Just In
Don't Miss
- News
ಡೊನಾಲ್ಡ್ ಟ್ರಂಪ್ಗೆ ಹಿನ್ನಡೆ: ವಾಗ್ದಂಡನೆ ಪರ ಅಧಿಕ ಮತ
- Automobiles
ಡಿ.21ರಂದು ಬಿಡುಗಡೆಯಾಗಲಿರುವ ಹೋಂಡಾ ಆಕ್ಟಿವಾ 6ಜಿ ಸ್ಪೆಷಲ್ ಏನು?
- Technology
ಟಿಕ್ಟಾಕ್ ಫಾಲೋವರ್ಸ್ ಹೆಚ್ಚಿಸಿಕೊಳ್ಳಬೇಕೆ?..ಹಾಗಿದ್ರೆ ಈ ಟಿಪ್ಸ್ ಮರೆಯದೆ ಬಳಸಿ!
- Movies
ಕೆಜಿಎಫ್ ಚಾಪ್ಟರ್ 2 ಫಸ್ಟ್ ಲುಕ್ ಬಗ್ಗೆ ಸಂಜಯ್ ದತ್ ಹೇಳಿದ್ದೇನು?
- Sports
ಆಸ್ಟ್ರೇಲಿಯಾ vs ನ್ಯೂಜಿಲೆಂಡ್, 1ನೇ ಟೆಸ್ಟ್, Live: ಸ್ಟಾರ್ ಆಗಿ ಹೊಳೆದ ಸ್ಟಾರ್ಕ್
- Education
NPCIL: 137 ಹುದ್ದೆಗಳ ನೇಮಕಾತಿ..ಜ.6ರೊಳಗೆ ಅರ್ಜಿ ಹಾಕಿ
- Finance
ಡಿಸೆಂಬರ್ 15 ಫಾಸ್ಟ್ಟ್ಯಾಗ್ ಡೆಡ್ಲೈನ್: ತಪ್ಪಿದರೆ ದುಪ್ಪಟ್ಟು ಟೋಲ್ ಶುಲ್ಕ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ಕೂದಲಿನ ಎಲ್ಲಾ ಸಮಸ್ಯೆಗೆ ಸಿಂಪಲ್ ಹೇರ್ ಪ್ಯಾಕ್
ಒತ್ತಡ ನಮ್ಮ ಜೀವನದಲ್ಲಿ ತನ್ನ ಕಬಂಧ ಬಾಹುಗಳನ್ನು ಚಾಚಿದೆ. ಯವುದೇ ಕೆಲಸ ಅಥವಾ ವಿಷಯವಿರಲಿ ಅಲ್ಲಿ ಒತ್ತಡವೆನ್ನುವುದು ಇಲ್ಲದೆ ಇರುವುದಿಲ್ಲ. ಇಂತಹ ಒತ್ತಡದಿಂದಾಗಿ ಹಲವಾರು ರೀತಿಯ ಸಮಸ್ಯೆಗಳು ನಮ್ಮನ್ನು ಕಾಡಲು ಆರಂಭಿಸುತ್ತದೆ. ಅದರಲ್ಲೂ ಪ್ರಮುಖವಾಗಿ ಕೂದಲು ಉದುರುವ ಸಮಸ್ಯೆ ಅತಿಯಾದ ಒತ್ತಡದಿಂದ ಬರುತ್ತದೆ. ಕೂದಲು ಉದುರಲು ಇತರ ಕೆಲವೊಂದು ಕಾರಣಗಳಿದ್ದರೂ ಒತ್ತಡವೂ ಅದರಲ್ಲಿ ಒಂದಾಗಿದೆ. ಸೊಂಪಾದ ಕೂದಲಿಗಾಗಿ 5 ಆರ್ಯುವೇದ ಹೇರ್ ಪ್ಯಾಕ್
ಇಂದಿನ ದಿನಗಳಲ್ಲಿ ಕೂದಲು ಉದುರುವುದು, ಕೂದಲು ತೆಳ್ಳಗೆ ಆಗುವುದು ಮತ್ತು ತಲೆ ಬುರುಡೆಯಲ್ಲಿ ತಲೆಹೊಟ್ಟು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಇಂತಹ ಸಮಸ್ಯೆಗಳು ನಮ್ಮ ಸಂಪೂರ್ಣ ತಲೆಯನ್ನೇ ಹಾಳುಗೆಡವುತ್ತದೆ. ಒತ್ತಡ, ಸರಿಯಾಗಿಲ್ಲದ ಜೀವನಶೈಲಿ, ಅನಾರೋಗ್ಯಕರ ಆಹಾರ, ನೀರು ಮತ್ತು ಕೂದಲಿನ ಬಗ್ಗೆ ಸರಿಯಾದ ಕ್ರಮ ತೆಗೆದುಕೊಳ್ಳದೆ ಇರುವುದು ಕೂದಲಿನ ಸಮಸ್ಯೆಗಳಿಗೆ ಕಾರಣವಾಗಿದೆ. ಸಂಪೂರ್ಣವಾಗಿ ನೀವು ಬೋಳು ತಲೆಯವರು ಆಗುವ ಮೊದಲು ಇದಕ್ಕೆ ನೈಸರ್ಗಿಕವಾದ ಕೆಲವೊಂದು ಔಷಧಿಗಳನ್ನು ಬಳಸಿಕೊಂಡು ಕೂದಲಿನ ಆರೈಕೆ ಮಾಡಬಹುದು.
