚ್ಚಿನ ಗಮನ ನೀಡುತ್ತಾರೆ. ನೀವು ಕೂಡ ಸೊಂಪಾದ ಕೂದಲನ್ನು ಹೊಂದಲು ಬಯಸಿದ್ದೀರಿ ಎಂದಾದಲ್ಲಿ ಇಂದಿನ ಲೇಖನದಲ್ಲಿ ನಾವು ಅತ್ಯದ್ಭುತವಾದ ಟಿಪ್ಸ್ ಒಂದನ್ನು ನೀಡುತ್ತಿದ್ದೇವೆ. ಇಂದಿನ ಕಲುಷಿತ ವಾತಾವರಣ ಮತ್ತು ಬೇಕಾಬಿಟ್ಟಿಯಾಗಿರುವ ಜೀವನ ಶೈಲಿಯಿಂದ ಹೆಚ್ಚಿನ ಕೂದಲುದುರುವಿಕೆಯಂತಹ ಸಮಸ್ಯೆಗಳಿಗೆ ನಾವು ಒಳಗಾಗುತ್ತಿದ್ದೇವೆ. ಕೂದಲು ಬೆಳ್ಳಗಾಗುವುದು, ಕೂದಲು ಉದುರುವಿಕೆ, ಕೂದಲಿನ ಬಿರುಸುತನ ಹೀಗೆ ತಲೆಗೂದಲಿನ ಸಕಲ ಸಮಸ್ಯೆಗಳನ್ನು ಇಂದು ಪ್ರತಿಯೊಬ್ಬ ಸ್ತ್ರೀ ಕೂಡ ಅನುಭವಿಸುತ್ತಿದ್ದಾಳೆ.

ಕೂದಲುದುರುವಿಕೆಯನ್ನು ತಡೆಗಟ್ಟಲು ನೀವು ಹಲವಾರು ವಿಧಾನಗಳನ್ನು ಅನುಸರಿಸುತ್ತಿರಬಹುದು, ಇದರಲ್ಲಿ ಹೆಚ್ಚಾಗಿ ರಾಸಾಯನಿಕ ವಿಧಾನಗಳನ್ನೇ ನೀವು ಬಳಸುತ್ತಲೂ ಇರಬಹುದು. ಆದರೆ ಆಯುರ್ವೇದ ಪ್ರಕಾರ ಕೂದಲಿನ ಸಂರಕ್ಷಣೆಯನ್ನು ಮಾಡಿಕೊಂಡರೆ ಹೆಚ್ಚಿನ ಪ್ರಯೋಜನಗಳನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

Onion juice

ಇಲ್ಲಿ ಪ್ರಸ್ತಾಪಿಸಿರುವಂತೆ ಕೂದಲಿನ ಬೆಳವಣಿಗೆಗೆ ಈರುಳ್ಳಿ ಉತ್ತಮವಾಗಿದೆ. ಇದರಲ್ಲಿ ಸಲ್ಫರ್ ಪ್ರಮಾಣ ಹೆಚ್ಚಿದ್ದು ಇದು ನಿಮ್ಮ ಕೂದಲಿಗೆ ಪುಷ್ಟಿಯನ್ನು ನೀಡುತ್ತದೆ. ಕೂದಲಿನ ಹೊಸ ಕೋಶಗಳ ಉದಯಕ್ಕೆ ಕಾರಣವಾಗಿರುವ ಕೊಲ್ಯಾಜಿನ್ ಉತ್ಪಾದನೆಯನ್ನು ಈರುಳ್ಳಿ ಮಾಡುತ್ತದೆ ಅಂತೆಯೇ ಕೋಶಗಳಿಗೆ ರಕ್ತಪೂರೈಕೆಯನ್ನು ಮಾಡುತ್ತದೆ. ಬ್ಯಾಕ್ಟೀರಿಯಾ, ಫಂಗಸ್ ಅನ್ನು ಇದು ದೂರಮಾಡುತ್ತದೆ ಕೂಡ.

