For Quick Alerts
ALLOW NOTIFICATIONS  
For Daily Alerts

ನಿಮ್ಮ ಸೌಂದರ್ಯ ಹೆಚ್ಚಿಸಲು ಹಾಲಿನ ಚಮತ್ಕಾರ

By Suma
|

ಹಾಲಿನ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ. ಹಾಲು ಪ್ರಪಂಚದಲ್ಲಿಯೇ ನಮಗೆ ಒದಗಿರುವ ಅಮೃತವೇ ಸರಿ. ಹಾಲಿಗಿಂತ ಮಿಗಿಲಾದ ದ್ರಾವಣ ಇನ್ನೊಂದಿಲ್ಲ ಎಂದು ವೇದಗಳಲ್ಲೇ ಹೇಳಲಾಗಿದೆ. ವಿಶೇಷವಾಗಿ ಭಾರತದಲ್ಲಿ ಹಾಲಿಗೆ ಪ್ರಮುಖವಾದ ಸ್ಥಾನ ನೀಡಲಾಗಿದೆ. ಆದ್ದರಿಂದಲೇ ಹಸುಗಳನ್ನು ಕಾಮಧೇನು ಎಂದು ಕರೆಯಲಾಗುತ್ತದೆ. ಹಾಲು ನಿಮ್ಮ ಆರೋಗ್ಯಕ್ಕೆ ಮಾತ್ರವಲ್ಲದೇ ನಿಮ್ಮ ಸೌಂದರ್ಯಕ್ಕೂ ನೆರವಾಗುತ್ತದೆ.

ಈ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಹಾಲಿನಲ್ಲಿ ನೈಸರ್ಗಿಕ ಗುಣಗಳು ಹೇರಳವಾಗಿದ್ದು, ನಿಮ್ಮ ಚರ್ಮವನ್ನು ಕಾಂತಿಯುಕ್ತಗೊಳಿಸಲು ಮತ್ತು ಮೃದುವಾಗಿಸಲು ನೆರವಾಗುತ್ತದೆ. ಅಲ್ಲದೇ ನಿಮ್ಮ ಕೂದಲ ಆರೈಕೆಗೂ ನೆರವಾಗುತ್ತದೆ. ಆದ್ದರಿಂದಲೇ ಹಾಲನ್ನು ಸಕಲ ಉಪಕಾರಿ ಎಂದು ಬಣ್ಣಿಸಲಾಗಿದೆ. ಹಾಲಿನ ಬಳಕೆಯಿಂದ ನಿಮ್ಮ ಚರ್ಮದ ಸತ್ತ ಜೀವಕೋಶಗಳು ನಾಶಗೊಂಡು, ಒಳಗಿನಿಂದಲೇ ತೇವಾಂಶ ನೀಡಿ ಅಂದವನ್ನು ಹೆಚ್ಚಿಸುತ್ತದೆ. ಹಾಲು-ಜೇನಿನ ಜೋಡಿ ಮಾಡಲಿದೆ ಕಮಾಲಿನ ಮೋಡಿ

ಇದರಲ್ಲಿರುವ ಸೂಕ್ಷ್ಮವಾದ ಪೌಷ್ಠಿಕಾಂಶ ಸತ್ವಗಳು ಕಳೆ ಕಳೆದು ಕೊಂಡಿರುವ ಕೂದಲು ಮತ್ತು ಒಣ ಚರ್ಮಕ್ಕೆ ಆರೈಕೆ ನೀಡಲು ನೆರವಾಗುತ್ತದೆ. ಇದರಿಂದ ನಿಮ್ಮ ಚರ್ಮದ ಕಾಂತಿಯು ಹೆಚ್ಚಾಗಿ ಚರ್ಮವನ್ನು ಸದೃಢಗೊಳಿಸುತ್ತದೆ. ಹಾಲಿನಿಂದ ನಿಮ್ಮ ಸೌಂದರ್ಯಕ್ಕೆ ಅನೇಕ ಪ್ರಯೋಜನಗಳಿದ್ದು, ಈ ಲೇಖನದಲ್ಲಿ ಕೆಲ ವಿಶಿಷ್ಟ ಸಂಗತಿಗಳನ್ನು ನೀಡಲಾಗಿದೆ. ಇದರಿಂದ ನಿಮ್ಮ ಚರ್ಮದ ಆರೈಕೆ ಮತ್ತು ಕೇಶದ ಆರೈಕೆಯ ಪ್ರಯೋಜನ ಹೊಂದಿರಿ. ವಿವರಗಳಿಗೆ ಮುಂದೆ ಓದಿ...

