For Quick Alerts
ALLOW NOTIFICATIONS  
For Daily Alerts

ಕೂದಲಿನ ಬಣ್ಣದ ರಹಸ್ಯ: ಕಷ್ಟವೂ ಅಲ್ಲ, ದುಬಾರಿಯೂ ಅಲ್ಲ!

By Super
|

ಕೂದಲ ಬಣ್ಣವನ್ನು ಕಪ್ಪು, ಗಾಢ ಕಂದು ಅಥವಾ ಗಾಢ ನೇರಳೆ ಬಣ್ಣಕ್ಕೆ ತಿರುಗಿಸುವುದು ಈಗ ಕಷ್ಟಕರವೂ ಅಲ್ಲ, ದುಬಾರಿಯೂ ಅಲ್ಲ. ಏಕೆಂದರೆ ವೃತ್ತಿಪರರಲ್ಲಿ ಪಡೆಯಬಹುದಾದ ಪರಿಣಾಮದ ಬಣ್ಣವನ್ನು ಅಡುಗೆಮನೆಯಲ್ಲಿರುವ ಸುಲಭ ಸಾಮಾಗ್ರಿಗಳೇ ನೀಡುತ್ತವೆ. ಉದಾಹರಣೆಗೆ ಟೀಪುಡಿಯನ್ನು ಅಥವಾ ಟೀ ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ಬೇಯಿಸಿ ಇದರೊಂದಿಗೆ ಕೆಲವು ಗಿಡಮೂಲಿಕೆ ಅಥವಾ ಸಾಂಬಾರ ಪದಾರ್ಥಗಳನ್ನು ಸೇರಿಸಿ ತಣಿಸಿ ಕೂದಲಿಗೆ ಹಚ್ಚಿಕೊಳ್ಳುವ ಮೂಲಕ ನೈಸರ್ಗಿಕ ಪೋಷಣೆ ಮತ್ತು ಬಣ್ಣವನ್ನು ಪಡೆಯಬಹುದು. ಈ ಬಣ್ಣ ಎಲ್ಲರ ಗಮನವನ್ನು ನಿಮ್ಮತ್ತ ಸೆಳೆಯುವುದು ಖಂಡಿತ. ಉತ್ತಮ ಪರಿಣಾಮಕ್ಕಾಗಿ ಪ್ರತಿಬಾರಿ ಶಾಂಪೂ ಬಳಸಿ ಕೂದಲು ತೊಳೆದುಕೊಂಡ ಬಳಿಕ ಈ ಗಿಡಮೂಲಿಕೆಗಳ ನೀರಿನಿಂದ ಕೂದಲಿಗೆ ಬಣ್ಣ ನೀಡುವನ್ನು ಹಚ್ಚಿಕೊಳ್ಳಲು ಮರೆಯದಿರಿ. ಕೂದಲಿಗೆ ಮೆಹೆಂದಿ ಹಚ್ಚಿಕೊಳ್ಳುವ ಮುನ್ನ ಇತ್ತ ಗಮನಿಸಿ

ಇದರ ಇನ್ನೊಂದು ಉಪಯೋಗವೆಂದರೆ ಇದನ್ನು ಬಳಸಲು ಪ್ರತ್ಯೇಕವಾದ ಸಮಯ ವ್ಯಯಿಸುವ ಅಗತ್ಯವಿಲ್ಲ. ನೀವು ಕೂದಲು ತೊಳೆದು ಕೊಳ್ಳುವಾಗಲೇ ಈ ದ್ರವವನ್ನು ಹಚ್ಚಿಕೊಳ್ಳುವ ಮೂಲಕ ಕೂದಲಿಗೆ ಬಣ್ಣವನ್ನು ಪಡೆಯಬಹುದು. ಈ ವಿಧಾನ ನಿಮ್ಮ ಕೂದಲಿಗೆ ಬಣ್ಣ ನೀಡುವ ಜೊತೆಗೇ ಪೋಷಣೆಯನ್ನೂ ನೀಡುವ ಮೂಲಕ ಆರೋಗ್ಯಕರ, ಸೊಂಪಾದ ಮತ್ತು ಕಾಂತಿಯುಕ್ತ ಕೂದಲನ್ನು ಪಡೆಯಲೂ ಸಾಧ್ಯವಾಗುತ್ತದೆ. ಹೊಂಬಣ್ಣದ ಕೂದಲಿನ ಆರೈಕೆಗೆ ಟಿಪ್ಸ್