ಕೂದಲು ವಯಸ್ಸಾಗುವಿಕೆಗಿಂತ ಮುಂಚೆಯೇ ನೆರೆಯುವುದನ್ನು ಈರುಳ್ಳಿ ತಡೆಯುತ್ತದೆ
ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಅಂಶಗಳು, ಬ್ಯಾಕ್ಟೀರಿಯಾ ಫಂಗಸ್ ಅನ್ನು ನಿವಾರಿಸುತ್ತದೆ
ದಪ್ಪನೆಯ ಕೂದಲನ್ನು ಪಡೆದುಕೊಳ್ಳಲು ಇದು ಸಹಕಾರಿಯಾಗಿದೆ. ಕೊಲಾಜಿನ್ ಉತ್ಪಾದನೆಯನ್ನು ಇದು ಹೆಚ್ಚಿಸುತ್ತದೆ.
ಇದರಲ್ಲಿರುವ ಸಲ್ಫರ್ ಅಂಶವು ಕೂದಲುದುರುವಿಕೆಗೆ ಕಾರಣವಾಗಿರುವ ಅಡ್ಡಪರಿಣಾಮಗಳನ್ನು ನಿವಾರಣೆ ಮಾಡುತ್ತದೆ.
ವಂಶಪಾರಂಪರ್ಯ ಸಮಸ್ಯೆಗಳಿಂದ ಕೂದಲುದುರುವಿಕೆ ಬಕ್ಕತಲೆಗೆ ಇದು ಸೂಕ್ತ ಪರಿಹಾರ ಎಂದೆನಿಸಿದೆ.

ನಿಮ್ಮ ನಿತ್ಯದ ಆಹಾರದಲ್ಲಿ ಈರುಳ್ಳಿಯನ್ನು ಬಳಸಿಕೊಳ್ಳಿ. ಅಂತೆಯೇ ಭಾರತೀಯ ಪಾಕ ಪದ್ಧತಿಯಲ್ಲಿ ಈರುಳ್ಳಿಗೆ ಪ್ರಮುಖ ಸ್ಥಾನವಿದೆ. ಇನ್ನು ಈರುಳ್ಳಿಯ ರಸವನ್ನು ತೆಗೆದು ನಿಮ್ಮ ಕೂದಲಿಗೆ ಹಚ್ಚಿಕೊಂಡು ಹೆಚ್ಚಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ. ಈರುಳ್ಳಿಯನ್ನು ಕತ್ತರಿಸಿಕೊಂಡು ನೀರು ಹಾಕಿಕೊಳ್ಳದೆಯೇ ಮಿಕ್ಸಿಯಲ್ಲಿ ತಿರುಗಿಸಿಕೊಳ್ಳಿ. ಇದನ್ನು ಸೋಸಿಕೊಂಡು ಈ ರಸವನ್ನು ಕೂದಲಿಗೆ ಹಚ್ಚಿಕೊಳ್ಳಿ. ಇದರ ವಾಸನೆ ಸಹಿಸಲು ಸಾಧ್ಯವಾಗದೇ ಇರಬಹುದು, ಆದರೆ ಪ್ರಯೋಜನ ಮಾತ್ರ ಅಮೂಲಾಗ್ರವಾದುದಾಗಿದೆ.

ಕೂದಲಿಗೆ ಈರುಳ್ಳಿ ರಸ-ಸ್ಟೆಪ್ ಬೈ ಸ್ಟೆಪ್ ಟಿಪ್ಸ್
*ಒಂದು ಈರುಳ್ಳಿಯನ್ನು ಚಿಕ್ಕದಾಗಿ ಹೆಚ್ಚಿ ಒಂದು ಚಿಕ್ಕ ಬೋಗುಣಿಯಲ್ಲಿ ಸಂಗ್ರಹಿಸಿ ಕೊಂಚ ನೀರು ಸೇರಿಸಿ. ಈ ನೀರನ್ನು ಚೆನ್ನಾಗಿ ಕುದಿಸಿ. ಈರುಳ್ಳಿ ಬೆಂದು ಮೃದುವಾದ ಬಳಿಕ ಈ ನೀರನ್ನು ಸೋಸಿ ಬಾಟಲಿಯಲ್ಲಿ ಸಂಗ್ರಹಿಸಿ. ಈ ನೀರು ತಣಿದು ಉಗುರುಬೆಚ್ಚಗಾದ ಬಳಿಕ ತಲೆಗೂದಲ ಬುಡಕ್ಕೆ ನವಿರಾದ ಮಸಾಜ್ ಮೂಲಕ ಇಡಿಯ ತಲೆಗೆ ಹಚ್ಚಿ. ಒಂದು ಗಂಟೆ ಹಾಗೇ ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರು ಮತ್ತು ಸೌಮ್ಯ ಶಾಂಪೂ ಬಳಸಿ ತಲೆ ತೊಳೆದುಕೊಳ್ಳಿ. ಈರುಳ್ಳಿಯ ವಾಸನೆ ಪೂರ್ಣವಾಗಿ ಹೋಗಲು ಎರಡು ಅಥವಾ ಮೂರು ಬಾರಿ ತೊಳೆದುಕೊಳ್ಳಬೇಕಾಗಿ ಬರಬಹುದು.

