ಕೂದಲು ತುಂಡಾಗಿ ಬಾಚಣಿಗೆಯಲ್ಲಿ ಬರುತ್ತಿದೆಯೇ? ಹೀಗೆ ಮಾಡಿ

By Manu
Subscribe to Boldsky

ಪ್ರತಿಬಾರಿ ಬಾಚಣಿಗೆಯಿಂದ ಬಾಚಿಕೊಂಡಾಗಲೂ ಕೆಲವು ಕೂದಲುಗಳು ತುಂಡಾಗಿ ಬಾಚಣಿಗೆಯಲ್ಲಿ ಉಳಿಯುತ್ತಿವೆಯೇ? ಇದನ್ನು ನೋಡಿದಾಗ ಹೃದಯವೇ ಬಾಯಿಗೆ ಬಂದಂತಾಗುತ್ತಿದೆಯೇ? ಇದಕ್ಕೆ ನಿಮ್ಮ ಆರೈಕೆಯಲ್ಲಿ ಏನೋ ಕೊರತೆ ಇರಬಹುದು. ಏಕೆಂದರೆ ಗಾಢ, ನೀಳ ಕೂದಲು ಆರೋಗ್ಯದ ಲಕ್ಷಣವಾಗಿದೆ. ಆದರೂ ಈ ಭಾಗ್ಯ ಇರುವುದು ಕೆಲವರಿಗೆ ಮಾತ್ರ. ಇವರಿಗೆ ನಿಸರ್ಗ ಅಪ್ಪಟ ರೇಷ್ಮೆಯಂತಹ ಕೂದಲು ಮತ್ತು ಕಲೆಯಿಲ್ಲದ ತ್ವಚೆಯ ಉಡುಗೊರೆ ನೀಡಿದೆ. ಆದರೆ ಉಳಿದವರಿಗೆ ಈ ಸೌಂದರ್ಯವನ್ನು ಪಡೆಯಲು ಕೊಂಚ ಆರೈಕೆ ಮತ್ತು ಪೋಷಣೆ ನೀಡುವುದು ಅನಿವಾರ್ಯವಾಗಿದೆ.

ಹೆಚ್ಚಿನವರಿಗೆ ನಿಸರ್ಗ ಉತ್ತಮ ಕೂದಲು ಮತ್ತು ತ್ವಚೆಯನ್ನು ನೀಡಿದ್ದರೂ ವಾತಾವರಣದ ವೈಪರೀತ್ಯಗಳ ಕಾರಣದಿಂದ ಕೆಲವು ತೊಂದರೆಗಳಿಗೆ ಒಳಗಾಗಬಹುದು. ಗಾಳಿಯಲ್ಲಿನ ಧೂಳು, ಪರಾಗ, ರಕ್ತದಲ್ಲಿ ಸೇರಿಸ್ರುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳು, ಚರ್ಮಕ್ಕೆ ಅಂಟಿಕೊಂಡಿರುವ ಬ್ಯಾಕ್ಟೀರಿಯಾಗಳು ಮೊದಲಾದವು ತಲೆಗೂದಲು, ತಲೆಗೂದಲ ಬುಡದ ಚರ್ಮವನ್ನು ಘಾಸಿಗೊಳಿಸಿ ಹಲವು ತೊಂದರೆಗಳನ್ನು ಹುಟ್ಟುಹಾಕಬಹುದು.     ಅಚ್ಚರಿ ಲೋಕಕ್ಕೆ ತಳ್ಳುವ ಕೊಬ್ಬರಿ ಎಣ್ಣೆಯ ಕಮಾಲ್...

