For Quick Alerts
ALLOW NOTIFICATIONS  
For Daily Alerts

ಕೂದಲುದುರುವ ಸಮಸ್ಯೆಗೆ,ಇಲ್ಲಿದೆ ಪರ್ಫೆಕ್ಟ್ ಮನೆಮದ್ದು

By Manu
|

ಇತ್ತೀಚೆಗೆ ತಲೆ ಬಾಚಿದಾಗ ತಲೆಗಿಂತಲೂ ಹೆಚ್ಚಾದ ಕೂದಲು ಬಾಚಣಿಗೆಯಲ್ಲಿ ಇದ್ದಂತೆ ತೋರುತ್ತಿದೆಯೇ? ಹೌದಾದರೆ ಈ ವಿಷಯವನ್ನು ನೀವು ಖಂಡಿತವಾಗಿಯೂ ಲಘುವಾಗಿ ಪರಿಗಣಿಸಬಾರದು. ಇಂದಿನ ದಿನಗಳಲ್ಲಿ ಕೂದಲು ಉದುರುವುದು ಒಂದು ವ್ಯಾಪಕ ಸಂಗತಿಯಾಗಿದ್ದು ಸೌಂದರ್ಯಪ್ರಜ್ಞೆಯುಳ್ಳ ಯಾರಿಗಾದರೂ ಕಳವಳ ಮೂಡಿಸುತ್ತದೆ. ಇದಕ್ಕೆ ಪ್ರತ್ಯಕ್ಷವಾದ ಕಾರಣಗಳೆಂದರೆ ಅನುವಂಶಿಕ, ಸೂಕ್ತ ಆರೈಕೆಯ ಕೊರತೆ, ಸಮರ್ಪಕ ಆಹಾರ ಸೇವಿಸದೇ ಇರುವುದು ಮತ್ತು ಅನಾರೋಗ್ಯಕರ ಆಹಾರದ ಸೇವನೆ ಇತ್ಯಾದಿಗಳು. ಮಳೆಗಾಲ ಬಂತೆಂದರೆ ಸಾಕು ಕೂದಲುದುರುವ ಸಮಸ್ಯೆ!

ಪರೋಕ್ಷವಾಗಿ ಪ್ರದೂಷಣೆ, ಬದಲಾದ ಜೀವನಶೈಲಿ, ನೀರಿನಲ್ಲಿ ಇರುವ ಉಪ್ಪು ಅಥವಾ ಇತರ ಕ್ಷಾರಗಳು ಇತ್ಯಾದಿಗಳು ಕಾರಣವಾಗಿವೆ. ಇನ್ನುಳಿದಂತೆ ಆರೋಗ್ಯದಲ್ಲಿ ಯಾವುದಾದರೊಂದು ಏರುಪೇರು ಅಥವಾ ಔಷಧಿಗಳ ಅಡ್ಡಪರಿಣಾಮವಾಗಿಯೂ ಕೂದಲು ಉದುರಬಹುದು. ಆದ್ದರಿಂದ ಕೂದಲು ಉದುರುವ ತೊಂದರೆಗೆ ಎಷ್ಟು ಬೇಗನೇ ಕ್ರಮ ಕೈಗೊಳ್ಳುತ್ತೀರೋ ಅಷ್ಟೇ ಉತ್ತಮ. ಇದರಿಂದ ಅಕಾಲಿಕ ಬಕ್ಕತಲೆಯಿಂದ ತಪ್ಪಿಸಿಕೊಳ್ಳಬಹುದು.

ಈ ನಿಟ್ಟಿನಲ್ಲಿ ಹಲವು ಪರಿಣಾಮಕಾರಿ ಕ್ರಮಗಳು ಲಭ್ಯವಿದ್ದು ಇವನ್ನು ಮನೆಯಲ್ಲಿಯೇ ಅನುಸರಿಸಬಹುದು. ಇಂತಹ ಒಂದು ಆರೋಗ್ಯಕರ ಮತ್ತು ಸುಲಭವಾದ ಕ್ರಮವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬೋಲ್ಡ್ ಸ್ಕೈ ತಂಡ ಹರ್ಷಿಸುತ್ತಿದೆ. ಈ ವಿಧಾನದಿಂದ ಕೂದಲು ಉದುರುವುದನ್ನು ತಡೆಗಟ್ಟುವ ಜೊತೆಗೇ ಕೂದಲು ಬೆಳೆಯಲೂ ನೆರವಾಗುತ್ತದೆ. ಇದಕ್ಕೆ ಬೇಕಾಗಿರುವುದು ನಿಮ್ಮ ಅಡುಗೆ ಮನೆಯಲ್ಲಿ ಸದಾ ಇರುವ ಎರಡು ಮುಖ್ಯ ಸಾಮಾಗ್ರಿಗಳು ಮಾತ್ರ. ಅವೆಂದರೆ ಕೊಬ್ಬರಿ ಎಣ್ಣೆ ಮತ್ತು ಮೆಂತೆ ಅಷ್ಟೇ.

