For Quick Alerts
ALLOW NOTIFICATIONS  
For Daily Alerts

ಅಷ್ಟಕ್ಕೂ, ವಾರದಲ್ಲಿ ಎಷ್ಟು ಬಾರಿ ಕೂದಲು ತೊಳೆಯಬೇಕು?

By Suma
|

ಕೂದಲ ಆರೈಕೆ ನಮ್ಮೆಲ್ಲರ ಜವಾಬ್ದಾರಿ. ಈ ಜವಾಬ್ದಾರಿಯನ್ನು ಸಮರ್ಪಕ ರೀತಿಯಲ್ಲಿ ಅನುಸರಿಸದೇ ವಿನಾಕಾರಣ ತಪ್ಪು ತಿಳುವಳಿಕೆಯಿಂದ ಅನುಪಯುಕ್ತ ವಿಧಾನಗಳನ್ನು ಅನುಸರಿಸಿ ವೈಫಲ್ಯ ಹೊಂದಲಾಗುತ್ತಿದೆ. ಇನ್ನು ಕೂದಲ ಸ್ವಚ್ಛತೆಯ ವಿಷಯಕ್ಕೆ ಬರುವುದಾದರೆ ಕೂದಲನ್ನು ತೊಳೆಯುವ ಬಗೆ ಮತ್ತು ಅದರ ಪರಿಣಾಮಗಳ ಬಗ್ಗೆ ಮೊದಲು ಅರಿಯಬೇಕು. ನಾವು ಸಾಮಾನ್ಯವಾಗಿ ದಿನಬಿಟ್ಟು ದಿನ ಅಥವಾ ಮೂರು ದಿನಕ್ಕೊಮ್ಮೆ ಅಥವಾ ಕೆಲವರು ಪ್ರತಿದಿನ ತಮ್ಮ ಕೂದಲುಗಳನ್ನು ತೊಳೆದುಕೊಳ್ಳುತ್ತಾರೆ. ಆದರೆ ದಿನನಿತ್ಯ ಕೇಶವನ್ನು ತೊಳೆದುಕೊಂಡಲ್ಲಿ ಕೂದಲಿಗೆ ಹೆಚ್ಚು ಅಪಾಯ ಎಂದು ಅನೇಕರು ನಂಬಿದ್ದಾರೆ.

ಈ ತತ್ವಕ್ಕೆ ವಿರುದ್ಧವಾಗಿ ಕೇಶ ತಜ್ಞರ ಪ್ರಕಾರ, ನಿಮ್ಮ ಕೂದಲುಗಳನ್ನು ಪ್ರತಿದಿನ ತೊಳೆಯುವುದರಲ್ಲಿ ಯಾವುದೇ ಅಪಾಯವಿಲ್ಲ ಆದರೆ ತೊಳೆದ ತಕ್ಷಣ ಕೂದಲನ್ನು ಸಂಪೂರ್ಣವಾಗಿ ಒಣಗಿಸಬೇಕು ಎಂಬ ಅಚ್ಚರಿಯ ಸಂಗತಿಯು ತಿಳಿಸಲ್ಪಟ್ಟಿದೆ. ಏಕೆಂದರೆ ಪ್ರತಿದಿನ ನಿಮ್ಮ ಕೂದಲನ್ನು ಸ್ವಚ್ಛಗೊಳಿಸಿದಲ್ಲಿ, ನಿಮ್ಮ ಕೇಶದಲ್ಲಿರುವ ಧೂಳು ಮತ್ತು ಅನುಪಯುಕ್ತ ವಸ್ತುಗಳು ದೂರವಾಗುತ್ತವೆ. ಇದಕ್ಕೆ ನಿಮ್ಮ ಕೂದಲೂ ಸಹ ಸಹಕರಿಸಬೇಕಿದ್ದು, ನಿಮ್ಮ ಕೂದಲಿನ ವಿನ್ಯಾಸ ಮತ್ತು ರೀತಿಯ ಮೇಲೆ ಇದು ಅವಲಂಬಿತವಾಗಿರುತ್ತದೆ.

How often you should wash your hair, have a look...

