For Quick Alerts
ALLOW NOTIFICATIONS  
For Daily Alerts

ಸಿಂಪಲ್ ಟಿಪ್ಸ್: ತಲೆಹೊಟ್ಟು ಸಮಸ್ಯೆಗೆ ಪವರ್‌ಫುಲ್ ಮನೆಮದ್ದು

By Manu
|

ತಲೆಹೊಟ್ಟಿನ ಬಾಧೆಗೊಳಗಾದವರು ಅತೀವ ಮುಜುಗರಕ್ಕೊಳಗಾಗುವುದನ್ನು ಗಮನಿಸಬಹುದು. ತಲೆಗೂದಲ ನಡುವೆ ತೆಳ್ಳಗಿನ ಮತ್ತು ಚಿಕ್ಕ ಚಿಕ್ಕ ಪಕಳೆಗಳು ಸಡಿಲವಾಗಿದ್ದು ಗಾಳಿಯ ಬೀಸುವಿಕೆಯಿಂದ ಗಾಳಿಯಲ್ಲೆಲ್ಲಾ ಹಾರಾಡುತ್ತದೆ. ಬಾಚಣಿಗೆಯಿಂದ ಬಾಚಿಕೊಂಡ ಕಡೆ ಭುಜದಲ್ಲೆಲ್ಲಾ ಬಿದ್ದು ನೋಡುವವರಿಗೂ ಮುಜಗರ ತರಿಸುತ್ತದೆ. ಕೆಲವರಿಗಂತೂ ತಲೆಯಲ್ಲಿ ಅಸಾಧ್ಯ ತುರಿಕೆ ಇದ್ದು ಸದಾ ತುರಿಸುತ್ತಲೇ ಇರಬೇಕಾದ ಸಂದರ್ಭವೂ ಎದುರಾಗುತ್ತದೆ. ಏನದ್ಭುತ! ತಲೆಹೊಟ್ಟು ನಿವಾರಣೆಗೆ ಮಾತ್ರೆಯಿಂದ ಪರಿಹಾರ...

ತಲೆಹೊಟ್ಟಿಗೆ ಕಾರಣವನ್ನು ಹುಡುಕಿದರೆ ಆರೈಕೆಯ ಕೊರತೆ, ತಲೆಯ ಚರ್ಮ ತೀರಾ ಒಣಗುವುದು, ಆಹಾರದಲ್ಲಿ ಕೆಲವು ಪೋಷಕಾಂಶಗಳ ಕೊರತೆ ಮೊದಲಾದ ಕಾರಣಗಳಿವೆ. ತಲೆಯ ಚರ್ಮದ ಹೊರಪದರದ ಜೀವಕೋಶಗಳು ಸತ್ತ ಬಳಿಕ ಪುಡಿಯ ರೂಪದಲ್ಲಿ ಹೊರಬಂದರೆ ಇದು ಆರೋಗ್ಯಕರ. ತಲೆಹೊಟ್ಟು ನಿರ್ಲಕ್ಷಿಸಿದರೆ, ಅಪಾಯ ಕಟ್ಟಿಟ್ಟ ಬುತ್ತಿ ಜೋಕೆ..!

ಬದಲಿಗೆ ಈ ಜೀವಕೋಶಗಳು ಒಣಗಿ ಪರಸ್ಪರ ಅಂಟಿಕೊಂಡು ಚರ್ಮದ ಹೊರಪದರದ ಮೇಲೆ ಅಂಟಿಕೊಂಡೇ ಇರುತ್ತವೆ. ಇದು ಚರ್ಮದ ಸೂಕ್ಷ್ಮರಂಧ್ರಗಳಿಂದ ನೈಸರ್ಗಿಕ ತೈಲ ಮತ್ತು ಬೆವರು ಹೊರಬರುವುದಕ್ಕೆ ಅಡ್ಡಿಯಾಗಿ ತುರಿಕೆಗೆ ಕಾರಣವಾಗುತ್ತದೆ. ತುರಿಸಿದಾಗ ಈ ಪದರ ಎದ್ದು ಚಿಕ್ಕ ಚಿಕ್ಕ ಪಕಳೆಗಳಾಗುತ್ತವೆ, ಇದೇ ತಲೆಹೊಟ್ಟು. ಅಷ್ಟಕ್ಕೂ ತಲೆಹೊಟ್ಟಿನ ಸಮಸ್ಯೆಗೆ ನಿಜವಾದ ಕಾರಣವೇನು?

