For Quick Alerts
ALLOW NOTIFICATIONS  
For Daily Alerts

ಕೂದಲಿನ ಸರ್ವ ಸಮಸ್ಯೆಗೂ-ಮೊಸರಿನ ಹೇರ್‌ ಪ್ಯಾಕ್‌

By Manu
|

ಮೊಸರನ್ನು ದೇಹದ ಆರೋಗ್ಯಕ್ಕೆ ಮಾತ್ರವಲ್ಲದೆ ವಿವಿಧ ರೀತಿಯ ಸೌಂದರ್ಯ ವರ್ಧಕಗಳಲ್ಲೂ ಬಳಸಬಹುದು. ಇದರಲ್ಲಿ ಹಲವಾರು ರೀತಿಯ ಸೌಂದರ್ಯವರ್ಧಕ ಗುಣಗಳಿವೆ ಎಂಬುದು ಈಗಾಗಲೇ ಸಾಬೀತಾಗಿದೆ.

ಚರ್ಮದ ಆರೈಕೆಯಲ್ಲಿಯೂ ಮೊಸರು ತುಂಬಾ ಜನಪ್ರಿಯವಾಗಿದೆ. ಇದು ಮೊಡವೆ, ಸೂರ್ಯನ ಕಿರಣಗಳಿಂದ ಆದ ಕಲೆಯನ್ನು ತೆಗೆದುಹಾಕಿ ಚರ್ಮಕ್ಕೆ ತೇವಾಂಶವನ್ನು ನೀಡುವುದರಲ್ಲಿ ಎತ್ತಿದ ಕೈ. ಇನ್ನೂ ಒಂದು ಹೆಜ್ಜೆ ಮುಂದೆ ಎಂಬಂತೆ, ಕೂದಲಿನ ಆರೈಕೆಯಲ್ಲೂ ಕೂಡ ಮೊಸರು ಈಗ ತನ್ನದೇ ಆದ ಕೈಚಳಕವನ್ನು ತೋರಿಸುತ್ತಿದೆ...

 Recipes To Use Curd In Your Hair

ನೈಸರ್ಗಿಕ ಕಂಡೀಶನರ್ ಆಗಿ ಕಾರ್ಯ ನಿರ್ವಹಿಸುವ ಮೊಸರನ್ನು ಹಲವಾರು ವಿಧಾನಗಳ ಮೂಲಕ ಕೂದಲಿಗೆ ಹಚ್ಚಬಹುದು. ಅದರಲ್ಲೂ ತಲೆಹೊಟ್ಟನ್ನು ನಿವಾರಿಸುವ ನೈಸರ್ಗಿಕ ಔಷಧಿಗಳಲ್ಲಿ ಹೆಚ್ಚಾಗಿ ಮೊಸರನ್ನು ಬಳಸಲಾಗುತ್ತದೆ. ಬನ್ನಿ ಮೊಸರನ್ನು ಬಳಸಿಕೊಂಡು ಮಾಡಲಾಗಿರುವ ಕೆಲವೊಂದು ಹೇರ್ ಪ್ಯಾಕ್‌‌ಗಳನ್ನು ಇಲ್ಲಿ ನೀಡಲಾಗಿದೆ. ಇದನ್ನು ನಿಮ್ಮ ಕೂದಲಿಗೆ ಬಳಸಿಕೊಂಡು ಕೂದಲಿನ ಅರೈಕೆ ಮಾಡಿಕೊಳ್ಳಿ. ಸೌಂದರ್ಯ ವೃದ್ಧಿಗೆ, ಮೊಸರಿನ ಫೇಸ್ ಪ್ಯಾಕ್