ಮನೆಯಲ್ಲೇ ತಯಾರಿಸಿದ ಕೂದಲಿನ ಪ್ಯಾಕ್‌ನ್ನು ಬೋಲ್ಡ್ ಸ್ಕೈ ನಿಮ್ಮೊಂದಿಗೆ ಹಂಚಿಕೊಳ್ಳಲಿದೆ. ಈ ಕೂದಲಿನ ಪ್ಯಾಕ್ ಗೆ ಬಳಸುವ ಕೆಲವೊಂದು ಸಾಮಗ್ರಿಗಳು ತುಂಬಾ ಪ್ರಯೋಜನಕಾರಿ. ಇದು ಕೂದಲಿನ ಆರೈಕೆ ಮಾಡುವುದರೊಂದಿಗೆ ಕೂದಲು ದಷ್ಟಪುಷ್ಟವಾಗಿ ಬೆಳೆಯಲು ನೆರವಾಗುವುದು. ಕೂದಲಿನ ಸಹಜಕಾಂತಿಗೆ-ಮಾವು ಮೊಸರಿನ ಹೇರ್ ಪ್ಯಾಕ್
ಬೇಕಾಗುವ ಸಾಮಗ್ರಿಗಳು
*ಸಿಪ್ಪೆ ತೆಗೆದ ಬಾಳೆಹಣ್ಣು 1
*ಸಿಪ್ಪೆ ತೆಗೆದ ಅವಕೋಡ್ 1
*1-2 ಚಮಚ ಎಕ್ಸ್ ಟ್ರಾ ವರ್ಲಿನ್ ಆಲಿವ್ ಆಯಿಲ್
*1 ಚಮಚ ನೈಸರ್ಗಿಕ ಜೇನು
ಹೇರ್ ಮಾಸ್ಕ್ ನ ತಯಾರಿ ಮತ್ತು ಬಳಕೆ
*ಮೊದಲು ಬಾಳೆಹಣ್ಣು ಮತ್ತು ಅವೊಕೋಡಿನ (ಬೆಣ್ಣೆ ಹಣ್ಣು)ಸಿಪ್ಪೆ ತೆಗೆದು ಹುಡಿ ಮಾಡಿ. ಇತರ ಸಾಮಗ್ರಿಗಳನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
ಪೇಸ್ಟ್ ನಂತೆ ಆಗಲು ಸರಿಯಾಗಿ ಮಿಶ್ರಣ ಮಾಡಿ. ಪೇಸ್ಟ್‌ನ್ನುಕೂದಲಿನ ಬುಡ ಮತ್ತು ಇತರ ಭಾಗಗಳಿಗೆ ಸರಿಯಾಗಿ ಹಚ್ಚಿಕೊಳ್ಳಿ. 20-25 ನಿಮಿಷ ಹಾಗೆ ಬಿಟ್ಟುಬಿಡಿ. ಶವರ್ ಕ್ಯಾಪ್‌ನಿಂದ ತಲೆಯನ್ನು ಮುಚ್ಚಿ. ಸಮಯ ಕಳೆದ ಬಳಿಕ ಶಾಂಪೂ ಅಥವಾ ಕಂಡೀಷನರ್ ಹಾಕಿ ತೊಳೆಯಿರಿ.
*ವಾರದಲ್ಲಿ ಎರಡು ಸಲ ಈ ಹೇರ್ ಪ್ಯಾಕ್‌ನ್ನು ಬಳಸಿಕೊಂಡರೆ ಆಗ ಕೂದಲು ಉದುರುವುದು, ಕೂದಲು ತೆಳ್ಳಗೆ ಆಗುವುದು ಮತ್ತು ತಲೆಹೊಟ್ಟು ನಿವಾರಣೆಯಾಗುವುದು. ಮೊಟ್ಟೆಯಲ್ಲಿ ಅಡಗಿದೆ ಕೂದಲಿನ ಸಕಲ ಸೌಂದರ್ಯದ ರಹಸ್ಯ!
ಸೂಚನೆ:
ತಲೆ ಬುರುಡೆಗೆ ಹಚ್ಚುವ ಮೊದಲು ಇದನ್ನು ಕೈಗೆ ಹಚ್ಚಿಕೊಂಡು ಅಲರ್ಜಿ ಆಗುತ್ತದೆಯಾ ಎಂದು ತಿಳಿದುಕೊಳ್ಳಿ.