For Quick Alerts
ALLOW NOTIFICATIONS  
For Daily Alerts

ಮಿರಮಿರನೆ ಮಿನುಗುವ ಕೂದಲಿಗೆ ಮೊಟ್ಟೆ -ಮೊಸರಿನ ಮಾಸ್ಕ್

|

ಸುಂದರ ಮತ್ತು ಆರೋಗ್ಯಕರ ಕೂದಲು ಮಹಿಳೆಯರ ರಹಸ್ಯ ಸೌಂದರ್ಯ ಗುಟ್ಟಾಗಿದೆ. ನಿಮ್ಮ ಅಂದವನ್ನು ಹೆಚ್ಚಿಸುವ ಲಕಲಕನೇ ಹೊಳೆಯುವ ಕೇಶರಾಶಿಗೆ ಮನಸೋಲದವರು ಯಾರೂ ಇರಲಿಕ್ಕಿಲ್ಲ. ಆದರೆ ನಿಮ್ಮ ಕೂದಲು ಮಿರಮಿರನೆ ಮಿಂಚಲು ದೈನಂದಿನ ಕೂದಲಿನ ಕಾಳಜಿಯ ಜೊತೆಗೆ ಕೆಲವೊಂದು ಹೊಸ ವಿಧಾನಗಳನ್ನು ನೀವು ಅನುಸರಿಸಲೇಬೇಕು. ಈ ಹೊಸ ವಿಧಾನಗಳು ರಾಸಾಯನಿಕ ರಹಿತವಾಗಿರಬೇಕು ಮತ್ತು ನಿಮ್ಮ ಕೂದಲನ್ನು ಆರೋಗ್ಯವಂತವಾಗಿ ನಳನಳಿಸುವಂತೆ ಮಾಡಬೇಕು.

ಅದಕ್ಕೆಂದೇ ಇಂದಿನ ಲೇಖನದಲ್ಲಿ ಮೊಟ್ಟೆ ಹಾಗೂ ಮೊಸರಿನ ಸಮಮಿಶ್ರಣದಿಂದ ತಯಾರಿಸಲಾದ ಹೇರ್ ಪ್ಯಾಕ್ ವಿಧಾನವನ್ನು ನಿಮಗೆ ತಿಳಿಸಲಿದ್ದೇವೆ. ಮೊಟ್ಟೆಯ ವಾಸನೆಯಿಂದಾಗಿ ಅದನ್ನು ದೂರವಿಡುವವರೇ ಹೆಚ್ಚು ಆದರೆ ನಿಮ್ಮ ಕೂದಲಿನ ವಿಷಯಕ್ಕೆ ಬಂದಾಗ ಇದೊಂದು ಅದ್ಭುತ ಸಂಜೀವಿನಿಯಾಗಿದೆ. ಕೂದಲನ್ನು ಬಲಪಡಿಸಿ ಹೊಳೆಯುವಂತೆ ಮಾಡುವ ಗುಣ ಮೊಟ್ಟೆಗಿದೆ. ಮೊಟ್ಟೆಯು ಪ್ರೋಟೀನ್ ಅನ್ನು ಮಾತ್ರ ಒಳಗೊಂಡಿರದೇ ವಿಟಮಿನ್‌ಗಳು, ಮಿನರಲ್‌ಗಳು ಮತ್ತು ನಿಮ್ಮ ಕೂದಲಿನ ಬುಡಕ್ಕೆ ನೇರವಾಗಿ ಪೂರೈಕೆಯಾಗುವ ನ್ಯೂಟ್ರಿನ್‌ಗಳನ್ನು ಒಳಗೊಂಡಿದೆ. ಕೂದಲನ್ನು ಲಕಲಕ ಹೊಳೆಯುವಂತೆ ಮಾಡಲು 5 ಟಿಪ್ಸ್

