For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: ಕೂದಲಿನ ಸೌಂದರ್ಯಕ್ಕೆ ಆಲೂಗಡ್ಡೆ ಜ್ಯೂಸ್!

By Super Admin
|

ಹುಡುಗಿಯರ ಕೂದಲು ಯಾವಾಗಲೂ ಗಾಳಿಯಲ್ಲಿ ತೇಲುತ್ತಾ ಇದ್ದರೆ ಅದು ನೋಡುವವರಿಗೂ ಅಂದವಾಗಿ ಕಾಣಿಸುತ್ತದೆ. ಹುಡುಗಿಯರು ಇಂದಿನ ದಿನಗಳಲ್ಲಿ ಹಲವಾರು ರೀತಿಯಲ್ಲಿ ಕೂದಲನ್ನು ವಿನ್ಯಾಸ ಮಾಡಿಕೊಂಡು ಹೊರಗಡೆ ಹೋಗುತ್ತಾರೆ. ಆದರೆ ವಾತಾವರಣದಲ್ಲಿರುವ ಧೂಳು, ಕಲ್ಮಶಗಳು ಕೂದಲಿನ ಮೇಲೆ ನಿಂತುಕೊಂಡು ಕೂದಲಿನ ಆರೋಗ್ಯವನ್ನು ಕೆಡಿಸುತ್ತದೆ. ಇಂತಹ ಸಮಯದಲ್ಲಿ ಹುಡುಗಿಯರು

ಮೊದಲು ಹೋಗುವುದು ಪಾರ್ಲರ್‌ಗೆ. ಎರಡನೇದಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೂದಲಿನ ಆರೈಕೆಯ ಉತ್ಪನ್ನಗಳನ್ನು ಬಳಸುತ್ತಾರೆ. ಇದು ನಿಮ್ಮ ಕೂದಲಿಗೆ ಕಾಂತಿ ನೀಡಿ ಕೂದಲು ಉದುರದಂತೆ ಬಲ ನೀಡುವುದು ಎಂದು ಹೇಳುತ್ತಾರೆ.

Best benefits of potato juice for hair care

ಆದರೆ ಇದರಿಂದ ಸಾಕಷ್ಟು ಅಡ್ಡಪರಿಣಾಮಗಳು ಇವೆ. ಇದರಲ್ಲಿನ ರಾಸಾಯನಿಕಗಳು ನಿಧಾನವಾಗಿ ಕೂದಲಿನ ಆರೋಗ್ಯವನ್ನು ಕೆಡಿಸುತ್ತಾ ಹೋಗುತ್ತದೆ. ಆದರೆ ಭೀತಿ ಪಡುವ ಅಗತ್ಯವಿಲ್ಲ. ಯಾಕೆಂದರೆ ಯಾವುದೇ ರಾಸಾಯನಿಕಗಳನ್ನು ಬಳಸದೆ ಆಲೂಗಡ್ಡೆಯಿಂದ ನಿಮ್ಮ ಕೂದಲಿನ ಕಾಂತಿಯನ್ನು ಹೆಚ್ಚಿಸಿ, ಅದು ಉದುರದೆ, ಬಲಿಷ್ಠವಾಗುವಂತೆ ಮಾಡುವಂತಹ ಮನೆಯಲ್ಲಿ ತಯಾರಿಸುವ ಹೇರ್ ಪ್ಯಾಕ್ ಅನ್ನು ನಾವು ಹೇಳಿಕೊಡಲಿದ್ದೇವೆ. ಇದನ್ನು ಬಳಸಿದರೆ ಲಾಭ ಪಡೆಯಬಹುದಾಗಿದೆ.

ಆಲೂಗಡ್ಡೆ ಹಲವಾರು ಪೋಷಕಾಂಶಗಳನ್ನು ಒಳಗೊಂಡಿರುವ ಆಹಾರವೆಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ಇತರ ತರಕಾರಿಗಳೊಂದಿಗೆ ಸೇರಿಸಿದಾಗ ಇದರಿಂದ ರುಚಿಕರವಾದ ಪದಾರ್ಥ ತಯಾರಿಯಾಗುವುದು ಮಾತ್ರವಲ್ಲದೆ ನಿಮ್ಮ ಕೂದಲಿಗೂ ಕಾಂತಿಯನ್ನು ಉಂಟು ಮಾಡುವ ಶಕ್ತಿಯನ್ನು ಹೊಂದಿದೆ. ಕೂದಲಿನ ಸಮೃದ್ಧ ಪೋಷಣೆಗೆ ಆಲೂಗಡ್ಡೆ ಜ್ಯೂಸ್

