For Quick Alerts
ALLOW NOTIFICATIONS  
For Daily Alerts

ನಿಮ್ಮ ಕೂದಲಿಗೆ ಹೊಂದುವ ಎಣ್ಣೆ ಯಾವುದು?

By Su.Ra
|

ಕೂದಲು ಉದ್ದವಿರಬೇಕು, ಹೆಲ್ತಿಯಾಗಿರಬೇಕು. ಚೆನ್ನಾಗಿರಬೇಕು ಅಂತ ಬಯಸೋರೆಲ್ಲ 100 ಪರ್ಸೆಂಟ್ ಕೂದಲಿಗೆ ಎಣ್ಣೆ ಸವರುತ್ತಲೇ ಇರ್ತೀರಾ? ಈಗಂತೂ ನಿಮ್ ತಲೆಕೂದಲು ಹಾಗಾಗುತ್ತೆ ಹೀಗಾಗುತ್ತೆ ಅಂತ ಹೇಳ್ತಾ ಅದೆಷ್ಟೊ ವೆರೈಟಿ ಎಣ್ಣೆ ಕಂಪೆನಿಗಳು ಕಾಲಿಟ್ಟಿವೆ. ಆದ್ರೆ ನಿಜ ಸಂಗತಿ ನಾವ್ ಹೇಳ್ತೀವಿ ಕೇಳಿ. ನಿಮ್ಮ ಕೂದಲಿಗೆ ಯಾವ ಎಣ್ಣೆ ಅಪ್ಲೈ ಮಾಡಿಕೊಳ್ಳೋದು ಯಾಕೆ ಸೂಕ್ತ ಅನ್ನುವ ವಿಚಾರವನ್ನು ಸ್ವಲ್ಪ ಗಮನಿಸಿ ನೋಡಿ..

Best Hair Oils For Faster Hair Growth

ಕೊಬ್ಬರಿ ಎಣ್ಣೆ
ಕೂದಲಿಗೆ ಎಲ್ಲಾ ರೀತಿಯ ಪೋಷಣೆ ನೀಡಲು ಬಯಸುವುದಾದರೆ ಕೊಬ್ಬರಿ ಎಣ್ಣೆ ಸೂಕ್ತ. ಸುಲಭವಾಗಿ ದೊರೆಯುವ ಕೊಬ್ಬರಿ ಎಣ್ಣೆಯನ್ನು ಭಾರತದಲ್ಲಿ ಹೆಚ್ಚು ಬಳಸುತ್ತಾರೆ. ಇದರ ಉತ್ತಮ ಫಲಿತಾಂಶದಿಂದಲೇ ಎಣ್ಣೆ ಪ್ರಸಿದ್ಧಿ ಪಡೆದುಕೊಂಡಿದೆ.

ಆಲಿವ್ ಎಣ್ಣೆ

ಆಲಿವ್ ಎಣ್ಣೆಯಲ್ಲಿ ಒಳ್ಳೆಯ ಕೊಬ್ಬಿನಾಂಶ ಇದೆ.. ಕೂದಲಿಗೆ ಅಗತ್ಯವಿರುವ ಅಂಶಗಳೂ ತುಂಬಿಕೊಂಡಿದೆ. ಆಲಿವ್ ಎಣ್ಣೆ ಅತ್ಯುತ್ತಮ ಕಂಡೀಶನರ್ ಆಗಿರೋದ್ದರಿಂದ ಇದರ ಬಳಕೆಯಿಂದ ಹೆಚ್ಚು ಉಪಯೋಗ ಕಂಡುಕೊಳ್ಳಬಹುದು.

ಬಾದಾಮಿ ಎಣ್ಣೆ

ಅತ್ಯಾಶ್ಚರ್ಯವಾಗಿ ಕೂದಲ ಬೆಳವಣಿಗೆ ಮಾಡುವಲ್ಲಿ ಬಾದಾಮಿ ಎಣ್ಣೆ ತುಂಬಾ ಸಹಕಾರಿ. ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ ಹೆಚ್ಚಿರುವುದರಿಂದ ಕೂದಲಿಗೆ ಅಗತ್ಯವಾದ ಎಲ್ಲಾ ಪೋಷಣೆಯೂ ದೊರೆಯುತ್ತದೆ. ಬಾದಾಮಿ ಎಣ್ಣೆಯಲ್ಲಿ ಅಡಗಿದೆ ಸರ್ವರೋಗ ನಿವಾರಕ ಶಕ್ತಿ!

ಹರಳೆಣ್ಣೆ

ಹರಳೆಣ್ಣೆ ಮಸಾಜ್ ನಿಂದ ರಕ್ತ ಸಂಚಲನ ಹೆಚ್ಚಾಗಿ ಕೂದಲು ಗಟ್ಟಿಗೊಳ್ಳುತ್ತದೆ. ಆದರೆ ಈ ಎಣ್ಣೆಯನ್ನು ಸ್ವಲ್ಪವೇ ಬಳಸಬೇಕು. ಒಂದು ಚಮಚದಷ್ಟು ಹಚ್ಚಿಕೊಂಡರೆ ಸಾಕು. ಯಾಕಂದ್ರೆ ಇದು ಅತೀ ಹೆಚ್ಚು ಜಿಡ್ಡಿನಾಂಶ ಹೊಂದಿರುವ ಎಣ್ಣೆ. ಹಳ್ಳಿಗಾಡಿನ ಮನೆಮದ್ದು- ಹರಳೆಣ್ಣೆಯ ಔಷಧೀಯ ಗುಣಗಳು

ಜೋಜೊಬಾ ಎಣ್ಣೆ
ತ್ವಚೆಗೆ ಪೋಷಣೆ ನೀಡುವ ಜೊಜೊಬಾ ಎಣ್ಣೆ ಕೂದಲಿಗೂ ತುಂಬಾ ಸಹಕಾರಿ. ಅಂಟಿಲ್ಲದಿರುವುದ ಜೊಜೊಬಾ ಎಣ್ಣೆಯ ಮತ್ತೊಂದು ಗುಣ. ಇದನ್ನು ಹಚ್ಚಿಕೊಂಡರೆ ಕೂದಲು ಎಣ್ಣೆ ಹಚ್ಚಿದಂತೆ ಕಾಣುವುದಿಲ್ಲ. ಬಟ್‍ ತುಂಬಾ ಕಾಸ್ಲ್ಟೀ.. ಒಟ್ಟಿನಲ್ಲಿ ನಿಮ್ಮ ಕೂದಲಿಗೆ ಈ ಎಣ್ಣೆಗಳನ್ನು ಅಪ್ಲೈ ಮಾಡೋದು ಸೂಕ್ತ. ಅದು ಬಿಟ್ಟು ಇತರೆ ಯಾವ್ಯಾವುದೇ ಮಿಶ್ರಣದ ಎಣ್ಣೆಗಳನ್ನು ಬಳಸಿ ಕೂದಲ ಸಮಸ್ಯೆಗೆ ನೀವೇ ಮುನ್ನುಡಿ ಬರೆದುಕೊಳ್ಳಬೇಡಿ.

English summary

Best Hair Oils For Faster Hair Growth

There are many oils that can help to moisturize the hair and scalp, add shine, fix damaged hair and speed hair growth. Here are the best oils for ...
Story first published: Monday, February 22, 2016, 16:05 [IST]
X
Desktop Bottom Promotion