ಬ್ಯೂಟಿ ಟಿಪ್ಸ್: ಬೆಟ್ಟದ ನೆಲ್ಲಿಕಾಯಿಯ ಚಮತ್ಕಾರ ನೋಡಿರಣ್ಣಾ....

Posted By: Hemanth
Subscribe to Boldsky

ಇಂದಿನ ದಿನಗಳಲ್ಲಿ ಭಾರತೀಯರ ಸಹಿತ ವಿಶ್ವದೆಲ್ಲೆಡೆ ಆಯುರ್ವೇದ ಔಷಧಿ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿದೆ. ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ಇರುವ ಆಯುರ್ವೇದವು ದೀರ್ಘ ಕಾಲದ ತನಕ ಪರಿಣಾಮ ಬೀರುತ್ತದೆ ಮತ್ತು ಅನಾರೋಗ್ಯವನ್ನು ದೂರವಿಡುತ್ತದೆ. ಹೆಚ್ಚಿನ ಎಲ್ಲಾ ಆಯುರ್ವೇದ ಔಷಧಿಗಳಲ್ಲಿ ನೆಲ್ಲಿಕಾಯಿಯನ್ನು ಬಳಸುವುದನ್ನು ನೋಡಬಹುದು.

ಅದರಲ್ಲೂ ನೆಲ್ಲಿಕಾಯಿಯನ್ನು ಕೊಂಚ ಹೊತ್ತಿನ ಕಾಲ ಅಗಿದು ನುಂಗಿದ ಬಳಿಕ ನೀರು ಕುಡಿದರೆ ಆ ನೀರು ಸಿಹಿಯಾಗಿರುತ್ತದೆ. ಇದರಲ್ಲೇನೋ ಮಹತ್ವವಿದೆ ಎಂದು ಆಗಲೇ ಮನದಟ್ಟಾಗುತ್ತದೆ. ಈ ಭಾವನೆಯನ್ನು ನೆಲ್ಲಿಕಾಯಿ ಸುಳ್ಳು ಮಾಡುವುದಿಲ್ಲ. ನೆಲ್ಲಿಕಾಯಿಯ ಸೇವನೆ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಉತ್ತಮವಾಗಿದೆ. ಅಪ್ಪಟ ಜೇನಿನಲ್ಲಿ ನೆನೆಸಿಟ್ಟ ನೆಲ್ಲಿಕಾಯಿ, ಆರೋಗ್ಯದ ಕೀಲಿಕೈ 

ಅದರಲ್ಲೂ ಕೂದಲಿನ ಆರೈಕೆಯ ವಿಷಯಕ್ಕೆ ಬಂದಾಗ, ಇದು ಕೂದಲ ಬುಡಕ್ಕೆ ರಕ್ತದ ಪರಿಚಲನೆಯನ್ನು ಹೆಚ್ಚಿಸಿ, ಕೂದಲಿಗೆ ಆಮ್ಲಜನಕ ಮತ್ತು ಪೋಷಕಾಂಶಗಳು ದೊರೆಯುವಂತೆ ಮಾಡುತ್ತದೆ. ಆದ್ದರಿಂದ ನಿಮ್ಮ ಕೂದಲು ಸುಂದರವಾಗಿ ಬೆಳೆಯುತ್ತದೆ.ಅಷ್ಟೇ ಏಕೆ ಕೂದಲ ಬುಡದಲ್ಲಿ ಕಂಡು ಬರುವ ತಲೆ ಹೊಟ್ಟು ಮತ್ತು ಶಿಲೀಂಧ್ರದ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಕೂದಲಿಗೆ ನೆಲ್ಲಿಕಾಯಿಯನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಬಹುದು ಎಂದು ಈ ಲೇಖನದಲ್ಲಿ ತಿಳಿದುಕೊಳ್ಳುವ.....  

