For Quick Alerts
ALLOW NOTIFICATIONS  
For Daily Alerts

ರಾತ್ರಿ ಬೆಳಗಾಗುವುದರ ಒಳಗೆ ಕೂದಲುದುರುವ ಸಮಸ್ಯೆಗೆ ಪರಿಹಾರ!

By Manu
|

ತಲೆಗೂದಲು ಉದುರುವ ದುಗುಡವನ್ನು ನಾವೆಲ್ಲರೂ ಅನುಭವಿಸಿಯೇ ಇದ್ದೇವೆ. ಕೆಲವರಲ್ಲಿ ಇದು ತೀರಾ ಹೆಚ್ಚಾದರೆ ಕೆಲವರಲ್ಲಿ ಕಡಿಮೆ, ಕೆಲವರಲ್ಲಿ ಮಧ್ಯಮ ಪ್ರಮಾಣದಲ್ಲಿರುತ್ತದೆ. ಆದರೆ ಕೂದಲು ಉದುರುವುದಕ್ಕೂ ವ್ಯಕ್ತಿ ಅನುಭವಿಸುವ ಅಸಮಾಧಾನಕ್ಕೂ ವ್ಯತ್ಯಾಸವಿದೆ. ಕೆಲವರಲ್ಲಿ ಇದು ಅವರ ಆತ್ಮವಿಶ್ವಾಸವನ್ನೇ ಅಲ್ಲಾಡಿಸಬಹುದು, ಕೆಲವರು ಏನೂ ಆಗದಂತೆ ನಿರುಮ್ಮಳರಾಗಿರಬಹುದು.

ಕೂದಲು ಉದುರುವುದಕ್ಕೆ ಹಲವಾರು ಕಾರಣಗಳಿವೆ. ಇದರಲ್ಲಿ ಪ್ರಮುಖವಾದುದು ಅನುವಂಶಿಕವಾಗಿ ಬರುವಂತಹದ್ದು. ಇನ್ನುಳಿದಂತೆ ಹಾರ್ಮೋನುಗಳ ಏರುಪೇರು, ಅಸಮರ್ಪಕ ಆಹಾರ ಸೇವನೆ, ಇಲ್ಲದ ಆರೈಕೆ, ಪರ್ಯಾವರಣದಲ್ಲಿರುವ ಕಣಗಳು ಮೊದಲಾದವು ಕೂದಲು ಉದುರಿಸಲಿಕ್ಕೆ ಕಾರಣವಾಗಿವೆ.

Simple Homemade Overnight Pack For Hair Loss Treatment

ಒಂದು ವೇಳೆ ಈ ಕಾರಣ ಆಹಾರದ ಮತ್ತು ಆರೈಕೆಯ ಕೊರತೆಯಿಂದ ಆಗಿದ್ದರೆ ಇದನ್ನು ಸುಲಭವಾಗಿ ಸರಿಪಡಿಸಬಹುದು. ಆರೋಗ್ಯದ ಕಾರಣ ಅಥವಾ ಕೆಲವು ಔಷಧಿಗಳ ಅಡ್ಡಪರಿಣಾಮವಿದ್ದರೂ ಥಟ್ಟನೇ ಅಲ್ಲದಿದ್ದರೂ ಕೊಂಚ ಸಾವಕಾಶವಾಗಿ ಇದನ್ನೂ ಸರಿಪಡಿಸಬಹುದು. ಆದರೆ ಅನುವಂಶಿಕ ಕಾರಣಗಳಿಂದ ಉದುರಿರುವ ಕೂದಲು ಮತ್ತೆ ಹುಟ್ಟಲಾರದು. ಸಾಮಾನ್ಯವಾಗಿ ಉದುರುವ ಕೂದಲಿಗೆ ಎರಡು ನೈಸರ್ಗಿಕ ವಸ್ತುಗಳೇ ಸಾಕು. ಕೂದಲು ಉದುರುವ ಕಿರಿಕಿರಿ - ಮನೆಮದ್ದೇ ಸರಿ

ಅವೆಂದರೆ ಈರುಳ್ಳಿ ಮತ್ತು ಜೇನು. ಇದರ ಮಿಶ್ರಣದಿಂದ ತಯಾರಿಸಲಾದ ಲೇಪನವನ್ನು ರಾತ್ರಿ ಹಚ್ಚಿಕೊಂಡು ಬೆಳಿಗ್ಗೆ ಸ್ನಾನ ಮಾಡುತ್ತಾ ಬಂದರೆ ಉತ್ತಮವಾದ ಪರಿಣಾಮವನ್ನು ಪಡೆಯಬಹುದು. ಸುಲಭವಾಗಿ ಲಭ್ಯವಿರುವ ಮತ್ತು ಅಗ್ಗವೂ ಆಗಿರುವ ಈ ಲೇಪನವನ್ನು ಪ್ರಸ್ತುತಪಡಿಸಲು ಬೋಲ್ಡ್ ಸ್ಕೈ ತಂಡ ಹರ್ಷಪಡುತ್ತಿದೆ.

