ಈರುಳ್ಳಿ ಜ್ಯೂಸ್' ಬಳಸಿ-ಕೂದಲು ಸೊಂಪಾಗಿ ಬೆಳೆಯುತ್ತೆ!

By: Jaya subramanya
Subscribe to Boldsky

ಈರುಳ್ಳಿ ಎಂಬುದು ಅಡುಗೆ ಮನೆಯಲ್ಲಿ ಸರ್ವೇ ಸಾಮಾನ್ಯವಾಗಿರುವ ಅಗತ್ಯ ತರಕಾರಿ ಎಂದೆನಿಸಿದ್ದು, ಪ್ರತಿಯೊಂದು ಖಾದ್ಯಕ್ಕೂ ಇದು ಬೇಕೇಬೇಕು. ಈರುಳ್ಳಿಯ ಸ್ವಾದವಿಲ್ಲ ಎಂದಾದಲ್ಲಿ ಯಾವುದೇ ತಿನಿಸಿರಲಿ ಅದರ ಸ್ವಾದ ಸಪ್ಪೆಯಾಗಿಬಿಡುತ್ತದೆ. ಆದರೆ ಈರುಳ್ಳಿಯ ಕಮಾಲನ್ನು ಕೂದಲಿನ ಬೆಳವಣಿಗೆಯಲ್ಲಿ ಹೇಗೆ ಮಾಡಿಕೊಳ್ಳುವುದು ಎಂಬುದನ್ನು ತಿಳಿದರಂತೂ ನೀವು ಆಶ್ಚರ್ಯ ಹೊಂದುವುದು ಖಂಡಿತ. ಸೊಂಪಾದ ಕೂದಲು ಪಡೆಯಲು ಈರುಳ್ಳಿ ಜ್ಯೂಸ್ ಬಳಸಿ

ಒಣಕೂದಲ ಆರೈಕೆಗೆ ಈರುಳ್ಳಿಯನ್ನು ಅರೆದು ನಯವಾದ ಲೇಪನದಂತೆ ಲೇಪಿಸಿ ಅರ್ಧಗಂಟೆ ಕಾಲ ಹಾಗೇ ಬಿಟ್ಟು ಒಣಗಿಸಿ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಂಡು ಬಳಿಕ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳುವ ಮೂಲ ಉತ್ತಮ ಆರೈಕೆ ಪಡೆಯಬಹುದು.

ಕೂದಲಿಗೆ ಈರುಳ್ಳಿ ರಸವನ್ನು ಇತರ ನೈಸರ್ಗಿಕ ಸಾಮಾಗ್ರಿಗಳೊಂದಿಗೆ ಮಿಶ್ರಣ ಮಾಡಿ ಬಳಸಿದವರು ಬರೆಯ ಒಂದು ತಿಂಗಳಲ್ಲಿ ಉತ್ತಮ ಪರಿಣಾಮವನ್ನು ಕಂಡುಕೊಂಡಿದ್ದಾರೆ ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿದೆ. ಅಂತೆಯೇ ಕೂದಲುದುರುವುದು ಮೊದಲಾದ ಸಮಸ್ಯೆಗಳನ್ನು ಹೋಗಲಾಡಿಸುವಲ್ಲಿ ಕೂಡ ಈರುಳ್ಳಿ ತನ್ನ ಪವಾಡವನ್ನು ಮೆರೆದಿದೆ. ಕೂದಲಿಗೆ ಈರುಳ್ಳಿ ರಸ-ಸ್ಟೆಪ್ ಬೈ ಸ್ಟೆಪ್ ಟಿಪ್ಸ್

ಆದರೆ ಇಂದಿನ ಲೇಖನದಲ್ಲಿ ನಾವು ಈರುಳ್ಳಿಯನ್ನು ಬಳಸಿಕೊಳ್ಳುತ್ತಿರುವುದು ಕೂದಲು ಉದುರಿ ಬೋಳಾದ ಜಾಗದಲ್ಲಿ ಹೊಸಕೂದಲು ತಲೆದೋರುವಂತೆ ಮಾಡುವುದಕ್ಕಾಗಿದೆ.

