For Quick Alerts
ALLOW NOTIFICATIONS  
For Daily Alerts

ತಲೆ ಕೂದಲಿನ ಆರೈಕೆಗೆ ಎಳ್ಳೆಣ್ಣೆಯ ಪೋಷಣೆ

By Arshad
|

ನೀರಿನಂತೆ ತೆಳ್ಳಗಿರುವ ಎಳ್ಳೆಣ್ಣೆ ವಿವಿಧ ರೀತಿಯಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದರ ಜಾರುವಿಕೆಯ ಗುಣದ ಕಾರಣ ಹಿಂದಿನ ಕಾಲದಿಂದಲೂ ಕೀಲುಗಳಿಗೆ ಜಾರುಕವಾಗಿ ಬಳಸಲ್ಪಡುತ್ತಾ ಬರಲಾಗಿದೆ. ಗಾಯಗಳನ್ನು ಶೀಘ್ರವಾಗಿ ಮಾಗಿಸುವ ಗುಣದ ಕಾರಣ ಇದನ್ನು ಗಾಯಗಳಿಗೆ ಹಚ್ಚಲು ಉಪಯೋಗಿಸಲಾಗುತ್ತದೆ. ಇದರ ಬಳಕೆ ಕೂದಲ ಆರೈಕೆಗೂ ಉಪಯುಕ್ತ ಎಂಬುದನ್ನು ಸಂಶೋಧನೆಗಳು

ಸಾಬೀತುಪಡಿಸಿವೆ. ಇದರಲ್ಲಿ ಉತ್ತಮ ಪ್ರಮಾಣದಲ್ಲಿರುವ ವಿಟಮಿನ್ ಇ. ಬಿ.ಕಾಂಪ್ಲೆಕ್ಸ್, ಕ್ಯಾಲ್ಸಿಯಂ, ಮೆಗ್ನೀಶಿಯಂ, ಗಂಧಕ ಮೊದಲಾದ ವಿವಿಧ ಖನಿಜಗಳು ಹಾಗೂ ಪ್ರೋಟೀನು ಸಹಾ ಇದೆ. ಕೂದಲ ಬುಡದಿಂದ ಪೋಷಣೆ ನೀಡುವ ಮೂಲಕ ಕೂದಲಿಗೆ ದೃಢತೆ ಮತ್ತು ಕಾಂತಿ ನೀಡುವ ಈ ಎಳ್ಳೆಣ್ಣೆ ಅದ್ಭುತಗಳನ್ನೇ ಸಾಧಿಸುತ್ತದೆ.

ಅಲ್ಲದೆ, ಎಳ್ಳೆಣ್ಣೆ ಕೂದಲಿಗೆ ಆಳದಿಂದ ಆರೈಕೆ ನೀಡುವ ಕಾರಣ ಕೂದಲು ನೈಸರ್ಗಿಕ ಹೊಳಪು ಪಡೆಯುತ್ತದೆ ಮತ್ತು ಸೊಂಪಾಗಿ ಬೆಳೆಯುತ್ತದೆ. ಇನ್ನು ಇದರ ನಿಯಮಿತ ಬಳಕೆಯಿಂದ ತಲೆಹೊಟ್ಟು, ಸೀರು, ಹೇನು ಮೊದಲಾದ ತೊಂದರೆಗಳೂ ನಿವಾರಣೆಯಾಗುತ್ತದೆ. ಎಳ್ಳೆಣ್ಣೆಯ ಪೂರ್ಣ ಪ್ರಮಾಣದ ಪ್ರಯೋಜನ ಪಡೆಯಬೇಕು ಎಂದರೆ ರಾತ್ರಿ ಕೂದಲಿಡೀ ನೆನೆಯುವಂತೆ ಎಳ್ಳೆಣ್ಣೆ ಹಚ್ಚಿ ಬೆಳಿಗ್ಗೆ ಸ್ನಾನ ಮಾಡಬೇಕು. ಎಳ್ಳೆಣ್ಣೆ ಇನ್ನೂ ಯಾವ ಯಾವ ರೀತಿಯಲ್ಲಿ ಕೂದಲಿಗೆ ಉತ್ತಮವಾಗಿದೆ ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ...

