For Quick Alerts
ALLOW NOTIFICATIONS  
For Daily Alerts

ವಿಟಮಿನ್‍ ಹಾಗೂ ಖನಿಜಗಳು ಕೂದಲ ಬೆಳವಣಿಗೆಗೆ ಅತ್ಯಗತ್ಯ

By Deepu
|

ಪ್ರತಿಯೊಬ್ಬರಿಗು ಸುಂದರವಾಗಿರುವ, ಆರೋಗ್ಯಕರವಾಗಿರುವ ಮತ್ತು ಹೊಳಪಿನಿಂದ ಕೂಡಿರುವ ದಟ್ಟ ಕೂದಲು ಬೇಕೆಂಬ ಆಸೆ. ಅದಕ್ಕಾಗಿ ನಾವು ಏನೆಲ್ಲಾ ಮಾಡುವುದಿಲ್ಲ? ಯಾವ ಯಾವ ಶಾಂಪು, ಕಂಡೀಶನರ್, ಹೇರ್ ಸ್ಪ್ರೇ, ಎಣ್ಣೆ ಇತ್ಯಾದಿಗಳನ್ನು ಕೊಂಡುಕೊಳ್ಳುವುದಿಲ್ಲ. ಪಾರ್ಲರ್‌ಗೆ ಹೋಗಿ ಮಾಸ್ಕ್ ಮಾಡಿಸಿಕೊಳ್ಳುವುದು, ಸ್ಟ್ರೈಟೆನಿಂಗ್ ಮಾಡಿಸಿಕೊಳ್ಳುವುದು ಇತ್ಯಾದಿಗಳು ಸಹ ಉಂಟು. ಅಲ್ಲದೆ ಅದನ್ನು ಅಲಂಕಾರಿಕವಾಗಿ ಬಾಚಿಕೊಳ್ಳಲು ಸಹ ನಾವು ವಿಶೇಷ ಗಮನ ನೀಡುತ್ತೇವೆ. ಹೀಗೆ ಕೂದಲಿನ ವಿಷಯಕ್ಕೆ ಬಂದಾಗ ನಾವು ಹೆಚ್ಚಿನ ಗಮನವನ್ನು ನೀಡುತ್ತೇವೆ. ಆದರೆ ಒತ್ತಡ, ಪರಿಸರ ಮಾಲಿನ್ಯ, ಪರಿಸರದ ಸ್ಥಿತಿಗಳು ಮತ್ತು ದುರ್ಬಲ ಆಹಾರವು ನಮ್ಮ ಕೂದಲನ್ನು ಹಾಳು ಮಾಡಿಬಿಡುತ್ತದೆ.

ಹಾಗಾಗಿ ಆರೋಗ್ಯಕರವಾದ ಮತ್ತು ಸದೃಢವಾದ ಕೂದಲನ್ನು ನಿರ್ವಹಣೆ ಮಾಡುವುದು ಕಷ್ಟ ಎಂಬಂತಹ ಸ್ಥಿತಿ ಬಂದೊದಗಿದೆ. ಹಾಗೆಂದು ಕೂದಲನ್ನು ಸುಮ್ಮನೆ ಯಾವುದೇ ಆರೈಕೆಯಿಲ್ಲದೆ ಬಿಟ್ಟು ಬಿಡಲಾದೀತೆ? ಕೂದಲು ಹೆಣ್ಣಿನ ಸೌಂದರ್ಯಕ್ಕೆ ಕಿರೀಟವಿದ್ದಂತೆ. ಸೌಂದರ್ಯ ಎಷ್ಟೇ ಇದ್ದರು ಅದು ಕೇಶ ಸೌಂದರ್ಯವನ್ನು ಸಹ ಅವಲಂಬಿಸಿರುತ್ತದೆ ಎಂಬುದು ಸುಳ್ಳಲ್ಲ. ಅದಕ್ಕಾಗಿ ಕೂದಲಿನ ಆರೋಗ್ಯವನ್ನು ನಾವು ಕಡ್ಡಾಯವಾಗಿ ಕಾಪಾಡಿಕೊಳ್ಳಬೇಕಾಗುತ್ತದೆ.

