For Quick Alerts
ALLOW NOTIFICATIONS  
For Daily Alerts

ಈರುಳ್ಳಿ ಬಳಸಿ ತಲೆ ಕೂದಲಿನ ಸಮಸ್ಯೆಗೆ ವಿದಾಯ ಹೇಳಿ

By Jaya Subramanya
|

ತಲೆಗೂದಲಿನ ಸಮಸ್ಯೆ ಹೆಂಗಳೆಯರು ನಿತ್ಯವೂ ಅನುಭವಿಸುವ ಬವಣೆಯಾಗಿದೆ. ಕೂದಲು ಉದುರುವುದು, ತಲೆ ತುರಿಕೆ, ತಲೆ ಹೊಟ್ಟು ಹೀಗೆ ಕೂದಲಿನ ಸಮಸ್ಯೆಗಳು ತೀರುವುದೇ ಇಲ್ಲ. ಇದರ ನಿವಾರಣೆಗೆಂದೇ ಬಳಸದ ಉತ್ಪನ್ನಗಳಿಲ್ಲ ಸುತ್ತದ ಮಾರುಕಟ್ಟೆಗಳಿಲ್ಲ ಅಲ್ಲವೇ? ರಾಸಾಯನಿಕ ಉತ್ಪನ್ನಗಳಿಂದ ಕೂದಲಿನ ಸಮಸ್ಯೆಗಳು ತೀರಿಲ್ಲದಿದ್ದರೂ ಸಮಸ್ಯೆ ಇನ್ನಷ್ಟು ಹೆಚ್ಚಾಗಿರುವುದಂತೂ ನಿಜ ಅಲ್ಲವೇ? ಹಾಗಿದ್ದರೆ ಮನೆಮದ್ದುಗಳ ಪ್ರಯೋಗವನ್ನು ಈ ಸಮಸ್ಯೆಗಳಿಗೆ ಮಾಡಿಕೊಂಡು ಸೂಕ್ತ ಪರಿಹಾರವನ್ನು ಪಡೆದುಕೊಳ್ಳಬಹುದು ಅಲ್ಲವೇ? ತಲೆಹೊಟ್ಟಿನ ಸಮಸ್ಯೆ ನಿವಾರಣೆಯಲ್ಲಿ ಈರುಳ್ಳಿಯ ಪಾತ್ರವೇನು?

ಹಾಗಿದ್ದರೆ ಅದು ಯಾವ ರೀತಿಯ ಸೈಸರ್ಗಿಕ ಮನೆಮದ್ದು ಎಂಬುದಾಗಿ ನೀವು ತಲೆಕೆಡಿಸಿಕೊಂಡಿದ್ದೀರಾ ಅಲ್ಲವೇ? ಅದುವೇ ಈರುಳ್ಳಿಯ ಪ್ರಯೋಗ. ಈ ವಿಷಯ ಕೇಳಿದರೆ ನಿಮಗೆ ಆಶ್ಚರ್ಯವಾಗುವುದು ಖಂಡಿತ. ಕೂದಲಿನ ಸಮಸ್ಯೆಗೆ ಈರುಳ್ಳಿ ಹೇಗೆ ಪ್ರಯೋಜನಕಾರಿಯಾಗಬಲ್ಲುದು ಎಂದು ಯೋಚಿಸುತ್ತಿದ್ದೀರಾ? ಇಂದಿನ ಲೇಖನದಲ್ಲಿ ನಿಮ್ಮ ಯೋಚನೆಗೆ ಕಡಿವಾಣ ಹಾಕುವ ಪರಿಹಾರಗಳನ್ನೇ ನಾವು ನೀಡುತ್ತಿದ್ದೇವೆ. ಸೊಂಪಾದ ಕೂದಲು ಪಡೆಯಲು ಈರುಳ್ಳಿ ಜ್ಯೂಸ್ ಬಳಸಿ

