ಕೇಶವಿನ್ಯಾಸ: ಇದು ಉದ್ದ ಕೂದಲಿರುವ ಮಹಿಳೆಯರಿಗೆ ಮಾತ್ರ!

By: Hemanth
Subscribe to Boldsky

ಉದ್ದಗಿನ ಕೂದಲು ಹೆಚ್ಚಿನ ಹುಡುಗಿಯರಿಗೆ ಇಷ್ಟ. ಆದರೆ ಹೊಸ ಹೊಸ ಕೂದಲಿನ ವಿನ್ಯಾಸ ಮಾಡಿಕೊಂಡು ಕೂದಲಿಗೆ ಕತ್ತರಿ ಹಾಕುವಂತಹ ಹುಡುಗಿಯರು ಹೆಚ್ಚಾಗುತ್ತಾ ಇದ್ದಾರೆ. ಇದರಿಂದ ಉದ್ದ ಕೂದಲಿನ ಹುಡುಗಿಯರು ಕಾಣಲು ಸಿಗುವುದು ತುಂಬಾ ಕಡಿಮೆ.

ಇಂದು ಹೆಚ್ಚಿನ ಹುಡುಗಿಯರು ವೃತ್ತಿಯಲ್ಲಿರುವ ಕಾರಣದಿಂದ ಕೂದಲಿನ ಆರೈಕೆ ಮಾಡುವುದು ಅವರಿಗೊಂದು ಸವಾಲಾಗಿರುತ್ತದೆ. ಇದರಿಂದಾಗಿ ಅವರು ಕೂದಲಿಗೆ ಕತ್ತರಿ ಹಾಕಿಕೊಂಡು ಅದನ್ನು ವಿನ್ಯಾಸ ಮಾಡಿಕೊಳ್ಳುತ್ತಾರೆ. ಆದರೆ ಉದ್ದಗಿನ ಕೂದಲಿನಿಂದ ಹಲವಾರು ರೀತಿಯ ವಿನ್ಯಾಸಗಳನ್ನು ನಿಮಗೆ ಇಷ್ಟಬಂದಂತೆ ಮಾಡಿಕೊಳ್ಳಬಹುದು. ಆದರೆ ಕೂದಲನ್ನು ವಿನ್ಯಾಸ ಮಾಡುವ ಮೊದಲು ಕೂದಲನ್ನು ಆರೋಗ್ಯಕರವಾಗಿಟ್ಟುಕೊಳ್ಳುವುದು ತುಂಬಾ ಮುಖ್ಯ.  ಚೆಲುವೆಯ ಅಂದದ ಕೇಶಕ್ಕೆ ಫಲಪ್ರದ ಟಿಪ್ಸ್

ಕೂದಲಿನ ಆರೋಗ್ಯವಿದ್ದರೆ ಕೂದಲನ್ನು ಯಾವ ರೀತಿಯಿಂದಲೂ ವಿನ್ಯಾಸ ಮಾಡಿಕೊಳ್ಳಬಹುದು. ಕೂದಲಿನ ಕೆಲವೊಂದು ವಿನ್ಯಾಸ ಮಾಡುವುದು ತುಂಬಾ ಸುಲಭ. ಆದರೆ ಕೆಲವು ವಿನ್ಯಾಸ ಮಾಡಲು ಸಮಯ ಬೇಕಾಗಬಹುದು. ಬನ್ನಿ ಉದ್ದ ಕೂದಲಿನ ಮಹಿಳೆಯರು ಮಾಡಬಹುದಾದ ಕೂದಲಿನ ವಿನ್ಯಾಸವನ್ನು ಈ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡಲಿದ್ದೇವೆ....

ಹಾಫ್ ಬನ್

ಹಾಫ್ ಬನ್

ಕೂದಲಿನ ಈ ವಿನ್ಯಾಸವು ತುಂಬಾ ಜನಪ್ರಿಯವಾಗುತ್ತಿದೆ. ಇದು ನೋಡಲು ತುಂಬಾ ಸುಂದರವಾಗಿರುತ್ತದೆ ಮತ್ತು ಹೆಚ್ಚಿನ ಖರ್ಚು ವೆಚ್ಚವಿಲ್ಲದೆ ಈ ಕೂದಲಿನ ವಿನ್ಯಾಸವನ್ನು ಸುಲಭವಾಗಿ ಮಾಡಬಹುದು.

ಬಿಟ್ಟು ಬಿಡುವುದು(ಲೂಸ್)

ಬಿಟ್ಟು ಬಿಡುವುದು(ಲೂಸ್)

ಉದ್ದಗಿನ ಕೂದಲನ್ನು ಹಾಗೆಯೇ ಬಿಟ್ಟುಬಿಡುವುದು ತುಂಬಾ ಸುಂದರವಾಗಿ ಕಾಣುತ್ತದೆ. ಕೂದಲು ತುಂಬಾ ಗುಂಗುರಾಗಿದ್ದರೆ ಹೀಗೆ ಮಾಡಬೇಡಿ.

ಬದಿಗೆ ಪಿನ್ ಹಾಕುವುದು

ಬದಿಗೆ ಪಿನ್ ಹಾಕುವುದು

ಮುಖಕ್ಕೆ ಕೂದಲು ಬೀಳುವುದು ನಿಮಗೆ ಇಷ್ಟವಿಲ್ಲವೆಂದಾರೆ ಕೂದಲಿನ ಬದಲಿಗೆ ಪಿನ್ ಹಾಕಿಕೊಳ್ಳಿ. ಇದು ಉತ್ತಮ ಆಯ್ಕೆಯಾಗಿದೆ.

ಬ್ರೈಡ್ ಕ್ರೌನ್

ಬ್ರೈಡ್ ಕ್ರೌನ್

ಇದು ಉದ್ದ ಕೂದಲಿನವರಿಗೆ ಸ್ವಲ್ಪ ಕಷ್ಟಕರವಾದ ಕೂದಲಿನ ವಿನ್ಯಾಸ. ತಲೆಯ ಎದುರಿನ ಭಾಗದಲ್ಲಿ ಎರಡು ಬ್ರೈಡ್ ಮಾಡಿಕೊಳ್ಳಿ. ಇದನ್ನು ಹಿಂದಕ್ಕೆ ತಂದು ಜತೆಯಾಗಿ ಪಿನ್ ಹಾಕಿ.

ಹಾಫ್ ಉಪ್ಡೊ

ಹಾಫ್ ಉಪ್ಡೊ

ಇದು ತುಂಬಾ ಸರಳ ಹಾಗೂ ಕಡಿಮೆ ಖರ್ಚು ಇರುವಂತಹ ಕೂದಲಿನ ವಿನ್ಯಾಸ. ಇದು ಈ ಕೂದಲಿನ ವಿನ್ಯಾಸವನ್ನು ಮಾಡಲು ನಿಮಗೆ ಕೇವಲ ಎರಡು ನಿಮಿಷ ಬೇಕಷ್ಟೇ.

 
English summary

Amazing Hairstyles For Girls With Long Hair

It is really important to take proper care of your hair for these hairstyles to look good, as unhealthy hair can never look nice. We've all been there. Most of these hairstyles are very easy to do, while some of them may take some time. So, here are the hairstyles for girls with long hair. Do try them out!
Story first published: Wednesday, February 8, 2017, 23:35 [IST]
Subscribe Newsletter