For Quick Alerts
ALLOW NOTIFICATIONS  
For Daily Alerts

ಕೂದಲಿನ ಸಮಸ್ಯೆಗೂ ಬಾಳೆಹಣ್ಣಿಗೂ ಎತ್ತಿಂದೆತ್ತ ಸಂಬಂಧ..?

By Manu
|

ಎತ್ತಣ ಮಾಮರ ಎತ್ತಣ ಕೋಗಿಲೆ ಎಂಬ ಗಾದೆ ನೆನಪಾಯಿತೇ? ಕೂದಲ ಆರೈಕೆಯಲ್ಲಿ ಬಾಳೆಹಣ್ಣಿಗೇನು ಕೆಲಸ ಎಂದು ಮೊತ್ತ ಮೊದಲಾಗಿ ನಿಮ್ಮ ಮನಸ್ಸಿಗೆ ಬಂದಿರಬಹುದು. ಆದರೆ ದೇಹದ ಹಲವು ತೊಂದರೆಗಳಂತೆಯೇ ಕೂದಲ ತೊಂದರೆಗೂ ಬಾಳೆಹಣ್ಣಿನ ಬಳಿ ಪರಿಹಾರವಿದೆ. ಮಲಬದ್ಧತೆ, ಹಳದಿ ಹಲ್ಲುಗಳು ಮೊದಲಾದ ತೊಂದರೆಗಳ ಜೊತೆಗೆ ಕೂದಲುದುರುವುದನ್ನೂ ಬಾಳೆಹಣ್ಣು ಪ್ರತಿಬಂಧಿಸುತ್ತದೆ. ಅಲ್ಲದೇ ಕೂದಲ ಬುಡದಲ್ಲಿ ಕಡಿಮೆಯಾಗುವ ಪೋಷಕಾಂಶಗಳ ಕಾರಣ ಉದುರುವ ಕೂದಲನ್ನು ತಡೆಯಲು ಬಾಳೆಹಣ್ಣಿನ ಬಳಿ ಸೂಕ್ತ ಅಸ್ತ್ರವಿದೆ.

ಬಾಳೆಹಣ್ಣನ್ನು ನಿತ್ಯವೂ ತಿನ್ನುವ ಜೊತೆಗೇ ಚೆನ್ನಾಗಿ ಹಣ್ಣಾದ ತಿರುಳನ್ನು ಕಿವುಚಿ ದಪ್ಪನಾದ ಲೇಪನವನ್ನು ಕೂದಲ ಬುಡಕ್ಕೆ ಹಚ್ಚುವ ಮೂಲಕವೂ ಉತ್ತಮ ಪೋಷಣೆ ಪಡೆಯಬಹುದು. ಘಾಸಿಗೊಂಡ, ತುದಿ ಸೀಳಿದ ಕೂದಲಿಗೂ ಪರಿಹಾರವಿದೆ. ಬನ್ನಿ ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ...