ಈರುಳ್ಳಿಯು ಆಂಟಿಬ್ಯಾಕ್ಟೀರಿಯಲ್ ಅಂಶಗಳನ್ನು ಒಳಗೊಂಡಿರುವುದರಿಂದ ತಲೆಬುರುಡೆಯಲ್ಲಿ ಬೆಳೆದಿರುವ ಈಸ್ಟ್ ಅನ್ನು ಹೋಗಲಾಡಿಸುತ್ತದೆ, ಮತ್ತು ತಲೆಹೊಟ್ಟನ್ನು ನಿವಾರಿಸುತ್ತದೆ, ಹೆಚ್ಚುವರಿ ಜಿಡ್ಡಿನ ಉತ್ಪಾದನೆಯನ್ನು ಹೋಗಲಾಡಿಸಿ ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಬುಡದಿಂದಲೇ ಕಿತ್ತೊಗೆಯುತ್ತದೆ.

ಹಂತ 1

ಹಂತ 1

ಒಂದು ಈರುಳ್ಳಿಯನ್ನು ಚಿಕ್ಕದಾಗಿ ಹೆಚ್ಚಿ ಒಂದು ಚಿಕ್ಕ ಬೋಗುಣಿಯಲ್ಲಿ ಹಾಕಿ ಸ್ವಲ್ಪ ನೀರು ಸೇರಿಸಿ. ಈ ನೀರನ್ನು ಚೆನ್ನಾಗಿ ಕುದಿಸಿ. ಈರುಳ್ಳಿ ಬೆಂದು ಮೃದುವಾದ ಬಳಿಕ ಈ ನೀರನ್ನು ಸೋಸಿ ಬಾಟಲಿಯಲ್ಲಿ ಸಂಗ್ರಹಿಸಿ. ಈ ನೀರು ತಣಿದು ಉಗುರುಬೆಚ್ಚಗಾದ ಬಳಿಕ ತಲೆಗೂದಲ ಬುಡಕ್ಕೆ ನವಿರಾದ ಮಸಾಜ್ ಮೂಲಕ ಇಡಿಯ ತಲೆಗೆ ಹಚ್ಚಿ. ಒಂದು ಗಂಟೆ ಹಾಗೇ ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರು ಮತ್ತು ಸೌಮ್ಯ ಶಾಂಪೂ ಬಳಸಿ ತಲೆ ತೊಳೆದುಕೊಳ್ಳಿ. ಈರುಳ್ಳಿಯ ವಾಸನೆ ಪೂರ್ಣವಾಗಿ ಹೋಗಲು ಎರಡು ಅಥವಾ ಮೂರು ಬಾರಿ ತೊಳೆದುಕೊಳ್ಳಬೇಕಾಗಿ ಬರಬಹುದು. ಕೂದಲು ಉದುರುವಿಕೆಗೆ ಈರುಳ್ಳಿ ರಸದ ಚಮತ್ಕಾರ

ಹಂತ 2

ಹಂತ 2

ಎರಡು ಚಮಚ ಈರುಳ್ಳಿ ರಸವನ್ನು ಬಿಸಿಮಾಡಿದ ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಬಳಿಕ ತಲೆಗೆ ಹಚ್ಚಿಕೊಳ್ಳಿ. ತಲೆಗೂದಲ ಬುಡದಿಂದ ತುದಿಯವರೆಗೆ ಇದು ಆವರಿಸುವಂತೆ ನೋಡಿಕೊಳ್ಳಿ. ಸುಮಾರು ಒಂದು ಗಂಟೆ ಹಾಗೇ ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರು ಮತ್ತು ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.