ತಲೆಹೊಟ್ಟಿನ ನಿವಾರಣೆಗೆ

ತಲೆಹೊಟ್ಟಿನ ನಿವಾರಣೆಗೆ

ನೆಲ್ಲಿಕಾಯಿಯನ್ನು ಕೂದಲಿಗೆ ಕಂಡೀಷನರ್ ಆಗಿ ಬಳಸಿಕೊಳ್ಳಬಹುದು. ಇದರಲ್ಲಿ ತಲೆಹೊಟ್ಟನ್ನು ನಿವಾರಿಸುವ ಹಲವಾರು ಗುಣಗಳಿವೆ.

*ನೆಲ್ಲಿಕಾಯಿ ಹುಡಿಯನ್ನು ನೀರಿನೊಂದಿಗೆ ಬೆರೆಸಿಕೊಂಡು ತಲೆಗೆ ಹಚ್ಚಿಕೊಳ್ಳಿ. ಅರ್ಧ ಗಂಟೆ ಬಿಟ್ಟು ಕೂದಲು ತೊಳೆಯಿರಿ.

*ನೆಲ್ಲಿಕಾಯಿ ಒಣಗಿಸಿ ತೆಗೆದಿಡಿ. ಬೇಕಾದಾಗ ಇದನ್ನು ತೆಗೆದು ರುಬ್ಬಿಕೊಂಡು ಎರಡು ಚಮಚ ಲಿಂಬೆರಸದೊಂದಿಗೆ ಮಿಶ್ರಣ ಮಾಡಿಕೊಳ್ಳಿ.

*ಇದನ್ನು ಕೂದಲಿಗೆ ಹಚ್ಚಿಕೊಂಡು ಶಿಖಾಕಾಯಿ ಹಾಕಿ ಕೂದಲು ತೊಳೆಯಿರಿ.

ನೆಲ್ಲಿಕಾಯಿ-ತುಳಸಿ ರಸ

ನೆಲ್ಲಿಕಾಯಿ-ತುಳಸಿ ರಸ

ನೆಲ್ಲಿಕಾಯಿ ಹುಡಿಗೆ ನೀರನ್ನು ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ.

*ಹತ್ತು ತುಳಸಿ ಎಲೆಗಳ ರಸ ತೆಗೆದು ಅದನ್ನು ನೆಲ್ಲಿಕಾಯಿಯ ಪೇಸ್ಟ್ ಜತೆ ಸೇರಿಸಿಕೊಂಡು ತಲೆಗೆ ಹಚ್ಚಿಕೊಳ್ಳಿ.

*30 ನಿಮಿಷ ಕಾಲ ಹಾಗೆ ಬಿಡಿ ಮತ್ತು ಬಳಿಕ ನೀರಿನಿಂದ ತೊಳೆಯಿರಿ. ಆ್ಯಪಲ್ *ಸೀಡರ್ ವಿನೇಗರ್ ಅನ್ನು ಬಳಸಿಕೊಂಡು ಕೂದಲಿನ ಸಮಸ್ಯೆ ಹಾಗೂ ತಲೆಹೊಟ್ಟನ್ನು ನಿವಾರಣೆ ಮಾಡಬಹುದು.

