Just In
Don't Miss
- News
ಅಸ್ಸಾಂ ಚುನಾವಣಾಪೂರ್ವ ಸಮೀಕ್ಷೆ: ಕಷ್ಟಪಟ್ಟು ಅಧಿಕಾರಕ್ಕೆ ಬರಲಿದೆ ಬಿಜೆಪಿ
- Sports
ಪಂಜಾಬ್ನಲ್ಲಿ ಐಪಿಎಲ್ ಪಂದ್ಯಗಳೇಕಿಲ್ಲ?: ಬಿಸಿಸಿಐಗೆ ಬಿಸಿ ಮುಟ್ಟಿಸಿ ಪತ್ರ!
- Automobiles
ಟೊಯೊಟಾ ಕಾರುಗಳ ಖರೀದಿ ಮೇಲೆ ಮಾರ್ಚ್ ಅವಧಿಯ ಆಫರ್ ಘೋಷಣೆ
- Movies
ವಿಡಿಯೋ: ರಸ್ತೆ ವಿಚಾರಕ್ಕೆ ರಾಕಿಂಗ್ ಸ್ಟಾರ್ ಯಶ್ ತಾಯಿ ಮತ್ತು ಗ್ರಾಮಸ್ಥರ ನಡುವೆ ಗಲಾಟೆ
- Finance
ಎಲ್ಪಿಜಿ ಸಿಲಿಂಡರ್ ಬೆಲೆ 7 ವರ್ಷದಲ್ಲಿ ದುಪ್ಪಟ್ಟು ಏರಿಕೆ: ತೈಲದ ಮೇಲಿನ ತೆರಿಗೆ ಸಂಗ್ರಹ 459% ಹೆಚ್ಚಳ
- Education
UAS Dharwad Recruitment 2021: ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಮಾ.10ಕ್ಕೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೂದಲಿನ ಆರೈಕೆಗೆ ಸಿಂಪಲ್ ಮನೆಮದ್ದು, ಒಮ್ಮೆ ಪ್ರಯತ್ನಿಸಿ
ಬೋಳು ತಲೆಯವರನ್ನು ನೋಡಿದರೆ ಅಯ್ಯೋ ಪಾಪ ಎಂದು ಅನಿಸುವುದು ಇದೆ. ಆದರೆ ಇದಕ್ಕೆ ಅವರನ್ನು ದೂರಿ ಪ್ರಯೋಜನವಿಲ್ಲ. ಯಾಕೆಂದರೆ ಒತ್ತಡದ ಜೀವನ ಶೈಲಿ ಮತ್ತು ಮಾಲಿನ್ಯ ಇಂದಿನ ದಿನಗಳಲ್ಲಿ ಕೂದಲನ್ನು ನಿರ್ನಾಮ ಮಾಡಿಬಿಡುತ್ತದೆ. ಮುಖದ ಸೌಂದರ್ಯವನ್ನು ಹೆಚ್ಚಿಸುವುದೇ ಕೂದಲು. ಅದೇ ನಿಸ್ತೇಜವಾಗಿ ಕಾಣಿಸಿದರೆ ಆಗ ಮುಖದ ಸೌಂದರ್ಯ ಕೂಡ ಮರೆಯಾಗುತ್ತದೆ. ಇಂದಿನ ದಿನಗಳಲ್ಲಿ ಕೂದಲನ್ನು ಸರಿಯಾಗಿ ನಿರ್ವಹಣೆ ಮಾಡುವುದೇ ಒಂದು ಸಾಹಸ ಕೆಲಸವಾಗಿ ಹೋಗಿದೆ.
ನಿಸ್ತೇಜ ಕೂದಲು, ತಲೆಹೊಟ್ಟು ಮತ್ತು ಕೂದಲು ಉದುರುವುದು ಇಂದಿನ ಪ್ರಮುಖ ಸಮಸ್ಯೆಗಳು. ಕೂದಲಿನ ಅಂದವನ್ನು ಕಾಪಾಡಿಕೊಳ್ಳಲು ಹಲವಾರು ರೀತಿಯ ಚಿಕಿತ್ಸೆ ಹಾಗೂ ಶಾಂಪುಗಳನ್ನು ಬಳಸಿಕೊಳ್ಳುತ್ತೇವೆ. ಆದರೆ ಇದು ಯಾವುದೂ ಪ್ರಯೋಜನಕ್ಕೆ ಬರುವುದೇ ಇಲ್ಲ. ಆದರೆ ಮನೆಯಲ್ಲೇ ಮಾಡಿದಂತಹ ಕೆಲವು ಮದ್ದನ್ನು ಬಳಸಿಕೊಂಡರೆ ಅದು ನಿಮ್ಮ ಕೂದಲಿಗೆ ಹಾನಿಯನ್ನು ಉಂಟು ಮಾಡದೆ ಉತ್ತಮ ಫಲಿತಾಂಶವನ್ನು ನೀಡಲಿದೆ. ಇದರಿಂದ ನೀವು ನೈಸರ್ಗಿಕವಾಗಿ ಆರೋಗ್ಯಕರ ಕೂದಲನ್ನು ಪಡೆಯಬಹುದು. ಇದನ್ನೊಮ್ಮೆ ಪ್ರಯತ್ನಿಸಿ ನೋಡಿ...