ಅಲ್ಲದೇ ಕೂದಲು ಉದುರುವುದನ್ನೂ ಕಡಿಮೆಗೊಳಿಸುತ್ತದೆ. ಕೃತಕ ರಾಸಾಯನಿಕ ಆಧಾರಿತ ಬಣ್ಣಗಳು ಕೂದಲಿಗೆ ಬಣ್ಣ ನೀಡಿದರೂ ಇದರೊಂದಿಗೆ ಕೂದಲಿನ ದೃಢತೆಯನ್ನು ಕ್ಷೀಣಿಸುತ್ತವೆ. ಅಲ್ಲದೇ ಬಣ್ಣ ಹಚ್ಚುವ ವೇಳೆ ಅಪ್ಪಿತಪ್ಪಿ ಒಂದೆರಡು ಹನಿ ನಿಮ್ಮ ದುಬಾರಿ ಉಡುಪಿನ ಮೇಲೆ ಬಿದ್ದು ಅದರ ಅಂದಗೆಡಿಸಬಹುದು. ಆದರೆ ನೈಸರ್ಗಿಕ ವಿಧಾನದಿಂದ ಪಡೆಯುವ ಬಣ್ಣ ಕೂದಲಿಗೆ ಬಣ್ಣ ನೀಡುವ ಜೊತೆಗೇ ನೆರೆದ ಕೂದಲನ್ನೂ ಶಾಶ್ವತವಾಗಿ ಗಾಢವರ್ಣವಾಗಿಸುತ್ತದೆ. ಬನ್ನಿ, ಈ ಬಗ್ಗೆ ಹೆಚ್ಚಿನ ವಿವರಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ...

ಕಪ್ಪು ಟೀ ಸೊಪ್ಪಿನ ವಿಧಾನ

ಕಪ್ಪು ಟೀ ಸೊಪ್ಪಿನ ವಿಧಾನ

ಈ ವಿಧಾನದಲ್ಲಿ ಕೂದಲು ಗಾಢ ಕಪ್ಪು ಬಣ್ಣವನ್ನು ಪಡೆಯುತ್ತದೆ. ಇದಕ್ಕಾಗಿ ಒಂದು ಪಾತ್ರೆಯಲ್ಲಿ ಸುಮಾರು ಒಂದು ಲೀಟರ್ ನೀರಿನಲ್ಲಿ ಮೂರು ದೊಡ್ಡ ಚಮಚ ಟೀಪುಡಿ ಹಾಕಿ ಚಿಕ್ಕ ಉರಿಯಲ್ಲಿ ಒಂದು ಘಂಟೆ ಕುದಿಸಿ. ಬಳಿಕ ಉರಿಯನ್ನು ನಂದಿಸಿ ತಣಿಯಲು ಬಿಡಿ. ಈ ನೀರನ್ನು ಸೋಸಿ ಒಂದು ಬಾಟಲಿಯಲ್ಲಿ ಸಂಗ್ರಹಿಸಿ. ಸ್ನಾನದ ವೇಳೆ ಶಾಂಪೂವಿನಿಂದ ತೊಳೆದ ಬಳಿಕ ಕೂದಲನ್ನು ಈ ನೀರಿನಿಂದ ಕೂದಲನ್ನು ಬುಡದಿಂದ ತುದಿಯವರೆಗೆ ತೋಯಿಸಿಕೊಳ್ಳಿ. ತೋಯಿಸಿದ ಕೂದಲನ್ನು ಕನಿಷ್ಟ ಹತ್ತು ನಿಮಿಷಗಳವರೆಗೆ ಹಾಗೇ ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಅಕ್ರೋಟಿನ ವಿಧಾನ

