Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೂದಲುದುರುವ ಸಮಸ್ಯೆಗೆ, ಬರೀ ಎರಡೇ ದಿನಗಳಲ್ಲಿ ಪರಿಹಾರ!
ಪ್ರತಿ ಬಾರಿ ಕೂದಲು ಬಾಚಿಕೊಂಡಾಗಲೂ ಕೂದಲುಗಳು ತುಂಡಾಗಿ ಬಾಚಣಿಕೆಯಲ್ಲಿ ಭಾರೀ ಸಂಖ್ಯೆಯಲ್ಲಿ ಬರುತ್ತಿವೆಯೇ? ಅದರಲ್ಲೂ ಬುಡದಿಂದಲೇ ಕಿತ್ತು ಬಂದ ಕೂದಲ ಸಂಖ್ಯೆ ಹೆಚ್ಚಿದೆಯೇ? ಇದಕ್ಕೆ ಹಲವು ಕಾರಣಗಳಿರಬಹುದು. ಕೂದಲು ಬುಡದಿಂದಲೇ ಉದುರಲು ಪ್ರಮುಖ ಕಾರಣ ಕೂದಲ ಬುಡ ಸಡಿಲವಾಗಿರುವುದು. ಇದರ ಪರಿಣಾಮದಿಂದ ತಲೆಗೂದಲು ತೆಳ್ಳಗಾಗುವ, ಬಕ್ಕತಲೆ ಆವರಿಸುವ ಸಾಧ್ಯತೆ ಹೆಚ್ಚುತ್ತದೆ.
ಕೂದಲು ಉದುರುವುದು ಖಂಡಿತವಾಗಿಯೂ ಅನಾರೋಗ್ಯದ ಲಕ್ಷಣವಾಗಿದ್ದು ಇದಕ್ಕೆ ಕೂದಲ ಪೋಷಣೆಯಲ್ಲಿ ಕೊರತೆಯ ಸಹಿತ ಅಸಮರ್ಪಕ ಆಹಾರ ಸೇವನೆ, ಹಾರ್ಮೋನುಗಳಲ್ಲಿ ಏರುಪೇರು, ಗಾಳಿಯಲ್ಲಿನ ಪ್ರದೂಷಕಾ ಕಣಗಳು, ಔಷಧಿಗಳ ಅಡ್ಡ ಪರಿಣಾಮಗಳು ಮೊದಲಾದ ಕಾರಣಗಳಿವೆ. ಕೂದಲೇ ಇಲ್ಲದಿದ್ದ ಬಳಿಕ ಇದರಿಂದ ವಿವಿಧ ಕೇಶವಿನ್ಯಾಸವನ್ನು ಹೇಗೆ ಮಾಡಿಕೊಳ್ಳುವಿರಿ? ಆದ್ದರಿಂದ ಕೂದಲು ಉದುರದಂತೆ, ಉದುರಿದರೂ ಆದಷ್ಟು ಬೇಗ ಇದನ್ನು ಮತ್ತೆ ಬೆಳೆಯುವಂತೆ ಮಾಡುವಲ್ಲಿಯೇ ಜಾಣತನ ಅಡಗಿದೆ. ಕೂದಲುದುರುವ ಸಮಸ್ಯೆಗೆ,ಇಲ್ಲಿದೆ ಪರ್ಫೆಕ್ಟ್ ಮನೆಮದ್ದು

ಉದುರಿದ ಕೂದಲು ಮತ್ತೆ ಬೆಳೆಯಲು (ಅನುವಂಶಿಕವಾಗಿ ಇದು ಮತ್ತೆ ಬೆಳೆಯಬಾರದು ಎಂಬ ಸೂಚನೆಯಿಂದ ಎದುರಾಗುವ ಬಕ್ಕತಲೆಯ ಸ್ಥಿತಿಯ ಹೊರತಾಗಿ) ಕೂದಲ ಬುಡಕ್ಕೆ ನೀಡುವ ಪೋಷಣೆ ಮತ್ತು ಸೂಕ್ತ ಆಹಾರಗಳನ್ನು ಸೇವಿಸುವ ಮೂಲಕ ಸಾಧ್ಯವಿದೆ. ಕೆಲವು ಆಹಾರಗಳ ಮೂಲಕ ಚರ್ಮದ ಒಳಭಾಗದಲ್ಲಿ ಪೋಷಣೆ ನೀಡಬಹುದು.
