For Quick Alerts
ALLOW NOTIFICATIONS  
For Daily Alerts

ಕೂದಲಿನ ಆರೋಗ್ಯಕ್ಕೆ ಬೇಕು-ಲಿಂಬೆ ಹಣ್ಣಿನ ಜ್ಯೂಸ್!

By Manu
|

ನಿಮ್ಮ ತಲೆಕೂದಲಿನ ಒಂದಿಲ್ಲೊಂದು ಸಮಸ್ಯೆಗೆ ನೀವು ಹಲವಾರು ಮನೆಮದ್ದುಗಳನ್ನು ಬಳಸಿರುತ್ತೀರಿ. ಆದರೆ ಇವುಗಳು ಅಷ್ಟೊಂದು ಪರಿಣಾಮಕಾರಿಯಾಗಿಲ್ಲ ಎಂಬುದು ನಿಮ್ಮ ಗಮನಕ್ಕೆ ಬಂದಿದ್ದಲ್ಲಿ ಇಂದಿನ ಲೇಖನದಲ್ಲಿ ಕೂದಲಿನ ಮೇಲೆ ಚಮತ್ಕಾರೀ ಪರಿಣಾಮವನ್ನು ಉಂಟುಮಾಡಬಹುದಾದ ಅಂಶವೊಂದನ್ನು ತಿಳಿಸಲಿದ್ದೇವೆ. ಕೂದಲಿನ ಸಮಸ್ಯೆಗೆ, ನೈಸರ್ಗಿಕ ಎಲೆಗಳಿಂದ ಆರೈಕೆ

ಲಿಂಬೆಯ ರಸವನ್ನು ಬಳಸಿಕೊಂಡು ನಿಮ್ಮ ನಿಮ್ಮ ಕೂದಲನ್ನು ಬಲಪಡಿಸಬಹುದು ಅಂತೆಯೇ ಉದ್ದವಾಗಿಸಲೂಬಹುದು. ಕೂದಲಿನ ಬುಡಕ್ಕೂ ಲಿಂಬೆ ರಸ ಹೆಚ್ಚು ಮಹತ್ವಕಾರಿಯಾಗಿದ್ದು ಲಿಂಬೆಯನ್ನ ಕೂದಲಿಗೆ ಬಳಸಿಕೊಳ್ಳುವುದರಿಂದ ಉಂಟಾಗುವ ಪ್ರಯೋಜನಗಳೇನು ಎಂಬುದನ್ನು ಕಂಡುಕೊಳ್ಳೋಣ....


ತುರಿತವಿರುವ ತಲೆಬುಡಕ್ಕೆ ಚಿಕಿತ್ಸಕ

ತುರಿತವಿರುವ ತಲೆಬುಡಕ್ಕೆ ಚಿಕಿತ್ಸಕ

ನಿಮ್ಮ ಕೂದಲನ್ನು ಆಗಾಗ್ಗೆ ತುರಿಸಿಕೊಳ್ಳುವುದು ಮುಜುಗರದ ಪರಿಸ್ಥಿತಿಯಾಗಿರುತ್ತದೆ. ದಿನವೂ ಲಿಂಬೆ ರಸವನ್ನು ಬಳಸಿಕೊಂಡು ಕೂದಲನ್ನು ತೊಳೆದುಕೊಳ್ಳುವುದು ತುರಿತವಿರುವ ತಲೆಬುಡಕ್ಕೆ ಪ್ರಯೋಜನಕಾರಿ ಎಂದೆನಿಸಲಿದೆ. ಲಿಂಬೆ ರಸವನ್ನು ಬಳಸಿಕೊಂಡು ತಲೆಬುಡಕ್ಕೆ ಹಚ್ಚಿಕೊಳ್ಳಿ ಸ್ವಲ್ಪ ನಿಮಿಷಗಳ ಕಾಲ ಹಾಗೆಯೇ ಬಿಡಿ. ತಣ್ಣೀರಿನಿಂದ ಕೂದಲನ್ನು ತೊಳೆದುಕೊಳ್ಳಿ. ನಿಮ್ಮ ತುರಿತವಿರುವ ತಲೆಬುಡಕ್ಕೆ ಇದು ಸಂಪೂರ್ಣ ಉತ್ತಮವಾಗಿರುವ ಮನೆಮದ್ದಾಗಿದೆ.