ಅಕ್ರೋಟಿನ ವಿಧಾನ

ಈ ವಿಧಾನದ ಮೂಲಕ ಕೂದಲಿಗೆ ಗಾಢ ಕೆಂಪು ಅಥವಾ ನೆನೆದ ಇಟ್ಟಿಗೆಯ ಬಣ್ಣ (burgundy) ಬರುತ್ತದೆ. ಇದಕ್ಕಾಗಿ ನಾಲ್ಕು ಕಪ್ ನೀರಿನಲ್ಲಿ ಎರಡು ದೊಡ್ಡ ಚಮಚ ಅಕ್ರೋಟಿನ ಚೂರುಗಳನ್ನು ಸೇರಿಸಿ ಕುದಿಸಿ. ಸುಮಾರು ಐದಾರು ನಿಮಿಷ ಕುದಿದ ಬಳಿಕ ನೀರನ್ನು ಹಾಗೇ ಇಡಿಯ ರಾತ್ರಿ ತಣಿಯಲು ಬಿಡಿ. ಬೆಳಿಗ್ಗೆ ಸ್ನಾನದಲ್ಲಿ ಕೂದಲನ್ನು ಶಾಂಪೂ ಉಪಯೋಗಿಸಿ ತೊಳೆದುಕೊಂಡ ಬಳಿಕ ಈ ನೀರಿನಿಂದ ತೋಯಿಸಿ. ಹದಿನೈದು ನಿಮಿಷ ಹಾಗೇ ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಚೆಕ್ಕ ಮತ್ತು ಲವಂಗದ ವಿಧಾನ

ಚೆಕ್ಕ ಮತ್ತು ಲವಂಗದ ವಿಧಾನ

ಈ ವಿಧಾನದಿಂದ ಕೂದಲಿಗೆ ಕಂದು ಬಣ್ಣ ಲಭಿಸುತ್ತದೆ. ಇದಕ್ಕಾಗಿ ಅರ್ಧ ಕಪ್ ನೀರಿನಲ್ಲಿ ಕುಟ್ಟಿ ಪುಡಿ ಮಾಡಿದ ಒಂದು ಚಿಕ್ಕ ಚಮಚ ಚೆಕ್ಕೆ ಮತ್ತು ಲವಂಗಗಳನ್ನು ಸೇರಿಸಿ ಒಂದು ಘಂಟೆ ಕಾಲ ಚಿಕ್ಕ ಉರಿಯಲ್ಲಿ ಕುದಿಸಿ. ಇದನ್ನು ಹಾಗೇ ತಣಿಯಲು ಬಿಟ್ಟು ಶಾಂಪೂವಿನಿಂದ ಕೂದಲನ್ನು ತೊಳೆದುಕೊಂಡ ಬಳಿಕ ಕೂದಲಿಗೆ ಹಚ್ಚಿ ಹದಿನೈದು ನಿಮಿಷ ಹಾಗೇ ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಕ್ಯಾಮೋಮೈಲ್ ಮತ್ತು ಕ್ಯಾಲೆಂಡ್ಯುಲಾ ವಿಧಾನ

ಕ್ಯಾಮೋಮೈಲ್ ಮತ್ತು ಕ್ಯಾಲೆಂಡ್ಯುಲಾ ವಿಧಾನ

ಈ ವಿಧಾನದಿಂದ ಕೂದಲ ಗಾಢವರ್ಣ ಕಡಿಮೆಯಾಗುತ್ತದೆ, ಅರ್ಥಾತ್ ಕಪ್ಪು ಬಣ್ಣ ಕಡಿಮೆಯಾಗಿ ಹಳದಿ ಮಿಶ್ರಿತ ಕಪ್ಪು ಅಥವಾ ಗಾಢಚಿನ್ನದ ಬಣ್ಣ ಬರುತ್ತದೆ. ಇದಕ್ಕಾಗಿ ತಲಾ ಅರ್ಧ ಕಪ್ ಕ್ಯಾಮೋಮೈಲ್ ಮತ್ತು ಕ್ಯಾಲೆಂಡ್ಯುಲಾ ಹೂವುಗಳ ದಳಗಳನ್ನು ಮಿಶ್ರಣ ಮಾಡಿ ಒಂದು ಲೀಟರ್ ನೀರಿನಲ್ಲಿ ಹಾಕಿ ಸುಮಾರು ಮೂವತ್ತರಿಂದ ಅರವತ್ತು ನಿಮಿಷಗಳವರೆಗೆ ಕುದಿಸಿ (ಎಷ್ಟು ಗಾಢ ಬೇಕೋ ಆ ಪ್ರಕಾರ). ಬಳಿಕ ಇದನ್ನು ತಣಿಯಲು ಬಿಟ್ಟು ಶಾಂಪೂ ಬಳಿಕ ಕೂದಲನ್ನು ತೋಯಿಸಿ. ಇದನ್ನು ಮೂವತ್ತು ನಿಮಿಷ ಹಾಗೇ ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