Try This Ultimate DIY Hair Pack To Prevent Hair Loss

ಕೂದಲು ಉದುರುವುದನ್ನು ನಿಲ್ಲಿಸಲು ಈ ವಿಧಾನ ಫಲಪ್ರದವೆಂದು ಹಲವು ಪ್ರಯೋಗಗಳ ಮೂಲಕ ಕಂಡುಕೊಳ್ಳಲಾಗಿದೆ. ಮೆಂತೆಯಲ್ಲಿ ಹಲವು ಆರೋಗ್ಯಕರ ಮತ್ತು ಸೌಂದರ್ಯವರ್ಧಕ ಶಕ್ತಿಗಳಿವೆ. ಇವು ಕೂದಲ ಬುಡಕ್ಕೆ ಹೆಚ್ಚಿನ ಪೋಷಣೆ ನೀಡುವ ಜೊತೆಗೇ ಘಾಸಿಗೊಂಡಿದ್ದ ಕೂದಲನ್ನು ರಿಪೇರಿಗೊಳಿಸಲೂ ಸಾಧ್ಯವಾಗುತ್ತದೆ. ಕೂದಲ ಪೋಷಣೆಗಾಗಿ ಮೆಂತೆಯನ್ನು ಶತಮಾನಗಳಿಂದ ಭಾರತದಲ್ಲಿ ಬಳಸಲ್ಪಡುತ್ತಾ ಬರಲಾಗಿದೆ. ಕೂದಲುದುರುವ ಸಮಸ್ಯೆ: ಆಹಾರ ಕ್ರಮ ಹೀಗಿರಲಿ

ಮೆಂತೆಕಾಳಿನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ, ಪ್ರೋಟೀನು, ಕಬ್ಬಿಣ, ಪೊಟ್ಯಾಶಿಯಂ ಮೊದಲಾದ ಪೋಷಕಾಂಶಗಳಿವೆ. ಕೂದಲ ಪೋಷಣೆಗೆ ಅತ್ಯುತ್ತಮವಾದ ಇನ್ನೊಂದು ಸಾಮಾಗ್ರಿ ಎಂದರೆ ಕೊಬ್ಬರಿ ಎಣ್ಣೆ. ಕೊಬ್ಬರಿ ಎಣ್ಣೆಯಲ್ಲಿಯೂ ಕೂದಲ ಪೋಷಣೆ, ಬೆಳವಣಿಗೆ ಮತ್ತು ನೀಳತನ ನೀಡುವ ಹಲವಾರು ಪೋಷಕಾಂಶಗಳಿವೆ. ಮೆಂತೆ ಮತ್ತು ಕೊಬ್ಬರಿ ಎಣ್ಣೆಯ ಜೋಡಿ ಕೂದಲ ಪೋಷಣೆಗೆ ಅತ್ಯುತ್ತಮವಾಗಿದೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ:

ಅಗತ್ಯವಿರುವ ಸಾಮಾಗ್ರಿಗಳು
*ಒಂದು ದೊಡ್ಡ ಚಮಚ ಮೆಂತೆಕಾಳುಗಳು
*ಎರಡು ದೊಡ್ಡ ಚಮಚ ಕೊಬ್ಬರಿ ಎಣ್ಣೆ.

ತಯಾರಿಸುವ ವಿಧಾನ
*ಮೊದಲು ಮೆಂತೆಯನ್ನು ಕೊಂಚ ನೀರಿನಲ್ಲಿ ಇಡಿಯ ರಾತ್ರಿ ನೆನೆಸಿಡಿ.
*ಬೆಳಿಗ್ಗೆ ಈ ಕಾಳುಗಳನ್ನು ನೀರಿನಿಂದ ಹೊರತೆಗೆದು ಮಿಕ್ಸಿಯಲ್ಲಿ ನುಣ್ಣಗೆ ಅರೆಯಿರಿ.
*ಅರೆದ ಕಾಳುಗಳಿಗೆ ಕೊಬ್ಬರಿ ಎಣ್ಣೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.
*ಈ ಮಿಶ್ರಣವನ್ನು ಇಡಿಯ ತಲೆಗೆ ಮತ್ತು ಕೂದಲ ತುದಿಯವರೆಗೆ ನಯವಾದ ಮಸಾಜ್‌ನೊಂದಿಗೆ ಹಚ್ಚಿ
*ಈ ಲೇಪನದ ಮೇಲೆ ಧೂಳು ಕೂರದಂತೆ ಶವರ್ ಕ್ಯಾಪ್ ಅಥವಾ ತೆಳುವಾದ ಬಣ್ಣೆಯನ್ನು ಕಟ್ಟಿಕೊಳ್ಳಿ. ಸುಮಾರು ಇಪ್ಪತ್ತೈದರಿಂದ ಮೂವತ್ತು ನಿಮಿಷ ಹಾಗೇ ಒಣಗಲು ಬಿಡಿ. ಬಳಿಕ ಸೌಮ್ಯ ಶಾಂಪೂ ಬಳಸಿ ತಣ್ಣೀರು ಅಥವಾ ಉಗುರುಬೆಚ್ಚನೆಯ ನೀರು ಬಳಸಿ ಸ್ನಾನ ಮಾಡಿ.

English summary

Try This Ultimate DIY Hair Pack To Prevent Hair Loss

Have you been seeing more strands of hair in your hair brush than on your head? If so, then you must not take it lightly. Hair loss, though a highly common problem, can hamper your look to a great extent. Common factors like pollution, hormonal imbalance, bad lifestyle habits, unhealthy diet, etc, So, today at Boldsky, we will be sharing with you the ultimate DIY hair pack that will prevent hair loss, strengthen your tresses and promote a good hair growth.
X
Desktop Bottom Promotion