For Quick Alerts
ALLOW NOTIFICATIONS  
For Daily Alerts

ಸುಂದರಿಯರ ಕೇಶಕ್ಕೆ ಬಿಸಿ ಎಣ್ಣೆಯ ಚಿಕಿತ್ಸೆ

By Deepu
|

ಕೂದಲಿನ ಬಗ್ಗೆ ಎಷ್ಟು ಕಾಳಜಿವಹಿಸಿದರು ಸಹ ಕಡಿಮೆಯೇ. ಅಸಲಿಗೆ ಮುಖವು ನಮಗೆ ಕನ್ನಡಿಯಲ್ಲಿ ಚೆನ್ನಾಗಿ ಕಾಣುವುದರಿಂದಾಗಿ ಅದರ ಬಗ್ಗೆ ಸಂಪೂರ್ಣ ಕಾಳಜಿಯನ್ನು ನಾವು ವಹಿಸುತ್ತೇವೆ. ಆದರೆ ಕೂದಲಿನ ಬಹುತೇಕ ಭಾಗ ನಮಗೆ ಕಾಣುವುದಿಲ್ಲ, ಹಾಗಾಗಿ ಅದರ ಬಗ್ಗೆ ಮತ್ತು ಅದರ ಯೋಗ ಕ್ಷೇಮದ ಬಗ್ಗೆ, ಅದು ಹಾಳಾದ ಮೇಲೆಯೇ ನಮಗೆ ಚೆನ್ನಾಗಿ ಗೊತ್ತಾಗುತ್ತದೆ. ಹಾಗೆಂದು ಕೂದಲು ಹಾಳಾಗುವವರೆಗೆ ಬಿಟ್ಟು ಆಮೇಲೆ ಅದರ ಪರಿಹಾರವನ್ನು ನೋಡಿಕೊಳ್ಳುವ ಬದಲಿಗೆ ಕೂದಲನ್ನು ಮೊದಲಿನಿಂದಲೆ ಆರೋಗ್ಯಕರವಾಗಿ ಇರಿಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕು.

ಸಾಮಾನ್ಯವಾಗಿ ಕೂದಲಿಗಾಗಿ ನಾವು ಬಹಳಷ್ಟು ಕಾಳಜಿ ಮತ್ತು ಆರೈಕೆಯನ್ನು ನೀಡುತ್ತಿರುತ್ತೇವೆಯಾದರೂ, ಕೂದಲಿಗೆ ನಾವು ನೀಡಬಹುದಾದ ಅತ್ಯಂತ ಉತ್ತಮ ಆರೈಕೆಯೆಂದರೆ ಅದು ಎಣ್ಣೆ. ತೆಂಗಿನ ಎಣ್ಣೆ, ಬಾದಾಮಿ ಮತ್ತು ಆಲೀವ್ ಎಣ್ಣೆಗಳು ಕೂದಲಿಗೆ ಒಳ್ಳೆಯದು. ಈ ಮೂರು ಎಣ್ಣೆಗಳು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುವುದರ ಜೊತೆಗೆ, ತಲೆ ಹೊಟ್ಟು ಮತ್ತು ಕೂದಲಿನ ಬುಡದಲ್ಲಿ ಕಾಣಿಸಿಕೊಳ್ಳುವ ತುರಿಕೆ ಮುಂತಾದವುಗಳನ್ನು ನಿವಾರಿಸುತ್ತವೆ. ಕೂದಲಿಗೆ ಬಿಸಿ ಎಣ್ಣೆ ಮಸಾಜ್ ನಿಂದ 7 ಲಾಭ

Why Is Hot Oil Good For The Hair

ಆದರೆ ಬಿಸಿ ಎಣ್ಣೆಯನ್ನು ಕೂದಲಿಗೆ ಲೇಪಿಸುವ ಮುನ್ನ ಕೂದಲು ಧೂಳು ಮತ್ತು ಕೊಳೆಯಿಂದ ಮುಕ್ತವಾಗಿದೆಯೇ ಎಂದು ಖಾತ್ರಿಪಡಿಸಿಕೊಳ್ಳಿ. ಏಕೆಂದರೆ ಕೂದಲಿನಲ್ಲಿ ಧೂಳು ಮತ್ತು ಕೊಳೆ ಇದ್ದಲ್ಲಿ ಅದು ಎಣ್ಣೆಯೊಂದಿಗೆ ಸೇರಿಕೊಂಡು ಇನ್‌ಫೆಕ್ಷನ್ ಉಂಟು ಮಾಡಬಹುದು. ಆದ್ದರಿಂದ ನಿಮ್ಮ ಕೂದಲು ಸ್ವಚ್ಛವಾಗಿರುವಾಗ ಬಿಸಿ ಎಣ್ಣೆಯನ್ನು ಲೇಪಿಸಿಕೊಳ್ಳಿ. ಹಾಗಾದರೆ ನಿಮಗೆ ಒಂದು ಸಂಶಯ ಕಾಡಿರಬಹುದು? ಕೂದಲಿಗೆ ಬಿಸಿ ಎಣ್ಣೆಯನ್ನು ಏಕೆ ಲೇಪಿಸಬೇಕು ಎಂದು? ಸೌಂದರ್ಯ ತಜ್ಞರು ನಿಮ್ಮ ಸಂಶಯಗಳಿಗೆ ಉತ್ತರವನ್ನು ನೀಡುತ್ತಾರೆ. ಅದಲ್ಲದೆ ಪ್ರತಿ ವಾರವು ನಿಮ್ಮ ಕೂದಲಿಗೆ ಏಕೆ ಮತ್ತು ಹೇಗೆ ಬಿಸಿ ಎಣ್ಣೆಯನ್ನು ಲೇಪಿಸಬೇಕು ಎಂಬುದರ ಕುರಿತು ಮಾಹಿತಿಯನ್ನು ಸಹ ನೀಡುತ್ತಾರೆ.