ದಾಸವಾಳದ ಹೂ
ದಾಸವಾಳದ ಹೂವಿನಲ್ಲಿ ಉತ್ಕೃಷ್ಟ ಮಟ್ಟದ ಕೂದಲಿನ ಚಿಕಿತ್ಸಾ ಗುಣಗಳಿವೆ. ಇದು ತಲೆಹೊಟ್ಟಿಗೆ ಅತ್ಯುತ್ತಮ ಔಷಧಿ. ಇದು ಕೂದಲು ಬೆಳೆಯಲು ಮತ್ತು ಹೊಳೆಯುವಂತೆ ಮಾಡಲು ನೆರವಾಗುತ್ತದೆ. ತೆಂಗಿನ ಎಣ್ಣೆಯೊಂದಿಗೆ ದಾಸವಾಳದ ಹೂವಿನ ಪೇಸ್ಟ್ ಮಾಡಿ ಅದನ್ನು ತಲೆಗೆ ಹಚ್ಚಿಕೊಳ್ಳಿ ಮತ್ತು ಉತ್ತಮ ಫಲಿತಾಂಶ ಪಡೆಯಿರಿ.

ತೆಂಗಿನಕಾಯಿ ಹಾಲು
ತೆಂಗಿನಕಾಯಿ ಹಾಲು ಕೂದಲು ತುಂಡಾಗುವುದನ್ನು ತಡೆಯುತ್ತದೆ. ಕೂದಲು ತುಂಡಾಗದಂತೆ ಮತ್ತು ಉದುರದಂತೆ ತೆಂಗಿನಕಾಯಿ ಹಾಲನ್ನು ಹೇರ್ ಕಂಡಿಷನರ್ ಆಗಿ ಬಳಸಲಾಗುತ್ತದೆ. ತೆಂಗಿನ ಕಾಯಿ ಹಾಲನ್ನು ರಾತ್ರಿ ಮಲಗುವ ಮೊದಲು ತಲೆಗೆ ಮಸಾಜ್ ಮಾಡಿ ಮರುದಿನ ಬೆಳಗ್ಗೆ ಅದನ್ನು ತಣ್ಣೀರಿನಿಂದ ತೊಳೆಯಿರಿ.

ಅಲೋವೆರಾ
ಅಲೋವೆರಾವು ಸೌಂದರ್ಯವರ್ಧಕವೆನ್ನುವುದು ಪ್ರತಿಯೊಬ್ಬರಿಗೂ ತಿಳಿದಿದೆ. ಕೂದಲಿನ ಸೌಂದರ್ಯಕ್ಕೆ ಮೊಟ್ಟೆಯೊಂದಿಗೆ ಅಲೋವೆರಾವನ್ನು ಸೇರಿಸಿ ಬಳಸಿದರೆ ಉತ್ತಮ ಫಲಿತಾಂಶ ಖಚಿತ. ಅಲೋವೆರಾ ಮತ್ತು ಮೊಟ್ಟೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲಿನ ಬೆಳವಣಿಗೆಯಾಗಿ ಕಾಂತಿ ಬರುವುದು.

ಕಿತ್ತಳೆ
ಕಿತ್ತಳೆಯನ್ನು ದೇವರು ನಮಗೆ ಕೊಟ್ಟ ವರ ಎಂದೇ ಹೇಳಬಹುದು. ಇದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳಿವೆ. ಇದನ್ನು ಕೂದಲಿನ ಆರೋಗ್ಯಕ್ಕೂ ಬಳಸಿಕೊಳ್ಳಬಹುದು. ಜಿಡ್ಡನ್ನು ಹೊಂದಿರುವ ತಲೆಬುರುಡೆ ಮತ್ತು ತಲೆಹೊಟ್ಟಿಗೆ ಕಿತ್ತಳೆ ಜ್ಯೂಸ್ ಹಚ್ಚಿದರೆ ಒಳ್ಳೆಯದು. ವಾರಕ್ಕೆ ಒಂದು ಸಲ ಕಿತ್ತಳೆ ಜ್ಯೂಸನ್ನು ತಲೆಗೆ ಹಚ್ಚಿಕೊಂಡರೆ ದಪ್ಪಗಿನ ಹಾಗೂ ಉದ್ದದ ಕೂದಲನ್ನು ಪಡೆಯಬಹುದು.