ಕೂದಲಿನ ಆರೈಕೆಗೆ ಈರುಳ್ಳಿಯನ್ನು ನಾನಾ ಬಗೆಯಲ್ಲಿ ಬಳಸುವುದು ಹೇಗೆ ಎಂಬುದೇ ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿರುವ ಅಂಶಗಳಾಗಿವೆ. ಈರುಳ್ಳಿಯ ರಸದಿಂದ ಹೇರ್ ಪ್ಯಾಕ್ ತಯಾರಿಸಿಕೊಂಡು ಕೂದಲಿನ ಸೌಂದರ್ಯವನ್ನು ವೃದ್ಧಿಸಿಕೊಳ್ಳಬಹುದು. ಅಂತೆಯೇ ಈ ತರಕಾರಿಯಲ್ಲಿರುವ ಸಲ್ಫರ್ ಅಂಶವು ಕೂದಲಿನ ಸಮಸ್ಯೆಗಳ ವಿರುದ್ಧ ಹೋರಾಡುತ್ತದೆ. ಹಾಗಿದ್ದರೆ ಬನ್ನಿ ಇಂದಿನ ಲೇಖನದಲ್ಲಿ ಆ ಅಂಶಗಳನ್ನು ಅರಿತುಕೊಳ್ಳೋಣ...

ತಲೆಬುರುಡೆಗೆ ಈರುಳ್ಳಿ ರಸದ ಮಸಾಜ್

ತಲೆಬುರುಡೆಗೆ ಈರುಳ್ಳಿ ರಸದ ಮಸಾಜ್

ಈರುಳ್ಳಿಯನ್ನು ಸಮನಾಗಿ ತುಂಡರಿಸಿಕೊಂಡು ಅದನ್ನು ಚೆನ್ನಾಗಿ ತಿಕ್ಕಿಕೊಳ್ಳಿ. ನಂತರ ಈರುಳ್ಳಿಯ ರಸವನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ. 30-40 ನಿಮಿಷಗಳವರೆಗೆ ಹಾಗೆಯೇ ಬಿಡಿ. ಮೃದು ಶ್ಯಾಂಪೂ ಬಳಸಿ ಕೂದಲನ್ನು ತೊಳೆದುಕೊಳ್ಳಿ. ಕೂದಲಿನ ಪೋಷಣೆಗೆ ಇದು ಉತ್ತಮ ವಿಧಾನವಾಗಿದೆ.

ಕೂದಲಿಗೆ ಈರುಳ್ಳಿ ರಸದ ಪ್ರಯೋಗ

ಕೂದಲಿಗೆ ಈರುಳ್ಳಿ ರಸದ ಪ್ರಯೋಗ

ಕೂದಲಿನ ಕಾಳಜಿಗಾಗಿ ಈರುಳ್ಳಿಯನ್ನು ಹಲವಾರು ವಿಧದಲ್ಲಿ ಬಳಸುವತ್ತ ನೀವು ಯೋಚಿಸುತ್ತಿದ್ದೀರಾ? ಈರುಳ್ಳಿಯ ರಸವನ್ನು ಹಿಂಡಿಕೊಂಡು ಅದನ್ನು ನೀರಿನೊಂದಿಗೆ ಬೆರೆಸಿಕೊಳ್ಳಿ. ಈ ದ್ರಾವಣವನ್ನು ಬಳಸಿಕೊಂಡು ಕೂದಲನ್ನು ತೊಳೆದುಕೊಳ್ಳಿ. ಆದರೆ ಈರುಳ್ಳಿಯ ಪರಿಮಳ ನಿವಾರಣೆಗೆ ಶಾಂಪೂವನ್ನು ನೀವು ಬಳಸಲೇಬೇಕು.

ಈರುಳ್ಳಿ ರಸ ಮತ್ತು ತೆಂಗಿನ ಎಣ್ಣೆ

ಈರುಳ್ಳಿ ರಸ ಮತ್ತು ತೆಂಗಿನ ಎಣ್ಣೆ

ನಿಮಗೆ ತಿಳಿದಿರುವ ಹಾಗೆ ತೆಂಗಿನ ಎಣ್ಣೆಯು ಸಾಮಾನ್ಯವಾಗಿ ಕೇಶಕ್ಕೆ ಹಚ್ಚುವ ಎಣ್ಣೆಯಾಗಿದ್ದು, ಕೂದಲುದುರುವ ಸಮಸ್ಯೆಗೆ ನೆರವಾಗುತ್ತದೆ. ಈ ಎಣ್ಣೆಯನ್ನು ಈರುಳ್ಳಿ ರಸದ ಜೊತೆಗೆ ಬಳಸಿದರೆ ಈ ಸಮಸ್ಯೆಯನ್ನು ಇನ್ನೂ ಪರಿಣಾಮಕಾರಿಯಾಗಿ ನಿವಾರಣೆ ಮಾಡಬಹುದಾಗಿದ್ದು, ಕೂದಲ ಬೆಳವಣಿಗೆಯನ್ನು ಉತ್ತೇಜಿಸಲಿದೆ. 2 ಚಮಚ ತೆಂಗಿನ ಎಣ್ಣೆಯನ್ನು 1 ಚಮಚ ಈರುಳ್ಳಿಯ ರಸದೊಂದಿಗೆ ಬೆರೆಸಿ ಕೇಶಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ನಂತರ ಸ್ವಚ್ಛಗೊಳಿಸಿ. ವ್ಯತ್ಯಾಸ ನಿಮಗೇ ತಿಳಿಯುತ್ತದೆ.