ಪೋಷಕಾಂಶಗಳ ಗಣಿ

ಪೋಷಕಾಂಶಗಳ ಗಣಿ

ಬಾಳೆಹಣ್ಣಿನಲ್ಲಿ ಉತ್ತಮ ಪ್ರಮಾಣದ ಪೊಟ್ಯಾಶಿಯಂ ಇದೆ. ಇದು ಕೂದಲ ಬುಡ ದೃಢಗೊಳ್ಳಲು ಅಗತ್ಯವಿರುವ ಪ್ರಮುಖ ಖನಿಜವಾಗಿದೆ. ಪ್ರತಿದಿನ ಒಂದು ಬಾಳೆಹಣ್ಣನ್ನು ತಿಂದರೆ ಆ ದಿನದ ಅಗತ್ಯದ 23% ಪೊಟ್ಯಾಶಿಯಂ ಲಭ್ಯವಾಗುತ್ತದೆ. ಆದರೆ ಆಹಾರದಲ್ಲಿ ಉಪ್ಪಿನ ಪ್ರಮಾಣ ಹೆಚ್ಚಿದ್ದರೆ ಉಪ್ಪಿನ ಲವಣಾಂಶಗಳು ಕೂದಲ ಬುಡಕ್ಕೆ ಧಾವಿಸಿ ಪೊಟ್ಯಾಶಿಯಂನ ಪ್ರಭಾವವನ್ನು ಕಡಿಮೆ ಮಾಡುತ್ತವೆ. ಆದ್ದರಿಂದ ಪೊಟ್ಯಾಶಿಯಂ ಕೊರತೆಯಿಂದ ಕೂದಲು ಉದುರುತ್ತಿದ್ದರೆ ಉಪ್ಪು ಕಡಿಮೆ ಮಾಡುವುದು ಮತ್ತು ಬಾಳೆಹಣ್ಣು ತಿನ್ನುವುದನ್ನು ಹೆಚ್ಚಿಸುವುದು ಜಾಣತನ.

ಒಣ ಕೂದಲಿನ ಸಮಸ್ಯೆಗೆ

ಒಣ ಕೂದಲಿನ ಸಮಸ್ಯೆಗೆ

ಒಂದು ಕಳಿತ ಬಾಳೆಹಣ್ಣನ್ನು ಕಿವುಚಿ ಅರ್ಧ ಕಪ್ ಮೊಸರು ಮತ್ತು ಒಂದು ಬೆಣ್ಣೆಹಣ್ಣಿನ ತಿರುಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣ ಕೂದಲಿಗೆ ಹಚ್ಚುವಷ್ಟು ಗಾಢವಾಗಿರಬೇಕು. ಈ ಮಿಶ್ರಣವನ್ನು ಸ್ನಾನಕ್ಕೂ ಮೊದಲು ಕೂದಲ ಬುಡದಿಂದ ತುದಿಯವರೆಗೆ ಹಚ್ಚಿ. ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ಕೂದಲನ್ನು ತೊಳೆದುಕೊಳ್ಳಿ. ಇದರಿಂದ ನಿಮ್ಮ ಕೂದಲು ಅತ್ಯಂತ ಸೌಮ್ಯ ಮತ್ತು ಕಾಂತಿಯುಕ್ತವಾಗುತ್ತದೆ ಹಾಗೂ ಸುಲಭವಾಗಿ ಬಾಚಲು ಮತ್ತು ಗುಂಗುರುಗಳನ್ನು ನಿವಾರಿಸಲು ನೆರವಾಗುತ್ತದೆ.

ಬಾಳೆಹಣ್ಣು ಹಾಗೂ ಜೇನಿನ ಫೇಸ್ ಪ್ಯಾಕ್

ಬಾಳೆಹಣ್ಣು ಹಾಗೂ ಜೇನಿನ ಫೇಸ್ ಪ್ಯಾಕ್

ಬಾಳೆಹಣ್ಣಿನೊಂದಿಗೆ ಕೊಂಚ ಜೇನನ್ನು ಮಿಶ್ರಣ ಮಾಡಿದರೆ ಕೂದಲಿಗೆ ಇನ್ನೂ ಉತ್ತಮ ಪೋಷಣೆ ದೊರೆತು ಕಳೆರಹಿತ ಮತ್ತು ಘಾಸಿಗೊಂಡ ಕೂದಲು ದುರಸ್ತಿಗೊಳ್ಳಲು ನೆರವಾಗುತ್ತದೆ. ಅಲ್ಲದೇ ಈಗಾಗಲೇ ಬಿದ್ದು ಹೋಗಿರುವ ಕೂದಲ ಬುಡದಿಂದ ಹೊಸ ಕೂದಲು ಬೆಳೆಯಲೂ ನೆರವಾಗುತ್ತದೆ. ಒಂದು ಚೆನ್ನಾಗಿ ಕಳಿತ (ಅಂದರೆ ಸಿಪ್ಪೆಯ ಮೇಲಿನ ಚುಕ್ಕೆಗಳು ಗಾಢವಾಗಿ ಕೊಂಚ ದೊಡ್ಡದಾಗಿರುವಾಗ) ಬಾಳೆಹಣ್ಣಿನ ತಿರುಳನ್ನು ಚೆನ್ನಾಗಿ ಕಿವುಚಿ ಒಂದು ದೊಡ್ಡ ಚಮಚ ಜೇನು ಸೇರಿಸಿ ಮಿಶ್ರಣ ತಯಾರಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬಾಳೆಹಣ್ಣು ಹಾಗೂ ಜೇನಿನ ಫೇಸ್ ಪ್ಯಾಕ್