ಕೆಲವು ಹೇನು ಮತ್ತು ಇತರ ಸೂಕ್ಷ್ಮ ಕ್ರಿಮಿಗಳಿಗೆ ಈ ಪದರ ಎಂದರೆ ಬಿರಿಯಾನಿ ಇದ್ದ ಹಾಗೆ!, ಇವು ಬಿರಿಯಾನಿಯನ್ನು ಮೆಲ್ಲುತ್ತಾ ತಮ್ಮ ಸೂಜಿಯಂತಹ ಕಾಲುಗಳಿಂದ ನಡೆಯುವಾಗ ತುರಿಕೆ ಉಂಟಾಗುತ್ತದೆ. ಇದನ್ನು ನಿವಾರಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಒಮ್ಮೆ ಮೂಡಿದ ಈ ಪದರ ಇದರ ಕೆಳಗೆ ಈಗ ಆರೋಗ್ಯಕರವಾದ ಜೀವಕೋಶಗಳಿಗೂ ಸರಿಯಾಗಿ ಉಸಿರಾಡಲು ಬಿಡದೇ ಅದನ್ನೂ ಒಣಗಿಸಲು ಪ್ರಾರಂಭಿಸುತ್ತದೆ. ಈ ಪದರ ಗಾಳಿಗೆ ಹಾರಿದ ಬಳಿಕ ಹೊಸ ಪದರ ಹುಟ್ಟಿಕೊಳ್ಳುತ್ತದೆ. ಅಂದರೆ ತಲೆಹೊಟ್ಟು ಸತತವಾಗಿ ಮುಂದುವರೆಯುತ್ತದೆ. ಇದೇ ಕಾರಣಕ್ಕೆ ಎಷ್ಟು ಬಾರಿ ತೊಳೆದುಕೊಂಡರೂ ತಲೆಹೊಟ್ಟು ಸದಾ ಉಳಿದುಕೊಳ್ಳುತ್ತದೆ. ಬನ್ನಿ ತಲೆಹೊಟ್ಟಿನ ಸಮಸ್ಯೆಗೆಂದೇ ಕೆಲವೊಂದು ಮನೆಮದ್ದನ್ನು ಸೂಚಿಸಿದ್ದೇವೆ ಮುಂದೆ ಓದಿ.... ತಲೆಹೊಟ್ಟನ್ನು ನಿವಾರಿಸಲು 20 ಮನೆ ಮದ್ದುಗಳು

ಹರಳೆಣ್ಣೆ

ಹರಳೆಣ್ಣೆ

ಅತಿ ಸ್ನಿಗ್ಧವಾಗಿರುವ ಈ ಎಣ್ಣೆ ಒಂದು ಉತ್ತಮ ಶಿಲೀಂಧ್ರನಿವಾರಕವಾಗಿದ್ದು ತಲೆಗೂದಲ ಪೋಷಣೆಗೆ ಉತ್ತಮವಾಗಿದೆ. ಇದರ ಪ್ರಯೋಜನ ಪಡೆಯಬೇಕಾದರೆ ಕೊಂಚ ಎಣ್ಣೆಯನ್ನು ಕೊಂಚವೇ ಬಿಸಿಮಾಡಿ ತಲೆಗೂದಲ ಬುಡಕ್ಕೆ ಬೆರಳುಗಳಿಂದ ನಯವಾದ ಮಸಾಜ್ ಮೂಲಕ ಹಚ್ಚಿಕೊಳ್ಳಬೇಕು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹರಳೆಣ್ಣೆ

ಹರಳೆಣ್ಣೆ

ಇದರಿಂದ ಕೂದಲ ಬುಡಕ್ಕೆ ಹೆಚ್ಚಿನ ರಕ್ತಸಂಚಾರವಾಗುವ ಮೂಲಕ ಸೋಂಕು ಕಡಿಮೆಯಾಗುತ್ತದೆ. ಅಲ್ಲದೇ ತಲೆಹೊಟ್ಟು ಸಹಾ ಸಡಿಲಗೊಳ್ಳತೊಡಗುತ್ತದೆ. ಎಣ್ಣೆ ಹಚ್ಚಿದ ಬಳಿಕ ಕನಿಷ್ಟ ಒಂದು ಗಂಟೆ ಬಿಟ್ಟು ಸೌಮ್ಯ ಶಾಂಪೂವಿನೊಂದಿಗೆ ಉಗುರುಬೆಚ್ಚನೆಯ ನೀರು ಬಳಸಿ ಸ್ನಾನ ಮಾಡಿಕೊಳ್ಳಿ.