ಒಣಕೂದಲನ್ನು ವಾರಕ್ಕೆ ಎರಡು ಬಾರಿ ತೊಳೆಯಿರಿ
ನಿಮಗೆ ಒಣ ಕೂದಲಿದ್ದಲ್ಲಿ, ಪ್ರತಿದಿನ ತೊಳೆಯುವುದನ್ನು ನಿಲ್ಲಿಸಿ, ಇಲ್ಲದಿದ್ದಲ್ಲಿ, ಕೂದಲಿನಲ್ಲಿರುವ ಸ್ವಾಭಾವಿಕ ಜಿಡ್ಡಿನ ಅಂಶವು ನಶಿಸಿಹೋಗುವ ಅಪಾಯವಿರುತ್ತದೆ. ಸ್ವಾಭಾವಿಕ ಜಿಡ್ಡಿನ ಕೊರತೆಯುಂಟಾದಲ್ಲಿ ತಲೆಹೊಟ್ಟು ಮತ್ತು ನವೆಯು ಸುಲಭವಾಗಿ ನಿಮ್ಮನ್ನು ಹೊಕ್ಕುತ್ತದೆ. ಇದನ್ನು ತಡೆಯಲು ವಾರಕ್ಕೆ ಎರಡು ಬಾರಿ ಸೌಮ್ಯವಾದ ಶಾಂಪೂ ಬಳಸಿ ಸ್ವಚ್ಛಗೊಳಿಸಿದರೆ ಸಾಕು. ಜೊತೆಗೆ ಕೂದಲು ಒಣಗುವುದನ್ನು ತಡೆಯಲು ತೈಲ ಹಚ್ಚಿಕೊಳ್ಳುವುದನ್ನು ಮರೆಯದಿರಿ. ರಾಸಾಯನಿಕ ಉತ್ಪನ್ನಗಳನ್ನು ಬಳಸಲು ಹಿಂಜರಿಕೆಯಿದ್ದರೆ, ತೆಂಗಿನ ಎಣ್ಣೆಯನ್ನು ಪ್ರಯತ್ನಿಸಿ. ಇದರಿಂದಲೂ ಒಳ್ಳೆಯ ಫಲಿತಾಂಶ ದೊರೆಯಬಹುದು.

ನಿಮ್ಮ ಜಿಡ್ಡಿನ ಅಥವಾ ಎಣ್ಣೆಯುಕ್ತ ಕೂದಲನ್ನು ಆರೈಕೆ ಮಾಡಲು ಕಷ್ಟವಾಗುತ್ತಿದೆಯೇ? ಈ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಲು ದಿನಬಿಟ್ಟು ದಿನ ಕೇಶವನ್ನು ತೊಳೆದುಕೊಂಡರೆ ಸಾಕು. ಇದರಿಂದ ಜಿಡ್ಡು ಉತ್ಪತ್ತಿಯನ್ನು ತಡೆಯಬಹುದಾಗಿದ್ದು, ತೊಳೆಯುವುದರಿಂದ ಉತ್ಪತ್ತಿಯಾಗುವುದನ್ನು ನಿಲ್ಲಿಸಬಹುದು. ಆದ್ದರಿಂದ ನಿಮ್ಮ ಕೇಶವನ್ನು ಕಡಿಮೆ ಸ್ವಚ್ಛಗೊಳಿಸಿದಲ್ಲಿ ಕಡಿಮೆ ಜಿಡ್ಡು ಹೊಂದಬಹುದು. ಬೆಚ್ಚನೆಯ ಅಥವಾ ತಂಪಾದ ನೀರಿನ ಬದಲಿಗೆ ಯಾವುದೇ ಕಾರಣಕ್ಕೂ ಸುಡುವ ನೀರಿನಿಂದ ನಿಮ್ಮ ಕೇಶವನ್ನು ಸ್ವಚ್ಛಗೊಳಿಸದಿರಿ. ಹೀಗಾದಲ್ಲಿ ಅದರ ಶಾಖಕ್ಕೆ ಕೂದಲು ತುಂಡಾಗುವ ಅಪಾಯವಿರುತ್ತದೆ.

English summary

How often you should wash your hair, have a look...

Daily, every alternate day or twice a week – how often do you wash your hair? Even though it is a common myth that washing your hair every day is a bad idea, hair expert, Jawed Habib, in his book ‘Hair Yoga’ says that you can wash your hair everyday as long as you rinse it properly. Because, washing your hair daily washes off the impurities and dirt. However, the answer may vary depending on your texture and hair type.
Story first published: Monday, January 25, 2016, 20:15 [IST]
X
Desktop Bottom Promotion