ಜಿಡ್ಡಿರುವ ಕೂದಲಿಗೆ ಉಪಶಮನ

ಜಿಡ್ಡಿರುವ ಕೂದಲಿಗೆ ಉಪಶಮನ

ತಲೆಬುಡದಲ್ಲಿ ಹೆಚ್ಚಿನ ಎಣ್ಣೆಯನ್ನು ಉತ್ಪಾದಿಸುವ ಕೂದಲನ್ನು ಹೊಂದಿರುವವರು ಸಾಕಷ್ಟು ಜನರಿದ್ದಾರೆ. ಇದರಿಂದ ವಾತಾವರಣದ ಕೊಳೆ ಶೀಘ್ರದಲ್ಲಿಯೇ ಕೂದಲಿನಲ್ಲಿ ಅವಿತುಕೊಳ್ಳಬಹುದು. ಈ ಹೆಚ್ಚಿನ ಎಣ್ಣೆಯನ್ನು ಹೊರತೆಗೆಯಲು ನಿಮಗೆ ಲಿಂಬೆ ರಸವನ್ನು ಬಳಸಬಹುದಾಗಿದೆ. ಸಂಪೂರ್ಣವಾಗಿ ಲಿಂಬೆ ರಸದಲ್ಲಿ ಕೂದಲನ್ನು ಒದ್ದೆಮಾಡಿಕೊಳ್ಳಿ ಮತ್ತು ಕೆಲವು ಗಂಟೆಗಳ ಕಾಲ ಹಾಗೆಯೇ ಬಿಡಿ. ತಣ್ಣೀರಿನಿಂದ ಕೂದಲನ್ನು ತೊಳೆದುಕೊಳ್ಳಿ.

ತಲೆ ಹೊಟ್ಟಿಗೆ ಮನೆಮದ್ದು

ತಲೆ ಹೊಟ್ಟಿಗೆ ಮನೆಮದ್ದು

ಲಿಂಬೆ ರಸವನ್ನು ಬಳಸಿಕೊಂಡು ಹೊಟ್ಟಿಗೆ ಉಪಚಾರವನ್ನು ಪಡೆದುಕೊಳ್ಳಬಹುದಾಗಿದೆ. ಲಿಂಬೆ ರಸವು ಕೂದಲಿನ ಹೊಟ್ಟನ್ನು ನಿವಾರಿಸಿ ತಲೆಗೂದಲನ್ನು ದೃಢಗೊಳಿಸುತ್ತದೆ. ಲಿಂಬೆ ರಸದಲ್ಲಿರುವ ಸಿಟ್ರಿಕ್ ಆಸಿಡ್ ನೈಸರ್ಗಿಕವಾಗಿ ತಲೆಹೊಟ್ಟನ್ನು ನಿವಾರಿಸಲಿದೆ. ತುರಿಕೆಯ ನಿವಾರಣೆಯನ್ನು ಲಿಂಬೆ ರಸ ಮಾಡಲಿದೆ. ಲಿಂಬೆ ರಸವನ್ನು ನೀರಿನೊಂದಿಗೆ ಬೆರೆಸಿಕೊಂಡು ನಿಮ್ಮ ತಲೆಬುಡಕ್ಕೆ ಹಚ್ಚಿಕೊಳ್ಳಿ. ತಲೆ ಹೊಟ್ಟಿನ ನಿವಾರಣೆಗೆ ಇಲ್ಲಿದೆ 7 ವಿಧಾನ