ಈರುಳ್ಳಿ ರಸ ಮತ್ತು ಜೇನಿನ ಪ್ಯಾಕ್

ಈರುಳ್ಳಿ ರಸ ಮತ್ತು ಜೇನಿನ ಪ್ಯಾಕ್

ಎರಡು ಚಮಚದಷ್ಟು ಈರುಳ್ಳಿ ರಸವನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಜೇನನ್ನು ಸೇರಿಸಿ. ನಿಮ್ಮ ತಲೆಬುರುಡೆಗೆ ಮತ್ತು ಕೂದಲಿಗೆ ಈ ಮಿಶ್ರಣವನ್ನು ಹಚ್ಚಿಕೊಳ್ಳಿ. 15-20 ನಿಮಿಷ ಬಿಟ್ಟು ಶಾಂಪೂ ಬಳಸಿ ಕೂದಲು ತೊಳೆಯಿರಿ. ವಾರಕ್ಕೊಮ್ಮೆ ಈ ಮಾಸ್ಕ್ ಅನ್ನು ಬಳಸಿ.

ಈರುಳ್ಳಿ ರಸ ಮತ್ತು ಆಲೀವ್ ಎಣ್ಣೆ

ಈರುಳ್ಳಿ ರಸ ಮತ್ತು ಆಲೀವ್ ಎಣ್ಣೆ

ಈರುಳ್ಳಿಯನ್ನು ಚೆನ್ನಾಗಿ ರುಬ್ಬಿಕೊಳ್ಳಿ ಮತ್ತು ಆಲೀವ್ ಎಣ್ಣೆಯನ್ನು ಇದಕ್ಕೆ ಬೆರೆಸಿ ತಲೆಬುರುಡೆಗೆ ಹಚ್ಚಿಕೊಳ್ಳಿ. ಬೇಕೆಂದಲ್ಲಿ ಬೀರ್ ಅನ್ನು ಇದಕ್ಕೆ ಸೇರಿಸಿ. ನಂತರ ಕೂದಲಿಗೆ ಇದನ್ನು ಹಚ್ಚಿ 2 ಗಂಟೆಗಳವರೆಗೆ ಕಾಯಿರಿ. ತದನಂತರ ನಿಮ್ಮ ಕೂದಲನ್ನು ಚೆನ್ನಾಗಿ ತೊಳೆದುಕೊಳ್ಳಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಈರುಳ್ಳಿ ರಸ ಮತ್ತು ಆಲೀವ್ ಎಣ್ಣೆ

ಈರುಳ್ಳಿ ರಸ ಮತ್ತು ಆಲೀವ್ ಎಣ್ಣೆ

ಹೀಗೆ ಕೂದಲಿಗೆ ಈರುಳ್ಳಿಯನ್ನು ಬೇರೆ ಬೇರೆ ವಿಧದಲ್ಲಿ ಬಳಸಿಕೊಂಡು ಪ್ರಯೋಜನ ಪಡೆದುಕೊಳ್ಳಬಹುದು. ಆದರೆ ಇದನ್ನು ಬಳಸುವ ಮೊದಲು ನಿಮಗೆ ಈರುಳ್ಳಿ ಅಲರ್ಜಿಯನ್ನುಂಟು ಮಾಡುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಪರಿಶೀಲನೆ ಮಾಡಿಕೊಂಡು ನಂತರವಷ್ಟೇ ಈರುಳ್ಳಿಯ ಪ್ರಯೋಗವನ್ನು ತಲೆಗೂದಲಿಗೆ ಮಾಡಿ.

English summary

Different Ways Onion Can Be Used For Hair Care

Hair problems are one of the most serious problems you face every day. Hair fall, dandruff, itching, smelly scalp and lots of other hair problems ultimately make you go bald. How embarrassing it can be, right? You might have tried lots of products to get rid of your problems, but you only get temporary relief from it. So, why not try home remedies instead? You’ll be surprised to know that there are certain things in your home, which can do magic for your hair.
X
Desktop Bottom Promotion