ನೈಸರ್ಗಿಕ ಕಾಂತಿ

ನೈಸರ್ಗಿಕ ಕಾಂತಿ

ಬಿಳಿ ಕೂದಲಿನ ಸಮಸ್ಯೆಗೆ ಕೂಡ ನೆಲ್ಲಿಕಾಯಿಯನ್ನು ಬಳಸಬಹುದು. ನೆಲ್ಲಿಕಾಯಿಯಲ್ಲಿ ಬಿಳಿ ಕೂದಲನ್ನು ಕಪ್ಪು ಮಾಡುವಂತಹ ಯಾವುದೇ ಅಂಶಗಳು ಇಲ್ಲದೆ ಇದ್ದರೂ ಕೂಡ ಹೆನ್ನಾ ಇಂಡಿಗೋ ಕೂದಲಿನ ಬಣ್ಣದೊಂದಿಗೆ ಇದನ್ನು ಬಳಸಿದಾಗ ಒಳ್ಳೆಯ ಪರಿಣಾಮ ಬೀರುವುದು. ಇದರೊಂದಿಗೆ ನೈಸರ್ಗಿಕ ಕಾಂತಿಯನ್ನು ನೆಲ್ಲಿಕಾಯಿಯು ನೀಡುವುದು. ನೆಲ್ಲಿಕಾಯಿಯನ್ನು ಪೇಸ್ಟ್ ಮಾಡಿಕೊಂಡು ಹೆಚ್ಚು ಸಮಯ ಬಿಡದೆ ಬೇಗನೆ ಹಚ್ಚಿಕೊಳ್ಳಿ. ಆರೋಗ್ಯಕರ ಕೂದಲಿಗೆ ಹೆನ್ನಾ ಹೇರ್ ಪ್ಯಾಕ್ ಅನ್ನು ಪರೀಕ್ಷಿಸಿ.

ಅಕಾಲಿಕ ಬಿಳಿಯಾಗುವುದನ್ನು ತಡೆಯುವುದು

ಅಕಾಲಿಕ ಬಿಳಿಯಾಗುವುದನ್ನು ತಡೆಯುವುದು

ಕೆಲವು ನೆಲ್ಲಿಕಾಯಿಗಳನ್ನು ನೀರಿನಲ್ಲಿ ಕೆಲವು ಗಂಟೆಗಳ ಕಾಲ ನೆನೆಸಿದ ಬಳಿಕ ಒಂದು ಚಮಚ ನೀಲಗಿರಿ ಎಣ್ಣೆಯನ್ನು ಹಾಕಿ ಗಾಳಿಯಾಡದ ಗಾಜಿನ ಜಾಡಿಯಲ್ಲಿ ಒಂದು ರಾತ್ರಿ ನೆನೆಸಿಡಬೇಕು.

ಅಕಾಲಿಕ ಬಿಳಿಯಾಗುವುದನ್ನು ತಡೆಯುವುದು

ಅಕಾಲಿಕ ಬಿಳಿಯಾಗುವುದನ್ನು ತಡೆಯುವುದು

ಬೆಳಿಗ್ಗೆ ಈ ದ್ರಾವಣವನ್ನು ಒಂದು ಮೊಟ್ಟೆ, ಒಂದು ಲಿಂಬೆಯ ರಸ ಹಾಗೂ ಸ್ವಲ್ಪ ಮೊಸರಿನೊಂದಿಗೆ ಮಿಶ್ರ ಮಾಡಿಕೊಂಡು ಕೂದಲಿಗೆ ಹಚ್ಚಿಕೊಂಡು ಒಂದೆರಡು ಗಂಟೆಗಳ ಬಳಿಕ ಸ್ನಾನ ಮಾಡಬೇಕು. ನೆಲ್ಲಿಕಾಯಿಯ ರಸವನ್ನು ಸೇವಿಸುವುದರಿಂದ ಅಥವಾ ಹಸಿಯಾಗಿ ತಿನ್ನುವುದರಿಂದ ಕೂದಲ ಆರೋಗ್ಯ ಹೆಚ್ಚುವುದು ಹಾಗೂ ದೇಹದ ಇನ್ನೂ ಹಲವು ತೊಂದರೆಗಳಿಗೆ ಪರಿಹಾರ ದೊರಕುತ್ತದೆ.

 

For Quick Alerts
ALLOW NOTIFICATIONS
For Daily Alerts

    English summary

    Amla, the perfect ingredient to get rid of hair and skin problems

    Ever wonder why almost all Ayurvedic preparations contain amla? Or why it is suggested that everyone should have one piece of amla on a daily basis? Well, studies have shown that amla or the Indian gooseberry is packed with nutrients and can actually help you live a longer healthier life...
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more