ನಮ್ಮ ದೇಹ ಸುಸೂತ್ರವಾಗಿ ಕೆಲಸ ಮಾಡಬೇಕು ಎಂದುಕೊಂಡರೆ ಹಲವಾರು ಅಗತ್ಯಗಳು ಇರುತ್ತವೆ. ಅದರಲ್ಲಿ ವಿಟಮಿನ್ ಮತ್ತು ಖನಿಜಾಂಶಗಳು ಸಹ ಒಂದು. ಇವುಗಳು ಇಲ್ಲದೆ ನಮ್ಮ ದೇಹ ಸರಿಯಾಗಿ ಕೆಲಸ ಮಾಡಲಾರದು. ವಿಟಮಿನ್ ಮತ್ತು ಖನಿಜಾಂಶಗಳನ್ನು ಪ್ರತಿನಿತ್ಯ ಸೇವಿಸುವುದರಿಂದ ದೇಹ ಮತ್ತು ಕೂದಲಿಗೆ ಅಗತ್ಯವಾದ ಪೋಷಕಾಂಶಗಳು ಲಭಿಸಿ, ನಿಮ್ಮ ದೇಹವು ಸಮರ್ಪಕವಾಗಿ ಕೆಲಸ ಮಾಡುತ್ತದೆ. ಅರೆ ವಿಟಮಿನ್ ಮತ್ತು ಖನಿಜಾಂಶಗಳು ಸಹ ಕೂದಲಿನ ಆರೋಗ್ಯವನ್ನು ನಿರ್ಧರಿಸುತ್ತವೆಯೇ ಎಂಬುದು ನಿಮ್ಮ ಪ್ರಶ್ನೆಯಾದಲ್ಲಿ, ಹೌದು ಎಂಬುದು ನಮ್ಮ ಉತ್ತರ.

ಕಬ್ಬಿಣ ಮತ್ತು ಸತುವಿನಂತಹ ಖನಿಜಾಂಶಗಳು ಸಹ ಕೂದಲಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ಸತುವು ಕೂದಲಿಗೆ ಒಳಗಿನಿಂದಲೆ ಪೋಷಣೆಯನ್ನು ಒದಗಿಸ್ತುತದೆ. ಈ ರೀತಿ ಅತ್ಯಗತ್ಯವಾದ ಪೋಷಕಾಂಶಗಳ ಕೊರತೆಯು ಕೂದಲು ಉದುರುವಿಕೆಗೆ ಮತ್ತು ಕೂದಲು ಒಡೆಯುವುದಕ್ಕೆ ಕಾರಣವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಸರಿಯಾದ ಪ್ರಮಾಣದ ವಿಟಮಿನ್‌ಗಳನ್ನು ಮತ್ತು ಖನಿಜಾಂಶಗಳನ್ನು ಅಗತ್ಯವಾಗಿ ಸೇವಿಸಬೇಕಾಗುತ್ತದೆ. ಇವುಗಳು ಹಣ್ಣುಗಳು, ತರಕಾರಿಗಳು ಮತ್ತು ಮಾಂಸದಲ್ಲಿ ಯಥೇಚ್ಛವಾಗಿ ಇರುತ್ತವೆ. ಬೋಲ್ಡ್‌ಸ್ಕೈ ಈ ನಿಟ್ಟಿನಲ್ಲಿ ನಿಮಗೆ ನೆರವಾಗುವುದಕ್ಕಾಗಿ ಅಗತ್ಯ ವಿಟಮಿನ್‌ಗಳು ಮತ್ತು ಖನಿಜಗಳನ್ನು ಪಟ್ಟಿ ಮಾಡಿ ನೀಡುತ್ತಿದೆ. ಇದನ್ನು ತಿಳಿದುಕೊಂಡು ನಿಮ್ಮ ಆಹಾರದಲ್ಲಿ ಅವುಗಳನ್ನು ಸೇರಿಸಿಕೊಳ್ಳಿ ಹಾಗು ಸುಂದರವಾದ ದಟ್ಟ ಕೂದಲನ್ನು ಪಡೆಯಿರಿ, ಮುಂದೆ ಓದಿ..

