ಕಿರಿಕಿರಿ ನೀಡುವ ತಲೆಹೊಟ್ಟಿನ ಸಮಸ್ಯೆಗೆ ಸಿಂಪಲ್ ಮನೆಮದ್ದು

By: Hemanth
Subscribe to Boldsky

ಕಪ್ಪು ಅಂಗಿ ಧರಿಸಿಕೊಂಡು ಯಾವುದೋ ಒಂದು ಕಾರ್ಯಕ್ರಮಕ್ಕೆ ಹೋಗಿರುತ್ತೇವೆ. ಆದರೆ ಅಂಗಿಯಲ್ಲೆಲ್ಲಾ ಬಿಳಿಯ ತಲೆಹೊಟ್ಟು ಬಿದ್ದಿರುತ್ತದೆ. ಇದನ್ನು ನೋಡಿ ತುಂಬಾ ಬೇಸರವಾಗುವುದು ಸಹಜ. ಅದರಲ್ಲೂ ಚಳಿಗಾಲದಲ್ಲಿ ದೇಹವು ಹೆಚ್ಚು ಒಣಗುವುದರಿಂದ ತಲೆ ಬುರುಡೆ ಕೂಡ ಒಣಗಿದಂತಾಗಿ ತಲೆಹೊಟ್ಟು ನಿರ್ಮಾಣವಾಗುತ್ತದೆ. ಇದು ಹೆಚ್ಚಿನವರನ್ನು ತೀವ್ರವಾಗಿ ಕಾಡುತ್ತಿರುತ್ತದೆ. ತಲೆಹೊಟ್ಟನ್ನು ಬೇರು ಸಮೇತಕಿತ್ತು ಹಾಕುವ ಮನೆಮದ್ದು 

ತಲೆಹೊಟ್ಟಿನ ಸಮಸ್ಯೆಯನ್ನು ನಿವಾರಣೆ ಮಾಡಲು ಹಲವಾರು ರೀತಿಯ ಶಾಂಪೂಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರಲ್ಲಿ ರಾಸಾಯನಿಕಗಳ ಬಳಕೆ ಕೂಡ ಇರುತ್ತದೆ. ಇದರಿಂದ ದೂರವಿದ್ದುಕೊಂಡು ನೈಸರ್ಗಿಕವಾಗಿ ತಲೆಹೊಟ್ಟನ್ನು ನಿವಾರಣೆ ಮಾಡಬೇಕಾದರೆ ಮುಂದಕ್ಕೆ ಓದಿಕೊಳ್ಳಿ..... 

ಅಲೋವೆರಾ (ಲೋಳೆಸರ) ಜೆಲ್

ಅಲೋವೆರಾ (ಲೋಳೆಸರ) ಜೆಲ್

ಹಲವಾರು ಆರೋಗ್ಯಕಾರಿ ಗುಣಗಳನ್ನು ಹೊಂದಿರುವ ಅಲೋವೆರಾ ಜೆಲ್ ತಲೆಹೊಟ್ಟನ್ನು ನಿವಾರಿಸಲು ತುಂಬಾ ಪರಿಣಾಮಕಾರಿ. ಫಂಗಲ್ ವಿರೋಧಿ ಗುಣವನ್ನು ಹೊಂದಿರುವಂತಹ ಅಲೋವೆರಾ ಜೆಲ್ ತಲೆಬುರುಡೆಗೆ ಶಮನವನ್ನು ನೀಡುವುದು ಮಾತ್ರವಲ್ಲದೆ ಕಿರಿಕಿರಿ ಕಡಿಮೆ ಮಾಡುವುದು. 'ಅಲೋವೆರಾ'ದ ಫೇಸ್ ಪ್ಯಾಕ್-ಸೌಂದರ್ಯದ ಕೀಲಿಕೈ!

ಅಲೋವೆರಾ (ಲೋಳೆಸರ) ಜೆಲ್

ಅಲೋವೆರಾ (ಲೋಳೆಸರ) ಜೆಲ್

ಅಲೋವೆರಾ ಜೆಲ್ ಚರ್ಮ ಹಾಗೂ ಆರೋಗ್ಯಕ್ಕೆ ಒಳ್ಳೆಯದು. ಐದಾರು ಚಮಚ ಅಲೋವೆರಾ ಜೆಲ್ ತೆಗೆದುಕೊಂಡು ಇದನ್ನು ತಲೆಬುರುಡೆಗೆ ಸರಿಯಾಗಿ ಮಸಾಜ್ ಮಾಡಿಕೊಂಡು 30 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ನೀರಿನಿಂದ ತೊಳೆಯಿರಿ.