ಮೊಸರು ಮತ್ತು ಲಿಂಬೆರಸ
ಒಂದು ಪಿಂಗಾಣಿಗೆ ಮೊಸರನ್ನು ಹಾಕಿಕೊಂಡು ಸರಿಯಾಗಿ ಕಲಸಿಕೊಳ್ಳಿ. ಇದಕ್ಕೆ ನಿಂಬೆರಸ ಹಾಕಿ ಮತ್ತೆ ಕಲಸಿಕೊಳ್ಳಿ. ಇದನ್ನು ಕೂದಲು ಮತ್ತು ತಲೆಬುರುಡೆಗೆ ಸರಿಯಾಗಿ ಹಚ್ಚಿಕೊಳ್ಳಿ. ಇದನ್ನು ವಿಶೇಷವಾಗಿ ಕೂದಲಿನ ಬುಡಕ್ಕೆ ಹಚ್ಚಿಕೊಳ್ಳಿ. 10-15 ನಿಮಿಷ ಕಾಲ ಹಾಗೆ ಬಿಡಿ ಬಳಿಕ ಬಿಸಿ ನೀರು ಮತ್ತು ಶಾಂಪೂವಿನಿಂದ ತೊಳೆಯಿರಿ. ಇದು ಕೂದಲಿಗೆ ಒಳ್ಳೆಯ ನೈಸರ್ಗಿಕ ಔಷಧಿ. ಪ್ರತಿ ದಿನ ಮೊಸರು ಸೇವಿಸಿದರೆ ಖಂಡಿತ ಮೋಸವಿಲ್ಲ

ಮೊಸರು, ಬಾದಾಮಿ ಎಣ್ಣೆ ಹಾಗೂ ಮೊಟ್ಟೆ
ಮೊಸರು, ಮೊಟ್ಟೆ ಹಾಗೂ ಬಾದಾಮಿ ಎಣ್ಣೆಯಲ್ಲಿರುವ ವಿಟಮಿನ್‎ಗಳು ಮತ್ತು ಮಿನರಲ್‎ಗಳು ಕೂದಲಿನ ಗಡಸುತನವನ್ನು ನಿವಾರಿಸಿ ಮೃದುಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಅಂತೆಯೇ ತಲೆಹೊಟ್ಟಿನ ನಿವಾರಣೆಗೆ ಈ ರೆಸಿಪಿ ಸಹಕಾರಿಯಾಗಿದೆ.

ಬಳಸುವ ವಿಧಾನ
ಅರ್ಧ ಕಪ್ ಮೊಸರಿಗೆ 2 ಚಮಚ ಬಾದಾಮಿ ಎಣ್ಣೆ ಮತ್ತು ಒಡೆದ ಮೊಟ್ಟೆಯನ್ನು ಸೇರಿಸಿ ದಪ್ಪನೆಯ ಪೇಸ್ಟ್ ತಯಾರಿಸುವುದಕ್ಕಾಗಿ ಇವುಗಳನ್ನು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ ನಂತರ ಇದನ್ನು ನಿಮ್ಮ ಕೂದಲಿಗೆ ಹಚ್ಚಿಕೊಳ್ಳಿ, ಇನ್ನು 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ಕೂದಲನ್ನು ಮೃದು ಶಾಂಪೂ ಬಳಸಿ ತೊಳೆದುಕೊಳ್ಳಿ.

ಬೇವು ಮತ್ತು ಮೊಸರು
ಬೇವಿನಲ್ಲಿರುವ ಶಿಲೀಂಧ್ರ ನಿವಾರಕ ಗುಣಗಳು ಮತ್ತು ಮೊಸರಿನಲ್ಲಿರುವ ತಂಪು ಗುಣಗಳು ಎರಡೂ ಸೇರಿ ತಲೆ ಹೊಟ್ಟಿನ ಮೇಲೆ ದಾಳಿ ಮಾಡುತ್ತವೆ. ಇವು ನಿಮ್ಮ ಕೂದಲಿಗೆ ಮತ್ತೆ ಹೊಳಪು ಮತ್ತು ಲವಲವಿಕೆಯನ್ನು ನೀಡುತ್ತದೆ. ಈ ಪ್ಯಾಕ್ ನಿಮಗೆ ಅವಧಿಗೆ ಮುನ್ನ ಕೂದಲು ಬೆಳ್ಳಗಾಗುವುದನ್ನು ತಡೆಯುತ್ತದೆ.

ಬಳಸುವ ವಿಧಾನ
ನೀರಿನೊಂದಿಗೆ ಬೇವನ್ನು ಬೆರೆಸಿಕೊಂಡು ಪೇಸ್ಟ್ ರೀತಿ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು, ನಿಮ್ಮ ಕೂದಲಿನ ಬುಡಕ್ಕೆ ಲೇಪಿಸಿಕೊಂಡು, 15-20 ನಿಮಿಷ ಬಿಟ್ಟು, ನಂತರ ತೊಳೆದುಕೊಳ್ಳಿ.