ಹಂತ 3

ಹಂತ 3

ಕೊಬ್ಬರಿ ಎಣ್ಣೆಯ ಬಳಿಕ ಕೂದಲಿಗೆ ಆಲಿವ್ ಎಣ್ಣೆ ಉತ್ತಮ ಆಯ್ಕೆಯಾಗಿದೆ. ಮೊದಲು ಆಲಿವ್ ಎಣ್ಣೆಯಿಂದ ತಲೆಗೂದಲನ್ನು ಆವರಿಸಿ. ಹದಿನೈದು ನಿಮಿಷಗಳ ಬಳಿಕ ಈರುಳ್ಳಿಯ ರಸದಿಂದ ಎರಡನೆಯ ಪದರದಂತೆ ಹಚ್ಚಿ ಒಣಗಲು ಬಿಡಿ. ಇದಕ್ಕೆ ಸುಮಾರು ಹತ್ತರಿಂದ ಇಪ್ಪತ್ತು ನಿಮಿಷ ಬೇಕಾಗಬಹುದು. ನಂತರ ಉಗುರುಬೆಚ್ಚನೆಯ ನೀರು ಮತ್ತು ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ. ಆಲಿವ್ ಎಣ್ಣೆ ಕೂದಲ ಬುಡವನ್ನು ದೃಢಗೊಳಿಸಿದರೆ ಈರುಳ್ಳಿ ರಸ ಕೂದಲ ಬೆಳವಣಿಗೆಗೆ ಸಹಕರಿಸುತ್ತದೆ.

ಹಂತ 4

ಹಂತ 4

ಎರಡು ಚಮಚ ಈರುಳ್ಳಿ ರಸಕ್ಕೆ ಉಗುರು ಬೆಚ್ಚಗಿನ ಎಣ್ಣೆಯನ್ನು ಮಿಶ್ರಮಾಡಿಕೊಳ್ಳಿ. 3 ಹನಿಗಳಷ್ಟು ಲಿಂಬೆರಸವನ್ನು ಈ ಮಿಶ್ರಣಕ್ಕೆ ಸೇರಿಸಿ ಅಂತೆಯೇ ಮಾಸ್ಕ್ ಸಿದ್ಧಪಡಿಸಲು ತಯಾರಾಗಿರಿ. ವಿಟಮಿನ್ ಸಿ ಈರುಳ್ಳಿಯಲ್ಲಿದ್ದು ನಿಮ್ಮ ಕೂದಲಿಗೆ ಹೊಳಪು ಮತ್ತು ದಟ್ಟತೆಯನ್ನು ನೀಡುತ್ತದೆ.

ಹಂತ 5

ಹಂತ 5

ಅಗಲ ಹಲ್ಲುಳ್ಳ ಬಾಚಣಿಗೆಯನ್ನು ಬಳಸಿಕೊಂಡು ಕೂದಲಿನ ಸಿಕ್ಕುಗಳನ್ನು ನಿವಾರಿಸಿ. ಸಣ್ಣ ಭಾಗಗಳನ್ನಾಗಿ ಕೂದಲನ್ನು ವಿಭಾಗಿಸಿ. ತುದಿಯನ್ನು ಭಾಗವನ್ನು ಹಿಡಿದುಕೊಂಡು ಕೂದಲನ್ನು ಬಾಚಿಕೊಳ್ಳಿ ಇದರಿಂದ ಕೂದಲು ತುಂಡಾಗದಂತೆಯೇ ಸಿಕ್ಕನ್ನು ಬಿಡಿಸಿಕೊಳ್ಳಬಹುದಾಗಿದೆ.

ಹಂತ 6

ಹಂತ 6

ಕೂದಲುದುರುವುದನ್ನು ತಡೆಯಲು ಹರ್ಬಲ್ ಮಾಸ್ಕ್ ಅನ್ನು ಕೂದಲಿಗೆ ಹಚ್ಚಿಕೊಳ್ಳಿ. ನಿಮ್ಮ ಕೈ ಬೆರಳುಗಳಿಂದ ಮೃದುವಾಗಿ ಕೂದಲಿಗೆ ಮಸಾಜ್ ಮಾಡಿಕೊಳ್ಳಿ 5 ನಿಮಿಷಗಳ ಕಾಲ ವೃತ್ತಾಕಾರವಾಗಿ ಮಸಾಜ್ ಕ್ರಿಯೆಯನ್ನು ಮಾಡಿ. ರಕ್ತಸಂಚಾರವನ್ನು ಉತ್ತಮಗೊಳಿಸಿ ಮಾಸ್ಕ್ ಕೂದಲಿನಲ್ಲಿ ದೃಢವಾಗಿ ಇರುವಂತೆ ನೋಡಿಕೊಳ್ಳಿ.

