For Quick Alerts
ALLOW NOTIFICATIONS  
For Daily Alerts

ಬಿಳಿ ಕೂದಲಿನ ಬಗ್ಗೆ, ತಿಳಿಯಬೇಕಾದ ಒಂದಿಷ್ಟು ಸಂಗತಿ

By Super
|

ನೆರೆಗೂದಲು ಈಗ ಸಾಮಾನ್ಯವಾದ ಸಂಗತಿಯಾಗಿಬಿಟ್ಟಿದೆ. ಮೊದಲು ನಡುವಯಸ್ಸು ದಾಟಿದ ಬಳಿಕವೇ ಅಲ್ಲಲ್ಲಿ ನೆನೆಗೂದಲು ಕಾಣಿಸಿಕೊಳ್ಳುತ್ತಿತ್ತು. ತೊಂಬತ್ತರ ದಶಕದಲ್ಲಿ ಇಪ್ಪತ್ತರ ಹರೆಯದವರಲ್ಲಿಯೂ ನೆರೆಗೂದಲು ಕಾಣಿಸಿಕೊಂಡು ಆತಂಕ ಎದುರಾಗಿತ್ತು. ಕೆಂಪು ಮಸೂರ್ ಬೇಳೆಯೇ ಇದಕ್ಕೆ ಕಾರಣ ಎಂದು ವಿನಾಕಾರಣ ಗೂಬೆ ಕೂರಿಸಲಾಯಿತು. ನಂತರದ ವರ್ಷದಲ್ಲಿ ಕೆಂಪು ಬೇಳೆ ತಿನ್ನದವರಲ್ಲಿಯೂ ನೆರೆಗೂದಲು ಸಾಮಾನ್ಯವಾಗಿದೆ.

ಇದು ಇಂದಿಗೂ ಮುಂದುವರೆಯುತ್ತಾ ಬಂದಿದೆ. ಇದಕ್ಕೆ ಹಲವು ಕಾರಣಗಳಿವೆ. ಕೆಲವರಿಗೆ ನಡುನಡುವೆ ಕೂದಲು ಬಿಳಿಯಾಗಿರುವುದು ಹೆಮ್ಮೆಯ ವಿಷಯವಾದರೆ ಉಳಿದವರಿಗೆ ಚಿಂತೆಯ ವಿಷಯ, ವಯಸ್ಸಾಗುತ್ತಿರುವ ಸಂಕೇತ. ಇದರಿಂದ ಮರೆಮಾಚಲು ಹೆಚ್ಚಿನವರು ನೆರೆಗೂದಲನ್ನು ಕಪ್ಪು ಮಾಡುವುದು, ಬುಡದಿಂದ ಕತ್ತರಿಸುವುದು, ಮದರಂಗಿ ಹಚ್ಚಿಕೊಳ್ಳುವುದು ಮೊದಲಾದವು. ಆದರೆ ಕೂದಲೇಕೆ ಬಿಳಿಯಾಗುತ್ತಿದೆ ಎಂದು ಗೊತ್ತಾದರೆ ಅದಕ್ಕೆ ತಕ್ಕ ಕ್ರಮ ಕೈಗೊಂಡು ಕೂದಲು ಬಿಳಿಯಾಗದಂತೆ ತಡೆಯುವುದು ಜಾಣತನದ ಕ್ರಮ. ಜಾಣರಾಗಬೇಕೇ, ಕೆಳಗಿನ ಸ್ಲೈಡ್ ಶೋನಲ್ಲಿ ನೀಡಿರುವ ಮಾಹಿತಿಗಳನ್ನು ಇಂದೇ ಅನುಸರಿಸಲು ಪ್ರಾರಂಭಿಸಿ...

ನೈಸರ್ಗಿಕ ನೆರೆತ

ನೈಸರ್ಗಿಕ ನೆರೆತ

ನಮ್ಮ ದೇಹಕ್ಕೆ ವಯಸ್ಸಾಗುತ್ತಿದ್ದಂತೆಯೇ ಹಲವಾರು ಬದಲಾವಣೆಗಳು ಅನಿವಾರ್ಯವಾಗಿದೆ. ಚರ್ಮ ಸಡಿಲಗೊಳ್ಳುವುದು, ನೆರಿಗೆ ಬೀಳುವುದು, ಕೂದಲು ಬಿಳಿಯಾಗುವುದು, ಕೂದಲು ಉದುರುವುದು ಮೊದಲಾದವೆಲ್ಲಾ ವೃದ್ಧಾಪ್ಯದ ಆಗಮನದ ಸಂಕೇತವಾಗಿವೆ. ಬಹುತೇಕ ಸಂದರ್ಭಗಳಲ್ಲಿ ನಲವತ್ತೈದರಿಂದ ಐವತ್ತು ವರ್ಷಗಳ ಅವಧಿಯಲ್ಲಿ ಕೂದಲು ನೆರೆಯುವುದು ನೈಸರ್ಗಿಕವಾಗಿದ್ದು ಇದನ್ನು ಬದಲಿಸಲು ಸಾಧ್ಯವಿಲ್ಲ.