ಸ್ಟ್ರೈಟ್ ಕೂದಲಿಗಾಗಿ

ಸ್ಟ್ರೈಟ್ ಕೂದಲಿಗಾಗಿ

ನೈಸರ್ಗಿಕವಾಗಿ ನೇರ ಕೂದಲನ್ನು ಪಡೆದುಕೊಳ್ಳುವ ಹಂಬಲ ಇದ್ದಲ್ಲಿ ಇಲ್ಲಿದೆ ನೈಸರ್ಗಿಕ ಪರಿಹಾರ. ನಾಲ್ಕನೇ ಒಂದು ಭಾಗದಷ್ಟು ಲಿಂಬೆ ರಸವನ್ನು ತೆಗೆದುಕೊಂಡು ಇದಕ್ಕೆ 10 ಚಮಚಗಳಷ್ಟು ತೆಂಗಿನೆಣ್ಣೆಯನ್ನು ಸೇರಿಸಿ. ಈಗ ಎಲ್ಲವನ್ನೂ ಮಿಶ್ರ ಮಾಡಿ. ಕೂದಲಿಗೆ ಹಚ್ಚಿಕೊಳ್ಳಿ. ಈ ಮಾಸ್ಕ್ ಅನ್ನು ಪ್ರತಿಯೊಂದು ಕೂದಲಿಗೂ ಹಚ್ಚಿಕೊಂಡಿದ್ದೀರಿ ಎಂಬುದನ್ನು ಖಾತ್ರಿಪಡಿಸಿ ನಂತರ ಕೂದನ್ನು ಮುಂಭಾಗಕ್ಕೆ ಹಾಕಿ ಬಾಚಣಿಗೆಯಲ್ಲಿ ಬಾಚಿಕೊಳ್ಳಿ ಇದಕ್ಕಾಗಿ ಅಗಲ ಹಲ್ಲಿನ ಬಾಚಣಿಕೆಯನ್ನು ಬಳಸಿ.

ನಿಮ್ಮ ತಲೆಬುಡವನ್ನು ಎಕ್ಸ್‎ಫಾಲಿಯೇಟ್ ಮಾಡಲು

ನಿಮ್ಮ ತಲೆಬುಡವನ್ನು ಎಕ್ಸ್‎ಫಾಲಿಯೇಟ್ ಮಾಡಲು

ಲಿಂಬೆರಸವು ಎಕ್ಸ್‎ಫಾಲಿಯೇಟ್ ಅಂಶಗಳನ್ನು ಒಳಗೊಂಡಿದ್ದು ವಿಷಕಾರಿ ಅಂಶಗಳು ಮತ್ತು ಕೊಳೆಯನ್ನು ಕೂದಲಿನ ಬುಡದಿಂದ ತೊಡೆದು ಹಾಕಲು ಉಪಯೋಗಕಾರಿಯಾಗಿದೆ. ಹೊಟ್ಟನ್ನು ನಿವಾರಿಸಿಕೊಳ್ಳಲು, ಲಿಂಬೆ ರಸವನ್ನು ಬಳಸಬಹುದಾಗಿದೆ.

ಕೂದಲು ಉದ್ದವಾಗಲು

ಕೂದಲು ಉದ್ದವಾಗಲು

ಲಿಂಬೆ ರಸವನ್ನು ಬಳಸಿಕೊಂಡು ನಿಮ್ಮ ಕೂದಲನ್ನು ನೀಳವಾಗಿಸಬಹುದಾಗಿದೆ. ವಿಟಮಿನ್ ಸಿ ಲಿಂಬೆ ರಸದಲ್ಲಿದ್ದು, ಕೂದಲಿನ ಬೆಳವಣಿಗೆಯನ್ನು ಇದು ಸುದೃಢವಾಗಿಸಲಿದೆ. ಸಮಪ್ರಮಾಣದಲ್ಲಿ ತೆಂಗಿನೆಣ್ಣೆ, ಆಲೀವ್ ಆಯಿಲ್ ಮತ್ತು ಲಿಂಬೆ ರಸವನ್ನು ತೆಗೆದುಕೊಳ್ಳಿ. ಎಲ್ಲಾ ಅಂಶಗಳನ್ನು ಮಿಶ್ರ ಮಾಡಿ ಮತ್ತು ಕೂದಲಿನ ಬುಡಕ್ಕೆ ಹಚ್ಚಿ. ಸ್ವಲ್ಪ ಸಮಯಗಳ ಕಾಲ ಹಾಗೆಯೇ ಬಿಟ್ಟು ನಂತರ ಕೂದಲನ್ನು ತೊಳೆದುಕೊಳ್ಳಿ.