ಈರುಳ್ಳಿ ಕೇವಲ ಅಡುಗೆಗೆ ಮಾತ್ರವಲ್ಲ, ಇದರಲ್ಲಿರುವ ಗಂಧಕಯುಕ್ತ ಕಣಗಳು ಕಣ್ಣೀರಿಗೆ ಹೇಗೆ ಕಾರಣವಾಗುತ್ತವೆಯೋ ಹಾಗೇ ಕೂದಲ ಬುಡಕ್ಕೆ ಪ್ರಚೋದನೆ ನೀಡಿ ರಕ್ತಸಂಚಾರ ಹೆಚ್ಚಿಸಲೂ ಕಾರಣವಾಗುತ್ತವೆ. ಈ ಪ್ರಚೋದನೆ ಕೂದಲ ಬುಡ ದೃಢಗೊಳ್ಳಲು ಮತ್ತು ಹೊಸ ಕೂದಲು ಹುಟ್ಟಲು ನೆರವಾಗುತ್ತದೆ. ವಿಶೇಷವಾಗಿ ಈರುಳ್ಳಿ ರಸದಲ್ಲಿರುವ ಪೋಷಕಾಂಶಗಳು ಕೂದಲಿಗೆ ದೃಢತೆ ನೀಡುವ ಕೆರಾಟಿನ್ ಎಂಬ ವಸ್ತುವಿನ ಉತ್ಪಾದನೆಗೆ ನೆರವಾಗುತ್ತದೆ.

ಈ ರಸವನ್ನು ಜೇನಿನೊಂದಿಗೆ ಸೇರಿಸಿದರೆ ಕೂದಲು ಉದುರುವುದನ್ನು ನಿಲ್ಲಿಸುವ ಅತ್ಯಂತ ಸೂಕ್ತ ಲೇಪನ ತಯಾರಾಗುತ್ತದೆ. ಜೇನು ಕೂದಲಿಗೆ ಹೊಳಪು, ದೃಢತೆ ನೀಡುವ ಜೊತೆಗೇ ನೀಳವಾಗಿ ಬೆಳೆಯಲೂ ಸಹಾಯ ಮಾಡುತ್ತದೆ. ಆದರೆ ಹೆಚ್ಚಿನವರಿಗೆ ಈರುಳ್ಳಿಯ ವಾಸನೆ ಹಿಡಿಸುವುದಿಲ್ಲ.

ಈ ವಾಸನೆಯನ್ನು ಕಡಿಮೆಗೊಳಿಸಿ ಕೊಂಚ ಸುವಾಸನೆ ಯುಕ್ತವಾಗಿಸಲು ಕೆಲವು ಹನಿ ಲ್ಯಾವೆಂಡರ್ ತೈಲವನ್ನು ಸೇರಿಸಬಹುದು. ಈ ಸುಗಂಧಮಯ ಲೇಪನವನ್ನು ಹಚ್ಚುವ ಮೂಲಕ ಕೂದಲು ಉದುರುವುದನ್ನು ತಡೆಯುವುದು ಮಾತ್ರವಲ್ಲ, ಇನ್ನಷ್ಟು ಉತ್ತಮಗೊಳಿಸಲೂ ಸಾಧ್ಯವಾಗುತ್ತದೆ. ಕೂದಲುದುರುವ ಸಮಸ್ಯೆಗೆ, ಒಂದೇ ನಿಮಿಷದಲ್ಲಿ ಚಿಕಿತ್ಸೆ!

ಅಗತ್ಯವಿರುವ ಸಾಮಾಗ್ರಿಗಳು
*ಒಂದು ಈರುಳ್ಳಿಯಿಂದ ಈಗ ತಾನೇ ಹಿಂಡಿ ತೆಗೆದ ರಸ
*ಎರಡು ಚಿಕ್ಕ ಚಮಚ ಜೇನು
*ಮೂರು ಅಥವಾ ನಾಲ್ಕು ತೊಟ್ಟು ಲ್ಯಾವೆಂಡರ್ ಎಣ್ಣೆ

ಉಪಯೋಗಿಸುವ ವಿಧಾನ
*ಮೊದಲಿಗೆ ಈರುಳ್ಳಿಯ ಸಿಪ್ಪೆ ಸುಲಿದು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಬಳಿಕ ಇದನ್ನು ಜ್ಯೂಸರಿನ ಚಿಕ್ಕ ಜಾರ್‌ನಲ್ಲಿ ನುಣ್ಣಗೆ ಅರೆಯಿರಿ. ಅರೆದ ಬಳಿಕ ತೆಳುವಾದ ಬಟ್ಟೆಯಲ್ಲಿ ಹಿಂಡಿ ಇದರ ರಸವನ್ನು ಪ್ರತ್ಯೇಕಿಸಿ.
*ಬಳಿಕ ಜೇನು ಮತ್ತು ಲ್ಯಾವೆಂಡರ್ ತೈಲವನ್ನು ಸೇರಿಸಿ ಮಿಶ್ರಣ ಮಾಡಿ.