ಒತ್ತಡವೇ ಪ್ರಮುಖ ಕಾರಣ

ಒತ್ತಡವೇ ಪ್ರಮುಖ ಕಾರಣ

ನೈಸರ್ಗಿಕ ಕಾರಣಗಳಿಗೂ ವ್ಯತಿರಿಕ್ತವಾಗಿ ವಯಸ್ಸಿಗೂ ಮುನ್ನ ಕೂದಲು ನೆರೆತರೆ ಇದಕ್ಕೆ ಮಾನಸಿಕ ಒತ್ತಡ ಪ್ರಮುಖ ಕಾರಣವಾಗಿದೆ. ಈ ಬಗ್ಗೆ ನಡೆದ ಸಂಶೋಧನೆಗಳಿಂದ ಒತ್ತಡ ಮತ್ತು ಕೆಲವು ಕಾಯಿಲೆಗಳ ಪ್ರಭಾವದಿಂದ ಕೂದಲು ಮತ್ತು ಚರ್ಮ ಅತಿ ಹೆಚ್ಚು ಬಾಧೆಗೊಳಗಾಗುತ್ತವೆ. ಸದಾ ಒತ್ತಡದಲ್ಲಿರುವ ವ್ಯಕ್ತಿಗಳ ಕೂದಲು ಅತಿ ಹೆಚ್ಚು ಉದುರುವುದೂ ಇನ್ನೊಂದು ಚಿಂತೆಯ ವಿಷಯವಾಗಿದೆ. ಆದ್ದರಿಂದ ಸಾಧ್ಯವಾದಷ್ಟು ಒತ್ತಡದಲ್ಲಿರದೇ ಇರಲು ಪ್ರಯತ್ನಿಸಿ.

ಅನುವಂಶಿಕ ಕಾರಣಗಳು

ಅನುವಂಶಿಕ ಕಾರಣಗಳು

ಇನ್ನೊಂದು ಸಂಶೋಧನೆಯಲ್ಲಿ ವ್ಯಕ್ತಿಯ ಅನುವಂಶಿಕ ಗುಣಗಳೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸಾಬೀತಾಗಿದೆ. ಅಂದರೆ ಕುಟುಂಬದ ಹಿರಿಯರಲ್ಲಿ ವಯಸ್ಸಿಗೂ ಮುನ್ನ ನೆರೆತ ಅಥವಾ ಬಕ್ಕತಲೆಯ ತೊಂದರೆ ಕಂಡುಬಂದಿದ್ದರೆ ಇದು ಮುಂದಿನ ಪೀಳಿಗೆಯಲ್ಲಿಯೂ ಮುಂದುವರೆಯುವ ಸಂಭವ ಹೆಚ್ಚು.

ಜನಾಂಗದ ಪರಿಣಾಮ

ಜನಾಂಗದ ಪರಿಣಾಮ

ಮತ್ತೊಂದು ಸಂಶೋಧನೆಯಲ್ಲಿ ಒಂದು ಜನಾಂಗಕ್ಕೆ ಸೇರಿದ ಅಥವಾ ಪ್ರವರ್ಗಕ್ಕೆ ಸೇರಿದ ಜನರು ಸಮಾನವಾದ ಲಕ್ಷಣಗಳನ್ನು ತೋರಿರುವುದು ಕಂಡುಬಂದಿದೆ. ಏಶಿಯನ್ನರು ಮತ್ತು ಆಫ್ರಿಕನ್ನರಿಗೆ ಹೋಲಿಸಿದರೆ ಪಾಶ್ಚಾತ್ಯ ಬಿಳಿಯರಲ್ಲಿ ಈ ತೊಂದರೆ ಇನ್ನೂ ಚಿಕ್ಕವಯಸ್ಸಿನಲ್ಲಿಯೇ ಕಂಡುಬರುತ್ತದೆ.

