For Quick Alerts
ALLOW NOTIFICATIONS  
For Daily Alerts

ಸೀಬೆ' ಕೂದಲಿನ ಸಮಸ್ಯೆಗೆ ಸಮರ್ಥ ಮನೆಮದ್ದು

By Manu
|

ಕೂದಲು ಉದುರುವ ಸಮಸ್ಯೆ ಇತ್ತೀಚೆಗೆ ಪ್ರತಿಯೊಬ್ಬರನ್ನು ಕಾಡುತ್ತಿದೆ. ಇದಕ್ಕೆ ಲಿಂಗಭೇದವೂ ಇಲ್ಲವಾಗಿದೆ. ಗಂಡಸರಲ್ಲೂ ಕೂದಲು ಉದುರುವಿಕೆ ಸಾಮಾನ್ಯವಾಗುತ್ತಿದೆ. ಬದಲಾಗುತ್ತಿರುವ ವಾತಾವರಣ, ಕಲುಷಿತ ನೀರು, ಒತ್ತಡದ ಜೀವನ ಶೈಲಿ ಮೊದಲಾದವುಗಳು ಕೂದಲು ಉದುರುವಿಕೆಗೆ ಪ್ರಮುಖ ಕಾರಣಗಳಾಗಿವೆ.

ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಶಾಂಪೂಗಳು ಲಭ್ಯವಿದ್ದರೂ ಸಹಿತ ಇದರಿಂದ ಆಗುವಂತಹ ಲಾಭಗಳಿಗಿಂತ ಅಡ್ಡಪರಿಣಾಮಗಳೇ ಹೆಚ್ಚು ಎನ್ನಬಹುದು. ಇದಕ್ಕಾಗಿ ನೈಸರ್ಗಿಕದತ್ತ ಕೆಲವೊಂದು ಮದ್ದುಗಳನ್ನು ಬಳಸಿದರೆ ಕೂದಲು ಉದುರುವಿಕೆ ಕಡಿಮೆ ಮಾಡಿಕೊಳ್ಳಬಹುದು. ಅದರಲ್ಲೂ ಸೀಬೆ ಎಲೆಗಳು ಕೂದಲು ಉದುರುವಿಕೆ ಸಮಸ್ಯೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ನೀಳ ಕೇಶರಾಶಿ ಬಯಸುವ ಚೆಲುವೆಗೆ ಸೀಬೆ ಎಲೆಗಳ ಚಿಕಿತ್ಸೆ!

ಸೀಬೆ ಹಣ್ಣಿನಲ್ಲಿ ವಿಟಮಿನ್ ಬಿ3, ಬಿ5, ಬಿ6 ಹಾನಿಗೊಂಡಿರುವ ಕೂದಲಿನ ಕೋಶಗಳನ್ನು ಸರಿಪಡಿಸಿ ತಲೆಬುರುಡೆಯನ್ನು ಸ್ವಚ್ಛಗೊಳಿಸಿ ಕೂದಲು ಉದುರುವಿಕೆಯನ್ನು ತಡೆಯುತ್ತದೆ. ಅಷ್ಟೇ ಅಲ್ಲದೆ ಸೀಬೆ ಎಲೆಗಳಲ್ಲಿ ಶೇ.9ರಷ್ಟು ಪೊಟಾಶಿಯಂ, ಶೇ.2ರಷ್ಟು ಸತು ಮತ್ತು ಶೇ.2ಕ್ಕಿಂತಲೂ ಹೆಚ್ಚು ಪ್ರೋಟೀನ್ ಇದೆ. ಇದು ತಲೆಬುರುಡೆಯ ತುರಿಕೆ ಕಡಿಮೆ ಮಾಡಿ. ತಲೆಹೊಟ್ಟನ್ನು ತೆಗೆದುಹಾಕಿ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ. ಸೀಬೆ ಎಲೆಯಲ್ಲಿದೆ ಸೀಮಾತೀತ ಆರೋಗ್ಯ ಗುಣಗಳು

ಬನ್ನಿ ಸೀಬೆ ಎಲೆಗಳನ್ನು ಬಳಸಿಕೊಂಡು ಕೂದಲಿನ ಆರೈಕೆಯನ್ನು ಯಾವ ರೀತಿ ಮಾಡಬಹುದು ಎನ್ನುವುದನ್ನು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ಓದಿ ಬಳಸಿ ಫಲಿತಾಂಶದ ಬಗ್ಗೆ ತಿಳಿಸಲು ಮರೆಯದಿರಿ....