ಅಂತೆಯೇ ಕೂದಲಿನ ಹೊರಭಾಗದಲ್ಲಿ ನೀಡುವ ಪೋಷಣೆಯೂ ಕೂದಲು ಉದುರುವುದನ್ನು ನಿಲ್ಲಿಸಲು ನೆರವಾಗುತ್ತದೆ. ಈ ಶಕ್ತಿಯನ್ನು ಪಡೆದಿರುವ ಒಂದು ಅಧ್ಬುತ ಲೇಪ ಎರಡೇ ದಿನದಲ್ಲಿ ತನ್ನ ಪ್ರಭಾವದಿಂದ ಕೂದಲು ಉದುರುವುದನ್ನು ನಿಲ್ಲಿಸಲು ಸಾಧ್ಯವಾಗಿದೆ. ಈ ಅದ್ಭುತ ಲೇಪವನ್ನು ತಯಾರಿಸುವ ಬಗೆಯನ್ನು ಇಲ್ಲಿ ನೀಡಲಾಗಿದೆ. ಕೂದಲಿನ ಆರೈಕೆಗೆ ಹಳ್ಳಿಗಾಡಿನ ಸೀಗೆಕಾಯಿ
ಅಗತ್ಯವಿರುವ ಸಾಮಾಗ್ರಿಗಳು:
*ತೆಂಗಿನ ಹಾಲು: ಎರಡು ದೊಡ್ಡಚಮಚ
*ಮೆಂತೆ ಕಾಳು: ಒಂದು ಚಿಕ್ಕ ಚಮಚ
*ನೆಲ್ಲಿಕಾಯಿ: ಒಂದು (ದೊಡ್ಡ ಗಾತ್ರದ್ದು, ಸಿಗದಿದ್ದರೆ ಎರಡು ಚಿಕ್ಕ ಗಾತ್ರದವು), ಬೀಜ ನಿವಾರಿಸಿದ ತಿರುಳು ಸಂಗ್ರಹಿಸಿ.
ಈ ಮೂರೂ ಸಾಮಾಗ್ರಿಗಳ ಪೋಷಕಾಂಶಗಳು ಒಟ್ಟಾದರೆ ಕೂದಲ ಬುಡಕ್ಕೆ ಅತಿ ಹೆಚ್ಚಿನ ಪೋಷಣೆ ನೀಡಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ಕೂದಲ ಬುಡಗಳು ದೃಢಗೊಳ್ಳುತ್ತವೆ ಹಾಗೂ ಇಲ್ಲಿಂದ ಕೂದಲನ್ನು ಬಿಡದೇ ಹಿಡಿದುಕೊಳ್ಳಲು ಸಾಧ್ಯವಾಗುತ್ತದೆ. ಸುಂದರ ಕೂದಲಿನ ಆರೈಕೆಗೆ ಸ್ಟೆಪ್ ಬೈ ಸ್ಟೆಪ್ ಟಿಪ್ಸ್...
ತೆಂಗಿನ ಹಾಲಿನಲ್ಲಿ ಸಮೃದ್ಧವಾಗಿರುವ ವಿಟಮಿನ್ ಇ ಮತ್ತು ಆಂಟಿ ಆಕ್ಸಿಡೆಂಟುಗಳು ಕೂದಲ ಬುಡದ ಚರ್ಮಕ್ಕೆ ಪೋಷಣೆಯನ್ನು ನೀಡಿ ಸೆಳೆತ ಹೆಚ್ಚಿಸಲು ನೆರವಾಗುತ್ತದೆ. ಇದರಿಂದ ಕೂದಲು ಉದುರುವ, ಬಕ್ಕತಲೆ ಆವರಿಸುವ ಸಾಧ್ಯತೆ ಕಡಿಮೆಯಾಗುತ್ತದೆ.