ಆಳವಾಗಿ ಕಂಡೀಶನ್ ಮಾಡುತ್ತದೆ

ಆಳವಾಗಿ ಕಂಡೀಶನ್ ಮಾಡುತ್ತದೆ

ಕೂದಲ ಆರೈಕೆಗೆ ಕಂಡೀಶನ್ ಮಾಡುವುದು ಅಗತ್ಯ. ಎಳ್ಳೆಣ್ಣೆ ಆಳವಾಗಿ ಕಂಡೀಶನ್ ಮಾಡುವ ಸಾಮರ್ಥ್ಯ ಹೊಂದಿದೆ. ಇದಕ್ಕಾಗಿ ಕೊಂಚ ಎಳ್ಳೆಣ್ಣೆಯನ್ನು ಉಗುರುಬೆಚ್ಚಗಾಗುವಷ್ಟು ಬಿಸಿಮಾಡಿ ನಯವಾದ ಮಸಾಜ್ ಮೂಲಕ ತಲೆಗೆ ಮಸಾಜ್ ಮಾಡಿ. ವಿಶೇಷವಾಗಿ ಕೂದಲ ಬುಡಕ್ಕೆ ನಯವಾದ ಮಸಾಜ್ ಅಗತ್ಯ. ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷದ ಬಳಿಕ ಉಗುರುಬೆಚ್ಚನೆಯ ಬಿಸಿನೀರಿನಿಂದ ತೊಳೆದುಕೊಳ್ಳುವ ಮೂಲಕ ಉತ್ತಮವಾದ ಆರೈಕೆ ದೊರಕುತ್ತದೆ.

ಹಾನಿಯಾಗಿದ್ದ ಕೂದಲನ್ನು ಸರಿಪಡಿಸುತ್ತದೆ

ಹಾನಿಯಾಗಿದ್ದ ಕೂದಲನ್ನು ಸರಿಪಡಿಸುತ್ತದೆ

ಕೂದಲಿಗೆ ವಿವಿಧ ರೀತಿಯಲ್ಲಿ ಹಾನಿ ಉಂಟಾಗುತ್ತದೆ. ಪರಿಣಾಮವಾಗಿ ಕೂದಲು ತುಂಡಾಗುವುದು, ತುದಿ ಸೀಳುವುದು, ತೆಳ್ಳಗಾಗುವುದು ಮೊದಲಾದ ತೊಂದರೆ ಎದುರಾಗುತ್ತದೆ. ಎಳ್ಳೆಣ್ಣೆ ಕೂದಲ ಆಳಕ್ಕೆ ಇಳಿದು ಆರೈಕೆ ನೀಡುವ ಕಾರಣ ಕೂದಲಿಗೆ ಆಗಿದ್ದ ಹಾನಿ ದುರಸ್ತಿಗೊಳ್ಳುತ್ತದೆ. ಕೂದಲ ಬುಡ ಮತ್ತು ಕೂದಲ ಒಳಗಿನಿಂದ ನೀಡುವ ಆರೈಕೆಯ ಕಾರಣ ಶಿಥಿಲವಾಗಿದ್ದ ಕೂದಲು ದೃಢ ಮತ್ತು ಸುಂದರವಾಗುತ್ತದೆ.

ಕೂದಲ ಉದುರುವಿಕೆಯನ್ನು ತಡೆಯುತ್ತದೆ

ಕೂದಲ ಉದುರುವಿಕೆಯನ್ನು ತಡೆಯುತ್ತದೆ

ಕೂದಲ ಉದುರುವಿಕೆಗೆ ಮಾನಸಿಕ ಒತ್ತಡ ಒಂದು ಪ್ರಮುಖ ಕಾರಣ. ಎಳ್ಳೆಣ್ಣೆಯ ಬಳಕೆಯಿಂದ ಮಾನಸಿಕ ಒತ್ತಡ ಕಡಿಮೆಯಾಗುವ ಮೂಲಕ ಕೂದಲ ಉದುರುವಿಕೆ ಬಹುವಾಗಿ ಕಡಿಮೆಯಾಗುತ್ತದೆ. ಎಳ್ಳೆಣ್ಣೆಯಿಂದ ನಯವಾಗಿ ತಲೆಯನ್ನು ಮಸಾಜ್ ಮಾಡುವ ಮೂಲಕ ಒತ್ತಡ ಬಿಡುಗಡೆಯಾಗಲು ಮತ್ತು ಸುಖವಾದ ಮತ್ತು ತಡೆರಹಿತವಾದ ನಿದ್ದೆ ಪಡೆಯಲೂ ಸಾಧ್ಯವಾಗುತ್ತದೆ.

ಹೇನುಗಳನ್ನು ನಿವಾರಿಸುತ್ತದೆ.

ಹೇನುಗಳನ್ನು ನಿವಾರಿಸುತ್ತದೆ.