ಪರಿಣಾಮವಾಗಿ ಕೂದಲು ಉದುರುವುದು, ತಲೆಹೊಟ್ಟು, ಕೂದಲು ತುಂಡಾಗುವುದು ಇತ್ಯಾದಿಗಳು ಎದುರಾಗುತ್ತದೆ. ಆದ್ದರಿಂದ ಇವುಗಳೆಲ್ಲವನ್ನೂ ಎದುರಿಸಿ ಉತ್ತಮ ಆರೋಗ್ಯವಂತ ಚರ್ಮ ಮತ್ತು ಕೂದಲು ಪಡೆಯಬೇಕಾದರೆ ಉತ್ತಮ ಆಹಾರ ಸೇವಿಸುವುದರ ಜೊತೆಗೇ ಚರ್ಮದ ಮತ್ತು ಕೂದಲಿಗೆ ಹೊರಗಿನಿಂದ ಪೋಷಣೆಯನ್ನು ನೀಡುವುದೂ ಅಗತ್ಯವಾಗಿದೆ. ಈ ಕೆಲಸಗಳನ್ನು ಮಾಡಲು ಕೊಬ್ಬರಿ ಎಣ್ಣೆ ಅತ್ಯುತ್ತಮವಾಗಿದ್ದು ಘನವಾದ ಮತ್ತು ನೀಳವಾದ ಕೂದಲು ಬೆಳೆಯಲು ಸಾಧ್ಯವಾಗುತ್ತದೆ. ಇದಕ್ಕಾಗಿ ಕೊಬ್ಬರಿ ಎಣ್ಣೆಯನ್ನು ಬಳಸಿ ಕೂದಲ ಕ್ರೀಂ ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ: ಕೂದಲ ಕ್ರೀಂ ತಯಾರಿಸುವ ರೆಸಿಪಿ:

Try This Homemade Hair Mask For Thick, Long Hair
 

ಅಗತ್ಯವಿರುವ ಸಾಮಾಗ್ರಿಗಳು:

*ಕೊಬ್ಬರಿ ಎಣ್ಣೆ: ಎರಡು ದೊಡ್ಡಚಮಚ

*ಕರಿಬೇವಿನ ಎಲೆಗಳು: ನಾಲ್ಕರಿಂದ ಐದು

ಕರಿಬೇವಿನ ಎಲೆಗಳನ್ನು ಅರೆದು ಮಾಡಿದ ದ್ರವ ಕೂದಲಿಗೆ ಬುಡದಿಂದ ಪೋಷಣೆ ನೀಡಲು ಸಮರ್ಥವಾಗಿದೆ ಹಾಗೂ ಈ ಪೋಷಣೆಯನ್ನು ಉಳಿಸಿಕೊಳ್ಳಲೂ ನಿಯಮಿತವಾಗಿ ಉಪಯೋಗಿಸುವುದು ಅಗತ್ಯವಾಗಿದೆ. ಈ ಲೇಪನ ಕೂದಲ ಬುಡಕ್ಕೆ ಹೆಚ್ಚಿನ ಪ್ರಚೋದನೆ ನೀಡಿ ಕೂದಲ ಬುಡದಲ್ಲಿ ಹೆಚ್ಚಿನ ನೈಸರ್ಗಿಕ ತೈಲ ಉತ್ಪತ್ತಿಯಾಗುವಂತೆ ಮಾಡುವ ಮೂಲಕ ಬುಡ ದೃಢವಾಗಿಸುತ್ತದೆ. ಅಲ್ಲದೇ ಇಲ್ಲಿಂದ ಬೆಳೆಯುವ ಕೂದಲು ದಪ್ಪನಾಗಿದ್ದು ದೃಢವೂ ಆಗಿರುತ್ತದೆ.

ಕೊಬ್ಬರಿ ಎಣ್ಣೆಯಲ್ಲಿ ತೇವಕಾರಕ ಗುಣವಿದ್ದು ಕೂದಲಿಗೆ ಮತ್ತು ಕೂದಲ ಬುಡದ ಚರ್ಮಕ್ಕೆ ಅಗತ್ಯವಿರುವ ಆದ್ರತೆಯನ್ನು ನೀಡುತ್ತದೆ. ಪರಿಣಾಮವಾಗಿ ಕೂದಲು ರೇಶ್ಮೆಯಂತೆ ನುಣ್ಣಗೆ ಮತ್ತು ಹೊಳಪುಳ್ಳದ್ದಾಗಿರಲು ಸಾಧ್ಯವಾಗುತ್ತದೆ. ಕೊಬ್ಬರಿ ಎಣ್ಣೆ ಮತ್ತು ಕರಿಬೇವಿನ ಎಲೆಗಳನ್ನು ಮಿಶ್ರಣ ಮಾಡಿದ ದ್ರವ ಎಲ್ಲಾ ಗುಣಗಳನ್ನು ಹೊಂದಿರುವ ದ್ರವವಾಗಿದ್ದು ಕೂದಲಿಗೆ ಅತ್ಯುತ್ತಮ ಆರೈಕೆ ದೊರಕಲು ಸಾಧ್ಯವಾಗುತ್ತದೆ. ಇದರ ಇನ್ನೊಂದು ಪ್ರಬಲ ಪ್ರಯೋಜನವೆಂದರೆ ಈಗತಾನೇ ನೆರೆಯತೊಡಗಿರುವ ಕೂದಲನ್ನು ಮತ್ತೆ ಕಪ್ಪಗಾಗಿಸಲು ನೆರವಾಗುತ್ತದೆ. ಒಟ್ಟಾರೆಯಾಗಿ ಗಾಢ, ದಟ್ಟನೆಯ ಮತ್ತು ನೀಳವಾದ ಕೇಶವನ್ನು ಪಡೆಯಲು ಸಾಧ್ಯವಾಗುತ್ತದೆ.

