For Quick Alerts
ALLOW NOTIFICATIONS  
For Daily Alerts

  ಕೂದಲಿನ ಸಹಜಕಾಂತಿಗೆ-ಮಾವು ಮೊಸರಿನ ಹೇರ್ ಪ್ಯಾಕ್

  By Manu
  |

  ವೃದ್ಧಾಪ್ಯದ ಸ್ಪಷ್ಟ ಚಿಹ್ನೆಗಳೆಂದರೆ ಕೂದಲು ನೆರೆಯುವುದು, ಚರ್ಮದಲ್ಲಿ ನೆರಿಗೆ ಮತ್ತು ಕೂದಲು ತೆಳ್ಳಗಾಗುವುದು. ಆದರೆ ಇಂದಿನ ದಿನಗಳಲ್ಲಿ ಕೂದಲು ನೆರೆಯುವುದು ಮತ್ತು ತೆಳ್ಳಗಾಗುವ ಚಿಹ್ನೆಗಳು ಯುವಜನತೆಯನ್ನೂ ಕಾಡತೊಡಗಿವೆ. ಸ್ವಾಭಾವಿಕವಾಗಿಯೇ ಇವು ವೃದ್ಧಾಪ್ಯವನ್ನು ಪ್ರಕಟಿಸಿಬಿಡುತ್ತವೆ. ಯಾವುದೇ ಯುವಕ ಯುವತಿಯರು ಸಹಿಸಲು ಸಾಧ್ಯವಾಗದ ಸಂಗತಿ ಇದು.

  ಇದಕ್ಕೆ ಕಾರಣವನ್ನು ಕೆದಕಿದರೆ ಬದಲಾದ ಜೀವನಶೈಲಿ, ಮಾನಸಿಕ ಒತ್ತಡ, ಅನಾರೋಗ್ಯಕ ಆಹಾರಕ್ರಮ ಮೊದಲಾದವು ಕಂಡುಬರುತ್ತವೆ. ಕೂದಲ ಆರೈಕೆಯಲ್ಲಿ ಕೊರತೆ, ಪೋಷಕಾಂಶಗಳ ಕೊರತೆ, ಪ್ರಬಲ ರಾಸಾಯನಿಕಗಳಿರುವ ಶಾಂಪೂ ಮತ್ತು ಇತರ ಪ್ರಸಾಧನಗಳ ಬಳಕೆ ಮೊದಲಾದವು ಇತರ ಕಾರಣಗಳಾಗಿವೆ.

  ಕೂದಲು ತೆಳ್ಳಗಾಗುವುದನ್ನು ಕಂಡುಕೊಳ್ಳಬೇಕಾದರೆ ಬೈತಲೆಯ ಅಗಲವನ್ನು ಗಮನಿಸಿದರೆ ಸಾಕು. ಇದು ಅಗಲವಾದಷ್ಟೂ ಕೂದಲು ತೆಳ್ಳಗಾಗಿದೆ ಎಂದು ತಿಳಿದುಕೊಳ್ಳಬಹುದು. ಕೂದಲು ತೆಳ್ಳಗಾಗುವುದು ಎಂದರೆ ಮಧ್ಯೆ ಮಧ್ಯೆ ಒಂದೊಂದು ಕೂದಲು ಇಲ್ಲವಾಗುವುದು. ಇದು ಒಂದೇ ಕಡೆ ಹೆಚ್ಚು ಇಲ್ಲವಾದರೆ ಬಕ್ಕತನ ಆವರಿಸಬಹುದು. ಇದಕ್ಕೆ ಪ್ರಮುಖ ಕಾರಣ ಕೂದಲ ಬುಡದಲ್ಲಿ ಪೋಷಣೆ ಕಡಿಮೆಯಾಗಿರುವುದು. ಈ ಪೋಷಣೆ ಒದಗಿಸಲು ಕೃತಕ ರಾಸಾಯನಿಕಗಳು ಇವೆಯಾದರೂ ಇದರ ಅಡ್ಡಪರಿಣಾಮಗಳು ಘೋರವಾಗಬಹುದು. ಮಾವಿನ ಹಣ್ಣಿನಲ್ಲಿ ಕಮ್ಮಿಯೆಂದರೂ 14 ಗುಣಗಳಿವೆ!

