For Quick Alerts
ALLOW NOTIFICATIONS  
For Daily Alerts

ಕೂದಲಿನ ಸಮಸ್ಯೆಗಳಿಗೆ ನೆಲ್ಲಿಕಾಯಿ ಎಣ್ಣೆ ಪರಿಹಾರವೇ?

|

ಕೂದಲಿನ ಸಮಸ್ಯೆಗೆ ಹೆಚ್ಚಿನವರು ನೆಲ್ಲಿಕಾಯಿ ಎಣ್ಣೆಯಿಂದ ಪರಿಹಾರವನ್ನು ಕಂಡು ಕೊಳ್ಳುತ್ತಾರೆ. ಕೂದಲಿನ ಆರೋಗ್ಯ ವೃದ್ಧಿಸುವ ಸಾಮರ್ಥ್ಯ ನೆಲ್ಲಿಕಾಯಿಗಿದೆ.

ದೂಳು, ಕೂದಲಿಗೆ ಅಗತ್ಯವಿರುವ ಪೋಷಕಾಂಶಗಳ ಕೊರತೆ, ಕ್ಲೋರೀನ್ ನೀರು, ಮಾನಸಿಕ ಒತ್ತಡ, ಸರಿಯಾಗಿ ನಿದ್ದೆ ಇಲ್ಲದಿರುವುದು ಇವೆಲ್ಲಾ ಕೂದಲು ಉದುರಲು ಪ್ರಮುಖ ಕಾರಣಗಳಾಗಿವೆ. ನೆಲ್ಲಿಕಾಯಿ ಕೂದಲಿನಲ್ಲಿರುವ ಕಲ್ಮಶವನ್ನು ಹೋಗಲಾಡಿಸಿ, ಕೂದಲಿಗೆ ಅಗತ್ಯವಿರುವ ಪೋಷಕಾಂಶವನ್ನು ಒದಗಿಸಿ, ಕೂದಲು ಉದುರುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ನೆಲ್ಲಿಕಾಯಿಯನ್ನು ಪುಡಿ ಮಾಡಿ ಎಣ್ಣೆ ಜೊತೆ ಬೆರೆಸಿ ತಲೆಗೆ ಹಚ್ಚಿದರೆ ಈ ಕೆಳಗಿನ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು:

ಅಕಾಲಿಕ ನೆರೆ ಕೂದಲು ಉಂಟಾಗುವುದಿಲ್ಲ

ಅಕಾಲಿಕ ನೆರೆ ಕೂದಲು ಉಂಟಾಗುವುದಿಲ್ಲ

ಇತ್ತೀಚಿನ ದಿನಗಳಲ್ಲಿ ನೆರೆ ಕೂದಲು ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಅದಕ್ಕೆ ಕಾರಣ ನಮ್ಮ ಜೀವನ ಶೈಲಿ ಕೂಡ. ನೆಲ್ಲಿಕಾಯಿ ಎಣ್ಣೆ ನಿಮ್ಮ ನೈಸರ್ಗಿಕವಾದ ಕೂದಲು ಬಿಳಿ ಬಣ್ಣಕ್ಕೆ ತಿರುಗುವುದನ್ನು ತಡೆಗಟ್ಟುತ್ತದೆ.

 ಡಲ್ ಕೂದಲಿಗೆ ಚೈತನ್ಯ ತುಂಬುತ್ತದೆ

ಡಲ್ ಕೂದಲಿಗೆ ಚೈತನ್ಯ ತುಂಬುತ್ತದೆ

ಡಲ್ ಕೂದಲು ನಿಮ್ಮ ಸೌಂದರ್ಯವನ್ನೂ ಮಂಕಾಗಿಸುತ್ತದೆ. ನೆಲ್ಲಿಕಾಯಿ ನಿಮ್ಮ ಕೂದಲನ್ನು ಬಲವಾಗಿಸಿ, ಕೂದಲಿನ ಶೈನಿ ಹೆಚ್ಚುವಂತೆ ಮಾಡುತ್ತದೆ.

ಕೂದಲನ್ನು ಮಂದವಾಗಿಸುತ್ತದೆ

ಕೂದಲನ್ನು ಮಂದವಾಗಿಸುತ್ತದೆ

ಕೂದಲು ತೆಳ್ಳಗಿದ್ದರೆ ನೆಲ್ಲಕಾಯಿ ಎಣ್ಣೆಯಿಂದ ಮಸಾಜ್ ಮಾಡುತ್ತಾ ಬಂದರೆ ಕೂದಲು ಮಂದವಾಗಿ, ಆಕರ್ಷಕವಾಗಿ ಬೆಳೆಯುತ್ತದೆ.