 ಸೇಜ್ ಮತ್ತು ರೋಸ್ಮರಿ ಎಲೆಗಳ ವಿಧಾನ

ಸೇಜ್ ಮತ್ತು ರೋಸ್ಮರಿ ಎಲೆಗಳ ವಿಧಾನ

ಈ ವಿಧಾನದಿಂದ ಕೂದಲು ಗಾಢ ಕಪ್ಪು ಬಣ್ಣ ಪಡೆಯುತ್ತದೆ. ಇದಕ್ಕಾಗಿ ಕನ್ನಡದಲ್ಲಿ ಕಚೋರ ಎಲೆಗಳು ಎಂದೂ ಕರೆಯಲ್ಪಡುವ ಸೇಜ್ (Sage leaves, Salvia officinalis) ಎಲೆಗಳು ಎರಡು ಕಪ್ ಮತ್ತು ರೋಸ್ಮರಿ ಎಲೆ ಅರ್ಧ ಕಪ್ ಮತ್ತು ಒಂದು ದೊಡ್ಡ ಚಮಚ ಸೇಬಿನ ಶಿರ್ಕಾ ಸೇರಿಸಿ ಒಂದು ಗಂಟೆ ಒಂದು ಲೀಟರ್ ನೀರಿನಲ್ಲಿ ಕುದಿಸಿ. ಬಳಿಕ ತಣಿಯಲು ಬಿಡಿ. ಸ್ನಾನದ ಬಳಿಕ ಸೋಸಿದ ನೀರಿನಿಂದ ಕೂದಲನ್ನು ತೋಯಿಸಿ ಹತ್ತು ನಿಮಿಷ ಹಾಗೇ ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಗುಲಾಬಿ ಬೀಜ ಮತ್ತು ದಾಸವಾಳದ ವಿಧಾನ

ಗುಲಾಬಿ ಬೀಜ ಮತ್ತು ದಾಸವಾಳದ ವಿಧಾನ

ಈ ವಿಧಾನದಿಂದ ಕೂದಲಿಗೆ ಗಾಢ ಕೆಂಪು ಬಣ್ಣ ಬರುತ್ತದೆ. ಇದಕ್ಕಾಗಿ ಗುಲಾಬಿ ಹೂವು ಬಲಿತು ದಳಗಳು ಉದುರಿ ಬಲಿತ ಕಾಯಿಯಿಂದ ತೆಗೆದ ಬೀಜಗಳನ್ನು ಎರಡು ದೊಡ್ಡ ಚಮಚದಷ್ಟು ಹಾಗೂ ಸರಿಸುಮಾರು ಅಷ್ಟೇ ಪ್ರಮಾಣದಲ್ಲಿರುವಂತೆ ದಾಸವಾಳ ಹೂವಿನ ದಳಗಳನ್ನು ಎರಡು ಕಪ್ ನೀರಿನಲ್ಲಿ ಹಾಕಿ ಸುಮಾರು ಒಂದು ಘಂಟೆ ಕುದಿಸಿ. ಬಳಿಕ ಇದನ್ನು ತಣಿಸಿ ಸೋಸಿ ಬಾಟಲಿಯಲ್ಲಿ ಸಂಗ್ರಹಿಸಿ. ಸ್ನಾನದ ಸಮಯದಲ್ಲಿ ಶಾಂಪೂ ಮೂಲಕ ಕೂದಲನ್ನು ತೊಳೆದುಕೊಂಡ ಬಳಿಕ ಈ ದ್ರವದಿಂದ ತೋಯಿಸಿ ಹತ್ತು ನಿಮಿಷ ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

English summary

How To Colour Your Hair With Simple Kitchen Remedies

You can easily make your hair colour look deep brown or dark burgundy by using these simple rinses that you can make at home. They are easy to make and are cost-effective. All you need to do is to just boil the tea leaves or powder, herbs or spices in water and rinse your hair in it. Unlike the creamy hair dyes, so that everyone will get attracted to them. Make sure to rinse your hair with these herbal rinses every time you wash your hair with a shampoo. Here is how to dye your hair with these natural hair rinses at home.
Story first published: Wednesday, January 27, 2016, 17:24 [IST]
X
Desktop Bottom Promotion