Steps To Apply Yogurt And Egg On Hair

ಇನ್ನು ಮೊಟ್ಟೆಯೊಂದಿಗೆ ಮಿಶ್ರಮಾಡಿಕೊಳ್ಳುವ ಮೊಸರು ತನ್ನ ಮಾಯಿಶ್ಚರೈಸಿಂಗ್ ಗುಣದಿಂದ ಪ್ರಸಿದ್ಧಿಯಾಗಿದೆ. ಕೂದಲಿನ ಸ್ವಾಭಾವಿಕ ಕಂಡೀಶನಿಂಗ್ ಅನ್ನು ಮಾಡುವ ಮೊಸರು ಕೂದಲಿನ ಹೊಳಪಿಗೆ ಕಾರಣ. ಆಳವಾದ ಪ್ರೋಟೀನ್ ಚಿಕಿತ್ಸೆಯನ್ನು ನಿಮ್ಮ ಕೂದಲಿಗೆ ಮೊಸರು ಮಾಡುತ್ತದೆ. ಹಾಗಿದ್ದರೆ ಇವೆರಡರ ಬಳಕೆಯನ್ನು ನಿಮ್ಮ ಕೂದಲಿಗೆ ಯಾವ ರೀತಿಯಲ್ಲಿ ಮಾಡುವುದು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿಸಲಿದ್ದೇವೆ.

ಮೊಟ್ಟೆ, ಮೊಸರು ಹಾಗೂ ಆಲೀವ್ ಎಣ್ಣೆ
ಮೊಟ್ಟೆ ಹಾಗೂ ಮೊಸರುಗಳೆರಡರಲ್ಲಿಯೂ ಪ್ರೋಟೀನ್ ಅಂಶ ಅಧಿಕವಾಗಿದ್ದು, ಇವು ಮೊಟ್ಟೆಯ ಹೇರ್ ಪ್ಯಾಕ್ ಅನ್ನು ಪ್ರೋಟೀನ್ ಭರಿತ ಹೇರ್ ಪ್ಯಾಕ್ ಅನ್ನಾಗಿಸುತ್ತವೆ. ಹಾಗಾಗಿ ನೀವು ಮಾಡಬೇಕಾದದು ಇಷ್ಟೇ, ಎರಡು ಟೇಬಲ್ ಚಮಚಗಳ ತು೦ಬಾ ಮೊಸರು, ಹಾಗೂ ಎರಡು ಟೇಬಲ್ ಚಮಚಗಳ ತು೦ಬಾ ಆಲಿವ್ ಎಣ್ಣೆಯನ್ನು ಪಡೆದುಕೊಳ್ಳಿರಿ. ಇವೆಲ್ಲವುಗಳನ್ನೂ ಚೆನ್ನಾಗಿ ಮಿಶ್ರಗೊಳಿಸಿರಿ. ಇವುಗಳ ಮಿಶ್ರಣದ ಸಮಪಾಕವು ನಿಮಗೆ ಲಭ್ಯವಾದಾಗ, ಮಿಶ್ರಣವು ಬಳಕೆಗೆ ಸಿದ್ಧಗೊ೦ಡ೦ತೆಯೇ. ಮಿಶ್ರಣವನ್ನು ಸಮನಾಗಿ ಕೂದಲ ಎಳೆಗಳು ಹಾಗೂ ನೆತ್ತಿಯ ಮೇಲೆ ಲೇಪಿಸಿಕೊಳ್ಳಿರಿ ಹಾಗೂ ಕನಿಷ್ಠ ಪಕ್ಷ ಅರ್ಧಗಂಟೆಯವರೆಗೆ ಅದನ್ನು ಕೂದಲ ಮೇಲೆ ಹಾಗೆಯೇ ಇರಗೊಡಿರಿ. ಬಳಿಕ ತಣ್ಣೀರು ಹಾಗೂ ಶ್ಯಾ೦ಪೂವನ್ನು ಬಳಸಿಕೊ೦ಡು ಕೂದಲನ್ನು ತೊಳೆದು ಬಿಡಿರಿ.