Try This Homemade Hair Mask For Thick, Long Hair
 

ಈ ಲೇಪವನ್ನು ತಯಾರಿಸುವ ವಿಧಾನ      ಅಬ್ಬಬ್ಬಾ..! ಕರಿಬೇವಿನ ಸೊಪ್ಪಿನಿ೦ದ ಏನೆಲ್ಲಾ ಪ್ರಯೋಜನಗಳಿವೆ ನೋಡಿ?

1) ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ನಾಲ್ಕರಿಂದ ಐದು ಕರಿಬೇವಿನ ಎಲೆಗಳನ್ನು ನುಣ್ಣಗೆ ಅರೆಯಿರಿ.

2) ಇದಕ್ಕೆ ಎರಡು ದೊಡ್ಡಚಮಚ ಕೊಬ್ಬರಿ ಎಣ್ಣೆ ಹಾಕಿ ಮಿಶ್ರಣ ಮಾಡಿ.

3) ಈ ಮಿಶ್ರಣವನ್ನು ಒಂದು ಚಿಕ್ಕ ಪಾತ್ರೆಯಲ್ಲಿ ಹಾಕಿ ಚಿಕ್ಕ ಉರಿಯಲ್ಲಿ ಕೊಂಚವೇ ಬಿಸಿಮಾಡಿ, ಉರಿ ನಂದಿಸಿ.

4) ಈ ಮಿಶ್ರಣವನ್ನು ಕೊಂಚ ಉಗುರುಬಿಸಿ ಇದ್ದಂತೆಯೇ ತಲೆಗೆ ಹಚ್ಚಿ. ಪ್ರತಿ ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚಿ.

5) ಕೂದಲ ಬುಡಕ್ಕೆ ಈ ಮಿಶ್ರಣದಿಂದ ಬೆರಳುಗಳ ತುದಿಯಿಂದ ನಯವಾಗಿ ಮಸಾಜ್ ಮಾಡಿ

6) ಈ ಎಣ್ಣೆಯನ್ನು ಹಚ್ಚಿದ ಬಳಿಕ ಸುಮಾರು ಹದಿನೈದು ನಿಮಿಷ ಹಾಗೇ ಬಿಡಿ.

7) ಬಳಿಕ ಉಗುರುಬೆಚ್ಚನೆಯ ನೀರಿನಿಂದ ಮತ್ತು ಸೌಮ್ಯ ಶಾಂಪೂ ಬಳಸಿ ಸ್ನಾನ ಮಾಡಿ.

8) ಸ್ನಾನದ ಬಳಿಕ ಟವೆಲ್ ನಿಂದ ಕೂದಲನ್ನು ಒತ್ತಿ ಒರೆಸಿಕೊಳ್ಳಿ

9) ಈ ವಿಧಾನವನ್ನು ವಾರಕ್ಕೊಮ್ಮೆ ಅನುಸರಿಸಿ. ಕೂದಲಿಗೆ ಹೆಚ್ಚಿನ ಪೋಷಣೆ ಅಗತ್ಯವಿದೆ ಅನ್ನಿಸಿದರೆ ವಾರಕ್ಕೆರಡು ಬಾರಿ ಅನುಸರಿಸಬಹುದು.

For Quick Alerts
ALLOW NOTIFICATIONS
For Daily Alerts

    English summary

    Try This Homemade Hair Mask For Thick, Long Hair

    Does your heart break a little each time you brush your hair and you see a clump of hair in your brush? Is your hair getting thinner by the day? If yes, then it is time that you did something about the deteriorating health of your tresses! so Today, learn how to make the coconut oil and curry leaves hair mask, which is very effective in making your hair thick and long, with regular use.
    Story first published: Saturday, May 28, 2016, 8:04 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more