ತೆಂಗಿನ ಹಾಲಿನಿಂದ ಕೂದಲನ್ನು ತೊಳೆದುಕೊಂಡರೆ ಎಷ್ಟೆಲ್ಲಾ ಲಾಭಗಳಿವೆ ಗೊತ್ತೇ?

By: Ashad
Subscribe to Boldsky

ಕೂದಲ ಆರೈಕೆಯಲ್ಲಿ ತೆಂಗಿನ ಪಾತ್ರ ಮಹತ್ವದ್ದಾಗಿದೆ. ಎಣ್ಣೆ ಹಾಗೂ ತೆಂಗಿನ ಹಾಲನ್ನು ಕೂದಲ ಆರೈಕೆಯ ಪ್ರಸಾದನಗಳಲ್ಲಿ ಹೆಚ್ಚು ಬಳಸಲಾಗುತ್ತದೆ. ಏಕೆಂದರೆ ಕೂದಲಿನ ಪೋಷಣೆಯನ್ನು ಮಾಡುವ ಹಲವಾರು ಪೋಷಕಾಂಶಗಳು ಹಾಗೂ ವಿಟಮಿನ್ನುಗಳು ಇವುಗಳಲ್ಲಿ ಹೇರಳವಾಗಿದ್ದು ಕಣ್ಣಿಗೆ ಗೋಚರವಾಗದ ಕೂದಲ ಹಾಗೂ ತಲೆಯ ಚರ್ಮದ ತೊಂದರೆಗಳನ್ನೂ ಸರಿಪಡಿಸಿ ಆರೋಗ್ಯಕರ ಹಾಗೂ ಸೊಂಪಾದ ಕೂದಲು ಬೆಳೆಯಲು ನೆರವಾಗುತ್ತದೆ.

ತೆಂಗಿನ ಎಣ್ಣೆ ಹಾಗೂ ಹಾಲು ಇಷ್ಟೊಂದು ಪ್ರಯೋಜನಕಾರಿ ಎಂದು ನಮಗೆಲ್ಲಾ ಗೊತ್ತಿದ್ದರೂ ಇದರ ಸರಿಯಾದ ಬಳಕೆ ನಮ್ಮಲ್ಲಿ ಹೆಚ್ಚಿನವರಿಗೆ ಗೊತ್ತಿಲ್ಲ. ಈ ಕೊರತೆಯನ್ನು ಇಂದು ಬೋಲ್ಡ್ ಸ್ಕೈ ತಂಡ ಈ ಬಗ್ಗೆ ಹಲವಾರು ಉಪಯುಕ್ತ ಸಲಹೆಗಳನ್ನು ನೀಡುವ ಮೂಲಕ ನೀಗಿಸುತ್ತಿದೆ. ಇದರಲ್ಲಿ ಸಾಂಪ್ರಾದಾಯಿಕ ಕೂದಲ ಪೋಷಣೆಯ ಪ್ರಯೋಜನಗಳ ಬಗ್ಗೆ ವಿವರಣೆಗಳನ್ನೂ ನೀಡಲಾಗಿದೆ.

ಕೊಬ್ಬರಿ ಎಣ್ಣೆಯನ್ನೊಳಗೊಂಡ ನೂರಾರು ಪ್ರಸಾದನಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವುಗಳಲ್ಲಿ ಕೆಲವು ಅಪಾಯಕಾರಿ ರಾಸಾಯನಿಕಗಳಿರುತ್ತವೆ ಹಾಗೂ ಭಾರೀ ಜಾಹೀರಾತಿನ ಕಾರಣ ಇವು ತುಂಬಾ ದುಬಾರಿಯೂ ಆಗಿರುತ್ತವೆ. ಬನ್ನಿ, ಕೊಬ್ಬರಿ ಹಾಲಿನಿಂದ ಕೂದಲನ್ನು ತೊಳೆದುಕೊಳ್ಳುವುದರಿಂದ ಪಡೆಯಬಹುದಾದ ಪ್ರಯೋಜನಗಳನ್ನು ನೋಡೋಣ. ಆದರೆ ಇದಕ್ಕೂ ಮುನ್ನ ತೆಂಗಿನ ಹಾಲು ನಿಮಗೆ ಅಲರ್ಜಿಕಾರಕವಲ್ಲ ಎಂದು ಸ್ಪಷ್ಟಪಡಿಸಿಕೊಳ್ಳಲು ಮೊದಲು ಚರ್ಮದ ಒಂದು ಭಾಗಕ್ಕೆ ಕೊಂಚವೇ ಹಾಲನ್ನು ಹಚ್ಚಿ ಕೊಂಚ ಹೊತ್ತು ಬಿಟ್ಟ ಬಳಿಕ ಯಾವುದೇ ರೀತಿಯ ಅಪಾಯ ಎದುರಾಗಿಲ್ಲ ಎಂಬುದನ್ನು ಪರೀಕ್ಷಿಸಿದ ಬಳಿಕವೇ ಎಲ್ಲಾ ತಲೆಗೂದಲನ್ನು ತೊಳೆದುಕೊಳ್ಳಿ.