   Mango hair pack for thinning hair
   

  ಬದಲಿಗೆ ನೈಸರ್ಗಿಕ ವಿಧಾನವನ್ನು ಬಳಸಿ ಕೊಂಚ ನಿಧಾನವಾಗಿಯಾದರೂ ಸರಿ, ಯಾವುದೇ ಅಡ್ಡಪರಿಣಾಮವಿಲ್ಲದೇ ಉತ್ತಮ ಪೋಷಣೆ ನೀಡುವ ಮೂಲಕ ಹೊಸ ಕೂದಲುಗಳನ್ನು ಮತ್ತೆ ಹುಟ್ಟಿಸಲು ಸಾಧ್ಯವಾಗುತ್ತದೆ.

  ಈ ನಿಟ್ಟಿನಲ್ಲಿ ಹಲವು ಸಂಶೋಧನೆಗಳನ್ನು ಮಾಡಿ ಹಲವರ ಸೌಂದರ್ಯ ಮರುಕಳಿಸಲು ನೆರವಾದ ಸೌಂದರ್ಯ ತಜ್ಞೆರವರು ತಯಾರಿಸಿರುವ ಈ ವಿಧಾನವನ್ನು ಇಂದು ಪ್ರಸ್ತುತಪಡಿಸಲಾಗುತ್ತಿದ್ದು ಇದರ ಸರಿಯಾದ ಮತ್ತು ಸಮರ್ಪಕ ಬಳಕೆಯಿಂದ ಶೀಘ್ರವೇ ತೆಳ್ಳಗಾಗುತ್ತಿರುವ ಕೂದಲಿನವರೂ ಪ್ರಯೋಜನವನ್ನು ಪಡೆದುಕೊಳ್ಳಬಹುದು. ತ್ವಚೆಯ ಕೋಮಲತೆಗಾಗಿ ಮಾವಿನ ಹಣ್ಣಿನ ಫೇಸ್ ಪ್ಯಾಕ್ 

  ಮಾವು ಮತ್ತು ಮೊಸರಿನ ಕೇಶಲೇಪ ತಯಾರಿಸುವ ವಿಧಾನ

  *ಒಂದು ಚೆನ್ನಾಗಿ ಹಣ್ಣಾದ ಮಾವಿನ ಹಣ್ಣಿನ ತಿರುಳನ್ನು ಸಂಗ್ರಹಿಸಿ ಚೆನ್ನಾಗಿ ಕಿವುಚಿ ನಯವಾದ ಪೇಸ್ಟ್ ಮಾಡಿಕೊಳ್ಳಿ.

  *ಸಮಪ್ರಮಾಣದಲ್ಲಿ ಮೊಸರನ್ನು ಸೇರಿಸಿ ಒಂದು ಚಿಕ್ಕ ಚಮಚ ಬಾದಾಮಿ ಎಣ್ಣೆ ಸೇರಿಸಿ ಚೆನ್ನಾಗಿ ಕಲಕಿ.

  *ಈಗತಾನೇ ತಣ್ಣೀರಿನಲ್ಲಿ ಒದ್ದೆಯಾಗಿಸಿದ ಕೂದಲಿಗೆ ಈ ಲೇಪವನ್ನು ಬುಡಕ್ಕೆ ಹೆಚ್ಚು ಅನ್ವಯವಾಗುವಂತೆ ತುದಿಯವರೆಗೂ ಹಚ್ಚಿ ಒಣಗಲು ಬಿಡಿ.

  *ಸುಮಾರು ಇಪ್ಪತ್ತರಿಂದ ಮೂವತ್ತು ನಿಮಿಷ ಬಿಟ್ಟು ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಬಿಸಿನೀರು ಅಥವಾ ಸೋಪು, ಶಾಂಪೂ ಬಳಸಬೇಡಿ.

