ಮನೆಮದ್ದು: ಕೂದಲಿನ ಆರೈಕೆಗೆ ಬೆಟ್ಟದ ನೆಲ್ಲಿಕಾಯಿ!

By: Hemanth
Subscribe to Boldsky

ಭಾರತದಲ್ಲಿ ಹಿಂದಿನ ಕಾಲದಿಂದಲೂ ಕೂದಲು ಹಾಗೂ ಚರ್ಮದ ಆರೈಕೆಗಾಗಿ ಹಲವಾರು ರೀತಿಯ ನೈಸರ್ಗಿಕ ಸಾಮಗ್ರಿಗಳನ್ನು ಬಳಸುತ್ತ ಬರುತ್ತಾ ಇದ್ದಾರೆ. ನೈಸರ್ಗಿಕದತ್ತವಾದ ಕೆಲವೊಂದು ಹಣ್ಣುಗಳು ಹಾಗೂ ಕಾಯಿಗಳು ಕೂದಲು ಹಾಗೂ ತ್ವಚೆಯ ಆರೈಕೆಯಲ್ಲಿ ಫಲಿತಾಂಶವನ್ನು ನೀಡಿದೆ. ಕೂದಲಿನ ಸಮಸ್ಯೆಗಳಿಗೆ ನೆಲ್ಲಿಕಾಯಿ ಎಣ್ಣೆ ಪರಿಹಾರವೇ?

ಈ ನಿಟ್ಟಿನಲ್ಲಿ ನೈಸರ್ಗಿಕವಾಗಿ ದೊರೆಯುವ ಬೆಟ್ಟದ ನೆಲ್ಲಿಕಾಯಿಯು ಎಲ್ಲದಕ್ಕಿಂತಲೂ ಮೊದಲ ಸ್ಥಾನದಲ್ಲಿ ಬಂದು ನಿಲ್ಲುತ್ತದೆ.... ಅದರಲ್ಲೂ ಕೂದಲಿನ ಆರೈಕೆಯ ವಿಷಯಕ್ಕೆ ಬಂದಾಗ, ಇದು ಕೂದಲ ಬುಡಕ್ಕೆ ರಕ್ತದ ಪರಿಚಲನೆಯನ್ನು ಹೆಚ್ಚಿಸಿ, ಕೂದಲಿಗೆ ಆಮ್ಲಜನಕ ಮತ್ತು ಪೋಷಕಾಂಶಗಳು ದೊರೆಯುವಂತೆ ಮಾಡುತ್ತದೆ. ಆದ್ದರಿಂದ ನಿಮ್ಮ ಕೂದಲು ಸುಂದರವಾಗಿ ಬೆಳೆಯುತ್ತದೆ. ಅಬ್ಬಬ್ಬಾ..ಬೆಟ್ಟದ ನೆಲ್ಲಿಕಾಯಿಯ ಜಾದೂಗೆ ತಲೆಬಾಗಲೇಬೇಕು 

ಅಷ್ಟೇ ಏಕೆ ಕೂದಲ ಬುಡದಲ್ಲಿ ಕಂಡು ಬರುವ ತಲೆ ಹೊಟ್ಟು ಮತ್ತು ಶಿಲೀಂಧ್ರದ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಕೂದಲಿಗೆ ನೆಲ್ಲಿಕಾಯಿಯನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಬಹುದು ಎಂದು ಈ ಲೇಖನದಲ್ಲಿ ತಿಳಿದುಕೊಳ್ಳುವ.....  

ಕೂದಲು ಉದುರುವುದನ್ನು ಕಡಿಮೆ ಮಾಡುವುದು

ಕೂದಲು ಉದುರುವುದನ್ನು ಕಡಿಮೆ ಮಾಡುವುದು

ಕೂದಲು ಉದುರುವ ಸಮಸ್ಯೆಯಿದ್ದರೆ ನೀವು ಮೊದಲು ಮಾಡಬೇಕಾದ ಕೆಲಸವೆಂದರೆ ನೆಲ್ಲಿಕಾಯಿ ಎಣ್ಣೆಯಿಂದ ತಲೆಗೆ ಮಸಾಜ್ ಮಾಡಿಕೊಳ್ಳಬೇಕು. ಮಸಾಜ್‌ನಿಂದ ತಲೆಬುರುಡೆಯಲ್ಲಿ ರಕ್ತಸಂಚಾರವು ಉತ್ತಮವಾಗುವುದು. ಇದು ಕೂದಲಿಗೆ ನೆಲ್ಲಿಕಾಯಿಯ ಪ್ರಮುಖ ಲಾಭವಾಗಿದೆ.