ವಿಟಮಿನ್ ಡಿ

ವಿಟಮಿನ್ ಡಿ

ವಿಟಮಿನ್ ಡಿಯು ಕೂದಲಿನ ಬುಡಕ್ಕೆ ತುಂಬಾ ಒಳ್ಳೆಯದು. ಇದು ಹೊಸ ಕೂದಲು ಉದಯಿಸಲು ನೆರವು ನೀಡುತ್ತದೆ. ಹೊಸ ಹೊಸ ಕೂದಲಿನ ಬುಡಗಳಿಗೆ ಜನ್ಮ ನೀಡುವ ಸಾಮರ್ಥ್ಯ ಸಹ ಇದಕ್ಕೆ ಇರುತ್ತದೆ. ವಿಟಮಿನ್ ಡಿಯು ಕೂದಲಿನ ಕಾಂಡಕ್ಕೆ ಅಗತ್ಯ ಪೋಷಣೆಯನ್ನು ನೀಡಿ, ಸುಂದರವಾದ ಕೂದಲಾಗಿ ಕಾಣಿಸಿಕೊಳ್ಳಲು ಮತ್ತು ಬೆಳೆಯಲು ಸಹಾಯ ಮಾಡುವುದರ ಜೊತೆಗೆ ಕೂದಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ಕೂದಲಿಗೆ ಒಟ್ಟಾರೆ ಪೋಷಣೆಯನ್ನು ಒದಗಿಸುತ್ತದೆ.

ವಿಟಮಿನ್ ಬಿ12

ವಿಟಮಿನ್ ಬಿ12

ಇದು ಕೂದಲಿಗೆ ಹೇಳಿ ಮಾಡಿಸಿದಂತಹ ವಿಟಮಿನ್ ಆಗಿದ್ದು, ಕೂದಲಿಗೆ ಅತ್ಯಗತ್ಯ ಪೋಷಣೆಯನ್ನು ಇದು ಒದಗಿಸುತ್ತದೆ. ಈ ವಿಟಮಿನ್ ಹೈನು ಉತ್ಪನ್ನಗಳು, ಮಾಂಸ, ಮೀನು ಮತ್ತು ಮೊಟ್ಟೆಗಳಲ್ಲಿ ಲಭಿಸುತ್ತದೆ. ಈ ವಿಟಮಿನ್ ಕೊರತೆಯು ಕೂದಲು ಅವಧಿ ಪೂರ್ವವಾಗಿ ಬೆಳ್ಳಗೆ ಆಗಲು ಕಾರಣವಾಗುತ್ತದೆ. ವಿಟಮಿನ್ ಬಿ12 ಅನ್ನು ನಿಯಮಿತವಾಗಿ ಸೇವಿಸುವ ಮೂಲಕ ಈ ಸಮಸ್ಯೆಯನ್ನು ನೀವು ನಿವಾರಿಸಿಕೊಳ್ಳಬಹುದು.

