Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಕೂದಲಿನ ಆರೈಕೆಗೆ-'ಅರಿಶಿನದ' ಹೇರ್ ಮಾಸ್ಕ್!
ಆಯುರ್ವೇದದಲ್ಲಿ ಹಲವಾರು ರೋಗಗಳ ಚಿಕಿತ್ಸೆಗೆ ಸಾಂಬಾರ ಪದಾರ್ಥಗಳನ್ನು ಬಳಸಲಾಗುತ್ತದೆ. ಅದರಲ್ಲೂ ಅರಶಿನವನ್ನು ಪ್ರಮುಖವಾಗಿ ಹೆಚ್ಚಿನ ಎಲ್ಲಾ ಔಷಧಿಗಳಲ್ಲಿ ಬಳಕೆ ಮಾಡಲಾಗುತ್ತದೆ. ಅರಿಶಿನದಲ್ಲಿರುವ ಗುಣಗಳು ಹಲವಾರು ರೋಗಗಳಿಗೆ ಒಳ್ಳೆಯ ಔಷಧಿಯಾಗಿದೆ. ಅರಿಶಿನವು ಚರ್ಮದ ಕಾಂತಿಯನ್ನು ಹೆಚ್ಚಿಸಿ ಆರೋಗ್ಯಕಾರಿ ಚರ್ಮವನ್ನು ನೀಡುತ್ತದೆ.
ಅದೇ ಅರಿಶಿನವನ್ನು ಕೂದಲಿನ ಆರೈಕೆ ಹಾಗೂ ಕೂದಲಿನ ಬೆಳವಣಿಗೆಗೆ ಬಳಸಬಹುದು. ಅರಿಶಿನವನ್ನು ಬಳಸುವುದರಿಂದ ಕೂದಲಿನ ಬೆಳವಣಿಗೆ ಹೆಚ್ಚಿಸಬಹುದು, ತಲೆಹೊಟ್ಟು ನಿವಾರಣೆ, ಕೂದಲು ಉದುರುವುದನ್ನು ತಡೆಯುವುದು ಹಾಗೂ ತಲೆಬುರುಡೆಯ ಇತರ ಹಲವಾರು ಸಮಸ್ಯೆಗಳನ್ನು ನಿವಾರಣೆ ಮಾಡಬಹುದು. ಅರಿಶಿನವನ್ನು ಬಳಸಿಕೊಂಡು ಕೂದಲಿನ ಮಾಸ್ಕ್ ಅನ್ನು ಹೇಗೆ ತಯಾರಿಸಬಹುದು ಎಂದು ಈ ಲೇಖನದಲ್ಲಿ ನೀವು ತಿಳಿಯಿರಿ.
ಅರಿಶಿನ ಮತ್ತು ಜೇನುತುಪ್ಪ
ಜೇನು ಹಾಗೂ ಅರಿಶಿನವನ್ನು ಮಿಶ್ರಣ ಮಾಡಿಕೊಂಡು ತಲೆಬುರುಡೆಗೆ ಬಳಸುವುದರಿಂದ ತಲೆಬುರುಡೆಯ ಹಲವಾರು ಸಮಸ್ಯೆಗಳನ್ನು ನಿವಾರಿಸಬಹುದು. ಇದರಲ್ಲಿ ಉರಿಯೂತ ಶಮನಕಾರಿ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಇದು ಕೂದಲಿನ ಬೆಳವಣಿಯನ್ನು ವೃದ್ಧಿಸಿ ತಲೆಬುರುಡೆಯ ಹಲವಾರು ರೀತಿಯ ಸೋಂಕನ್ನು ನಿವಾರಣೆ ಮಾಡುತ್ತದೆ.
ಸ್ವಲ್ಪ ಅರಿಶಿನ ಹಾಗೂ ಜೇನನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ ಮತ್ತು ಉಗುರುಬೆಚ್ಚಗಿನ ನೀರಿನಿಂದ ಕೂದಲು ತೊಳೆಯಿರಿ.
ಅರಿಶಿನ ಮತ್ತು ಮೊಟ್ಟೆ ಲೋಳೆ
ಸ್ವಲ್ಪ ಅರಿಶಿನ ಮತ್ತು ಮೊಟ್ಟೆಯ ಲೋಳೆಯನ್ನು ಮಿಶ್ರ ಮಾಡಿಕೊಳ್ಳಿ. ತಲೆಗೆ ಹಚ್ಚಿಕೊಂಡು ಸ್ವಲ್ಪ ಸಮಯ ಹಾಗೆ ಬಿಡಿ. ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಅರಿಶಿನ ಮತ್ತು ಮೊಟ್ಟೆಯ ಲೋಳೆಯು ಕೂದಲಿಗೆ ಕಾಂತಿ ನೀಡುವುದು ಮತ್ತು ವಿನ್ಯಾಸವನ್ನು ಕಾಪಾಡಲು ನೆರವಾಗುವುದು. ವಾರದಲ್ಲಿ ಒಂದು ಸಲ ಈ ಮಾಸ್ಕ್ ಅನ್ನು ಬಳಸುವುದರಿಂದ ಕೂದಲು ತುಂಬಾ ಆರೋಗ್ಯ, ಬಲ ಹಾಗೂ ಕಾಂತಿಯಿಂದ ಇರುತ್ತದೆ.
ಅರಿಶಿನ ಮತ್ತು ಮೊಸರು
ಅರ್ಧ ಕಪ್ ಮೊಸರಿಗೆ ಸ್ವಲ್ಪ ಅರಿಶಿನ ಹುಡಿಯನ್ನು ಹಾಕಿ. ಇದನ್ನು ಕೂದಲಿಗೆ ಹಚ್ಚಿಕೊಂಡು 30 ನಿಮಿಷ ಕಾಲ ಹಾಗೆ ಬಿಡಿ. ಉಗುರುಬೆಚ್ಚಗಿನ ನೀರಿನಿಂದ ಇದನ್ನು ತೊಳೆಯಿರಿ. ಮೊಸರು ಹಾಗೂ ಅರಿಶಿನದ ಮಿಶ್ರಣವನ್ನು ತಲೆಗೆ ಹಚ್ಚುವುದರಿಂದ ತಲೆಬುರುಡೆಯಲ್ಲಿ ದೀರ್ಘಕಾಲ ತನಕ ತೇವಾಂಶ ಕಾಪಾಡಲು ನೆರವಾಗುತ್ತದೆ. ತಲೆಬುರುಡೆಯಲ್ಲಿ ತೇವಾಂಶವಿದ್ದರೆ ಸೋಂಕು ಹಾಗೂ ತಲೆಹೊಟ್ಟು ಸಮಸ್ಯೆ ಕಡಿಮೆಯಾಗುತ್ತದೆ.