ಕಾಂತಿಯುತ ತ್ವಚೆ

ಕಾಂತಿಯುತ ತ್ವಚೆ

ಹಾಲಿನ ಬಳಕೆಯಿಂದ ಅಂದವಾದ ಮತ್ತು ಕಾಂತಿಯುತವಾದ ತ್ವಚೆಯನ್ನು ಹೊಂದಬಹುದು. ಇದರಲ್ಲಿ ಪೌಷ್ಠಿಕಾಂಶ ಸತ್ವಗಳು, ಪ್ರೋಟೀನ್ ಮತ್ತು ಖನಿಜ ಸತ್ವಗಳು ಹೇರಳವಾಗಿದ್ದು, ನಿಮ್ಮ ಚರ್ಮವನ್ನು ಒಳಗಿನಿಂದಲೇ ಸ್ವಚ್ಛಗೊಳಿಸಿ ಚರ್ಮದ ಹೊಳಪನ್ನು ಹೆಚ್ಚಿಸಲು ನೆರವಾಗುತ್ತದೆ.

ಅಂದವಾದ ಚರ್ಮ ಹೊಂದಲು

ಅಂದವಾದ ಚರ್ಮ ಹೊಂದಲು

ನಿಮ್ಮ ಚರ್ಮವನ್ನು ಸ್ವಾಭಾವಿಕವಾಗಿ ಅಂದಗೊಳಿಸಲು ಇರುವ ಸುಲಭ ವಿಧಾನವೇ ಹಾಲಿನ ಬಳಕೆ. 5 ಬಾದಾಮಿ ಬೀಜಗಳನ್ನು ಹಾಲಿನಲ್ಲಿ ನೆನೆಸಿಕೊಳ್ಳಿ. ನಂತರದ ದಿನ ಬೆಳಗ್ಗೆ ಆ ಬೀಜಗಳನ್ನು ಪುಡಿ ಮಾಡಿಕೊಂಡು ಪೇಸ್ಟ್ ರೂಪದಲ್ಲಿ ತಯಾರಿಸಿಕೊಳ್ಳಿ. ಈ ಪೇಸ್ಟ್ ಅನ್ನು ನಿಮ್ಮ ಚರ್ಮಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಹೊತ್ತಿನ ನಂತರ ನೀರಿನಿಂದ ಚೆನ್ನಾಗಿ ಸ್ವಚ್ಛಗೊಳಿಸಿರಿ. ಈಗ ನಿಮ್ಮ ಚರ್ಮದ ಹೊಳಪು ಹೆಚ್ಚಾಗಿರುವುದನ್ನು ಕಾಣಬಹುದು.

ಒರಟಾದ ಕೂದಲಿನ ಆರೈಕೆ

ಒರಟಾದ ಕೂದಲಿನ ಆರೈಕೆ

ಒರಟಾದ ಮತ್ತು ಸುಕ್ಕಾದ ಕೂದಲಿಗೆ ಹಾಲು ನಿಜಕ್ಕೂ ಉಪಯುಕ್ತ ಸಾಧನ. ನೀವು ಸ್ನಾನ ಮಾಡುವುದಕ್ಕಿಂತ ಕೆಲವು ನಿಮಿಷಗಳ ಮುಂಚಿತವಾಗಿ ಹಾಲನ್ನು ನಿಮ್ಮ ಕೇಶಕ್ಕೆ ಲೇಪಿಸಿಕೊಳ್ಳಿ. ಇದು ಒಳಗಿನಿಂದಲೇ ನಿಮ್ಮ ಕೇಶಕ್ಕೆ ಆರೈಕೆ ನೀಡಿ ಕೇಶದ ಕಾಂತಿಯನ್ನು ಹೆಚ್ಚಿಸುತ್ತದೆ.