ಮೊಸರು ಮತ್ತು ಈರುಳ್ಳಿ ರಸ
ಒಂದು ಈರುಳ್ಳಿಯನ್ನು ಮಿಕ್ಸಿಗೆ ಹಾಕಿಕೊಂಡು ರುಬ್ಬಿ. ಇದರ ರಸವನ್ನು ತೆಗೆದಿಟ್ಟುಕೊಳ್ಳಿ. ಪಾತ್ರೆಯಲ್ಲಿರುವ ಮೊಸರಿಗೆ ಈ ರಸವನ್ನು ಹಾಕಿಕೊಂಡು ಸರಿಯಾಗಿ ಕಲಸಿಕೊಳ್ಳಿ. ಇದನ್ನು ತಲೆಬುರುಡೆ ಮತ್ತು ಕೂದಲಿಗೆ ಹಚ್ಚಿಕೊಳ್ಳಿ. 10-15 ನಿಮಿಷದ ಬಳಿಕ ಗುಣಮಟ್ಟದ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ. ಇದು ತಲೆಬುರುಡೆಯ ಸೋಂಕು ಮತ್ತು ಹೇನನ್ನು ನಿವಾರಿಸಲು ಸಹಕಾರಿ.

ಮೊಸರು ಮತ್ತು ಮೆಂತೆ ಬೀಜಗಳು
ಮೆಂತೆ ಬೀಜಗಳು ಮತ್ತು ಮೊಸರು ನ್ಯೂಟ್ರೀನ್‎ಗಳ ಆಗರ ಎಂದೆನಿಸಿದ್ದು ಕೂದಲಿನ ಬುಡವನ್ನು ಗಟ್ಟಿ ಮಾಡುವಲ್ಲಿ ಸಹಕಾರಿಯಾಗಿದೆ. ಕೂದಲನ್ನು ಆರೋಗ್ಯಕರವಾಗಿ ಇರಿಸುವುದರ ಮೂಲಕ ಕೂದಲುದುರುವುದನ್ನು ಇದು ತಡೆಗಟ್ಟುತ್ತದೆ ಮತ್ತು ಕೂದಲನ್ನು ಆರೋಗ್ಯಕರವಾಗಿ ಇರಿಸುತ್ತದೆ. ಅಂತೆಯೇ ಹಾನಿಗೊಳಗಾದ ಕೂದಲಿನ ಕ್ಯೂಟಿಕಲ್‍‎ಗಳನ್ನು ರಿಪೇರಿ ಮಾಡಿ ಹೊಳೆಯುವ ಆಕರ್ಷಕ ಕೂದಲನ್ನು ನಿಮಗೆ ನೀಡುತ್ತದೆ.

ಬಳಸುವ ವಿಧಾನ
ಮೆಂತೆ ಬೀಜಗಳನ್ನು ಗ್ರೈಂಡರ್‎ನಲ್ಲಿ ರುಬ್ಬಿ ಪುಡಿ ಮಾಡಿಟ್ಟುಕೊಳ್ಳಿ ಈ ಮಿಶ್ರಣಕ್ಕೆ ಮೊಸರನ್ನು ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ ನಿಮ್ಮ ನೆತ್ತಿ ಮತ್ತು ಕೂದಲಿಗೆ ಇದನ್ನು ಹಚ್ಚಿಕೊಳ್ಳಿ. ನೆತ್ತಿಯನ್ನು ಸ್ವಲ್ಪ ಹೊತ್ತು ಮಸಾಜ್ ಮಾಡುತ್ತಿರಿ ಮೃದುವಾದ ಶಾಂಪೂ ಬಳಸಿ ಕೂದಲನ್ನು ತೊಳೆದುಕೊಳ್ಳಿ ಉತ್ತಮ ಫಲಿತಾಂಶವನ್ನು ಪಡೆಯಲು ಈ ವಿಧಾನವನ್ನು ಆಗಾಗ್ಗೆ ಮಾಡುತ್ತಿರಿ. ಅಡುಗೆ ಮನೆಯ ರಾಣಿ-ಮೆಂತೆ ಕಾಳಿನ ಕಾರುಬಾರು ನೋಡಿ...

English summary

Recipes To Use Curd In Your Hair

Using cur in your hair can have very good results. Some curd recipes are very good for your hair. Try these ways to use curd for your hair.
X
Desktop Bottom Promotion