*ತಲೆಗೂದಲು ತೊಳೆದುಕೊಂಡ ಬಳಿಕ
ತಲೆಸ್ನಾನದ ಬಳಿಕವೂ ಈರುಳ್ಳಿಯ ರಸವನ್ನು ಬಳಸಬಹುದು. ಇದಕ್ಕಾಗಿ ಈರುಳ್ಳಿಯ ರಸವನ್ನು ನೆನೆದ ಕೂದಲಿಗೆ ಹಚ್ಚಿ ಒಣಗಲು ಬಿಡಿ. ಕೊಂಚ ಹೊತ್ತಿನ ಬಳಿಕ ಸೌಮ್ಯ ಶಾಂಪೂ ಮತ್ತು ಉಗುರುಬೆಚ್ಚನೆಯ ನೀರು ಬಳಸಿ ತೊಳೆದುಕೊಳ್ಳಿ. ಮನೆಯಲ್ಲಿಯೇ ತಯಾರಿಸಿದ ಸೀರಂ ದ್ರಾವಣ ಬಳಸಿ ತೊಳೆದುಕೊಂಡರೆ ಇನ್ನೂ ಉತ್ತಮ.

*ಕೊಬ್ಬರಿ ಎಣ್ಣೆಯೊಂದಿಗೆ ಬಳಸಿ
ಕೂದಲ ಆರೈಕೆಗೆ ಕೊಬ್ಬರಿ ಎಣ್ಣೆ ಅತ್ಯುತ್ತಮ ಆಯ್ಕೆಯಾಗಿದೆ. ಕೂದಲ ಬೆಳವಣಿಗೆಯನ್ನು ಹೆಚ್ಚಿಸಲು ಕೊಂಚ ಈರುಳ್ಳಿ ರಸವನ್ನು ಬಿಸಿಮಾಡಿದ ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಬಳಿಕ ತಲೆಗೆ ಹಚ್ಚಿಕೊಳ್ಳಿ. ತಲೆಗೂದಲ ಬುಡದಿಂದ ತುದಿಯವರೆಗೆ ಇದು ಆವರಿಸುವಂತೆ ನೋಡಿಕೊಳ್ಳಿ. ಸುಮಾರು ಒಂದು ಗಂಟೆ ಹಾಗೇ ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರು ಮತ್ತು ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.

ಆಲಿವ್ ಎಣ್ಣೆಯೊಂದಿಗೆ
ಬಳಸಿ ಕೊಬ್ಬರಿ ಎಣ್ಣೆಯ ಬಳಿಕ ಕೂದಲಿಗೆ ಆಲಿವ್ ಎಣ್ಣೆ ಉತ್ತಮ ಆಯ್ಕೆಯಾಗಿದೆ. ಮೊದಲು ಆಲಿವ್ ಎಣ್ಣೆಯಿಂದ ತಲೆಗೂದಲನ್ನು ಆವರಿಸಿ. ಹದಿನೈದು ನಿಮಿಷಗಳ ಬಳಿಕ ಈರುಳ್ಳಿಯ ರಸದಿಂದ ಎರಡನೆಯ ಪದರದಂತೆ ಹಚ್ಚಿ ಒಣಗಲು ಬಿಡಿ. ಇದಕ್ಕೆ ಸುಮಾರು ಹತ್ತರಿಂದ ಇಪ್ಪತ್ತು ನಿಮಿಷ ಬೇಕಾಗಬಹುದು. ನಂತರ ಉಗುರುಬೆಚ್ಚನೆಯ ನೀರು ಮತ್ತು ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ. ಆಲಿವ್ ಎಣ್ಣೆ ಕೂದಲ ಬುಡವನ್ನು ದೃಢಗೊಳಿಸಿದರೆ ಈರುಳ್ಳಿ ರಸ ಕೂದಲ ಬೆಳವಣಿಗೆಗೆ ಸಹಕರಿಸುತ್ತದೆ.

English summary

Benefits of Onion For Hair Growth & Hair Health

It is a common fact that every inch of the human body is covered with hair. They are often not given enough credit for the things they do for us. Our hair is a very vital part of the body. It acts as a barrier against cold and helps in regulating the temperature of the body.Although our whole body is covered with hair, the hair on our head is what concerns us the most. The hair on our head is different from the rest of our body. This is because our head is the most exposed part of our body.
X
Desktop Bottom Promotion