ಬಿಳಿಗೂದಲನ್ನು ಕತ್ತರಿಸಿದರೆ ಹೆಚ್ಚಾಗುತ್ತದೆ ಎನ್ನುವುದು ಸುಳ್ಳು

ಬಿಳಿಗೂದಲನ್ನು ಕತ್ತರಿಸಿದರೆ ಹೆಚ್ಚಾಗುತ್ತದೆ ಎನ್ನುವುದು ಸುಳ್ಳು

ನಡುನಡುವೆ ಇರುವ ಬಿಳಿಗೂದಲುಗಳನ್ನು ಬುಡದಿಂದ ಕತ್ತರಿಸಿ ತೆಗೆದರೆ ಅಕ್ಕಪಕ್ಕದ ಕೂದಲುಗಳೂ ಬಿಳಿಯಾಗುತ್ತವೆ ಎಂಬ ಒಂದು ನಂಬಿಕೆ ಇದೆ. ವಾಸ್ತವ ಅಂಶವೆಂದರೆ ಪ್ರತಿ ಕೂದಲಿಗೂ ಪ್ರತ್ಯೇಕವಾದ ಬುಡವಿದ್ದು ಪಕ್ಕದ ಕೂದಲಿಗೆ ಯಾವುದೇ ರೀತಿಯ ಸಂಬಂಧವಿಲ್ಲ. ಆದರೆ ಕೂದಲನ್ನು ಬುಡದಿಂದ ಕತ್ತರಿಸುವ ಭರದಲ್ಲಿ ಬುರುಡೆಯ ಚರ್ಮಕ್ಕೆ ಘಾಸಿಯಾಗುವುದು ಅಥವಾ ಕತ್ತರಿಸಿದ ಭಾಗ ಮತ್ತೆ ಬೆಳೆಯದೇ ಇರುವುದು ಮೊದಲಾದ ತೊಂದರೆಗಳು ಎದುರಾಗಬಹುದು.

ಧೂಮಪಾನದ ಪರಿಣಾಮ

ಧೂಮಪಾನದ ಪರಿಣಾಮ

ವಯಸ್ಸಿಗೂ ಮುನ್ನ ಕೂದಲು ನೆರೆಯಲು ಧೂಮಪಾನ ಪ್ರಮುಖ ಪಾತ್ರ ವಹಿಸುತ್ತದೆ. ಅಂದರೆ ಧೂಮಪಾನಿಗಳ ಕೂದಲು, ವಿಶೇಷವಾಗಿ ಗಡ್ಡ ಮತ್ತು ತಲೆಯ ಕೂದಲು ಅತಿ ಬೇಗನೇ ನೆರೆಯುತ್ತದೆ. ಆದ್ದರಿಂದ ಧೂಮಪಾನವನ್ನು ತ್ಯಜಿಸುವುದು ಆರೋಗ್ಯಕ್ಕೂ ಕೂದಲಿಗೂ ಉತ್ತಮ.

ಬಿಳಿಚಲು ಹೈಡ್ರೋಜೆನ್ ಪೆರಾಕ್ಸೈಡ್ ಕಾರಣ

ಬಿಳಿಚಲು ಹೈಡ್ರೋಜೆನ್ ಪೆರಾಕ್ಸೈಡ್ ಕಾರಣ

ಕೂದಲಿನಲ್ಲಿ ಒಂದು ವೇಳೆ ಹೈಡ್ರೋಜೆನ್ ಪೆರಾಕ್ಸೈಡ್ ಎಂಬ ರಾಸಾಯನಿಕದ ಪ್ರಮಾಣ ಹೆಚ್ಚಾದರೆ ಇದು ಕೂದಲನ್ನು ಒಳಗಿನಿಂದ ಬಿಳಿಯಾಗಿಸುತ್ತಾ ಬರುತ್ತದೆ. ಒಂದು ಕೂದಲನ್ನು ಅಡ್ಡಲಾಗಿ ಕತ್ತರಿಸಿ ಸೂಕ್ಷ್ಮದರ್ಶಕದಲ್ಲಿ ನೋಡಿದರೆ ಕಪ್ಪಗಿದ್ದ ಕೂದಲು ಕೇಂದ್ರದಿಂದ ಬಿಳಿಯಾಗುತ್ತಾ ಬಂದಿರುವುದೂ, ಕೆಂಚಗಿನ ಕೂದಲು ಮಧ್ಯದಿಂದ ಪ್ರಾರಂಭವಾಗಿ ಇನ್ನೇನು ಅಂಚುಗಳಿಗೆ ತಲುಪುವ ಹಂತದಲ್ಲಿರುವುದು

ಕಂಡುಬರುತ್ತದೆ. ಇದರ ವೈಜ್ಞಾನಿಕ ವಿಶ್ಲೇಷಣೆಯಿಂದ ಬಿಳಿಯಾಗಿರುವ ಭಾಗದಲ್ಲಿ ಹೈಡ್ರೋಜೆನ್ ಪೆರಾಕ್ಸೈಡ್ ಅತಿ ಹೆಚ್ಚಿನ ಪ್ರಮಾಣದಲ್ಲಿರುವುದು ಕಂಡುಬಂದಿದೆ. ಆದ್ದರಿಂದ ಕೂದಲಿಗೆ ಉತ್ತಮ ಆರೈಕೆ ನೀಡುವ ಮೂಲಕ ಹೈಡ್ರೋಜೆನ್ ಪೆರಾಕ್ಸೈಡ್ ಕೂದಲಿನಲ್ಲಿ ಸಂಗ್ರಹವಾಗದಂತೆ ನೋಡಿಕೊಳ್ಳಬಹುದು.

English summary

Things You Didn't Know About Grey Hair

Grey hair is a common sight these days. The age for hair greying is no more restricted to a specific age. It is more common these days due to various factors. Hence, one needs to understand the facts that cause grey hair. in this article, we are here to share some of the reasons that cause greying of the hair and the measures that you need to take to prevent and delay the greying of hair. Read on to find out.
X