ವಿಧಾನ:
ಒಂದು ಸಣ್ಣ ಬಟ್ಟಲಿನಲ್ಲಿ, 4 ಟೇಬಲ್ ಚಮಚಗಳಷ್ಟು ಎಣ್ಣೆಯನ್ನು ತೆಗೆದುಕೊಳ್ಳಿ (ಅದು ಆಲೀವ್, ಬಾದಾಮಿ ಅಥವಾ ತೆಂಗಿನ ಎಣ್ಣೆ ಆಗಿರಬಹುದು). ಇದನ್ನು ಮಧ್ಯಮ ಗಾತ್ರದ ಉರಿಯಲ್ಲಿ, ಸ್ವಲ್ಪ ಹೊತ್ತು ಬಿಸಿಯಾಗಲು ಬಿಡಿ. ಇದಕ್ಕೆ ಒಂದು ಟೇಬಲ್ ಚಮಚ ನೀರನ್ನು ಬೆರೆಸಿಕೊಳ್ಳಿ ಮತ್ತು ಉರಿಯನ್ನು ಆರಿಸಿ. ನೀರಿನ ಜೊತೆಗೆ ಎಣ್ಣೆಯನ್ನು ಬೆರೆಸಿ ಆರಲು ಬಿಡಿ. ಈಗ ನಿಮ್ಮ ತಲೆಯನ್ನು ಚೆನ್ನಾಗಿ ಬಾಚಿಕೊಳ್ಳಿ. ಯಾವುದೇ ಗಂಟು ಮತ್ತು ಸಿಕ್ಕುಗಳು ಇಲ್ಲದಂತೆ ಕೂದಲನ್ನು ಚೆನ್ನಾಗಿ ಬಾಚಿ.

ಇದು ಮುಗಿದ ಮೇಳೆ ನಿಮ್ಮ ಬೆರಳುಗಳಲ್ಲಿ ಬೆಚ್ಚಗಿನ ಎಣ್ಣೆಯನ್ನು ತೆಗೆದುಕೊಂಡು ಅದನ್ನು ನಿಮ್ಮ ಕೂದಲಿನ ಬುಡಕ್ಕೆ ಲೇಪಿಸಿ. ಚೆನ್ನಾಗಿ ಮಸಾಜ್ ಮಾಡಿ. ಇಡೀ ಕೂದಲಿನ ಬುಡಗಳಿಗೆ ಎಣ್ಣೆಯು ಲೇಪನಗೊಂಡಿದೆ ಎಂದಾದ ಮೇಲೆ, ಉಳಿದ ಎಣ್ಣೆಯನ್ನು ಕೂದಲಿಗೆ ಲೇಪಿಸಿ. ಹೀಗೆ ಸಂಪೂರ್ಣವಾಗಿ ನಿಮ್ಮ ಕೂದಲಿಗೆ ಎಣ್ಣೆಯನ್ನು ಹಚ್ಚಿದ ನಂತರ, ತಲೆಗೆ ಟವೆಲ್ ಅನ್ನು ಸುತ್ತಿಕೊಳ್ಳಿ. ಈ ಟವೆಲ್ ಅನ್ನು 15 ರಿಂದ 20 ನಿಮಿಷ ಸುತ್ತಿಕೊಂಡಿರಿ. ಇದಾದ ಮೇಲೆ ನಿಮ್ಮ ಕೂದಲನ್ನು ಗಿಡ ಮೂಲಿಕೆಗಳ ಶಾಂಪೂ ಮತ್ತು ಕಂಡೀಶನರ್‌ನಿಂದ ಸ್ವಚ್ಛಗೊಳಿಸಿ.