ಸೀಳುಗೂದಲಿನ ನಿವಾರಣೆಗೆ

ಸೀಳುಗೂದಲಿನ ನಿವಾರಣೆಗೆ

ಸೀಳುಗೂದಲನ್ನು ಪೋಷಣೆ ಮಾಡಲು ಲಿಂಬೆ ರಸ ಅತ್ಯಗತ್ಯವಾಗಿದೆ. ಮೊದಲಿಗೆ ಸೀಳುಗೂದಲನ್ನು ತುದಿಯಿಂದ ಕತ್ತರಿಸಿಕೊಳ್ಳಿ. ತದನಂತರ 5-6 ಚಮಚದಷ್ಟು ಆಲೀವ್ ಆಯಿಲ್ ತೆಗೆದುಕೊಂಡು ಇದಕ್ಕೆ ಲಿಂಬೆ ರಸವನ್ನು ಸೇರಿಸಿ. ನಿಮ್ಮ ಸೀಳುಗೂದಲಿಗೆ ಈ ಮಿಶ್ರಣವನ್ನು ಹಚ್ಚಿ ಮತ್ತು ಮೃದುವಾದ ಶಾಂಪೂ ಬಳಸಿ ಕೂದಲನ್ನು ತೊಳೆದುಕೊಳ್ಳಿ.ಕೂದಲಿನ ಸೀಳು ತುದಿಯ ಸಮಸ್ಯೆಗೆ-ಬಾಳೆಹಣ್ಣಿನ ಪ್ಯಾಕ್

ಕೂದಲುದುರುವನ್ನು ನಿಯಂತ್ರಿಸುತ್ತದೆ

ಕೂದಲುದುರುವನ್ನು ನಿಯಂತ್ರಿಸುತ್ತದೆ

ನಿಮ್ಮ ಕೂದಲು ಅಗತ್ಯಕ್ಕಿಂತ ಹೆಚ್ಚು ಉದುರುತ್ತಿದೆ ಎಂದಾದಲ್ಲಿ, ನಿಮ್ಮ ಕೂದಲನ್ನು ನೇರವಾಗಿ ಇದು ಉಪಚರಿಸುತ್ತದೆ. ಸ್ವಲ್ಪ ಲಿಂಬೆ ರಸವನ್ನು ತೆಗೆದುಕೊಂಡು ಇದಕ್ಕೆ ಜೀರಿಗೆ ಹುಡಿಯನ್ನು ಸೇರಿಸಿ ಮತ್ತು ಕಾಳುಮೆಣಸಿನ ಪುಡಿಯನ್ನು ಸೇರಿಸಿಕೊಳ್ಳಿ. ಈಗ ಎಲ್ಲವನ್ನೂ ಮಿಶ್ರ ಮಾಡಿ ಮತ್ತು ನಿಮ್ಮ ತಲೆಬುಡಕ್ಕೆ ಹಚ್ಚಿಕೊಳ್ಳಿ. ನಂತರ ತಣ್ಣೀರಿನಿಂದ ಕೂದಲನ್ನು ತೊಳೆದುಕೊಳ್ಳಿ.

English summary

What Happens When You Apply Lemon Juice On Your Hair?

From treating hair loss, dandruff to improving the scalp condition to regulate good hair growth, lemon juice proves to have a myriad of benefits for the hair and scalp, read on.
Story first published: Saturday, November 12, 2016, 18:10 [IST]
X
Desktop Bottom Promotion