ಸೀಬೆ ಎಲೆಗಳನ್ನು ಕುದಿಸಿದ ನೀರು

ಸೀಬೆ ಎಲೆಗಳನ್ನು ಕುದಿಸಿದ ನೀರು

ಒಂದು ಕಪ್ ನೀರಿಗೆ ಒಂದು ಹಿಡಿ ಸೀಬೆ ಎಲೆಗಳನ್ನು ಹಾಕಿ ಬಿಸಿ ಮಾಡಿ. 15-20 ನಿಮಿಷ ಕುದಿಸಿದ ಬಳಿಕ ನೀರನ್ನು ತೆಗೆಯಿರಿ. ನೀರನ್ನು ಹಾಗೆ ಕೋಣೆಯ ಉಷ್ಣತೆಯಲ್ಲಿ ತಣ್ಣಗಾಗಲು ಬಿಡಿ. ನೀರನ್ನು ಸರಿಯಾಗಿ ಗಾಳಿಸಿಕೊಂಡು ಅದನ್ನು ತಲೆಬುರುಡೆಗೆ ಸರಿಯಾಗಿ ಹಚ್ಚಿಕೊಳ್ಳಿ. ಒಂದು ಗಂಟೆ ಕಾಲ ಇದನ್ನು ಹಾಗೆ ಬಿಟ್ಟು ಬಳಿಕ ತೊಳೆಯಿರಿ.

ಸೀಬೆ, ಜೇನು ಮತ್ತು ಲಿಂಬೆರಸ

ಸೀಬೆ, ಜೇನು ಮತ್ತು ಲಿಂಬೆರಸ

ಹಣ್ಣಾದ ಸೀಬೆ ಹಣ್ಣನ್ನು ತೆಗೆದುಕೊಳ್ಳಿ. ಹದವಾಗುವ ತನಕ ಅದನ್ನು ಸರಿಯಾಗಿ ಹಿಚುಕಿಕೊಳ್ಳಿ. ಅದಕ್ಕೆ ಒಂದು ಚಮಚ ಜೇನು ಮತ್ತು ಹತ್ತು ಹನಿ ಲಿಂಬೆರಸವನ್ನು ಸೇರಿಸಿಕೊಳ್ಳಿ. ಎಲ್ಲವೂ ಸರಿಯಾಗಿ ಮಿಶ್ರಣವಾಗುವ ತನಕ ಕಲಸಿಕೊಳ್ಳಿ. ಕೂದಲನ್ನು ಸರಿಯಾಗಿ ಒಣಗಿಸಿ ಮತ್ತು ಅದನ್ನು ಸಣ್ಣ ಸಣ್ಣ ಭಾಗಗಳಾಗಿ ವಿಂಗಡಿಸಿ. ಈಗ ಪೇರಳೆಯ ಅಥವಾ ಸೀಬೆ ಎಲೆಗಳ ನೈಸರ್ಗಿಕ ಮಾಸ್ಕ್ ಅನ್ನು ಹಚ್ಚಿಕೊಳ್ಳಿ. 40 ನಿಮಿಷ ಕಾಲ ಹಾಗೆ ಬಿಡಿ. ಶಾಂಪೂ ಅಥವಾ ಕಂಡೀಷನರ್‌ನಿಂದ ಕೂದಲನ್ನು ತೊಳೆಯಿರಿ.