ಕೂದಲ ಬೆಳವಣಿಗೆಯನ್ನು ಹೆಚ್ಚಿಸುತ್ತದೆ

ಕೂದಲ ಬೆಳವಣಿಗೆಯನ್ನು ಹೆಚ್ಚಿಸುತ್ತದೆ

ತೆಂಗಿನ ಹಾಲಿನಲ್ಲಿರುವ ಪೋಷಕಾಂಶಗಳು ಕೂದಲ ಬೆಳವಣಿಗೆಗೆ ಪೂರಕವಾಗಿದ್ದು ಕೂದಲ ಬುಡಕ್ಕೆ ಇಳಿದು ಒದಗಿಸುವ ಮೂಲಕ ಕೂದಲು ಸೊಂಪಾಗಿ ಬೆಳೆಯಲು ನೆರವಾಗುತ್ತದೆ. ನೀಳವಾದ, ಆರೋಗ್ಯಕರ ಹಾಗೂ ಕಾಂತಿಯುಕ್ತ ಕೂದಲನ್ನು ಪಡೆಯಲು ತೆಂಗಿನ ಹಾಲಿನಿಂದ ತೊಳೆದುಕೊಳ್ಳೂವುದನ್ನು ವಾರಕ್ಕೊಮ್ಮೆಯಾದರೂ ಅನುಸರಿಸಬೇಕು.

ಬಳಕೆಯ ವಿಧಾನ

ಕೂದಲನ್ನು ಮೊದಲು ತಣ್ಣೀರಿನಿಂದ ತೋಯಿಸಿಕೊಂಡು ಅಪ್ಪಟ ತೆಂಗಿನ ಹಾಲನ್ನು ಕೂದಲ ಬುಡಕ್ಕೆ ಹಚ್ಚಿಕೊಂಡು ನಿಧಾನವಾಗಿ ಮಸಾಜ್ ಮಾಡಿಕೊಳ್ಳಬೇಕು. ಇಡಿಯ ತಲೆಗೆ ತೆಂಗಿನ ಹಾಲು ಆವರಿಸಿದ ಬಳಿಕ ಸುಮಾರು ಹತ್ತು ನಿಮಿಷ ಹಾಗೇ ಬಿಟ್ಟು ಬಳಿಕ ಸೌಮ್ಯ ಶಾಂಪೂ ಬಳಸಿ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ತಲೆಯ ಚರ್ಮದಕ್ಕೆ ಆಳವಾದ ಆರೈಕೆ ನೀಡುತ್ತದೆ

ತಲೆಯ ಚರ್ಮದಕ್ಕೆ ಆಳವಾದ ಆರೈಕೆ ನೀಡುತ್ತದೆ

ತೆಂಗಿನ ಹಾಲಿನಲ್ಲಿ ಕೂದರ ಆರೈಕೆಗೆ ಪೂರಕವಾರ ಹಲವಾರು ಪೋಷಕಾಂಶಗಳಿದ್ದು ಇವು ಕೂದಲ ಬುಡಕ್ಕೆ ಇಳಿಯುವ ಕ್ಷಮತೆ ಹೊಂದಿವೆ. ಪರಿಣಾಮವಾಗಿ ಕೂದಲಿಗೆ ಅತ್ಯುತ್ತಮವಾದ ಆರೈಕೆ ಚರ್ಮದ ಆಳದಿಂದ ದೊರಕುತ್ತದೆ. ವಾರಕ್ಕೊಮ್ಮೆ ತೆಂಗಿನ ಹಾಲನ್ನು ಬಳಸಿ ಕಂಡೀಶನ್ ಮಾಡಿಕೊಳುವ ಮೂಲಕ ನೀವು ಇಚ್ಛಿಸುವ ಆರೋಗ್ಯಕರ ಕೂದಲನ್ನು ಪಡೆಯಬಹುದು.

