For Quick Alerts
ALLOW NOTIFICATIONS  
For Daily Alerts

ಕ್ಷಣ ಮಾತ್ರದಲ್ಲಿ ಕೂದಲಿನ ಆರೋಗ್ಯ ವರ್ಧಿಸುವ ಸೂಪರ್ ಫುಡ್!

|

ಭುಜದ ಮೇಲೆ ಹಾರಾಡುವಂಥ ಹೊಳಪಿನ ಕೂದಲು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಕೇವಲ ಸೊಂಪಾದ ಕೂದಲಿಗಾಗಿ ಎಣ್ಣೆ ಹಚ್ಚುವುದು, ಕಂಡೀಷನರ್ ಬಳಸುವುದು ಮಾಡಿದರೆ ಮಾತ್ರ ಸಾಲದು ಅದರ ಜೊತೆಗೆ ಆಹಾರಕ್ರಮದ ಬಗ್ಗೆ ಕೂಡ ಗಮನಹರಿಸಬೇಕು.

ಹಾಗಾದರೆ ಇಂತಹ ಸಮಸ್ಯೆಯಿಂದ ಹೊರಬರುವುದು ಹೇಗೆ? ಚಿಂತಿಸಬೇಡಿ ಇಂದು ಬೋಲ್ಡ್ ಸ್ಕೈ ಆರೋಗ್ಯಕರ ಕೂದಲು ಬೆಳೆಯಲು ನಿಮಗೆ ಸಹಾಯಕವಾಗುವ ಪೋಷಕಾಂಶಭರಿತ ಆಹಾರಗಳನ್ನು ಪರಿಚಯಿಸುತ್ತಿದೆ

ಕಬ್ಬಿಣಾoಶ ಹೆಚ್ಚಿರುವ ಆಹಾರ ಪದಾರ್ಥಗಳ ಸೇವನೆ
ಕಬ್ಬಿಣಾoಶದ ಕೊರತೆಯನ್ನು ಸರಿದೂಗಿಸಲು, ಪಾಲಕ್, ಸೋಯಾ ಬೀನ್ಸ್, ಬೇಳೆ, ರಕ್ತವರ್ಣದ ಕಿಡ್ನಿಯಾಕಾರದ ಹುರುಳಿ, ಚಿಕನ್, ಮಾಂಸ, ಮೊಟ್ಟೆಗಳು, ಮತ್ತು ಮೀನನ್ನು ಸೇವಿಸಿರಿ. ಕೂದಲಿನ ಎಲ್ಲಾ ಸಮಸ್ಯೆಗೆ ಒಂದೇ ರಾಮಬಾಣ: ಬೇವಿನ ಎಣ್ಣೆ!

The Top Super foods for healthy hair

ಪ್ರೋಟೀನ್
ಪ್ರೋಟೀನ್ ನಮ್ಮ ಜೀವಕೋಶಗಳ ಬೆಳವಣಿಗೆಗೆ ಉತ್ತೇಜನ ಕೊಡುತ್ತದೆ ಮತ್ತು ಅದರ ದುರಸ್ತಿಯನ್ನೂ ಮಾಡುತ್ತದೆ ಮತ್ತು ನಿಮ್ಮ ಕೂದಲಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಮಹಿಳೆಯರು ದಿನವೊಂದಕ್ಕೆ ಕನಿಷ್ಟ ಪಕ್ಷ 46 ಗ್ರಾಮ್ಸ್ (3 ಔನ್ಸ್ ಕೋಳಿಮಾಂಸದಲ್ಲಿ 23 ಔನ್ಸ್ ಇರುತ್ತವೆ) ಪೋಷಕಾಂಶವನ್ನು ತೆಗೆದುಕೊಳ್ಳಬೇಕು. ನೀವು ನಿಖರವಾಗಿ ಎಷ್ಟು ಪ್ರಮಾಣದ ಪ್ರೋಟೀನ್ ತೆಗೆದುಕೊಳ್ಳಬೇಕೆಂಬುದನ್ನು ಈ ಮಾರ್ಗದರ್ಶಿಯನ್ನು ಅನುಸರಿಸಿ.
ಅಹಾರ ಪದಾರ್ಥಗಳಾದ ಹುರುಳಿ, ಕಾಳುಗಳು, ಹಾಲು, ಗಿಣ್ಣು, ಮೀನು, ಮೊಟ್ಟೆಗಳು, ಮತ್ತು ಚಿಕನ್ ಗಳನ್ನು ಸೇವಿಸುವುದರ ಮೂಲಕ ಪ್ರೋಟೀನ್ ನ ಸತ್ವವನ್ನು ನಿಮ್ಮ ಶರೀರಕ್ಕೆ ಒದಗಿಸಿರಿ.

