For Quick Alerts
ALLOW NOTIFICATIONS  
For Daily Alerts

ಏನೇ ಹೇಳಿ, ಕೂದಲಿನ ಆರೋಗ್ಯ ನಿಮ್ಮ ಕೈಯಲ್ಲೇ ಇದೆ!

By Jaya Subramanya
|

ಕೂದಲನ್ನು ತೊಳೆಯುವುದು ನಿಮ್ಮ ಕೂದಲಿನ ಸಂಪೂರ್ಣ ಆರೋಗ್ಯದ ಗುಟ್ಟಾಗಿದೆ. ಹಾಗಿದ್ದರೆ ಕೂದಲನ್ನು ಸರಿಯಾದ ರೀತಿಯಲ್ಲಿ ತೊಳೆಯುವುದು ಅತಿ ಮುಖ್ಯವಾಗಿದೆ. ಕೂದಲು ತೊಳೆಯುವುದು ಎಂದರೆ ಶಾಂಪೂ ಮಾಡಿ ಕಂಡೀಷನಿಂಗ್ ಮಾಡುವುದು ಮಾತ್ರವಲ್ಲ ಅದರ ಬದಲಿಗೆ ಕೂದಲನ್ನು ತೊಳೆಯುವುದು ಸರಿಯಾದ ವಿಧಾನದಲ್ಲಾಗಿದ್ದರೆ ನಿಮ್ಮ ಕೂದಲು ಸೊಂಪಾಗಿ ಬೆಳೆಯವುದು ಖಂಡಿತ.

ಹಾಗಿದ್ದರೆ ನಿಮ್ಮ ಕೂದಲನ್ನು ಸರಿಯಾದ ವಿಧಾನದಲ್ಲಿ ತೊಳೆಯುವುದು ಹೇಗೆ ಎಂಬುದನ್ನು ಕುರಿತಾದ ಟಿಪ್ಸ್‎ಗಳನ್ನು ನಾವು ಇಲ್ಲಿ ನೀಡುತ್ತಿದ್ದು ಇದು ನಿಜಕ್ಕೂ ನಿಮ್ಮ ಕೂದಲನ್ನು ವಿಭಿನ್ನವಾಗಿ ಬದಲಾಯಿಸಲಿದೆ. ಹಾಗಿದ್ದರೆ ಆ ವಿಧಾನಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ನೋಡೋಣ...

Water Temperature

ಚೆನ್ನಾಗಿ ಬಾಚಿಕೊಳ್ಳಿ
ನಿಮ್ಮ ಕೂದಲನ್ನು ತೊಳೆಯುವ ಮುನ್ನ ಕೂದಲನ್ನು ಬಾಚಿಕೊಳ್ಳಿ. ಕೂದಲು ತೊಳೆದ ನಂತರ ಬಾಚಬೇಡಿ. ತಲೆ ತೊಳೆಯುವ ಮುನ್ನ ಕೂದಲನ್ನು ಬಾಚಿಕೊಳ್ಳುವುದರಿಂದ ಸಿಕ್ಕು ಇಲ್ಲವಾಗುತ್ತದೆ.

ನೀರಿನ ತಾಪಮಾನ ಪರಿಶೀಲಿಸಿ

ನಿಮ್ಮ ಕೂದಲನ್ನು ಉಗುರು ಬೆಚ್ಚನೆಯ ನೀರಿನಲ್ಲಿ ತೊಳೆದುಕೊಳ್ಳುತ್ತಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಇದರಿಂದ ಕೂದಲಿನ ರಂಧ್ರಗಳು ತೆರೆದುಕೊಳ್ಳುತ್ತವೆ ಮತ್ತು ತಲೆಬುರುಡೆಯಿಂದ ಎಲ್ಲಾ ಕೊಳೆ ನಿವಾರಣೆಯಾಗುತ್ತದೆ. ಕೂದಲನ್ನು ತೊಳೆಯುವ ಸರಿಯಾದ ವಿಧಾನದಲ್ಲಿ ಇದೂ ಕೂಡ ಅಡಗಿದೆ.