ಈ ಲೇಪನವನ್ನು ರಾತ್ರಿ ಮಲಗುವ ಮುನ್ನ ಈಗತಾನೇ ತಣ್ಣೀನಿಂದ ತೊಳೆದು ಒಣಗಿಸಿರುವ ತಲೆಗೂದಲಿಗೆ ಹಚ್ಚಿ. ವಿಶೇಷವಾಗಿ ತಲೆಗೂದಲ ಬುಡಕ್ಕೆ ಕೊಂಚ ಮಸಾಜ್ ಮೂಲಕ ಹಚ್ಚಿ. ಲೇಪನ ಉಳಿದರೆ ಮಾತ್ರ ತಲೆಗೂದಲ ತುದಿಯವರೆಗೂ ಹಚ್ಚಬಹುದು, ಆದರೆ ಬುಡಕ್ಕೆ ಎಲ್ಲಿಯೂ ಕಡಿಮೆ ಮಾಡಬಾರದು. ಶವರ್ ಕ್ಯಾಪ್ ಒಂದನ್ನು ತಲೆಯನ್ನು ಆವರಿಸುವಂತೆ ಮಾಡಿ ನಿದ್ರಿಸಿ.

ಬೆಳಿಗ್ಗೆ ಎದ್ದ ಬಳಿಕ ತಣ್ಣೀರು ಅಥವಾ ಉಗುರುಬೆಚ್ಚನೆಯ ನೀರಿನಿಂದ ಸ್ನಾನ ಮಾಡಿ. ಸೌಮ್ಯ ಶಾಂಪೂ ಮತ್ತು ಕಂಡೀಶನರ್ ಮಾತ್ರ ಬಳಸಿ. ಒಂದು ವೇಳೆ ರಾತ್ರಿಯಿಡೀ ಈ ಲೇಪನವನ್ನು ಹಚ್ಚಿಕೊಂಡಿರಲು ಸಾಧ್ಯವಾಗದಿದ್ದರೆ ಈ ಲೇಪನದ ಪ್ರಮಾಣವನ್ನು ಕೊಂಚ ಹೆಚ್ಚಿಸಿ ಒಂದು ಗಂಟೆ ಕಾಲ ಒಣಗಲು ಬಿಡಿ. ಬಳಿಕ ತಣ್ಣೀರು ಅಥವಾ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಈ ವಿಧಾನ ಸಾಮಾನ್ಯವಾಗಿ ಎಲ್ಲರಿಗೂ ಸೂಕ್ತವಾಗಿದೆ.

ಒಂದು ವೇಳೆ ನಿಮಗೆ ಚರ್ಮದಲ್ಲಿ ಉರಿ ಅಥವಾ ತಲೆಗೂದಲು ಉದುರುವುದು ಹೆಚ್ಚಾಯಿತು ಎನ್ನಿಸಿದರೆ ಮಾತ್ರ ಮುಂದುವರೆಸಬೇಡಿ. ಸಾಮಾನ್ಯವಾಗಿ ಒಂದೇ ವಾರದಲ್ಲಿ ಇದರ ಪರಿಣಾಮಗಳನ್ನು ಅರಿಯಬಹುದು. ಈ ವಿಧಾನ ನಿಮಗೆ ಸೂಕ್ತ ಎನಿಸಿದರೆ ವಾರದಲ್ಲಿ ಎರಡು ಬಾರಿ ಮಾತ್ರ ಅನುಸರಿಸಿ. ಕೂದಲಿಗೆ ಈರುಳ್ಳಿ ರಸ-ಸ್ಟೆಪ್ ಬೈ ಸ್ಟೆಪ್ ಟಿಪ್ಸ್

ಕೂದಲು ಉದುರುವುದು ಕಡಿಮೆಯಗುತ್ತಾ ಬಂದಂತೆ ವಾರಕ್ಕೆ ಎರಡು ಬಾರಿಯಿಂದ ಒಂದು ಬಾರಿಗೆ ಇಳಿಸಿ. ಉತ್ತಮ ಪರಿಣಾಮ ಪಡೆಯಲು ಸುಮಾರು ಮೂರರಿಂದ ಆರು ತಿಂಗಳಾದರೂ ಬೇಕಾಗಿರುವ ಕಾರಣ ಕೊಂಚ ತಾಳ್ಮೆ ಅಗತ್ಯ.

English summary

Simple Homemade Overnight Pack For Hair Loss Treatment

At some point or the other, we've all faced the problem of hair loss. Whether severe or mild, this can greatly affect an individual's outer appearance and confidence level. Common amongst both men and women, there are several factors like genes, hormones, diet, environmental factors, etc, that can be responsible for hair loss. So, today at Boldsky, we will be sharing with you an amazingly simple and easy way of treating the problem of hair loss in the most inexpensive way possible.
Story first published: Wednesday, June 1, 2016, 12:05 [IST]
X
Desktop Bottom Promotion