ಬಳಕೆಯ ವಿಧಾನ

ನಿಮ್ಮ ನಿತ್ಯದ ಶಾಂಪೂ ಸ್ನಾನದ ಬಳಿಕ ಸುಮಾರು ಅರ್ಧ ಚಿಕ್ಕ ಚಮಚ ತೆಂಗಿನಹಾಲನ್ನು ತಲೆಯ ಮೇಲೆ ಸುರಿದು ಚರ್ಮಕ್ಕೆ ಹರಡುವಂತೆ ಮಾಡಿ. ಸುಮಾರು ಐದು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ

ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ

ತೆಂಗಿನ ಹಾಲಿನ ಇದು ಇನ್ನೊಂದು ಅಪ್ರತಿಮ ಪ್ರಯೋಜನವಾಗಿದೆ. ಇದು ಕೂದಲನ್ನು ನೆರೆಯುವುದನ್ನು ತಡವಾಗಿಸುತ್ತದೆ. ಅತ್ಯುತ್ತಮ ಪ್ರಯೋಜನಕ್ಕಾಗಿ ಕನಿಷ್ಟ ಎರಡು ವಾರಕ್ಕೊಮ್ಮೆಯಾದರೂ ತೆಂಗಿನ ಹಾಲಿನಿಂದ ಕೂದಲನ್ನು ತೊಳೆದುಕೊಳ್ಳಬೇಕು.

ಬಳಕೆಯ ವಿಧಾನ

ತಲಾ ಒಂದು ಚಿಕ್ಕ ಚಮಚದಷ್ಟು ತೆಂಗಿನ ಹಾಲು, ಲಿಂಬೆರಸ ಹಾಗೂ ಕೊಬ್ಬರಿ ಎಣ್ಣೆಯನ್ನು ಮಿಶ್ರಣ ಮಾಡಿ ತಲೆಗೂದಲ ಬುಡಕ್ಕೆ ತಾಕುವಂತೆ ನಯವಾಗಿ ಈ ಮಿಶ್ರಣವನ್ನು ಹಚ್ಚಿ. ಸುಮಾರು ಮೂವತ್ತು ನಿಮಿಷಗಳ ಬಳಿಕ ತೊಳೆದುಕೊಳ್ಳಿ.

ತಲೆಯ ಚರ್ಮದಿಂದ ಕಲ್ಮಶಗಳನ್ನು ನಿವಾರಿಸುತ್ತದೆ.

ತಲೆಯ ಚರ್ಮದಿಂದ ಕಲ್ಮಶಗಳನ್ನು ನಿವಾರಿಸುತ್ತದೆ.

ಈ ಸಾಂಪ್ರಾದಾಯಿಕ ವಿಧಾನದ ಇನ್ನೊಂದು ಪ್ರಯೋಜನವೆಂದರೆ ತಲೆಯಲ್ಲಿ ಸಂಗ್ರಹವಾಗಿದ್ದ ಕಲ್ಮಶ ಹಾಗೂ ಕೊಳೆಯನ್ನು ನಿವಾರಿಸುವುದು. ನಿಯಮಿತವಾದ ಬಳಕೆಯಿಂದ ಚರ್ಮದ ಸೂಕ್ಷ್ಮರಂಧ್ರಗಳಿಂದ ಕಲ್ಮಶ ಹೊರದೂಡಲ್ಪಡುತ್ತದೆ ಹಾಗೂ ತನ್ಮೂಲಕ ಇದರಿಂದ ಕೂದಲಿಗೆ ಆಗಬಹುದಾಗಿದ್ದ ಹಾನಿಯನ್ನು ತಪ್ಪಿಸುತ್ತದೆ.