ಹಂತ 7

ಹಂತ 7

ಈ ಮಾಸ್ಕ್ 45 ನಿಮಿಷಗಳ ಕಾಲ ಕೂದಲಿನಲ್ಲಿರಲಿ. ನಂತರ ಮೃದುವಾದ ಶ್ಯಾಂಪೂ ಬಳಸಿ ಮಾಸ್ಕ್ ಅನ್ನು ಕೂದಲಿನಿಂದ ತೆಗೆಯಿರಿ. ನೀವು ಜಿಡ್ಡಿನ ಕೂದಲನ್ನು ಹೊಂದಿದ್ದೀರಿ ಎಂದಾದಲ್ಲಿ ಕಂಡೀಷನರ್ ಅನ್ನು ಬಳಸಬೇಡಿ.

ಹಂತ 8

ಹಂತ 8

ಕೂದಲು ಸಿಕ್ಕುಸಿಕ್ಕಾಗಿದೆ ಎಂದಾದಲ್ಲಿ ಸ್ವಲ್ಪ ತೆಂಗಿನೆಣ್ಣೆಯನ್ನು ಅಂಗೈಗೆ ಹಚ್ಚಿಕೊಂಡು ಕೂದಲಿಗೆ ಮಸಾಜ್ ಮಾಡಿ. ಹೆಚ್ಚುವರಿ ಎಣ್ಣೆಯನ್ನು ಬಳಸಬೇಡಿ ಇದು ಕೂದಲನ್ನು ಹೆಚ್ಚು ಜಿಡ್ಡಾಗಿಸುತ್ತದೆ.

ಸೂಚನೆ

ಸೂಚನೆ

ಈರುಳ್ಳಿಯನ್ನು ಕೂದಲಿಗೆ ಹಚ್ಚಿಕೊಳ್ಳುವ ಮುನ್ನ ಅದರಲ್ಲಿರುವ ಹೆಚ್ಚುವರಿ ಸಲ್ಫರ್ ಅಂಶವು ನಿಮಗೆ ಅಲರ್ಜಿಯನ್ನು ಉಂಟುಮಾಡುತ್ತಿದೆ ಎಂದಾದಲ್ಲಿ ಮೊದಲಿಗೆ ಅದನ್ನು ಪರಿಶೀಲಿಸಿ ನಂತರ ಹಚ್ಚಿಕೊಳ್ಳಿ.

ಫಲಿತಾಂಶ

ಫಲಿತಾಂಶ

ಇದನ್ನು ನಿಯಮಿತವಾಗಿ 2 ತಿಂಗಳುಗಳ ಕಾಲ ಬಳಸುವುದರಿಂದ ಕೂದಲುದುರುವುದು ನಿಯಂತ್ರಣಕ್ಕೆ ಬರುತ್ತದೆ ಮತ್ತು ಬಕ್ಕತಲೆಯಲ್ಲಿ ಹೊಸ ಕೂದಲು ಸೃಷ್ಟಿಯಾಗುತ್ತದೆ. ನಿಮ್ಮ ಕೂದಲನ್ನು ಇದು ದಪ್ಪಗಾಗಿಸಿ ಗಾಢತೆಯನ್ನು ಉಂಟುಮಾಡುತ್ತದೆ. ಕೂದಲು ಬೇಗನೇ ಬೆಳೆಯಬೇಕೇ? ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್

English summary

ಕೂದಲು ಸೊಂಪಾಗಿಸುವಲ್ಲಿ ಈರುಳ್ಳಿ ರಸದ ಕಮಾಲು

Onion packs a powerful punch of antioxidants that reverse the signs of grey hair and add an irresistible shine to your locks. To boil it all down, onion juice hair mask can transform the way your hair looks and feels. Here is a step-by-step guide on how to fill in the bald spot naturally using onion.
Please Wait while comments are loading...
Subscribe Newsletter