ಮಾಸ್ಕ್ ಸಿದ್ಧಪಡಿಸಿ
ನಿಮ್ಮ ಕೂದಲು ಒಣವಾಗಿದ್ದರೆ, ಪೂರ್ತಿ ಮೊಟ್ಟೆಯನ್ನು ಬಳಸಿ. ಕೂದಲು ಎಣ್ಣೆಯುಕ್ತವಾಗಿದ್ದಲ್ಲಿ, ಮೊಟ್ಟೆಯ ಬಿಳಿ ಭಾಗವನ್ನು ಬಳಸಿದರೆ ಸಾಕು. ಇದಕ್ಕೆ 2-3 ಚಮಚದಷ್ಟು ಮೊಸರನ್ನು ಬಳಸಿ. ನಿಮ್ಮ ಕೂದಲಿನ ಪ್ರಮಾಣವನ್ನು ಅನುಸರಿಸಿ ಮೊಸರಿನ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬಹುದು. ಇನ್ನು ಎಣ್ಣೆ ಅಂಶವನ್ನು ನಿಮ್ಮ ಕೂದಲಿಗೆ ನೀವು ಹೆಚ್ಚು ಪಡೆದುಕೊಳ್ಳಬೇಕು ಎಂದಾದಲ್ಲಿ ತೆಂಗಿನೆಣ್ಣೆ ಅಥವಾ ಆಲೀವ್ ಎಣ್ಣೆಯನ್ನು ಬಳಸಿ. ಏನೇ ಹೇಳಿ ಕೂದಲುದುರುವ ಸಮಸ್ಯೆಗೆ ಮನೆಮದ್ದೇ ಸರಿ

ಕೂದಲು ಮತ್ತು ಬುಡಕ್ಕೆ ಹಚ್ಚಿರಿ
ಕೂದಲಿನ ಬುಡದಿಂದ ತುದಿಯವರೆಗೆ ಹೇರ್ ಮಾಸ್ಕ್ ಅನ್ನು ಹಚ್ಚಿಕೊಳ್ಳಿ. ತಲೆಬುಡಕ್ಕೆ ನೀವು ಮಾಸ್ಕ್ ಹಚ್ಚಿಕೊಳ್ಳಲೇಬೇಕು. ಇನ್ನು ತಲೆಬುರುಡೆಯ ರಕ್ತಸಂಚಾರವನ್ನು ಹೆಚ್ಚಿಸಿಕೊಳ್ಳಲು ಈ ಮಾಸ್ಕ್ ಅನ್ನು ವೃತ್ತಾಕಾರವಾಗಿ ಮಸಾಜ್ ಮಾಡಿಕೊಳ್ಳಿ. ಕೂದಲಿನ ಕಿರುಕೋಶಗಳನ್ನು ಉತ್ತೇಜಿಸುವ ಮೂಲಕ ಕೂದಲಿನ ಬೆಳವಣಿಗೆಯನ್ನು ಮಾಡಲು ಮಸಾಜ್ ಸಹಾಯಕವಾಗಿದೆ.

ತುರುಬು ಹಾಕಿಕೊಳ್ಳಿ
ಮಾಸ್ಕ್ ಅನ್ನು ಕೂದಲಿಗೆ ಹಚ್ಚಿಕೊಂಡ ನಂತರ ತುರುಬು ಕಟ್ಟಿಕೊಳ್ಳಿ ಅಥವಾ ಟವೆಲ್ ಇಲ್ಲವೇ ಶವರ್ ಕ್ಯಾಪ್‌ನಿಂದ ಕೂದನ್ನು ಕವರ್ ಮಾಡಿಕೊಳ್ಳಿ. ಹದಿನೈದರಿಂದ ಮೂವತ್ತು ನಿಮಿಷಗಳವರೆಗೆ ಇದನ್ನು ಹಾಗೆಯೇ ಬಿಡಿ. ತಲೆಬುರುಡೆಗೆ ಮತ್ತು ಕೋಶಗಳ ಚೀಲಕ್ಕೆ ಅಗತ್ಯವಾಗಿರುವ ನ್ಯೂಟ್ರಿನ್‌ಗಳು ಈ ಸಮಯದಲ್ಲಿ ಸೇರಿಕೊಳ್ಳುತ್ತವೆ.