ಮೊಸರು, ಲಿಂಬೆ ಮತ್ತು ಜೇನಿನ ಲೇಪ

ಮೊಸರು, ಲಿಂಬೆ ಮತ್ತು ಜೇನಿನ ಲೇಪ

ಲೆಹೊಟ್ಟು ಅತಿಯಾಗಿದ್ದರೆ ಈ ವಿಧಾನ ಸೂಕ್ತವಾಗಿದೆ. ಮೊಸರಿನಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ಕ್ರಿಮಿಗಳನ್ನು ನಿವಾರಿಸಿದರೆ ಲಿಂಬೆಯಲ್ಲಿರುವ ಆಮ್ಲೀಯತೆ ತಲೆಹೊಟ್ಟನ್ನು ಸಡಿಲಗೊಳಿಸಲು ಮತ್ತು ಚರ್ಮದ ಮೇಲ್ಪದರದಲ್ಲಿ ಸಂಗ್ರಹವಾಗಿದ್ದ ಅನಗತ್ಯ ತೈಲವನ್ನು ನಿವಾರಿಸಲು ನೆರವಗುತ್ತದೆ. ಜೇನಿನಲ್ಲಿರುವ ಪೋಷಕಾಂಶಗಳು ಆರ್ದ್ರತೆ ಮತ್ತು ಕಾಂತಿ ನೀಡಲು ನೆರವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮೊಸರು, ಲಿಂಬೆ ಮತ್ತು ಜೇನಿನ ಲೇಪ

ಮೊಸರು, ಲಿಂಬೆ ಮತ್ತು ಜೇನಿನ ಲೇಪ

ಲಿಂಬೆ ಮತ್ತು ಮೊಸರಿನ ಮೂಲಕ ಒಣಗಬಹುದಾಗಿದ್ದ ಚರ್ಮಕ್ಕೆ ಜೇನು ಆರ್ದ್ರತೆ ನೀಡಿ ಒಣಗದಂತೆ ನೋಡಿಕೊಳ್ಳುತ್ತದೆ. ಈ ವಿಧಾನವನ್ನು ಅನುಸರಿಸಲು ಮೂರೂ ಪರಿಕರಗಳನ್ನು ಸಮಪ್ರಮಾಣದಲ್ಲಿ ಬೆರೆಸಿ ತಲೆಗೂದಲ ಬುಡಕ್ಕೆ ದಪ್ಪನಾಗಿ ಲೇಪಿಸಿ ಕನಿಷ್ಟ ಒಂದು ಘಂಟೆ ಇರಿಸಿ. ಬಳಿಕ ಸೌಮ್ಯ ಶಾಂಪೂ ಬಳಸಿ ಉಗುರುಬೆಚ್ಚನೆಯ ನೀರಿನೊಂದಿಗೆ ತೊಳೆದುಕೊಳ್ಳಿ.

ಕಹಿಬೇವು

ಕಹಿಬೇವು

ಬೇವಿನಲ್ಲಿರುವ ಶಿಲೀಂಧ್ರನಿವಾರಕ ಗುಣ ತಲೆಹೊಟ್ಟು ನಿವಾರಿಸಲೂ ಸಮರ್ಥವಾಗಿದೆ. ಅಲ್ಲದೇ ಬೇವು ಒಂದು ಉತ್ತಮ ರಕ್ತ ಶುದ್ದೀಕಾರಕವಾಗಿದ್ದು ತಲತಲಾಂತರದಿಂದ ಭಾರತದಲ್ಲಿ ಹಲವು ರೋಗಗಳಿಗೆ ಔಷಧದ ರೂಪದಲ್ಲಿ ಬಳಕೆಯಲ್ಲಿದೆ. ತಲೆಹೊಟ್ಟು ನಿವಾರಿಸಲು ಕೆಲವು ಕಹಿಬೇವಿನ ಎಲೆಗಳನ್ನು ಕೊಂಚ ನೀರಿನಲ್ಲಿ ಚೆನ್ನಾಗಿ ಕುದಿಸಿ ಬಳಿಕ ಈ ನೀರನ್ನು ತಣಿಯಲು ಬಿಡಿ.