ಬೇಕಾಗುವ ಸಾಮಗ್ರಿಗಳು
*3-4 ಮಧ್ಯಮ ಗಾತ್ರದ ಬಟಾಟೆ
*ಒಂದು ತೆಳುವಾದ ಬಟ್ಟೆ
*ಒಂದು ಮೊಟ್ಟೆಯ ಲೋಳೆ
*ಒಂದು ಚಮಚ ಜೇನು

ಪೇಸ್ಟ್ ಮಾಡಿಕೊಳ್ಳುವ ವಿಧಾನ
*ಮೊದಲು ಆಲೂಗಡ್ಡೆಯನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ. ಇನ್ನು ರುಬ್ಬಿದ ಆಲೂಗಡ್ಡೆಯನ್ನು ತೆಗೆದು ಒಂದು ತೆಳುವಾದ ಬಟ್ಟೆಯಲ್ಲಿ ಹಾಕಿಕೊಂಡು ಅದರ ನೀರು ಬರುವಂತೆ ಒತ್ತಿ.
*ಇನ್ನು ಮೊಟ್ಟೆಯ ಲೋಳೆ ಮತ್ತು ಜೇನು ತುಪ್ಪವನ್ನು ಅದಕ್ಕೆ ಬೆರೆಸಿಕೊಳ್ಳಿ.
*ತದನಂತರ ಈ ಮಿಶ್ರಣವನ್ನು ನಿಮ್ಮ ತಲೆಬುರುಡೆಗೆ ಮಸಾಜ್ ಮಾಡಿಕೊಳ್ಳಿ.
*30 ನಿಮಿಷ ಇದು ತಲೆ ಮೇಲೆ ಹಾಗೆ ಇರಲಿ. ಬಳಿಕ ನೀವು ಬಳಸುವ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ. ಆಲೂಗಡ್ಡೆ ಜ್ಯೂಸ್ ಬಳಸಿ ಮುಖದ ಸುಕ್ಕು ನಿವಾರಿಸಿ...

ಇದು ಕೂದಲಿನ ಬೆಳವಣಿಗೆಗೆ ಮತ್ತು ತಲೆಬುರುಡೆ ಸ್ವಚ್ಛವಾಗಿಡಲು ಕೂದಲು ಉದುರುವುದನ್ನು ಕಡಿಮೆ ಮಾಡಿ ತಲೆಬುರುಡೆ ಸ್ವಚ್ಛಗೊಳಿಸಲು ನೆರವಾಗುವುದು.

ಇನ್ನೊಂದು ವಿಧಾನ
ಬೇಕಾಗುವ ಸಾಮಗ್ರಿಗಳು
*2 ಮಧ್ಯಮ ಗಾತ್ರದ ಬಟಾಟೆಗಳು
*1-1.5 ಚಮಚಕ್ಕೂ ಹೆಚ್ಚು ಅಲೋವೆರಾ ಜೆಲ್

ಪೇಸ್ಟ್ ಮಾಡುವ ವಿಧಾನ
*ಆಲೂಗಡ್ಡೆಯನ್ನು ಮಿಕ್ಸಿಗೆ ಹಾಕಿ ರುಬ್ಬಿ ಅದರ ಜ್ಯೂಸ್ ತೆಗೆಯಿರಿ.
*ಇದಕ್ಕೆ ಅಲೋವೆರಾದ ಜೆಲ್ ಹಾಕಿ. ಉತ್ತಮ ಫಲಿತಾಂಶಕ್ಕೆ ಅಲೋವೆರಾ ಗಿಡದ ತಾಜಾ ಲೋಳೆ ಹಾಕಿಕೊಳ್ಳಬಹುದು.
*ಮಿಶ್ರಣವನ್ನು ತಲೆಬುರುಡೆಗೆ ಹಾಕಿಕೊಂಡು 30-40 ನಿಮಿಷ ಕಾಲ ಹಾಗೆ ಬಿಟ್ಟುಬಿಡಿ.
*ಬಳಿಕ ಉಗುರುಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆಯಿರಿ.

English summary

Best benefits of potato juice for hair care

Potato is a superfood in every sense. Not only does it combine with other veggies to make delicious delicacies, but it also helps in giving that perfect shine to your hair. have a look
X
Desktop Bottom Promotion