ಶ್ಯಾಂಪೂ ಬಳಸಿ ತೊಳೆದುಕೊಳ್ಳಿ
ಅರ್ಧ ಗಂಟೆಯ ನಂತರ ಮಾಸ್ಕ್ ಚೆನ್ನಾಗಿ ಒಣಗಿದೆ ಎಂದಾದಲ್ಲಿ, ತಣ್ಣೀರಿನಿಂದ ಕೂದಲು ತೊಳೆದುಕೊಳ್ಳಿ. ಮೊಟ್ಟೆಯ ವಾಸನೆ ಅಸಹನೀಯ ಎಂದಾದಲ್ಲಿ ಮೈಲ್ಡ್ ಶಾಂಪೂವನ್ನು ಬಳಸಿ ತಲೆ ತೊಳೆದುಕೊಳ್ಳಿ. ನೆನಪಿಟ್ಟುಕೊಳ್ಳಿ ಗಡುಸಾದ ಶಾಂಪೂವಿನ ಬಳಕೆ ಕೂದಲನ್ನು ಬಿರುಸಾಗಿಸುತ್ತದೆ. ಮೊಟ್ಟೆ ಮತ್ತು ಮೊಸರಿನ ಹೇರ್ ಮಾಸ್ಕ್ ಬಳಕೆಯನ್ನು ನಿಮ್ಮ ಕೂದಲಿಗೆ ವಾರಕ್ಕೊಮ್ಮೆಯಾದರೂ ಹಚ್ಚಿಕೊಳ್ಳಿ.

ಕೂದಲು ಒಣಗಿಸಿಕೊಳ್ಳಿ
ಕೂದಲು ಒಣಗಿಸಿಕೊಳ್ಳಲು ನೈಸರ್ಗಿಕ ಗಾಳಿಯನ್ನು ಬಳಸಿ ಹೇರ್ ಡ್ರಯರ್ ಉಪಯೋಗವನ್ನು ಮಾಡದಿರಿ. ಹೇರ್ ಡ್ರಯರ್‌ಗಳನ್ನು ನಿತ್ಯವೂ ಬಳಸುವುದು ಕೂದಲನ್ನು ಒಣ ಮತ್ತು ಬಿರುಕಾಗಿಸುತ್ತದೆ. ಮೊಟ್ಟೆಯ ಅಂಶ ಕೂದಲಲ್ಲಿ ಇದ್ದರೆ ಕೂದಲು ವಾಸನೆ ಬರುವುದು ಖಂಡಿತ ಆದ್ದರಿಂದ ಸ್ವಚ್ಛವಾಗಿ ಕೂದಲನ್ನು ಶಾಂಪೂವಿನಿಂದ ತೊಳೆದುಕೊಳ್ಳಿ. ಕೂದಲಿಗೆ ಮೊಟ್ಟೆ ಮತ್ತು ಮೊಸರಿನ ಮಾಸ್ಕ್ ಅನ್ನು ಹಚ್ಚಿಕೊಳ್ಳುವ ಹಂತ ಹಂತ ವಿಧಾನ ಇದಾಗಿದ್ದು ನಿಮ್ಮ ಕೂದಲಿಗೂ ಈ ಮಾಸ್ಕ್ ಅನ್ನು ಹಚ್ಚಿಕೊಂಡು ಅದ್ಭುತ ಪ್ರಯೋಜವನ್ನು ಪಡೆದುಕೊಳ್ಳಿ.

English summary

Steps To Apply Yogurt And Egg On Hair in kannada

Beautiful and healthy hair is the secret pride of all women. It is a part of your look and personality. The way how you handle and care your hair has great role in determining the health of your hair. Apart from the routine hair care, you have to take some special hair treatment at least once in a week.
Story first published: Tuesday, November 24, 2015, 14:41 [IST]
X
Desktop Bottom Promotion