ಕಹಿಬೇವು

ಕಹಿಬೇವು

ಸುಮಾರು ಉಗುರು ಬೆಚ್ಚಗಾಗುವಷ್ಟು ತಣ್ಣಗಾದ ಬಳಿಕ ಸೋಸಿ ಒಂದು ಪಾತ್ರೆಯಲ್ಲಿ ಸಂಗ್ರಹಿಸಿ. ನಂತರ ಸ್ನಾನ ಮಾಡಿ ಒದ್ದೆಯಾದ ತಲೆಗೂದಲಿಗೆ ಈ ನೀರನ್ನು ಹಾಕಿಕೊಂಡು ಇಳಿಯಲು ಬಿಟ್ಟು ಬಳಿಕ ಒರೆಸದೇ ಹಾಗೇ ಒಣಗಲು ಬಿಡಿ. ಒಂದೇ ದಿನದಲ್ಲಿ ತಲೆಹೊಟ್ಟು ಇಲ್ಲವಾಗುತ್ತದೆ. ತಲೆಹೊಟ್ಟಿನ ಜೊತೆ ತುರಿಕೆ ಇದ್ದವರಿಗೆ ಈ ವಿಧಾನ ಸೂಕ್ತವಾಗಿದೆ.

ಲಿಂಬೆ ರಸ

ಲಿಂಬೆ ರಸ

ಮೇಲಿನ ವಿಧಾನಗಳು ಕೊಂಚ ಸಮಯ ಹಿಡಿಯುವ ವಿಧಾನಗಳಾಗಿದ್ದು ಅಷ್ಟು ಸಮಯವಿಲ್ಲದಿದ್ದರೆ ಲಿಂಬೆಹಣ್ಣನ್ನು ಬಳಸಬಹುದು. ಇದಕ್ಕಾಗಿ ಸುಮಾರು ಎರಡು ದೊಡ್ಡ ಚಮಚದಷ್ಟು ಲಿಂಬೆರಸವನ್ನು ಸಂಗ್ರಹಿಸಿ ಬೀಜ ನಿವಾರಿಸಿ. ಈ ರಸವನ್ನು ನೇರವಾಗಿ ಕೂದಲ ಬುಡಕ್ಕೆ ಹಚ್ಚಿ ನಯವಾದ ಮಸಾಜ್ ಮೂಲಕ ಹಚ್ಚಿಕೊಳ್ಳಿ. ನಂತರ ಹದಿನೈದು ಇಪ್ಪತ್ತು ನಿಮಿಷ ಬಿಟ್ಟು ಕಂಡೀಶನರ್ ಬಳಸಿ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಮುಂದೆ ಓದಿ

ಲಿಂಬೆ ರಸ

ಲಿಂಬೆ ರಸ

ಲಿಂಬೆರಸ ಒಂದು ಪ್ರಬಲ ಆಮ್ಲವೂ ಆಗಿರುವುದರಿಂದ ಇದು ಚರ್ಮದ ತೈಲವನ್ನೂ ಸೆಳೆಯುವ ಕಾರಣ ಈ ಅವಧಿ ಅರ್ಧಘಂಟೆಗೆ ಮೀರಕೂಡದು. ನೀರಿನಲ್ಲಿ ತಲೆಹೊಟ್ಟಿನ ಪಕಳೆಗಳು ಸುಲಭವಾಗಿ ಇಳಿದು ಹೋಗುವುದನ್ನು ಗಮನಿಸಿ. ಈ ವಿಧಾನಗಳು ನಿಮಗೆ ಎಷ್ಟು ಪ್ರಯೋಜನಕಾರಿಯಾಗಿವೆ ಎಂಬುದನ್ನು ನಮಗೆ ಖಂಡಿತಾ ತಿಳಿಸಿ, ಇದಕ್ಕಾಗಿ ಕೆಳಗಿನ ಕಮೆಂಟ್ಸ್ ಭಾಗವನ್ನು ಬಳಸಿಕೊಳ್ಳಿ.

English summary

Ultimate Home Remedies For Dandruff

Pregnancy is that period of time in every woman’s life that is completely special and exclusive. People do lots of planning before conceiving; and there are several things that are associated with it. Now, if you're pregnant, how to understand that at the first stage? There are pregnancy strips available in market which you can buy and use to get an instant result.
X
Desktop Bottom Promotion