ಬೆಚ್ಚಗಿನ ಎಣ್ಣೆಯು ಏಕೆ ಕೂದಲಿಗೆ ಒಳ್ಳೆಯದು? ಎಂಬ ಪ್ರಶ್ನೆಗೆ ಸೌಂದರ್ಯ ತಜ್ಞರು ಹೀಗೆ ಉತ್ತರಿಸುತ್ತಾರೆ. ಯಾವಾಗ ನೀವು ಬೆಚ್ಚಗಿನ ಎಣ್ಣೆಯನ್ನು, ಒಂದೆರಡು ಹನಿ ಲ್ಯಾವೆಂಡರ್‌ನಂತಹ ಎಸೆನ್ಶಿಯಲ್ ಆಯಿಲ್ ಜೊತೆಗೆ ಬೆರೆಸಿಕೊಂಡು ಕೂದಲಿಗೆ ಲೇಪಿಸಿಕೊಂಡಾಗ, ಇವೆರಡು ಸೇರಿ ನಿಮ್ಮ ದೇಹದ ಮೇಲೆ ಉಂಟಾಗುವ ಒತ್ತಡವನ್ನು ತಪ್ಪಿಸುತ್ತವೆಯಂತೆ.

ಅಲ್ಲದೆ, ಬಿಸಿ ಎಣ್ಣೆಯಿಂದ ಮಾಡುವ ಹೆಡ್ ಮಸಾಜ್ ಕೂದಲಿಗೆ ಒಳ್ಳೆಯದು. ಇದು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಬೆಚ್ಚಗಿನ ಎಣ್ಣೆಯನ್ನು ನಿಯಮಿತವಾಗಿ ಬಳಸುವುದರಿಂದಾಗಿ, ತಲೆ ಹೊಟ್ಟು, ತುರಿಕೆ ಮುಂತಾದ ಸಮಸ್ಯೆಗಳಿಂದ ಮುಕ್ತರಾಗಬಹುದು. ಮತ್ತೊಂದು ಪ್ರಮುಖ ಅಂಶವೇನೆಂದರೆ, ಯಾವುದೇ ಕಾರಣಕ್ಕು ತಲೆಗೆ ಎಣ್ಣೆಯನ್ನು ಹಚ್ಚಿಕೊಂಡು ರಾತ್ರಿ ನಿದ್ದೆ ಮಾಡಬೇಡಿ. ರಾತ್ರಿಯೆಲ್ಲಾ ಎಣ್ಣೆಯಲ್ಲಿ ಕೂದಲನ್ನು ನೆನೆಸುವುದರಿಂದ ಕೂದಲಿಗೆ ಇನ್‌ಫೆಕ್ಷನ್ ಬರುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಹೇನುಗಳು ಸಹ ಬೀಳಬಹುದು ಎಚ್ಚರ. ಕೂದಲಿನ ಸಮೃದ್ಧ ಪೋಷಣೆಗೆ-ಬಿಸಿ ಎಣ್ಣೆಯ ಚಿಕಿತ್ಸೆ

ಹಾಗಾದರೆ ಯಾವ ಎಣ್ಣೆಯನ್ನು ನಿಮ್ಮ ಕೂದಲಿಗೆ ಬಳಸಬೇಕು? ಒಂದು ವೇಳೆ ನಿಮ್ಮ ಕೂದಲು ಸಾಮಾನ್ಯವಾದ ಕೂದಲಾಗಿದ್ದಲ್ಲಿ, ಅದಕ್ಕೆ ಲ್ಯಾವೆಂಡರ್, ರೋಸ್ ಮೇರಿ, ನಿಂಬೆ ಅಥವಾ ಥೈಮ್ ಮುಂತಾದ ಎಸೆನ್ಶಿಯಲ್ ಆಯಿಲ್ ಬಳಸಬಹುದು. ಇವು ನಿಮ್ಮ ಕೂದಲಿಗೆ ತಂಪು ಮತ್ತು ಒಳ್ಳೆಯ ಪೋಷಕಾಂಶವನ್ನು ಒದಗಿಸುತ್ತವೆ. ಒಂದು ವೇಳೆ ನಿಮ್ಮದ ಒಣ ಬುಡವಿರುವ ಕೂದಲಾಗಿದ್ದಲ್ಲಿ, ಅದಕ್ಕೆ ಲ್ಯಾವೆಂಡರ್, ರೋಸ್ ಮೇರಿ ಅಥವಾ ಲೆಮನ್ ಎಸೆನ್ಶಿಯಲ್ ಆಯಿಲ್ ಬಳಸಿ. ಒಣ ಕೂದಲಿಗೆ ಶ್ರೀಗಂಧ, ಲ್ಯಾವೆಂಡರ್ ಅಥವಾ ರೋಸ್ ಮೇರಿ ಆಯಿಲ್ ಬಳಸಿ.

English summary

Why Is Hot Oil Good For The Hair?

How many of you have the habit of applying hot oil on our scalp and to our hair every week? If you follow this simple hair care trick, we are sure you can have a nice thick mane. According to experts, the best food you can give to your hair is oil. Take a look at the simple reason why you should apply hot oil to your hair every week.
Story first published: Thursday, January 7, 2016, 19:58 [IST]
X
Desktop Bottom Promotion