ಮೊಟ್ಟೆ ಮತ್ತು ಸೀಬೆ

ಮೊಟ್ಟೆ ಮತ್ತು ಸೀಬೆ

ಸೀಬೆ ಹಣ್ಣಿನ ಮಾಸ್ಕ್‌ನಲ್ಲಿರುವಂತಹ ಉನ್ನತ ಮಟ್ಟದ ಪ್ರೋಟೀನ್ ಕೂದಲಿನ ಬೆಳವಣಿಗೆ ಮಾಡಿ ಅದನ್ನು ಬೇರಿನಿಂದಲೇ ಬಲಪಡಿಸುತ್ತದೆ. ಒಂದು ಸಣ್ಣ ಪಿಂಗಾಣಿ ತೆಗೆದುಕೊಂಡು ಹಣ್ಣಾದ ಸೀಬೆ ಹಣ್ಣನ್ನು ಅದಕ್ಕೆ ಹಾಕಿ ಹಿಚುಕಿ. ಒಂದು ಮೊಟ್ಟೆಯ ಬಿಳಿ ಲೋಳೆಯನ್ನು ಹಾಕಿ. ಸರಿಯಾಗಿ ಮಿಶ್ರಣ ಮಾಡಿಕೊಂಡು ಕೂದಲು ಹಾಗು ತಲೆಬುರುಡೆಗೆ ಹಚ್ಚಿಕೊಳ್ಳಿ. 40 ನಿಮಿಷದ ಬಳಿಕ ಸರಿಯಾಗಿ ಮಸಾಜ್ ಮಾಡಿಕೊಂಡು ಬಳಿಕ ತೊಳೆಯಿರಿ. ಸೀಬೆ ಹಣ್ಣಿನ ನ೦ಬಲಸಾಧ್ಯವಾದ ಆರೋಗ್ಯವರ್ಧಕ ಗುಣಗಳು

ತೆಂಗಿನ ಹಾಲು ಮತ್ತು ಸೀಬೆ ಎಲೆ

ತೆಂಗಿನ ಹಾಲು ಮತ್ತು ಸೀಬೆ ಎಲೆ

ತಲೆಕೂದಲು ಉದುರುವುದಕ್ಕೆ ಮತ್ತೊಂದು ಸುಲಭ ಪರಿಹಾರವೆಂದರೆ ತೆಂಗಿನ ಹಾಲು ಮತ್ತು ಪೇರಳೆ ಎಲೆಗಳ ಮಾಸ್ಕ್. ಒಂದು ಕಪ್ ತೆಂಗಿನ ಹಾಲಿಗೆ ಒಣಗಿಸಿದ ಸೀಬೆ ಎಲೆಗಳ ಹುಡಿಯನ್ನು ಒಂದು ಚಮಚ ಹಾಕಿ. ಹತ್ತಿ ಉಂಡೆಯನ್ನು ಬಳಸಿಕೊಂಡು ತಲೆಬುರುಡೆಗೆ ಹಚ್ಚಿ. ತಲೆಬುರುಡೆಗೆ ಈ ಮಾಸ್ಕ್ ಅನ್ನು ಸರಿಯಾಗಿ ಇಳಿದಾಗ ಒಂದು ಗಂಟೆ ಕಾಲ ಮಸಾಜ್ ಮಾಡಿ. ಬಳಿಕ ಸ್ನಾನ ಮಾಡಿ....

ಸರಳ ಟಿಪ್ಸ್

ಸರಳ ಟಿಪ್ಸ್

ಒಂದು ಲೀಟರ್ ನೀರಿನಲ್ಲಿ 15 ರಿಂದ 20 ನಿಮಿಷಗಳ ಕಾಲ ಮುಷ್ಟಿಯಷ್ಟು ಸೀಬೆಯ ಎಲೆಗಳನ್ನು ಕುದಿಸಿಕೊಳ್ಳಿ. ಚೆನ್ನಾಗಿ ಕುದಿದ ನಂತರ, ತಣ್ಣಗಾಗಲು ಬಿಡಿ. ನೀರನ್ನು ಬಸಿದು ಅದನ್ನು ಕೂದಲ ಬುಡದಿಂದ ತುದಿಯವರೆಗೆ ತಕ್ಷಣವೇ ಹಚ್ಚಿಕೊಳ್ಳಿ. ಸೀಬೆ ಎಲೆಯೊಂದಿಗೆ ಕುದಿಸಿರುವ ನೀರನ್ನು ಕೂದಲಿಗೆ ಬಳಸಿಕೊಳ್ಳುವುದರಿಂದ ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಯಾಗುತ್ತದೆ.

English summary

Can Guava Extremely Stop 100% Hair Loss?

We don't know about 100% hair fall reversal, but what we do know is that guava is super-effective, more than any ingredient that you can possibly lay your hands on. So, how does guava benefit your hair? Guava has a high ratio of vitamins B3, B5 and B6, which repair damaged hair tissues, cleanse the scalp and stop hair fall.
X
Desktop Bottom Promotion