  ತನ್ನ ರುಚಿಯಿಂದಾಗಿ ಹಣ್ಣುಗಳ ರಾಜ ಎಂಬ ಪಟ್ಟವನ್ನು ಪಡೆದಿರುವ ಮಾವಿನ ಹಣ್ಣು ಕೇವಲ ಜಿಹ್ವೆಗಾಗಿ ಮಾತ್ರವಲ್ಲ, ಕೂದಲ ಆರೈಕೆಯ ವಿಷಯದಲ್ಲಿಯೂ ರಾಜನೇ ಆಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಎ ಮತ್ತು ಸಿ ಇದ್ದು ಕೂದಲಿಗೆ ಪೋಷಣೆ ನೀಡುವ ಜೊತೆಗೇ ಕೂದಲ ಬುಡಕ್ಕೂ ಹೆಚ್ಚಿನ ಪೋಷಣೆ ನೀಡುತ್ತದೆ. ಸವಿರುಚಿಯ ಮಾವಿನ ಹಣ್ಣಿನ ರಸಾಯನ

  ಅಷ್ಟೇ ಅಲ್ಲ, ಮಾವಿನ ಪೋಷಕಾಂಶಗಳು ಚರ್ಮದ ಆಳಕ್ಕೆ ಇಳಿದು ಮೊಡವೆಗಳಿಗೆ ಕಾರಣವಾಗುವ ಸೋಂಕುಗಳನ್ನು ನಿವಾರಿಸಿ ಚರ್ಮ ಸಹಜಕಾಂತಿಯನ್ನು ಪಡೆಯಲು ನೆರವಾಗುತ್ತದೆ. ಅಲ್ಲದೇ ಚರ್ಮದಲ್ಲಿ ಕೊಲ್ಯಾಜೆನ್ ಹೆಚ್ಚಿಸುವ ಮೂಲಕ ನೆರಿಗೆಗಳಾಗದಂತೆಯೂ ನೋಡಿಕೊಳ್ಳುತ್ತದೆ.

  ಚರ್ಮ ಮತ್ತು ಕೂದಲ ಆರೈಕೆಗೆ ಮೊಸರು ಸಹಾ ಉತ್ತಮ ಪ್ರಸಾಧನವಾಗಿದ್ದು ಚರ್ಮಕ್ಕೆ ಆರ್ದ್ರತೆ ಮತ್ತು ಕೂದಲ ಬುಡಕ್ಕೆ ಪೋಷಣೆ ನೀಡುವ ಮೂಲಕ ಚರ್ಮ ಸಹಜಕಾಂತಿ ನೀಡುತ್ತದೆ. ಒಣಗಿರುವ ಕಾರಣ ಗುಂಗುರಾಗಿದ್ದ ಕೂದಲನ್ನು ಮತ್ತೆ ಮೊದಲ ಗಾತ್ರಕ್ಕೆ ತರುವಲ್ಲಿಯೂ ಮೊಸರು ಪ್ರಮುಖ ಪಾತ್ರ ವಹಿಸುತ್ತದೆ.

  ಒಂದು ವೇಳೆ ಕೂದಲು ಉದುರುವುದು ಹೆಚ್ಚಾಗಿದ್ದರೆ ಕೊಂಚ ನೆನೆಸಿಟ್ಟ ಮೆಂತೆಯನ್ನು ಅರೆದು ಈ ಲೇಪನದೊಂದಿಗೆ ಬೆರೆಸಿ ಉಪಯೋಗಿಸುವುದರಿಂದ ಕೂದಲು ಉದುರುವುದು ಶೀಘ್ರವೇ ನಿಲ್ಲುತ್ತದೆ. ಮಾವಿನ ಎಲೆ: ಮಧುಮೇಹ, ಅಸ್ತಮಾ ರೋಗಕ್ಕೆ ರಾಮಬಾಣ 

  English summary

  Mango hair pack for thinning hair

  Hair around the hairline and the hair partition is the first to start thinning and slowly, it completely disappears, leading to bald patches. While nutritional supplements can help you tackle hair thinning and hair loss, why not treat the problem in a natural way, without any side effects? So There are many natural remedies for thinning hair and one of them is this mango and yoghurt hair pack.
  Story first published: Friday, July 1, 2016, 10:36 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more