For Quick Alerts
ALLOW NOTIFICATIONS  
For Daily Alerts

ಚೆಲುವೆಯ ಅಂದದ ಕೇಶಕ್ಕೆ ಫಲಪ್ರದ ಟಿಪ್ಸ್

By Suma
|

ಸುಂದರವಾಗಿ ಕಾಣುವ ಬಯಕೆ ಯಾರಿಗೆ ಇರುವುದಿಲ್ಲ ಹೇಳಿ? ತಮ್ಮ ದೇಹ ಸೌಂದರ್ಯವನ್ನು ಕಾಪಾಡಿಕೊಂಡು ಬರುವುದರ ಜೊತೆಗೆ ಸರ್ವವಿಧದಲ್ಲೂ ತಾವು ನೂರುಮಂದಿಯಲ್ಲಿ ಎದ್ದುಗಾಣುವಂತಿರಬೇಕು ಎಂಬುದೇ ಎಲ್ಲಾ ಹೆಂಗಳೆಯರ ಬಯಕೆಯಾಗಿರುತ್ತದೆ. ಅದಕ್ಕೆ ತಕ್ಕಂತೆ ಮಹಿಳೆಯರ ಮನವನ್ನರಿತೇ ಹೆಚ್ಚಿನ ಸೌಂದರ್ಯ ಉತ್ಪನ್ನಗಳು ಮಾರುಕಟ್ಟೆಗೆ ಕಾಲಿಡುತ್ತಾ ತಮ್ಮ ಪ್ರಸಾಧನಗಳ ಮಾರಾಟದ ಜೊತೆಗೆ ಮಹಿಳೆಯರನ್ನು ತನ್ನಲ್ಲಿ ಆಕರ್ಷಿಸಿಕೊಳ್ಳುತ್ತಿದೆ. ಈ ಉತ್ಪನ್ನಗಳು ಫಲವನ್ನು ನೀಡುತ್ತವೆಯೋ ಇಲ್ಲವೋ ಆದರೂ ಅವುಗಳ ಖರೀದಿ ಮಾಡುವಲ್ಲಿ ಮಾತ್ರ ಇವರು ಹಿಂದೆಬಿದ್ದಿಲ್ಲ.

ಅದರಲ್ಲೂ ವಿಶೇಷ ಕಾರ್ಯಕ್ರಮಗಳಿಗೆ ನೀವು ಹೋಗುತ್ತಿದ್ದೀರಿ ಎಂದಾಗ ಸಹಜವಾಗಿರುವುದಕ್ಕಿಂತಲೂ ತುಸು ಭಿನ್ನವಾಗಿ ಕಾಣಬೇಕು ಎಂಬ ಆಸೆ ಮನದಲ್ಲಿ ಮೂಡುವುದು ಸಹಜ ಆಗ ತುಸು ವಿಶೇಷ ಅಲಂಕಾರವನ್ನು ಮಾಡಿಕೊಳ್ಳುವುದು ಒಳ್ಳೆಯದು ಎಂದೆನಿಸುತ್ತದೆ. ಒಂದು ವೇಳೆ ನಿಮಗೆ ಕೂದಲು ತುಸು ಕಡಿಮೆ ಇದ್ದು ಅದನ್ನು ಇನ್ನಷ್ಟು ಚೆಂದಗಾಣಿಸಬೇಕು ಎಂದಾದಲ್ಲಿ ಹೇರ್ ಡ್ರೈಯರ್ ಸಹಾಯವನ್ನು ನಿಮಗೆ ಪಡೆದುಕೊಳ್ಳಬಹುದು. ಅದಾಗ್ಯೂ ಇಂದಿನ ಲೇಖನದಲ್ಲಿ ದಪ್ಪ ಕೂದಲ ನೋಟಕ್ಕಾಗಿ ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದು ಅದನ್ನು ಪಾಲಿಸಿದರೆ ಖಂಡಿತ ಉತ್ತಮ ಫಲಿತಾಂಶ ದೊರೆಯುತ್ತದೆ.

Tricks to Make Your Hair Grow Faster

ಲೇಯರ್ ಹೇರ್ ಕಟ್
ಕೂದಲನ್ನು ಲೇಯರ್ ಕಟ್ ಮಾಡುವುದರಿಂದ ದಪ್ಪನಾಗಿ ಕಾಣಿಸಿಕೊಳ್ಳುತ್ತದೆ. ಅಂತೆಯೇ ಕೂದಲು ನೀಟಾಗಿ ಕಾಣಿಸಿಕೊಂಡು ಬಾಗಿರುವಂತೆ ಕಾಣುವುದಿಲ್ಲ. ಅಲ್ಲದೆ ದೀರ್ಘ ಸಮಯದವರೆಗೆ ಕೂದಲು ಒಂದು ಸುಂದರ ಆಕಾರದಲ್ಲಿರುತ್ತದೆ. ಸದೃಢ ಕೂದಲಿಗಾಗಿ, ಅಡುಗೆ ಸೋಡಾದ ಶಾಂಪೂ!

ಸ್ವಚ್ಛವಾಗಿರುವುದು
ಕೂದಲಿನ ಸ್ವಚ್ಛತೆ ಅದರ ಆರೋಗ್ಯ ದೃಷ್ಟಿಯಿಂದ ಅತ್ಯುತ್ತಮವಾಗಿದೆ. ಆದಷ್ಟು ನೈಸರ್ಗಿಕ ಉತ್ಪನ್ನಗಳನ್ನು ನಿಮ್ಮ ಕೂದಲಿಗೆ ಬಳಸಿ. ರಾಸಾಯನಿಕ ಉತ್ಪನ್ನಗಳನ್ನು ಆದಷ್ಟು ಕಡಿಮೆ ಮಾಡಿ. ಕೂದಲು ಸಿಕ್ಕಾಗದಂತೆ ಆದಷ್ಟು ನೋಡಿಕೊಳ್ಳಿ. ಉತ್ತಮ ಶಾಂಪೂಗಳು ಅಥವಾ ಕಂಡೀಷನರ್ ಬಳಕೆಯನ್ನು ಮಾಡಿ.