ತಂಪು ನೀರಿನಲ್ಲಿ ತಲೆ ತೊಳೆಯುವುದು


ನೀವು ಕೂದಲನ್ನು ಕೊನೆಯ ಬಾರಿಗೆ ತೊಳೆಯುವುದು ತಣ್ಣೀರಿನಲ್ಲಿ ಎಂಬುದನ್ನು ಖಾತ್ರಿಪಡಿಸಿ. ಇದು ಕೂದಲಿನ ರಂಧ್ರಗಳನ್ನು ಮುಚ್ಚಿ ಕೂದಲು ಉದುರುವುದನ್ನು ತಡೆಗಟ್ಟುತ್ತದೆ. ಕೂದಲಿನ ಮಾಯಿಶ್ಷರೈಸರ್ ಅನ್ನು ಹಿಡಿದಿಟ್ಟುಕೊಂಡು ಕೂದಲನ್ನು ಮಿರುಗುವಂತೆ ಮಾಡುತ್ತದೆ.

ಶಾಂಪೂ


ಆದಷ್ಟು ಕೂದಲನ್ನು ರಾಸಾಯನಿಕ ಮುಕ್ತ ಶಾಂಪೂವಿನಿಂದ ತೊಳೆದುಕೊಳ್ಳಿ. ಮೃದುವಾಗಿ ಶಾಂಪೂ ಬಳಸಿ ಕೂದಲಿನ ಬುಡವನ್ನು ಮಸಾಜ್ ಮಾಡಿ ಮತ್ತು ತುದಿಗಳನ್ನು ಮಸಾಜ್ ಮಾಡಿಕೊಳ್ಳಿ. ಕೂದಲಿನ ಬುಡು ಎಣ್ಣೆಯಿಂದ ಇದ್ದು ತುದಿ ಒಣವಾಗಿರುತ್ತದೆ.

ಕಂಡೀಷನ್

ಕೂದಲಿಗೆ ಕಂಡೀಷನ್ ಮಾಡುವುದನ್ನು ನೀವು ಮರೆಯಲೇಬಾರದು. ಈ ಹಂತ ಕೂದಲನ್ನು ಮಾಯಿಶ್ಚರೈಸ್ ಮಾಡುತ್ತದೆ. ಬುಡಕ್ಕೆ ಕಂಡೀಷನಿಂಗ್ ಮಾಡುವುದನ್ನು ಬಿಡಿ, ಇದು ಕೂದಲನ್ನು ಇನ್ನಷ್ಟು ಎಣ್ಣೆಯುಕ್ತಗೊಳಿಸಬಹುದು ಇದರಿಂದ ಕೂದಲಿನ ತುದಿಗೆ ಕಂಡೀಷನ್ ಮಾಡಿ.

ಬೆರಳುಗಳ ಪೋಷಣೆ


ಕೂದಲನ್ನು ತೊಳೆದುಕೊಂಡ ನಂತರ ಬಾಚಣಿಗೆಯಿಂದ ಕೂದಲನ್ನು ಬಾಚಿಕೊಳ್ಳದಿರಿ. ಒದ್ದೆ ಕೂದಲಿಗೆ ಬಾಚಣಿಗೆಯನ್ನು ಬಳಸುವುದು ಕೂದಲನ್ನು ತುಂಡಾಗಿಸಬಹುದು. ಬದಲಿಗೆ ಬೆರಳುಗಳನ್ನು ಬಳಸಿಕೊಂಡು ಕೂದಲಿನ ಸಿಕ್ಕುಗಳನ್ನು ನಿವಾರಿಸಿಕೊಳ್ಳಿ ಮತ್ತು ಇದನ್ನು ತಪ್ಪದೇ ನಿರ್ವಹಿಸಿ.
English summary

steps to wash-hair-correctly-which-you-never-knew-of

Something as simple as washing your hair can indeed be not that simple. The steps to wash your hair correctly, which we have listed below, can make your hair appear what you want it to be, quite literally. These steps may seem a little complicated at first, but on following these steps regularly you can bid adieu to dry, lifeless hair. Here are the steps to wash your hair correctly, check them out.
Story first published: Wednesday, November 2, 2016, 20:05 [IST]
X
Desktop Bottom Promotion