ಮೆಂತೆಕಾಳು ಮತ್ತು ನೆಲ್ಲಿಕಾಯಿಯಲ್ಲಿರುವ ಪೋಷಕಾಂಶಗಳು ಕೂದಲ ಬುಡಕ್ಕೆ ಪೋಷಣೆ ನೀಡುವ ಮೂಲಕ ಈ ಬುಡದಿಂದ ಆರೋಗ್ಯಕರ ಕೂದಲು ಮತ್ತೆ ಹುಟ್ಟಲು ನೆರವಾಗುತ್ತವೆ. ಅಲ್ಲದೇ ಈಗಾಗಲೇ ಉದುರಿ ಖಾಲಿಬಿದ್ದಿದ್ದ ಕೂದಲ ಬುಡಗಳಿಂದಲೂ ಹೊಸ ಕೂದಲು ಚಿಗುರಲು ನೆರವಾಗುತ್ತದೆ. ಇದರಿಂದಾಗಿ ಕೆಲವೇ ದಿನಗಳಲ್ಲಿ ಮತ್ತೊಮ್ಮೆ ಸೊಂಪಾದ ಕೂದಲು ಬೆಳೆಯಲು ಸಾಧ್ಯವಾಗುತ್ತದೆ. ಅಲ್ಲದೇ ಬೆಳೆದ ಕೂದಲು ಕಾಂತಿಯುಕ್ತ ಮತ್ತು ದಟ್ಟನಾಗಿರಲೂ ಸಾಧ್ಯವಾಗುತ್ತದೆ.
ಈ ಲೇಪವನ್ನು ತಯಾರಿಸುವ ಕ್ರಮ:
*ಮೇಲೆ ವಿವರಿಸಲಾದ ಮೂರೂ ಸಾಮಾಗ್ರಿಗಳನ್ನು ಮಿಕ್ಸಿಯ ಚಿಕ್ಕ ಜಾರ್‌ನಲ್ಲಿ ಹಾಕಿ ಚೆನ್ನಾಗಿ ಗೊಟಾಯಿಸಿ.
ಬಳಿಕ ತೆಳ್ಳಗಿನ ಬಟ್ಟೆಯಲ್ಲಿ ಹಿಂಡಿ ರಸವನ್ನು ಸಂಗ್ರಹಿಸಿ.
*ಈ ರಸವನ್ನು ತೆಳ್ಳಗಿನ ಬ್ರಶ್ ಬಳಸಿ ಕೂದಲ ಬುಡದಿಂದ ಪ್ರಾರಂಭಿಸಿ ತುದಿಯವರೆಗೆ ಆವರಿಸುವಂತೆ ಹಚ್ಚಿಕೊಳ್ಳಿ. ಬಳಿಕ *ಸುಮಾರು ಐದು ನಿಮಿಷಗಳ ಕಾಲ ಬೆರಳುಗಳಿಂದ ಕೂದಲ ಬುಡಕ್ಕೆ ನಯವಾಗಿ ಮಸಾಜ್ ಮಾಡುತ್ತಾ ಇರಿ. ಬಳಿಕ ಹದಿನೈದು ನಿಮಿಷ ಕಾಲ ಹಾಗೇ ಒಣಗಳು ಬಿಡಿ. ನಂತರ ಸೌಮ್ಯ ಶಾಂಪೂ ಹಾಗೂ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ನಂತರ ದಪ್ಪ ಟವೆಲ್ ಸುತ್ತಿಕೊಂಡು ನೀರನ್ನು ಹೀರುವಂತೆ ಮಾಡಿ. ಕೂದಲಿನ ಎಲ್ಲಾ ಸಮಸ್ಯೆಗೆ ಒಂದೇ ರಾಮಬಾಣ: ಬೇವಿನ ಎಣ್ಣೆ!



Click it and Unblock the Notifications