ಬಳಕೆಯ ವಿಧಾನ

ತಲಾ ಒಂದು ಚಿಕ್ಕ ಚಮಚ ತೆಂಗಿನ ಹಾಲು, ಓಟ್ಸ್ ರವೆ ಮಿಶ್ರಣ ಮಾಡಿ ಈ ಮಿಶ್ರಣವನ್ನು ತಲೆಗೂದಲ ಬುಡಕ್ಕೆ ಹೆಚ್ಚಿ ನಯವಾಗಿ ಮಸಾಜ್ ಮಾಡಿ. ಕೊಂಚ ಹೊತ್ತಿನ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಒಣಗೂದಲನ್ನು ಮೃದುವಾಗಿಸುತ್ತದೆ

ಒಣಗೂದಲನ್ನು ಮೃದುವಾಗಿಸುತ್ತದೆ

ಕೂದಲಿಗೆ ಪೋಷಣೆ ನೀಡುವ ತೆಂಗಿನ ಹಾಲಿನ ಗುಣ ಒಣಗೂದಲಿನವರಿಗೂ ವರದಾನವಾಗಿದೆ. ಇದನ್ನು ಕೂದಲಿಗೆ ಬಳಸುವ ಮೂಲಕ ಒಣಗೂದಲು ಸಹಾ ಸೌಮ್ಯ, ಸುಕ್ಕಿಲ್ಲದಂತಾಗಿ ಆರೋಗ್ಯದಿಂದ ಕಳಕಳಿಸುತ್ತದೆ.

ಬಳಕೆಯ ವಿಧಾನ

ತಲಾ ಒಂದು ದೊಡ್ಡಚಮಚದಷ್ಟು ತೆಂಗಿನ ಹಾಲು ಮತ್ತು ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿ. ಈ ಮಿಶ್ರನದಿಂದ ಒಣಗೂದಲನ್ನು ಬುಡದಿಂದ ತುದಿಯವರೆಗೂ ಹಚ್ಚಿ ಸುಮಾರು ಇಪ್ಪತ್ತು ನಿಮಿಶಗಳ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ.

ತಲೆಹೊಟ್ಟನ್ನು ನಿವಾರಿಸುತ್ತದೆ

ತಲೆಹೊಟ್ಟನ್ನು ನಿವಾರಿಸುತ್ತದೆ

ತೆಂಗಿನ ಹಾಲಿನಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ತಲೆಯಲ್ಲಿ ಎದುರಾಗುವ ತಲೆಹೊಟ್ಟನ್ನು ನಿವಾರಿಸಲೂ ನೆರವಾಗುತ್ತದೆ. ಇದಕ್ಕಾಗಿ ತೆಂಗಿನ ಹಾಲನ್ನು ವಾರಕ್ಕೊಮ್ಮೆಯಾದರೂ ಬಳಸುವುದು ಅಗತ್ಯ.

ಬಳಕೆಯ ವಿಧಾನ

ತಲಾ ಒಂದು ಚಿಕ್ಕ ಚಮಚ ತೆಂಗಿನ ಹಾಲು ಹಾಗೂ ಲೋಳೆಸರದ ರಸವನ್ನು ಬೆರೆಸಿ. ಈ ಲೇಪನವನ್ನು ತಲೆಗೂದಲ ಬುಡಕ್ಕೆ ತಾಕುವಂತೆ ಇಡಿಯ ತಲೆಗೆ ಹಚ್ಚಿಕೊಂಡು ಇಪ್ಪತ್ತು ನಿಮಿಷದ ಬಳಿಕ ಉಗುರುಬೆಚ್ಚನೆಯ ನೀರು ಹಾಗೂ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.

ಕೂದಲು ತುಂಡಾಗುವುದನ್ನು ತಪ್ಪಿಸುತ್ತದೆ

ಕೂದಲು ತುಂಡಾಗುವುದನ್ನು ತಪ್ಪಿಸುತ್ತದೆ

ಮೇಲೆ ತಿಳಿಸಿದ ಉಪಯೋಗಗಳಿಗೆ ಹೊರತಾಗಿ ತೆಂಗಿನ ಹಾಲಿನ ನಿಯಮಿತ ಬಳಕೆಯಿಂದ ಕೂದಲನ್ನು ಹೆಚ್ಚು ದೃಢಪಡಿಸಲು ಸಾಧ್ಯವಾಗುತ್ತದೆ. ತನ್ಮೂಲಕ ಕೂದಲು ನಡುವೆ ತುಂಡಾಗುವುದರಿಂದ ರಕ್ಷಣೆ ಪಡೆಯಬಹುದು.