ಮೃದುವಾದ ಚರ್ಮಕ್ಕೆ

ಮೃದುವಾದ ಚರ್ಮಕ್ಕೆ

ಹಾಲು ನಿಮ್ಮ ಚರ್ಮಕ್ಕೆ ತೇವಾಂಶ ನೀಡುವ ಉತ್ತಮ ಸಾಧನ. ಇದು ನಿಮ್ಮ ಚರ್ಮಕ್ಕೆ ಒಳಗಿನಿಂದಲೇ ತೇವಾಂಶ ನೀಡಿ ಹೆಚ್ಚು ಮೃದುಗೊಳಿಸುತ್ತದೆ. ಹಸಿ ಹಾಲನ್ನು ನಿಮ್ಮ ಚರ್ಮದ ಮೇಲೆ ಲೇಪಿಸಿಕೊಳ್ಳಿ. ಸ್ವಲ್ಪ ಹೊತ್ತಿನ ನಂತರ ಚೆನ್ನಾಗಿ ಸ್ವಚ್ಛಗೊಳಿಸಿ. ಈಗ ನಿಮ್ಮ ಚರ್ಮವು ಹೆಚ್ಚು ನಾಜೂಕುಗೊಂಡಿದ್ದು, ಮೃದುವಾಗಿರುವುದನ್ನು ಗಮನಿಸಬಹುದು.

ನಳನಳಿಸುವ ಚರ್ಮ ಹೊಂದಲು

ನಳನಳಿಸುವ ಚರ್ಮ ಹೊಂದಲು

ಎಲ್ಲರಿಗೂ ತಮ್ಮ ಚರ್ಮವು ಸದಾ ನಳನಳಿಸುತ್ತಿರಬೇಕೆಂದು ಅಪೇಕ್ಷಿಸುತ್ತಾರೆ. ನಿಮ್ಮ ಚರ್ಮಕ್ಕೆ ಹಾಲಿನ ಬಳಕೆಯಿಂದ ಅದರ ಹೊಳಪು ಹೆಚ್ಚಾಗಿ, ಅಂದವು ನೈಸರ್ಗಿಕವಾಗಿ ಹೆಚ್ಚುತ್ತದೆ. ಸ್ವಾಭಾವಿಕ ಕಾಂತಿಯನ್ನು ಹೊಂದಲು ಹಾಲನ್ನು ನೇರವಾಗಿ ಚರ್ಮಕ್ಕೆ ಹಚ್ಚಿಕೊಳ್ಳಿ. ಪ್ರತಿದಿನ ಈ ಪ್ರಕ್ರಿಯೆಯನ್ನು ಅನುಸರಿಸಿದರೆ ಶೀಘ್ರವೇ ಉತ್ತಮ ಫಲಿತಾಂಶ ಹೊಂದುವಿರಿ.

ಕಪ್ಪು ಕಲೆಗಳನ್ನು ನಿವಾರಿಸುತ್ತದೆ

ಕಪ್ಪು ಕಲೆಗಳನ್ನು ನಿವಾರಿಸುತ್ತದೆ

ಜಿಡ್ಡಿನ ಚರ್ಮಕ್ಕೆ ಮತ್ತು ಕಪ್ಪು ಕಲೆಗಳನ್ನು ನಿವಾರಿಸಲು ಹಾಲು ಹೆಚ್ಚು ಸಹಕಾರಿ. ಸ್ನಾನ ಮಾಡುವ ಮೊದಲು ಕಲೆಯ ಭಾಗಕ್ಕೆ ಹಾಲನ್ನು ಲೇಪಿಸಿಕೊಳ್ಳಿ. 15 ನಿಮಿಷಗಳ ನಂತರ ಚೆನ್ನಾಗಿ ಸ್ವಚ್ಛಗೊಳಿಸಿ. ಇದರಿಂದ ನಿಮ್ಮ ಚರ್ಮದ ಕಪ್ಪು ಕಲೆಗಳು ಮಾಯವಾಗಿ ಚರ್ಮದ ಹೊಳಪು ಹೆಚ್ಚಾಗಿರುವುದನ್ನು ನೀವು ನೋಡಬಹುದು.

English summary

How to Get Good Skin with Milk: 6 Steps

We all know the nutritional value of milk, but little do we know about its beauty benefits. Milk possesses natural properties that can result in a soft, bright skin and lustrous hair. Therefore, in this article, we at Boldsky will be listing out some of the best uses of milk for smooth skin and lustrous hair. Read on to know more about it.
Story first published: Friday, February 5, 2016, 19:59 [IST]
X
Desktop Bottom Promotion