For Quick Alerts
ALLOW NOTIFICATIONS  
For Daily Alerts

ಕೂದಲು ದಪ್ಪವಾಗಿ ಬೆಳೆಯಬೇಕೇ? ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್

By Manu
|

ಆಧುನಿಕ ಜೀವನ ಶೈಲಿ, ಒತ್ತಡ, ರಾಸಾಯನಿಕ ಉತ್ಪನ್ನಗಳ ಬಳಕೆ ಕೂದಲಿನ ಆರೋಗ್ಯವನ್ನು ಸಂಪೂರ್ಣವಾಗಿ ಕೆಡಿಸುತ್ತದೆ. ಅತಿಯಾದ ಒತ್ತಡ ಮತ್ತು ಹೊರಗಿನ ಕಲುಷಿತ ವಾತಾವರಣಕ್ಕೆ ಕೂದಲನ್ನು ಒಡ್ಡಿಕೊಂಡಾಗ ಕೂದಲು ಉದುರಲು ಮತ್ತು ತುಂಡಾಗಲು ಆರಂಭವಾಗುತ್ತದೆ. ಕೂದಲು ಉದುರುವುದರಿಂದ ಕೂದಲು ತೆಳ್ಳಗೆ ಆಗಬಹುದು. ಇದು ದೊಡ್ಡ ಸಮಸ್ಯೆಯಾಗಿ ನಿಮ್ಮನ್ನು ಕಾಡುವ ಮೊದಲೇ ಅದಕ್ಕೆ ಏನಾದರೂ ಪರಿಹಾರ ಕಂಡುಕೊಂಡರೆ ತುಂಬಾ ಒಳ್ಳೆಯದು. ಕೂದಲನ್ನು ದಪ್ಪ ಮತ್ತು ಉದ್ದವಾಗಿಸುವ ಆಹಾರಗಳು

ಯಾವಾಗಲೂ ಕೂದಲಿನ ಆರೈಕೆಗೆ ಮೊದಲ ಪ್ರಾಮುಖ್ಯತೆ ನೀಡಿದರೆ ಒಳ್ಳೆಯದು. ಇಲ್ಲವಾದಲ್ಲಿ ಪುರುಷರು ಮತ್ತು ಮಹಿಳೆಯರಲ್ಲಿಬ್ಬರಲ್ಲೂ ಕೂದಲು ಉದುರಿ ಬೋಳು ತಲೆಯಾಗಿ ನಿಮ್ಮ ಸೌಂದರ್ಯವೇ ಹಾಳಾಗಬಹುದು.

Want To Get Thick Hair In A Month? Try This Homemade Oil!

ಅದರಲ್ಲೂ ಕೂದಲು ಉದುರಿ ತೆಳ್ಳಗೆ ಆಗುವುದರಿಂದ ನಿಮ್ಮ ಮುಖದ ಆಕರ್ಷಣೆ ಕಡಿಮೆಯಾಗಿ ಆತಂಕ ಉಂಟಾಗಿ ಆತ್ಮವಿಶ್ವಾಸದ ಕೊರತೆಯಾಗಬಹುದು. ಕೂದಲು ಉದುರುವುದರಿಂದ ಹೊಸ ಉತ್ಪನ್ನಗಳ ಬಳಕೆ ಮಾಡಲು ಹಿಂಜರಿಯಬಹುದು. ಆಹಾರ ಕ್ರಮ, ಕೂದಲಿನ ಕೆಟ್ಟ ಆರೈಕೆ, ಅನುವಂಶೀಯತೆ, ತಲೆಬುರುಡೆ ಸೋಂಕು ಇತ್ಯಾದಿ ಅತಿಯಾಗಿ ಕೂದಲು ಉದುರಲು ಕಾರಣಗಳಾಗಿವೆ.

ನಿಮಗೆ ದಪ್ಪಗಿನ ಕೂದಲು ಬೇಕೆಂದರೆ ಚಿಂತೆ ಮಾಡಬೇಡಿ. ನೇರವಾಗಿ ಅಡುಗೆಮನೆಗೆ ತೆರಳಿ ನಾವು ಹೇಳಿದಂತೆ ತೈಲವೊಂದನ್ನು ತಯಾರಿಸಿ ಅದನ್ನು ನಿಯಮಿತವಾಗಿ ಬಳಸಿಕೊಂಡರೆ ಒಂದೇ ತಿಂಗಳಲ್ಲಿ ದಪ್ಪಗಿನ ಕೂದಲನ್ನು ಪಡೆಯಬಹುದಾಗಿದೆ, ಅದು ಹೇಗೆ ಎಂಬುದನ್ನು ಮುಂದೆ ಓದಿ...