ಹಾಲಿನ ಉತ್ಪನ್ನಗಳು
ಕಡಿಮೆ ಕೊಬ್ಬಿನ ಹಾಲಿನ ಉತ್ಪನ್ನಗಳ ಸೇವನೆ ಒಳ್ಳೆಯದು. ದಿನಕ್ಕೆ 2 ಲೋಟ ಹಾಲು ಕುಡಿಯುವ ಅಭ್ಯಾಸ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.

ವಿಟಮಿನ್ ಸಿ
ಕೂದಲ ಕೋಶಗಳನ್ನು ಒತ್ತಟ್ಟಿಗೆ ಬಂಧಿಸಿಡಲು Collagen ನ ಉತ್ಪತ್ತಿಯು ಅತೀ ಮುಖ್ಯವಾಗಿದ್ದು, ವಿಟಮಿನ್ ಸಿ ಯು ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತದೆ. ಇದರ ಕೊರತೆಯು ಆಗಾಗ್ಗೆ ಕೂದಲು ಉದುರುವುದಕ್ಕೆ ಕಾರಣವಾಗಬಲ್ಲುದು. ನಿಮ್ಮ ಆಹಾರಕ್ರಮದಲ್ಲಿ ಕಿತ್ತಳೆ, ಲಿಂಬೆ, ಬೀಜರಹಿತ ಹಣ್ಣುಗಳು (berries), ಮೂಸಂಬಿ, ಕಲ್ಲಂಗಡಿ, ಮತ್ತು ಟೊಮೇಟೊ ಗಳಂತಹ ಹಣ್ಣುಗಳನ್ನು ಸೇರಿಸಿರಿ

ಹಸಿರು ಬಟಾಣಿ


ಹಸಿರು ಬಟಾಣಿ ರುಚಿಕರವಷ್ಟೇ ಅಲ್ಲ. ಇದರಲ್ಲಿ ನಮ್ಮ ಕೂದಲಿ ಆರೈಕೆಗೆ ಬೇಕಾದ ಹಲವು ಉಪಯುಕ್ತ ಪೋಷಕಾಂಶಗಳಿವೆ. ಕಬ್ಬಿಣದ ಅಂಶ, ಸತುವಿನ ಅಂಶ ಹೆಚ್ಚಿರುವ ಇದರಲ್ಲಿ ವಿಟಮಿನ್ ಬಿ ಯೂ ಹೇರಳವಾಗಿ ದೊರೆಯುತ್ತದೆ. ರುಚಿಗೆಂದು ಸೇವಿಸಿ ಕೂದಲನ್ನು ಚೆನ್ನಾಗಿಡುವ ನಿಮ್ಮ ಆಸೆಯಲ್ಲಿ ಹಸಿರು ಬಟಾಣಿ ಸದಾ ಮುಂದು.

ವಿಟಮಿನ್ ಬಿ ಯುಕ್ತ ಮೊಟ್ಟೆಗಳು
ನಮ್ಮ ತಲೆಗೂದಲ ಆರೈಕೆಗೆ ಬೇಕಾಗಿರುವ ಇನ್ನೊಂದು ಮುಖ್ಯ ವಿಟಮಿನ್ ಎಂದರೆ ವಿಟಮಿನ್ ಬಿ. ಇದು ನಮಗೆ ಮೊಟ್ಟೆಯಲ್ಲಿ ಹೇರಳವಾಗಿ ದೊರೆಯುತ್ತದೆ, ಜೊತೆಗೆ ಇದರಲ್ಲಿರುವ ಬಯೊಟಿನ್ ನಮ್ಮ ಕೂದಲಿಗೆ ಹೊಳಪು ಹಾಗೂ ದೃಢತೆಯನ್ನು ನೀಡುತ್ತದೆ.

English summary

The Top Super foods for healthy hair

On the other end, there are certain foods that make your hair healthy and strong. Hair like other tissue is largely made up of protein. Here, the nutrients you need for a full head of hair—and the foods that pack them:
Story first published: Wednesday, April 8, 2015, 15:10 [IST]
X
Desktop Bottom Promotion