ತಲೆ ತುರಿಸುವುದಿಲ್ಲ

ತಲೆ ತುರಿಸುವುದಿಲ್ಲ

ಬೆವರು, ತಲೆ ಹೊಟ್ಟು ಇದ್ದರೆ ತಲೆ ತುರಿಸುತ್ತದೆ. ತಲೆ ಬುಡ ಡ್ರೈಯಾದರೆ ತಲೆ ಹೊಟ್ಟು ಉಂಟಾಗುವುದು. ಇದು ತಲೆ ಡ್ರೈಯಾಗುವುದನ್ನು ತಡೆಗಟ್ಟಿ ತಲೆ ತುರಿಕೆಯನ್ನು ಕಮ್ಮಿ ಮಾಡುತ್ತದೆ.

 ಉತ್ತಮವಾದ ಕಂಡೀಷನರ್

ಉತ್ತಮವಾದ ಕಂಡೀಷನರ್

ನೆಲ್ಲಿಕಾಯಿ ಪುಡಿಯನ್ನು ಪೇಸ್ಟ್ ರೀತಿ ಮಾಡಿ ಕಂಡೀಷನರ್ ಆಗಿ ಬಳಸಬಹುದು. ಇದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ, ನಿಮ್ಮ ಕೂದಲೂ ನೋಡಲು ಆಕರ್ಷಕವಾಗಿ ಕಾಣುತ್ತದೆ.

ತಲೆ ಹೊಟ್ಟು

ತಲೆ ಹೊಟ್ಟು

ತಲೆಹೊಟ್ಟು ತುರಿಕೆ ಉಂಟು ಮಾಡುವುದು ಮಾತ್ರವಲ್ಲ, ನಮ್ಮ ಕೂದಲಿನಲ್ಲಿ ಬಿಳಿ- ಬಿಳಿಯಾಗಿ ಎದ್ದು ಕಂಡು ನಮಗೆ ಮುಜುಗರವನ್ನೂ ಉಂಟು ಮಾಡುತ್ತದೆ. ನೆಲ್ಲಿಕಾಯಿ ಎಣ್ಣೆಯನ್ನು ಬಳಸಿ ನೋಡಿ ಕೆಲವೇ ದಿನಗಳಲ್ಲಿ ತಲೆಹೊಟ್ಟು ಸಂಪೂರ್ಣ ಮಾಯವಾಗುತ್ತದೆ.

ತೆಳು ಕೂದಲು

ತೆಳು ಕೂದಲು

ಕೆಲವರಿಗೆ ಸ್ವಾಭಾವಿಕವಾಗಿ ತೆಳು ಕೂದಲಿರುತ್ತದೆ. ಈ ರೀತಿ ತೆಳು ಕೂದಲಿರುವವರು, ಸೀಗೆಕಾಯಿ ಮತ್ತು ನೆಲ್ಲಿಕಾಯಿ ಪುಡಿ ಮಿಶ್ರಣ ಮಾಡಿ ತಲೆ ತೊಳೆದರೆ ಕೂದಲು ಮಂದವಾಗಿ ಕಾಣುವುದು ಹಾಗೂ ನಿಧಾನಕ್ಕೆ ಕೂದಲು ಕೂಡ ಮಂದವಾಗುವುದು.

ಕೂದಲು ಉದುರುವುದು ಕಡಿಮೆಯಾಗುತ್ತದೆ

ಕೂದಲು ಉದುರುವುದು ಕಡಿಮೆಯಾಗುತ್ತದೆ

ತುಂಬಾ ಕೂದಲು ಉದುರುತ್ತಿದ್ದರೆ ದಿನಾ ಒಂದು ನೆಲ್ಲಿಕಾಯಿ ತಿನ್ನಿ, ಕೂದಲನ್ನು ನೆಲ್ಲಿಕಾಯಿ ಎಣ್ಣೆಯಿಂದ ವಾರದಲ್ಲಿ 2-3 ಬಾರಿ ಮಸಾಜ್ ಮಾಡಿ. ಈ ರೀತಿ ಮಾಡಿದರೆ ಕೂದಲು ಉದುರುವುದು ಸಂಪೂರ್ಣ ಕಡಿಮೆಯಾಗುವುದು.

English summary

Hair Care With Amla | Tips For Skin Care | ನೆಲ್ಲಿಕಾಯಿ ಬಳಸಿ ಕೂದಲಿನ ಆರೈಕೆ | ಕೂದಲಿನ ಆರೈಕೆಗೆ ಕೆಲ ಸಲಹೆಗಳು

Amla oil is applied to improve hair growth and get thick hair. Want to find out how to care for your hair using amla? Check out...
Story first published: Tuesday, April 9, 2013, 12:18 [IST]
X
Desktop Bottom Promotion