ಬಾಳೆಹಣ್ಣು ಹಾಗೂ ಜೇನಿನ ಫೇಸ್ ಪ್ಯಾಕ್

ಈ ಲೇಪನವನ್ನು ಕೂಡಲೇ ಕೂದಲ ಬುಡದಿಂದ ಪ್ರಾರಂಭಿಸಿ ತುದಿಯವರೆಗೂ ಬೆರಳುಗಳಿಂದ ಚರ್ಮಕ್ಕೆ ನಯವಾದ ಮಸಾಜ್ ಮೂಲಕ ಹಚ್ಚಿ. ಈ ಲೇಪನವನ್ನು ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಹಾಗೇ ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ಮತ್ತು ಸೌಮ್ಯ ಶಾಂಪೂ ಉಪಯೋಗಿಸಿ ತೊಳೆದುಕೊಳ್ಳಿ. ಬಿಸಿನೀರು ಉಪಯೋಗಿಸಬೇಡಿ, ಏಕೆಂದರೆ ಬಾಳೆಹಣ್ಣಿನ ಪೋಷಣೆ ಚರ್ಮ ಪಡೆದುಕೊಂಡಿದ್ದೂ ಇದರಿಂದ ತೊಳೆದುಹೋಗುತ್ತದೆ. ಈ ವಿಧಾನವನ್ನು ವಾರಕ್ಕೆರಡು ಬಾರಿ ಅನುಸರಿಸಿ. ಕೆಲವೇ ವಾರಗಳಲ್ಲಿ ಕೂದಲು ಉದುರುವುದು ನಿಲ್ಲುವುದನ್ನು ಗಮನಿಸುತ್ತೀರಿ. ಒಂದು ತಿಂಗಳ ಬಳಿಕ ಹೊಸಕೂದಲು ಬೆಳೆಯುವುದನ್ನು ನೋಡಿ ಹರ್ಷಿಸಿ.

ಬಾಳೆಹಣ್ಣು ಹಾಗೂ ಲಿಂಬೆ ರಸ

ಬಾಳೆಹಣ್ಣು ಹಾಗೂ ಲಿಂಬೆ ರಸ

ಒಂದು ಕಳಿತ ಬಾಳೆಹಣ್ಣನ್ನು ಕಿವುಚಿ ಮೂರು ದೊಡ್ಡಚಮಚ ಲಿಂಬೆರಸವನ್ನು ಸೇರಿಸಿ ನಯವಾದ ಲೇಪನ ತಯಾರಿಸಿ, ಚೆನ್ನಾಗಿ ಕೂದಲಿನ ಬುಡಕ್ಕೆ ಹಚ್ಚಿಕೊಂಡು ಹತ್ತು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

English summary

Tired of hair fall and damaged hair? Try this banana hair pack!

Be it constipation or yellow teeth, banana tops the list of natural sources to deal with the condition. But what most of you are unaware about is that this humble fruit can help you fight hair fall and also prevent hair loss caused due to nutritional deficiency. In addition to eating a banana a day, you can even try banana hair masks if you have damaged or brittle hair. Read about expert recommended diet plan for fighting hair fall.
Story first published: Friday, February 26, 2016, 16:01 [IST]
X
Desktop Bottom Promotion