ಅಕಾಲಿಕ ಬಿಳಿಯಾಗುವುದನ್ನು ತಡೆಯುವುದು

ಅಕಾಲಿಕ ಬಿಳಿಯಾಗುವುದನ್ನು ತಡೆಯುವುದು

ಕೆಲವು ನೆಲ್ಲಿಕಾಯಿಗಳನ್ನು ನೀರಿನಲ್ಲಿ ಕೆಲವು ಗಂಟೆಗಳ ಕಾಲ ನೆನೆಸಿದ ಬಳಿಕ ಒಂದು ಚಮಚ ನೀಲಗಿರಿ ಎಣ್ಣೆಯನ್ನು ಹಾಕಿ ಗಾಳಿಯಾಡದ ಗಾಜಿನ ಜಾಡಿಯಲ್ಲಿ ಒಂದು ರಾತ್ರಿ ನೆನೆಸಿಡಬೇಕು. ಬೆಳಿಗ್ಗೆ ಈ ದ್ರಾವಣವನ್ನು ಒಂದು ಮೊಟ್ಟೆ, ಒಂದು ಲಿಂಬೆಯ ರಸ ಹಾಗೂ ಸ್ವಲ್ಪ ಮೊಸರಿನೊಂದಿಗೆ ಮಿಶ್ರ ಮಾಡಿಕೊಂಡು ಕೂದಲಿಗೆ ಹಚ್ಚಿಕೊಂಡು ಒಂದೆರಡು ಗಂಟೆಗಳ ಬಳಿಕ ಸ್ನಾನ ಮಾಡಬೇಕು. ನೆಲ್ಲಿಕಾಯಿಯ ರಸವನ್ನು ಸೇವಿಸುವುದರಿಂದ ಅಥವಾ ಹಸಿಯಾಗಿ ತಿನ್ನುವುದರಿಂದ ಕೂದಲ ಆರೋಗ್ಯ ಹೆಚ್ಚುವುದು ಹಾಗೂ ದೇಹದ ಇನ್ನೂ ಹಲವು ತೊಂದರೆಗಳಿಗೆ ಪರಿಹಾರ ದೊರಕುತ್ತದೆ.

ತಲೆಹೊಟ್ಟು

ತಲೆಹೊಟ್ಟು

ಇದು ತಲೆಹೊಟ್ಟಿಗೆ ತುಂಬಾ ಪರಿಣಾಮಕಾರಿ ಚಿಕಿತ್ಸೆ. ಒಣಗಿಸಿದ ನೆಲ್ಲಿಕಾಯಿಯನ್ನು ತೆಂಗಿನ ಎಣ್ಣೆಯಲ್ಲಿ ಬಿಸಿ ಮಾಡಿಕೊಳ್ಳಿ. ನೆಲ್ಲಿಕಾಯಿ ತುಂಡುಗಳನ್ನು ತೆಗೆದು ಎಣ್ಣೆ ಬಳಸಿ. ಇದರಿಂದ ತಲೆಬುರುಡೆ ಒಣಗುವುದು ಮತ್ತು ತಲೆಹೊಟ್ಟನ್ನು ನಿವಾರಿಸಬಹುದು.

ಬಲಿಷ್ಠ ಕೂದಲಿಗೆ

ಬಲಿಷ್ಠ ಕೂದಲಿಗೆ

ನೆಲ್ಲಿಕಾಯಿ ಎಣ್ಣೆಯು ಕೂದಲಿನ ಕೋಶಗಳಿಗೆ ಪೋಷಕಾಂಶಗಳನ್ನು ನೀಡುವುದು ಮತ್ತು ಕೂದಲನ್ನು ಬಲಿಷ್ಠವಾಗಿಸುವುದು. ಇದು ಕೂದಲಿಗೆ ಒಳ್ಳೆಯ ಮದ್ದು. ಹಾಗಾಗಿ ನೆಲ್ಲಿಕಾಯಿಯನ್ನು ಕೂದಲಿನ ಆರೈಕೆಗೆ ಬಳಸಲು ಆರಂಭಿಸಿ.

ಕೂದಲಿನ ಬೆಳವಣಿಗೆಗೆ

ಕೂದಲಿನ ಬೆಳವಣಿಗೆಗೆ

ನೆಲ್ಲಿಕಾಯಿಯಲ್ಲಿರುವ ವಿಟಮಿನ್ ಸಿಯು ವೇಗವಾಗಿ ಕೂದಲು ಬೆಳೆಯಲು ನೆರವಾಗುವುದು. ಒಳ್ಳೆಯ ರೀತಿಯಲ್ಲಿ ಕೂದಲು ಬೆಳೆಯಲು ವಾರದಲ್ಲಿ ಒಂದು ಸಲ ತಲೆಬುರುಡೆಗೆ ನೆಲ್ಲಿಕಾಯಿ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಿ.

ತಲೆ ತುರಿಕೆಗೆ

ತಲೆ ತುರಿಕೆಗೆ

ನೆಲ್ಲಿಕಾಯಿ ಎಣ್ಣೆಯಲ್ಲಿ ಇರುವಂತಹ ಕ್ಯಾರೋಟಿನ್ ತಲೆಹೊಟ್ಟನ್ನು ತೆಗೆದುಹಾಕಿ ತಲೆಬುರುಡೆಯಲ್ಲಿ ಉಂಟಾಗುವ ತುರಿಕೆಯನ್ನು ಕಡಿಮೆ ಮಾಡುತ್ತದೆ. ತಲೆ ತುರಿಕೆಯನ್ನು ನೆಲ್ಲಿಕಾಯಿಯು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.

 
English summary

How To Use Amla For The Best Hair Of Your Life!

The Indian subcontinent has many amazing secret cures to hair and skin problems, with amla or Indian gooseberry being one of the most important ones. We'll tell you how to use amla for the hair in this article, keep reading!
Please Wait while comments are loading...
Subscribe Newsletter