ಬಳಕೆಯ ವಿಧಾನ

ಒಂದು ಚಿಕ್ಕ ಚಮಚ ತೆಂಗಿನ ಹಾಲು ಹಾಗೂ ಎರಡು ಚಿಕ್ಕ ಚಮಚ ನೆಲ್ಲಿಕಾಯಿ ಎಣ್ಣೆಯನ್ನು ಬೆರೆಸಿ ತಲೆಗೂದಲ ಬುಡದಿಂದ ತುದಿಯವರೆಗೆ ತಗಲುವಂತೆ ಹಚ್ಚಿಕೊಳ್ಳಿ. ಸುಮಾರು ಇಪ್ಪತ್ತು ನಿಮಿಷ ಹಾಗೇ ಬಿಟ್ಟು ಒಣಗಿಸಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಘಾಸಿಗೊಂಡಿದ್ದ ಕೂದಲನ್ನು ಸರಿಪಡಿಸುತ್ತದೆ

ಘಾಸಿಗೊಂಡಿದ್ದ ಕೂದಲನ್ನು ಸರಿಪಡಿಸುತ್ತದೆ

ಒಂದು ವೇಳೆ ಕೂದಲಿನ ಅಲಂಕಾರಕ್ಕಾಗಿ ಕೂದಲನ್ನು ಬಿಸಿಮಾಡುವ ಹೇರ್ ಡ್ರಯರುಗಳ ಬಳಕೆಯಿಂದ ಕೂದಲು ಹೆಚ್ಚೇ ಘಾಸಿಗೊಂಡಿದ್ದರೆ ಇದನ್ನು ಮತ್ತೆ ಆರೋಗ್ಯಕರವಾಗಿಸಲು ತೆಂಗಿನ ಹಾಲು ನೆರವಾಗುತ್ತದೆ. ಬಿಸಿಲಿಗೆ ಘಾಸಿಯಾಗಿದ್ದ ಕೂದಲನ್ನು ಸರಿಪಡಿಸಲು ತೆಂಗಿನ ಹಾಲನ್ನು ನೂರಾರು ವರ್ಷಗಳಿಂದ ಭಾರತದಲ್ಲಿ ಬಳಸಲಾಗುತ್ತಾ ಬರಲಾಗಿದೆ. ಉತ್ತಮ ಪರಿಣಾಮಕ್ಕಾಗಿ ಎರಡು ವಾರಕ್ಕೊಮ್ಮೆಯಾದರೂ ಈ ವಿಧಾನವನ್ನು ಅನುಸರಿಸಬೇಕು.

ಬಳಕೆಯ ವಿಧಾನ

ಎರಡು ದೊಡ್ಡ ಚಮಚ ತೆಂಗಿನ ಹಾಲು, ಒಂದು ಮೊಟ್ಟೆಯ ಬಿಳಿಭಾಗವನ್ನು ಚೆನ್ನಾಗಿ ಮಿಶ್ರಣ ಮಾಡಿ. ಈ ಲೇಪನವನ್ನು ಇಡಿಯ ತಲೆಗೆ ಆವರಿಸುವಂತೆ ಹಚ್ಚಿಕೊಳ್ಳಿ. ಸುಮಾರು ಇಪ್ಪತ್ತು ನಿಮಿಷದ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

English summary

Amazing Benefits Of Washing Your Hair With Coconut Milk

Coconut milk has always been a big thing for hair care purposes. It is known to possess a great deal of hair-benefiting nutrients and vitamins that can treat unsightly conditions and also improve the health and appearance of your hair. Though this a popular hair care ingredient, there are still plenty of people who are not aware of its benefits. So, today at Boldsky, we've curated a list of top benefits of including this traditional hair care ingredient in your hair care regimen.
Story first published: Friday, November 10, 2017, 18:30 [IST]
Subscribe Newsletter