ಮನೆಯಲ್ಲೇ ಕೂದಲಿನ ತೈಲ ತಯಾರಿಸುವ ವಿಧಾನ
*ತೆಂಗಿನ ಎಣ್ಣೆ-2 ಚಮಚ
*ಮೆಂತೆ ಹುಡಿ- 1 ಚಮಚ

ತೆಂಗಿನ ಎಣ್ಣೆ ಮತ್ತು ಮೆಂತೆ ಹುಡಿಯು ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಲಿದೆ. ಇದನ್ನು ನಿಯಮಿತವಾಗಿ ಬಳಸುವುದರಿಂದ ಕೆಲವೇ ದಿನಗಳಲ್ಲಿ ದಪ್ಪ ಹಾಗೂ ಬಲವಾದ ಕೂದಲನ್ನು ಪಡೆಯಬಹುದು. ಈ ತೈಲವು ವಿಟಮಿನ್ ಮತ್ತು ಪೋಷಕಾಂಶಗಳನ್ನು ಒದಗಿಸಿ ಕೂದಲಿನ ಕೋಶಗಳನ್ನು ಬಲಪಡಿಸುತ್ತದೆ.

ತೆಂಗಿನ ಎಣ್ಣೆಯು ನಿಮ್ಮ ತಲೆ ಬುರುಡೆ ಮತ್ತು ಕೂದಲಿಗೆ ತೇವಾಂಶ ನೀಡುವುದು. ಒಣ ತಲೆಬುರುಡೆಯು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಈ ನೈಸರ್ಗಿಕ ತೈಲವು ಕೂದಲನ್ನು ಹೊಳೆಯುವಂತೆ ಮಾಡುವುದು. ಇಷ್ಟು ಲಾಭಗಳನ್ನು ಹೊಂದಿರುವ ಈ ತೈಲವನ್ನು ನೀವು ಪ್ರಯತ್ನಿಸಲೇಬೇಕು. ಜಿಡ್ಡು ಕೂದಲಿನ ಸಮಸ್ಯೆಯೇ? ಚಿಂತೆ ಬಿಡಿ, ಮನೆಮದ್ದು ಅನುಸರಿಸಿ

ತೈಲ ತಯಾರಿಸುವ ಮತ್ತು ಬಳಸುವ ವಿಧಾನ
*ಮೊದಲಿಗೆ ಹೇಳಿದಷ್ಟು ಪ್ರಮಾಣದ ಸಾಮಗ್ರಿಗಳನ್ನು ಒಂದು ಸಣ್ಣ ಪಾತ್ರೆಗೆ ಹಾಕಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ನೈಸರ್ಗಿಕ ತೈಲವು ಈಗ ಬಳಸಲು ತಯಾರಾಗಿದೆ.


*ಇನ್ನು ತೈಲವನ್ನು ಕೂದಲಿನ ಬುಡದಿಂದ ತುದಿಯ ತನಕ ಹಚ್ಚಿಕೊಳ್ಳಿ.
*ತದನಂತರ ತಲೆಬುರುಡೆಯನ್ನು ಕೆಲವು ನಿಮಿಷಗಳ ಕಾಲ ಮಸಾಜ್ ಮಾಡಿಕೊಳ್ಳಿ. ಒಂದು ಗಂಟೆ ಇದನ್ನು ಹಾಗೆ ಬಿಡಿ.
*ಇನ್ನು ಉಗುರುಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆಯಿರಿ ಮತ್ತು ಶಾಂಪೂ ಬಳಸಿ.
English summary

Want To Get Thick Hair In A Month? Try This Homemade Oil!

Hair loss can also stop a person from trying out new hairdos and experimenting with their tresses, as the fear of damaging their hair further can make them hesitant, it is no fun, right? So, if you are yearning to attain thick, long tresses naturally, then head to your kitchens right away! Yes, we've shared a recipe of a homemade hair oil that can help you get thicker hair, within a month, with regular use! Take a look!
Story first published: Monday, August 1, 2016, 20:31 [IST]
X
Desktop Bottom Promotion