ವಿಟಮಿನ್ ಬಿ5

ವಿಟಮಿನ್ ಬಿ5

ವಿಟಮಿನ್ ಬಿ5 ಸಹ ಕೂದಲಿನ ಆರೋಗ್ಯಕ್ಕೆ ಅತ್ಯಾವಶ್ಯಕ. ಆರೋಗ್ಯಕರವಾದ ಮತ್ತು ಸದೃಢವಾದ ಕೂದಲಿಗೆ ಇದು ಪೋಷಣೆಯನ್ನು ನೀಡುತ್ತದೆ. ಅಣಬೆಗಳು, ಸೂರ್ಯಕಾಂತಿ ಬೀಜಗಳು, ಯಕೃತ್ತು (ಲಿವರ್), ಮೊಟ್ಟೆಗಳು ಮತ್ತು ಅವೊಕ್ಯಾಡೊ ಮುಂತಾದವುಗಳಲ್ಲಿ ಈ ವಿಟಮಿನ್ ಕಂಡು ಬರುತ್ತದೆ. ಮೆಗ್ನಿಷಿಯಂ: ಮೆಗ್ನಿಷಿಯಂ ಸಹ ನಮ್ಮ ದೇಹದ ಸಮರ್ಪಕ ಕಾರ್ಯ ವೈಖರಿಗೆ ಅತ್ಯಗತ್ಯ. ಪ್ರತಿದಿನ ಮೆಗ್ನಿಷಿಯಂ ಅನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ಕೂದಲು ಸದೃಢವಾಗಿ ಬೆಳೆಯುವುದರ ಜೊತೆಗೆ ಉದ್ದವಾಗಿ ಸಹ ಬೆಳೆಯುತ್ತದೆ. ಸೊಪ್ಪುಗಳು, ಒಣ ಹಣ್ಣುಗಳು, ದಂಟು ಮತ್ತು ಬೀನ್ಸ್‌ನಲ್ಲಿ ಈ ಮೆಗ್ನಿಷಿಯಂ ಅಂಶ ಹೆಚ್ಚಾಗಿರುತ್ತದೆ.

ಕಬ್ಬಿಣಾಂಶ

ಕಬ್ಬಿಣಾಂಶ

ನಮ್ಮ ದೇಹ ಸಮರ್ಪಕವಾಗಿ ಕೆಲಸ ಮಾಡಲು ಕಬ್ಬಿಣಾಂಶದ ಪಾತ್ರ ದೊಡ್ಡದು. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯಕರವಾದ ಹೃದಯವನ್ನು ಪಡೆಯಬಹುದು ಮತ್ತು ಅದರ ಜೊತೆಗೆ ಉದ್ದವಾದ ಹಾಗು ಸದೃಢವಾದ ಕೂದಲನ್ನು ಸಹ ಪಡೆಯಬಹುದು. ಟೊಫು, ಪಾಲಕ್ ಸೊಪ್ಪುಗಳು, ಬಾದಾಮಿ ಮತ್ತು ಕಡಲೆ ಬೀಜದಲ್ಲಿ ಕಬ್ಬಿಣಾಂಶವು ಸಮೃದ್ಧವಾಗಿರುತ್ತದೆ.

ವಿಟಮಿನ್ ಎ

ವಿಟಮಿನ್ ಎ

ವಿಟಮಿನ್ ಎ ಯು ಕಣ್ಣಿಗಷ್ಟೇ ಅಲ್ಲ, ಕೂದಲಿಗು ಸಹ ಒಳ್ಳೆಯದು. ಇದು ಕೂದಲನ್ನು ಮಾಯಿಶ್ಚರೈಸ್ ಮಾಡುತ್ತದೆ ಮತ್ತು ಕೂದಲು ಶೀಘ್ರವಾಗಿ ಬೆಳೆಯಲು ನೆರವು ನೀಡುತ್ತದೆ. ಕಿತ್ತಳೆ, ಪರಂಗಿ ಹಣ್ಣು ಕ್ಯಾರೆಟ್ ಮತ್ತು ಸಿಹಿ ಗೆಣಸಿನಲ್ಲಿ ವಿಟಮಿನ್ ಎ ಅಧಿಕ ಪ್ರಮಾಣದಲ್ಲಿ ಲಭಿಸುತ್ತದೆ.

English summary

Vitamins And Minerals For Healthy Hair Growth

Long, healthy and lustrous hair is a dream for any lady. It reflects one's overall health and defines the beauty of a woman. However, due to stress, pollution, environmental conditions and poor diet, it has become impossible to maintain a healthy and strong hair. Vitamins and minerals are necessary for the wellness of the body, without which our body doesn't function properly.
Story first published: Monday, January 4, 2016, 20:33 [IST]
X
Desktop Bottom Promotion