ತಲೆಯಲ್ಲಿ ಹೇನು ಮತ್ತು ಸೀರುಗಳಾಗಿದ್ದರೆ ಇದರ ಉಪಟಳ ಅನುಭವಿಸಿದವರಿಗೇ ಗೊತ್ತು. ಮಾರುಕಟ್ಟೆಯಲ್ಲಿ ದೊರಕುವ ಹೇನು ನಿವಾರಕ ದ್ರಾವಣಗಳು ಹೇನು ನಿವಾರಿಸಿದರೂ ತಲೆಯ ಚರ್ಮ ಮತ್ತು ಕೂದಲಿಗೆ ಹಾನಿಯುಂಟುಮಾಡಬಹುದು. ಬದಲಿಗೆ ಎಳ್ಳೆಣ್ಣೆ ಮತ್ತು ಇತರ ಅವಶ್ಯಕ ತೈಲದ ಮಿಶ್ರಣ ಬಳಸಿದರೆ ಹೇನು ಮತ್ತು ಸೀರುಗಳು ನಾಶವಾಗುತ್ತವೆ. ಎಳ್ಳೆಣ್ಣೆಯ ಬ್ಯಾಕ್ಟೀರಿಯಾ ನಿವಾರಕಾ ಗುಣ ಮತ್ತು ಶಿಲೀಂಧ್ರ ನಿವಾರಕ ಗುಣ ಹೇನು ಸೀರುಗಳನ್ನು ತೊಡೆಯಲು ಸಮರ್ಥವಾಗಿವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹೇನುಗಳನ್ನು ನಿವಾರಿಸುತ್ತದೆ

ಹೇನುಗಳನ್ನು ನಿವಾರಿಸುತ್ತದೆ

ಇದಕ್ಕಾಗಿ ಸಹಿಸಲು ಸಾಧ್ಯವಾಗುವಷ್ಟು ಎಳ್ಳೆಣ್ಣೆಯನ್ನು ಬಿಸಿಮಾಡಿ ತಲೆಗೂದಲಿಗೆ ಹೆಚ್ಚಿನ ಪ್ರಮಾಣದಲ್ಲಿ ಹಚ್ಚಬೇಕು, ಅಂದರೆ ಹೆಚ್ಚಾಗಿ ಕೆಳಗೆ ಸುರಿಯುವಷ್ಟು. ಸುಮಾರು ಅರ್ಧ ಘಂಟೆ ಬಿಟ್ಟು ಬಿಸಿನೀರಿನಿಂದ ಮತ್ತು ಶಾಂಪೂ ಬಳಸಿ ತೊಳೆದುಕೊಂದು ಚಿಕ್ಕ ಬಾಚಣಿಗೆ ಬಳಸಿ ಬಾಚಿಕೊಳ್ಳಿ. ಹೇನು ಸೀರುಗಳಷ್ಟೂ ಸತ್ತು ನಿವಾರಣೆಯಾಗುತ್ತವೆ.

ಕೂದಲ ಬೆಳವಣಿಗೆಗೆ ಪೂರಕವಾಗಿದೆ

ಕೂದಲ ಬೆಳವಣಿಗೆಗೆ ಪೂರಕವಾಗಿದೆ

ಎಳ್ಳೆಣ್ಣೆ ತಲೆಯ ಚರ್ಮಕ್ಕೆ ನಸುವಾದ ಪ್ರಚೋದನೆ ನೀಡುವ ಮೂಲಕ ರಕ್ತಸಂಚಾರ ಹೆಚ್ಚಿಸಲು ಸಹಕರಿಸುತ್ತದೆ. ಇದರಿಂದ ಕೂದಲ ಬುಡಕ್ಕೆ ಹೆಚ್ಚಿನ ಪೋಷಣೆ ದೊರೆತು ಕೂದಲು ಶೀಘ್ರವಾಗಿ ಮತ್ತು ಉದ್ದವಾಗಿ ಬೆಳೆಯಲು ನೆರವಾಗುತ್ತದೆ. ನಿಯಮಿತ ಉಪಯೋಗದಿಂದ ಕೂದಲ ಗುಣಮಟ್ಟವೂ ಹೆಚ್ಚುತ್ತದೆ. ಪರಿಣಾಮವಾಗಿ ಕೂದಲು ದಟ್ಟ ಮತ್ತು ಗಾಢವಾಗುತ್ತದೆ.

English summary

Top Benefits Of Sesame Oil For Hair

Sesame oil is one of the widely used oils across the globe for its deep nourishing properties, lubrication and healing properties. It has also been scientifically proven that sesame oil benefits the hair in a lot of ways. Sesame oil is rich in vitamin E, B complex and minerals such as calcium, magnesium, phosphorous and protein. in this article, we at Boldsky will be listing out some of the top benefits of using sesame oil for hair care. Read on to know more about it.
Story first published: Wednesday, February 17, 2016, 17:50 [IST]
X
Desktop Bottom Promotion