ಕೂದಲಿನ ಉತ್ಪನ್ನಗಳನ್ನು ಮಿಶ್ರಮಾಡಿಕೊಳ್ಳಿ
ಕೂದಲನ್ನು ತೊಳೆದುಕೊಂಡ ನಂತರ, ಲೀವ್ ಇನ್ ಕಂಡೀಷನರ್ ಬಳಸಿಕೊಳ್ಳಿ. ಸೇರಮ್ ಅನ್ನು ಹಚ್ಚಿಕೊಳ್ಳಿ. ನೀವು ಕೂದಲನ್ನು ಬ್ಲೊ ಡ್ರೈ ಮಾಡುತ್ತೀರಿ ಎಂದಾದಲ್ಲಿ, ಸೇರಮ್ ನಿಮಗೆ ಸಹಾಯ ಮಾಡುತ್ತದೆ. ಹೊಳೆಯುವ ಸೇರಮ್ ಅನ್ನು ಕೂದಲಿನ ತುದಿಗೆ ಹಚ್ಚಿಕೊಳ್ಳುವುದರಿಂದ ಇದು ಸುಂದರ ನೋಟವನ್ನು ಕೂದಲಿಗೆ ನೀಡುತ್ತದೆ.

ಕೂದಲನ್ನು ಕಟ್ಟಿಕೊಳ್ಳುವುದು
ಕೂದಲನ್ನು ದಪ್ಪವಾಗಿಸಲು ಕೆಲವೊಂದು ಪರಿಣಾಮಕಾರಿ ಮಾರ್ಗವಿದ್ದು ಅದನ್ನು ಅನುಸರಿಸಬಹುದು. ಕೂದಲಿಗೆ ಶಾಂಪೂ ಮತ್ತು ಕಂಡೀಷನರ್ ಮಾಡಿಕೊಂಡ ನಂತರ ಅದನ್ನು ಸ್ವಾಭಾವಿಕವಾಗಿ ಒಣಗಿಸಿಕೊಳ್ಳಿ. ನೀವು ಮಲಗುವ ಮುನ್ನ ನಿಮ್ಮ ಕೂದಲಿನ ಉದ್ದಕ್ಕೆ ಅನುಗುಣವಾಗಿ ಅದನ್ನು ತುರುಬಿನಂತೆ ಕಟ್ಟಿಕೊಳ್ಳಿ. ನಿಮ್ಮ ಕೂದಲು ಸಣ್ಣದಾಗಿದ್ದಲ್ಲಿ ಅದನ್ನು ಸೆಕ್ಶನ್‎ಗಳನ್ನಾಗಿ ಮಾಡಿ ಮೇಲಕ್ಕೆ ಕಟ್ಟಿಕೊಳ್ಳಿ. ಸಣ್ಣ ಸಣ್ಣ ಜಡೆಯಂತೆ ಕೂಡ ಕಟ್ಟಿಕೊಳ್ಳಬಹುದು. ಬೆಳಗ್ಗೆ ನಿಮ್ಮ ಕೂದಲು ವೇವಿ ಸ್ಟೈಲ್‏ನಲ್ಲಿರುತ್ತದೆ. ಸ್ಟ್ರಾಬೆರಿಯಿಂದ ಪಡೆಯಿರಿ ಸ್ಟ್ರಾಂಗ್ ಕೂದಲು

ಕೂದಲನ್ನು ಬ್ಲೊ ಡ್ರೈ ಮಾಡಿಕೊಳ್ಳಿ
ಬುಡಮೇಲೆ ಮಾಡಿಕೊಂಡು ಕೂದಲನ್ನು ಬ್ಲೊ ಡ್ರೈ ಮಾಡಿ. ಪದರ ಪದರವಾಗಿ ಕೂದಲನ್ನು ಡ್ರೈಯರ್ ಸಹಾಯದಿಂದ ಸೆಟ್ ಮಾಡಿಕೊಳ್ಳಿ. ಇದಕ್ಕಾಗಿ ಪೆಡಲ್ ಬ್ರಶ್ ಅನ್ನು ಬಳಸಿ. ರೂಟ್ ಬೂಸ್ಟಿಂಗ್ ಉತ್ಪನ್ನವನ್ನು ಬಳಸಬಹುದು.

ಗುಂಗುರು ಕೂದಲು
ಗುಂಗುರು ಕೂದಲು ನಿಮಗೆ ಹೆಚ್ಚಿನ ದಟ್ಟತೆಯನ್ನು ನೀಡುತ್ತದೆ. ಮಾರುಕಟ್ಟೆಯಲ್ಲಿ ಕೂದಲು ಗುಂಗುರಾಗಿಸುವ ವಿಧಾನಗಳು ಲಭ್ಯವಿದ್ದು ಅವುಗಳ ಬಳಕೆಯನ್ನು ನಿಮಗೆ ಮಾಡಿಕೊಳ್ಳಬಹುದು.

English summary

Tricks to Make Your Hair Grow Faster

Hair loss is a common problem nowadays. As hair is regarded as an asset that enhances one’s physical appearance, balding or thinning hair is a problem that many want to correct as soon as possible. so boldsky share such tips which should help you, have a look...
Story first published: Monday, December 21, 2015, 13:17 [IST]
X
Desktop Bottom Promotion