ಅಡುಗೆ ಸೋಡಾ

ಅಡುಗೆ ಸೋಡಾ

ಕ್ಷಾರೀಯ ಗುಣ ಹೊಂದಿರುವ ಅಡುಗೆ ಸೋಡಾವನ್ನು ತಲೆಹೊಟ್ಟು ನಿವಾರಣೆಗೆ ಬಳಸಬಹುದು. ಇದು ಸತ್ತ ಚರ್ಮವನ್ನು ಹಗುರವಾಗಿ ತೆಗೆದುಹಾಕುವುದು. ಸ್ವಲ್ಪ ನೀರಿಗೆ ಎರಡು ಚಮಚ ಅಡುಗೆ ಸೋಡಾ ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದನ್ನು ತಲೆಬುರುಡೆಗೆ ಹಚ್ಚಿಕೊಂಡು ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ. ಇದರ ಬಳಿಕ ನೀರು ಅಥವಾ ಶಾಂಪೂವಿನಿಂದ ತಲೆಯನ್ನು ತೊಳೆಯಿರಿ. ಅಡುಗೆ ಸೋಡಾದಿಂದ ಬರೋಬ್ಬರಿ ಏಳು ಪ್ರಯೋಜನಗಳಿವೆ!

ಬೇವು

ಬೇವು

ಪ್ರಕೃತಿಯಲ್ಲೇ ಸಿಗುವಂತಹ ಹಲವಾರು ರೀತಿಯ ಗಿಡಮೂಲಿಕೆಗಳು ಕೂದಲಿನ ಆರೈಕೆಗೆ ಒಳ್ಳೆಯದು. ಅದರಲ್ಲೂ ಬೇವಿನಿಂದ ತಲೆಹೊಟ್ಟನ್ನು ಸುಲಭವಾಗಿ ಹೋಗಲಾಡಿಸಬಹುದು. ಒಂದು ಕಪ್‌ನ ನಾಲ್ಕನೇ ಒಂದು ಭಾಗದಷ್ಟು ಬೇವಿನ ರಸ, ತೆಂಗಿನ ಕಾಯಿ ಹಾಲು, ಬೀಟ್ ರೂಟ್ ಜ್ಯೂಸ್ ಮತ್ತು ಒಂದು ಚಮಚ ತೆಂಗಿನ ಎಣ್ಣೆಯನ್ನು ತೆಗೆದುಕೊಳ್ಳಿ.

ಬೇವು

ಬೇವು

ಇನ್ನು ಎಲ್ಲಾ ಸಾಮಗ್ರಿಗಳನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಇದನ್ನು ತಲೆಬುರುಡೆಗೆ ಹಚ್ಚಿ ಸರಿಯಾಗಿ ಮಸಾಜ್ ಮಾಡಿ. 20 ನಿಮಿಷ ಬಳಿಕ ಗಿಡಮೂಲಿಕೆ ಶಾಂಪೂ ಅಥವಾ ಕಂಡೀಷನರ್ ನಿಂದ ಕೂದಲು ತೊಳೆಯಿರಿ. ಬೇವು: ಕಹಿಯಾದರೂ ಸೌಂದರ್ಯದ ವಿಷಯದಲ್ಲಿ ಸಿಹಿ

ಮೆಂತೆ ಕಾಳು

ಮೆಂತೆ ಕಾಳು

ಎರಡು ಚಮಚದಷ್ಟು ಮೆಂತೆಯನ್ನು ನೀರಿನಲ್ಲಿ ಹಾಕಿಟ್ಟು ರಾತ್ರಿಯಿಡಿ ನೆನೆಸಿಡಿ. ಬೆಳಿಗ್ಗೆ ಮೆಂತೆ ಕಾಳುಗಳನ್ನು ತೆಗೆದು ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಗೆ ಒಂದು ಕಪ್ ಆಪಲ್ ಸೀಡರ್ ವಿನೇಗರ್ ಹಾಕಿ ಅದನ್ನು ತಲೆಬರುಡೆಗೆ ಹಚ್ಚಿಕೊಳ್ಳಿ. 30 ನಿಮಿಷ ಹಾಗೆ ಬಿಟ್ಟು ಬಳಿಕ ಶಾಂಪೂವಿನಿಂದ ತೊಳೆಯಿರಿ. ಕೂದಲು ತೊಳೆದ ಬಳಿಕ ತಲೆಹೊಟ್ಟು ನಿವಾರಣೆಯಾಗುವುದು. ಮೆಂತೆ ಕಾಳು ನೆನೆಸಿದ ನೀರು- ಆಯಸ್ಸು ನೂರು!

 
English summary

Tips to remove dandruff in a natural way

Great-looking hair is something everyone desires, and it is not difficult to achieve -- but dandruff is one problem which is very common during the winter season. Using aloe vera gel or trying a homemade pack of neem can help you in many ways, says beauty expert... have a look
Please Wait while comments are loading...
Subscribe Newsletter